‘ಮಲ ತಿಂದು ಹೋಗುವರಯ್ಯ ನಿಂದಕರು..’ ಪುರಂದರ ದಾಸರ ಪದ ಟ್ವೀಟ್ ಮಾಡಿದ ಹಿರಿಯ ನಟ ಜಗ್ಗೇಶ್: ಬೆಂಬಲಿಸಿದ ಕನ್ನಡಮನಗಳಿಗೆ ಕೃತಜ್ಞತೆ

Actor Jaggesh: ಕಳೆದ ಎರಡು ದಿನಗಳಿಂದಲೂ ಈ ವಿವಾದ ನಡೆಯುತ್ತಲೇ ಇದ್ದು, ಇಂದು ಟ್ವೀಟ್ ಮಾಡಿರುವ ನಟ ಜಗ್ಗೇಶ್​ ತಮ್ಮ ಬೆಂಬಲಕ್ಕೆ ನಿಂತವರಿಗೆ ಧನ್ಯವಾದ ಹೇಳಿದ್ದಾರೆ.

‘ಮಲ ತಿಂದು ಹೋಗುವರಯ್ಯ ನಿಂದಕರು..' ಪುರಂದರ ದಾಸರ ಪದ ಟ್ವೀಟ್ ಮಾಡಿದ ಹಿರಿಯ ನಟ ಜಗ್ಗೇಶ್: ಬೆಂಬಲಿಸಿದ ಕನ್ನಡಮನಗಳಿಗೆ ಕೃತಜ್ಞತೆ
ನಟ ಜಗ್ಗೇಶ್​
Follow us
Lakshmi Hegde
|

Updated on:Feb 24, 2021 | 12:40 PM

ಬೆಂಗಳೂರು: ದರ್ಶನ್ ಅಭಿಮಾನಿಗಳ ಬಗ್ಗೆ ಜಗ್ಗೇಶ್​ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಬಿಡುಗಡೆ ಆದಾಗಿನಿಂದ ದೊಡ್ಡ ವಿವಾದವೇ ಸೃಷ್ಟಿಯಾಗಿದೆ. ಆಡಿಯೋ ಕೇಳಿದ ದರ್ಶನ್​ ಅಭಿಮಾನಿಗಳು ತೋತಾಪುರಿ ಚಿತ್ರದ ಶೂಟಿಂಗ್​ ಸೆಟ್​ಗೆ ತೆರಳಿ ಜಗ್ಗೇಶ್​ ಅವರನ್ನು ಮುತ್ತಿಗೆ ಹಾಕಿ ಗಲಾಟೆಯನ್ನೂ ಮಾಡಿದ್ದಾರೆ. ಸುಮಾರು 15-20 ಜನ ಬಂದು ಜಗ್ಗೇಶ್​ ಅವರಿಗೆ ಧಿಕ್ಕಾರ ಎಂದೂ ಕೂಗಿದ್ದಾರೆ. ಈ ಎಲ್ಲ ಘಟನೆಗಳಿಂದ ಮನನೊಂದ ಜಗ್ಗೇಶ್​ ನಿನ್ನೆ ಒಂದು ವಿಡಿಯೋ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಮಾತನಾಡಿದ್ದು ನಟ ದರ್ಶನ್​ ಬಗ್ಗೆ ಅಲ್ಲ, ವೆಬ್​ಡಿಸೈನರ್​ ದರ್ಶನ್​ ಬಗ್ಗೆ ಎಂದೂ ಕೂಡ ಹೇಳಿದ್ದಾರೆ. ಇಷ್ಟೆಲ್ಲ ಆದರೂ ನಟ ದರ್ಶನ್ ಇದುವರೆಗೂ ಒಂದೇಒಂದು ಪ್ರತಿಕ್ರಿಯೆಯನ್ನೂ ನೀಡಿಲ್ಲ.

