AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England: Pink Ball ಟೆಸ್ಟ್​ಗಾಗಿ ಮೈದಾನದಲ್ಲಿ ಬೆವರು ಹರಿಸಿದ ವಿರಾಟ್​ ಪಡೆ

India vs England: ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಶತಕಗಳ ಬರ ಎದುರಿಸುತ್ತಿದ್ದಾರೆ. ಕೊಹ್ಲಿ 3ನೇ ಟೆಸ್ಟ್​ನಲ್ಲಿ ಮಿಂಚಲಿದ್ದಾರೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.

ಪೃಥ್ವಿಶಂಕರ
|

Updated on:Feb 23, 2021 | 2:49 PM

Share
ಸುಮಾರು ಒಂದು ವಾರದ ನಂತರ, ಭಾರತ ಹಾಗೂ ಇಂಗ್ಲೆಂಡ್‌ ಕ್ರಿಕೆಟ್ ತಂಡಗಳು ಅಹಮದಾಬಾದ್‌ನ ಮೊಟೆರಾ ಕ್ರೀಡಾಂಗಣದಲ್ಲಿ ಸೆಣಸಾಡಲಿವೆ. ವಿಶ್ವದ ಅತಿದೊಡ್ಡ ಕ್ರೀಡಾಂಗಣವು ತನ್ನ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನು ಆಯೋಜಿಸಲು ಸಜ್ಜಾಗಿದೆ. ಉಭಯ ತಂಡಗಳು ಸಮಬಲ (1-1) ಸಾಧಿಸಿವೆ.

ಸುಮಾರು ಒಂದು ವಾರದ ನಂತರ, ಭಾರತ ಹಾಗೂ ಇಂಗ್ಲೆಂಡ್‌ ಕ್ರಿಕೆಟ್ ತಂಡಗಳು ಅಹಮದಾಬಾದ್‌ನ ಮೊಟೆರಾ ಕ್ರೀಡಾಂಗಣದಲ್ಲಿ ಸೆಣಸಾಡಲಿವೆ. ವಿಶ್ವದ ಅತಿದೊಡ್ಡ ಕ್ರೀಡಾಂಗಣವು ತನ್ನ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನು ಆಯೋಜಿಸಲು ಸಜ್ಜಾಗಿದೆ. ಉಭಯ ತಂಡಗಳು ಸಮಬಲ (1-1) ಸಾಧಿಸಿವೆ.

1 / 7
ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಶತಕಗಳ ಬರ ಎದುರಿಸುತ್ತಿದ್ದಾರೆ. ಕೊಹ್ಲಿ ಕೊನೆಯ ಶತಕ 2019ರ ನವೆಂಬರ್‌ನಲ್ಲಿ ಸಿಡಿದಿತ್ತು. 3ನೇ ಟೆಸ್ಟ್​ನಲ್ಲಿ ಕೊಹ್ಲಿ ಮಿಂಚಿ, ಶತಕ ಸಿಡಿಸುತ್ತಾರೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.

Virat Kohli

2 / 7
ಮೊದಲ ಟೆಸ್ಟ್‌ನಲ್ಲಿ ರೋಹಿತ್ ಶರ್ಮ ವಿಫಲವಾದರೂ ಎರಡನೇ ಟೆಸ್ಟ್‌ನಲ್ಲಿ ಫಾರ್ಮ್‌ಗೆ ಮರಳಿದರು. ಅಬ್ಬರದ ಶತಕ ಸಿಡಿಸುವ ಮೂಲಕ ಟೀಕಾಕಾರಿಗೆ ರೋಹಿತ್​ ಸರಿಯಾದ ಉತ್ತರ ನೀಡಿದ್ದರು. ಹೀಗಾಗಿ 3ನೇ ಟೆಸ್ಟ್​ನಲ್ಲಿ ರೋಹಿತ್ ಮೇಲೆ ಭಾರೀ ನಿರೀಕ್ಷೆಗಳಿವೆ.

Rohit Sharma

3 / 7
ಈ ಸರಣಿಯಲ್ಲಿ ರಿಷಭ್ ಪಂತ್ ಬ್ಯಾಟಿಂಗ್ ವಿಭಾಗದಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಅವರ ವಿಕೆಟ್ ಕೀಪಿಂಗ್ ಕೂಡ ಉನ್ನತ ದರ್ಜೆಯಲ್ಲಿದೆ. ಸರಣಿಯ ಈವರೆಗಿನ ಆಟದಲ್ಲಿ ಭಾರತಕ್ಕೆ ಇದು ಅತಿದೊಡ್ಡ ಪ್ಲಸ್ ಪಾಯಿಂಟ್. ಮುಂದಿನ ಪಂದ್ಯದಲ್ಲೂ ಪಂತ್​ ಮಿಂಚುವ ನಿರೀಕ್ಷೆ ಇದೆ.

Rishabh Pant

4 / 7
India vs England: Pink Ball ಟೆಸ್ಟ್​ಗಾಗಿ ಮೈದಾನದಲ್ಲಿ ಬೆವರು ಹರಿಸಿದ ವಿರಾಟ್​ ಪಡೆ

5 / 7
ಮೂರನೇ ಟೆಸ್ಟ್ ಪಂದ್ಯದ ದೊಡ್ಡ ಪ್ರಶ್ನೆಯೆಂದರೆ ಉಮೇಶ್ ಯಾದವ್ ಅವರ ಫಿಟ್‌ನೆಸ್. ಅವರು ಆಡಲು ರೆಡಿಯಾಗಿದ್ದರೆ, ಕುಲದೀಪ್ ಯಾದವ್ ಬದಲಿಗೆ ಆಡುವ 11ರಲ್ಲಿ ಅವರು ಕಾಣಿಸಿಕೊಳ್ಳುವ ನಿರೀಕ್ಷೆ ಇದೆ.

Umesh Yadav

6 / 7
2ನೇ ಟೆಸ್ಟ್​ ಪಂದ್ಯದಲ್ಲಿ ಕೇವಲ 11 ಓವರ್‌ ಎಸೆದ ಮೊಹಮ್ಮದ್ ಸಿರಾಜ್ ಅವರನ್ನು ತಂಡದಿಂದ ಕೈಬಿಡಲಿದ್ದಾರಾ ಎಂಬ ಅನುಮಾನ ಶುರುವಾಗಿದೆ. ಅನುಭವದ ಕೊರತೆ ಎದುರಿಸುತ್ತಿರುವ ಸಿರಾಜ್​ಗೆ ಈ ಪಂದ್ಯದಲ್ಲಿ ಆಡುವ ಅವಕಾಶ ತೀರ ವಿರಳವಾಗಿದೆ.

Mohammed Siraj

7 / 7

Published On - 2:21 pm, Tue, 23 February 21