Jaggesh | ವಿವಾದದ ನಡುವೆಯೂ ವೈವಾಹಿಕ ಜೀವನಕ್ಕೆ ಕಾಲಿಡೋ ಸೀನ್​ನಲ್ಲಿ ಮಿಂಚಿದ ನವರಸ ನಾಯಕ!

ಇತ್ತೀಚೆಗೆ ವಿವಾದದ ಬಿರುಗಾಳಿಯಲ್ಲಿ ಸಿಲುಕಿ ನಲುಗಿ ಹೋಗಿದ್ದ ನವರಸ ನಾಯಕ ಜಗ್ಗೇಶ್​ ಇಂದು ಕಾಂಟ್ರವರ್ಸಿಯ ಆರ್ಭಟ ಕೊಂಚ ತಗ್ಗಿದ ಬಳಿಕ ಶೂಟಿಂಗ್​ನಲ್ಲಿ ತಲ್ಲೀನರಾಗಿರುವುದು ಕಂಡುಬಂತು. ಹೌದು, ನಟ ದರ್ಶನ್​ ಬಗ್ಗೆ ಜಗ್ಗೇಶ್​ ನೀಡಿದ್ದ ಹೇಳಿಕೆಗಳಿಂದ ಕೆರಳಿದ್ದ ‘ಯಜಮಾನ’ನ ಅಭಿಮಾನಿಗಳು ನವರಸ ನಾಯಕನಿಗೆ ಮುತ್ತಿಗೆ ಹಾಕಿ ಅವರು ಕ್ಷಮೆಯಾಚಿಸಿವುವವರೆಗೂ ದೊಡ್ಡ ಮಟ್ಟದ ವಿವಾದವೇ ಆಗಿಬಿಟ್ಟಿತ್ತು. ಇದೀಗ, ವಿವಾದದ ತೀವ್ರತೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿದ್ದು ಈ ನಡುವೆ ಜಗ್ಗೇಶ್ ಶೂಟಿಂಗ್​ನಲ್ಲಿ ಬ್ಯುಸಿಯಾಗಿರುವುದು ಕಂಡುಬಂತು. ತಮ್ಮ ತೋತಾಪುರಿ ಸಿನಿಮಾದ ಶೂಟಿಂಗ್​ನಲ್ಲಿ ತೊಡಗಿದ್ದ ಜಗ್ಗಣ್ಣ ಸದ್ಯ ಚಿತ್ರೀಕರಣದ ಕೆಲವು ಫೋಟೋಗಳನ್ನ ರಿಲೀಸ್ ಮಾಡಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಡೋ ದೃಶ್ಯದ ಚಿತ್ರೀಕರಣದಲ್ಲಿ ಕಾಣಿಸಿಕೊಂಡ ಜಗ್ಗೇಶ್, ಅದಿತಿ ಪ್ರಭುವೇವ ಜೊತೆ ವಿವಾಹವಾಗುವ ಸೀನ್​ನ ಫೋಟೋಗಳನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

KUSHAL V
|

Updated on: Feb 23, 2021 | 6:34 PM

ಶೂಟಿಂಗ್​ ಸೆಟ್​ನಲ್ಲಿ ಜಗ್ಗೇಶ್​, ಅದಿತಿ ಪ್ರಭುದೇವ ಹಾಗೂ ಸುಮನ್​ ರಂಗನಾಥನ್​

ಶೂಟಿಂಗ್​ ಸೆಟ್​ನಲ್ಲಿ ಜಗ್ಗೇಶ್​, ಅದಿತಿ ಪ್ರಭುದೇವ ಹಾಗೂ ಸುಮನ್​ ರಂಗನಾಥನ್​

1 / 10
ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಚಿತ್ರತಂಡ

ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಚಿತ್ರತಂಡ

2 / 10
ಶೂಟಿಂಗ್​ ವೇಳೆ ಜಗ್ಗೇಶ್, ದತ್ತಣ್ಣ ಸಖತ್​ ಪೋಸ್​!

ಶೂಟಿಂಗ್​ ವೇಳೆ ಜಗ್ಗೇಶ್, ದತ್ತಣ್ಣ ಸಖತ್​ ಪೋಸ್​!

3 / 10
ಇಬ್ಬರು ಸೀನಿಯರ್ ನಟರ ನಡುವೆ ನಾನೇನು ಕಮ್ಮಿ ಇಲ್ಲ ಎನ್ನು ವ ಹಾಗೆ ಅದಿತಿ ಎಕ್ಸ್​ಪ್ರೆಷನ್​!

ಇಬ್ಬರು ಸೀನಿಯರ್ ನಟರ ನಡುವೆ ನಾನೇನು ಕಮ್ಮಿ ಇಲ್ಲ ಎನ್ನು ವ ಹಾಗೆ ಅದಿತಿ ಎಕ್ಸ್​ಪ್ರೆಷನ್​!

4 / 10
ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಚಿತ್ರತಂಡ

ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಚಿತ್ರತಂಡ

5 / 10
ಶೂಟಿಂಗ್ ಮಧ್ಯೆ ಕ್ಯಾಮರಾಗೆ ಪೋಸ್​ ಕೊಟ್ಟ ದತ್ತಣ್ಣ, ಅದಿತಿ, ಜಗ್ಗೇಶ್​, ಸುಮನ್​ ರಂಗನಾಥನ್​

ಶೂಟಿಂಗ್ ಮಧ್ಯೆ ಕ್ಯಾಮರಾಗೆ ಪೋಸ್​ ಕೊಟ್ಟ ದತ್ತಣ್ಣ, ಅದಿತಿ, ಜಗ್ಗೇಶ್​, ಸುಮನ್​ ರಂಗನಾಥನ್​

6 / 10
ಶೂಟಿಂಗ್ ಬ್ರೇಕ್​ ವೇಳೆ ಮೊಬೈಲ್​ನಲ್ಲಿ ಬ್ಯುಸಿ

ಶೂಟಿಂಗ್ ಬ್ರೇಕ್​ ವೇಳೆ ಮೊಬೈಲ್​ನಲ್ಲಿ ಬ್ಯುಸಿ

7 / 10
ಅತ್ತ ತೋತಾಪುರಿ ಅದಿತಿ; ಇತ್ತ, ನೀರ್​ ದೋಸೆ ಸುಮನ್​ ಮಧ್ಯದಲ್ಲಿ ಜಗ್ಗಣ್ಣ!

ಅತ್ತ ತೋತಾಪುರಿ ಅದಿತಿ; ಇತ್ತ, ನೀರ್​ ದೋಸೆ ಸುಮನ್​ ಮಧ್ಯದಲ್ಲಿ ಜಗ್ಗಣ್ಣ!

8 / 10
ಸೀನ್​​ ವೇಳೆ ನವರಸ ನಾಯಕನ ಎಕ್ಸ್​ಪ್ರೆಷನ್ ನೋಡಿ!

ಸೀನ್​​ ವೇಳೆ ನವರಸ ನಾಯಕನ ಎಕ್ಸ್​ಪ್ರೆಷನ್ ನೋಡಿ!

9 / 10
ವೀಣಾ ಸುಂದರ್​, ಅದಿತಿ ಪ್ರಭುದೇವ, ದತ್ತಣ್ಣ

ವೀಣಾ ಸುಂದರ್​, ಅದಿತಿ ಪ್ರಭುದೇವ, ದತ್ತಣ್ಣ

10 / 10
Follow us