ಕಳೆದ ಎರಡು ದಿನಗಳಿಂದಲೂ ಈ ವಿವಾದ ನಡೆಯುತ್ತಲೇ ಇದ್ದು, ಇಂದು ಟ್ವೀಟ್ ಮಾಡಿರುವ ನಟ ಜಗ್ಗೇಶ್​ ತಮ್ಮ ಬೆಂಬಲಕ್ಕೆ ನಿಂತವರಿಗೆ ಧನ್ಯವಾದ ಹೇಳಿದ್ದಾರೆ. ರಾಯರ ಭಕ್ತರಾಗಿರುವ ಜಗ್ಗೇಶ್ ತಾವು ದೇವರ ಪೂಜೆಯಲ್ಲಿ ತೊಡಗಿರುವ ಫೋಟೋವೊಂದನ್ನು ಹಾಕಿದ ಜಗ್ಗೇಶ್​, ‘ಮಲ ತಿಂದು ಹೋಗುವರಯ್ಯ ನಿಂದಕರು..’ ಎಂಬ ಪುರಂದರ ದಾಸ ಪದವನ್ನೂ ಹಂಚಿಕೊಂಡಿದ್ದಾರೆ. ವಿಶ್ವ ದೇವರು ಸೃಷ್ಟಿಯ ಕನ್ನಡಿ.. ನಮ್ಮ ಅಲಂಕಾರ ನಮಗೆ ಕಾಣುವುದು! ವಿಶ್ವ ದೇವರು ಸೃಷ್ಟಿಯ ಬೆಟ್ಟದ ತಪ್ಪಲು, ನಮ್ಮ ಧ್ವನಿ ನಮಗೆ ಪ್ರತಿಧ್ವನಿ. ಒಳ್ಳೆಯ ಮುಖಭಾವ ನುಡಿ ಇದ್ದರೆ ಕನ್ನಡಿ ಬೆಟ್ಟದಲ್ಲಿ ನಮ್ಮತನ ಕಾಣುವುದು ! ಇದು ಸಮಾಜ.. ಹರಸಿ ಬೆನ್ನಿಗೆ ನಿಂತ ರಾಯರ ಪ್ರತಿರೂಪದ ಕನ್ನಡಮನಗಳಿಗೆ ಅಭಿಮಾನಿಗಳಿಗೆ ಧನ್ಯವಾದ ಎಂದು ಟ್ವೀಟ್​ ಮಾಡಿ, ತಮ್ಮ ಭಾವನೆಯನ್ನು ಹಂಚಿಕೊಂಡಿದ್ದಾರೆ. ಇದೆಲ್ಲ ಬೆಳವಣಿಗೆಗಳು ಒಳ್ಳೆಯದಲ್ಲ.. ಕನ್ನಡ ಚಿತ್ರರಂಗದಲ್ಲಿ ಸ್ಟಾರ್​ವಾರ್​ ಶುರುವಾಗಿದೆ ಎಂದು ನಿನ್ನೆಯೇ ನೋವಿನಿಂದ ಹೇಳಿರುವ ನಟ ಜಗ್ಗೇಶ್​, ಸೋಷಿಯಲ್ ಮೀಡಿಯಾಗಳಲ್ಲಿ ಬರುವುದನ್ನೆಲ್ಲ ಕುರುಡಾಗಿ ನಂಬಬಾರದು. ಅದೆಷ್ಟೋ ವಿಚಾರಗಳು ಫೇಕ್​ ಆಗಿರುತ್ತವೆ ಎಂಬ ಸಂದೇಶವನ್ನೂ ನೀಡಿದ್ದಾರೆ.

ಟ್ವೀಟ್ ಮಾಡಿ, ಡಿಲೀಟ್ ಮಾಡಿದ ಶಶಿಕುಮಾರ್​ ಇನ್ನು ಜಗ್ಗೇಶ್​ಗೆ ಬೆಂಬಲ ಸೂಚಿಸಿ ನಟ ಶಶಿಕುಮಾರ್ ಅವರು ಟ್ವೀಟ್ ಮಾಡಿದ್ದರು. ಯಾವಾಗಲೂ ನಕ್ಕು ನಗಿಸುತ್ತಿದ್ದ ನಿಮ್ಮ ಮುಖದಲ್ಲಿ ನೋವಿನ ನೆರಳು ಕಾಣುತ್ತಿದೆ. ನಮಗೆ ತುಂಬ ನೋವಾಯಿತು. ಆದರೆ ಎಲ್ಲದಕ್ಕೂ ಒಂದು ಒಳ್ಳೆ ಕಾಲ ಎನ್ನುವುದು ಇದ್ದೇ ಇರುತ್ತದೆ. ನಿಮ್ಮ ಮಾತು, ನಗು, ಸಲಹೆ, ಪ್ರೀತಿಗೆ ನಾವು ಕನ್ನಡಿಗರು ಸದಾ ಚಿರಋಣಿ ಎಂದು ಶಶಿಕುಮಾರ್​ ಟ್ವೀಟ್​ ಮಾಡಿದ್ದರು. ಆದರೆ ಆ ಟ್ವೀಟ್​ನ್ನು ಕೆಲವೇ ಹೊತ್ತಲ್ಲಿ ಡಿಲೀಟ್ ಮಾಡಿದ್ದಾರ

Shashikumar Tweet About Jaggesh

ನಟ ಶಶಿಕುಮಾರ್ ಮಾಡಿದ್ದ ಟ್ವೀಟ್​ಇದನ್ನೂ ಓದಿ: Jaggesh: TV9 ಕನ್ನಡಕ್ಕೆ ಧನ್ಯವಾದ ತಿಳಿಸಿದ ನಟ ಜಗ್ಗೇಶ್

Jaggesh | ವಿವಾದದ ನಡುವೆಯೂ ವೈವಾಹಿಕ ಜೀವನಕ್ಕೆ ಕಾಲಿಡೋ ಸೀನ್​ನಲ್ಲಿ ಮಿಂಚಿದ ನವರಸ ನಾಯಕ!

Published On - 12:40 pm, Wed, 24 February 21

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್