These Foods can helps to flush Nicotine Smoker Should read
ಬ್ರೊಕೊಲಿ: ಬ್ರೊಕೊಲಿಯಲ್ಲಿ ವಿಟಾಮಿನ್ ಸಿ ಹಾಗೂ ವಿಟಾಮಿನ್ ಬಿ5 ಅಂಶ ಹೆಚ್ಚಾಗಿರುತ್ತದೆ. ಈ ಅಂಶಗಳು ನಿಮ್ಮ ಶ್ವಾಸಕೋಶವನ್ನು ನಿಕೋಟಿನ್ ಅಂಶದಿಂದ ರಕ್ಷಣೆ ಮಾಡುತ್ತದೆ. ಸಿಗರೇಟ್ ಸೇದುವುದರಿಂದ ದೇಹದಲ್ಲಿ ವಿಟಾಮಿನ್ ಸಿ ಅಂಶ ಕಡಿಮೆ ಆಗುತ್ತದೆ. ಕೋಸುಗಡ್ಡೆ ವಿಟಾಮಿನ್ ಸಿ ಮರುಪೂರಣ ಮಾಡುವ ಕೆಲಸ ಮಾಡುತ್ತದೆ. ಬಿ5 ಪೋಷಕಾಂಶ ಒತ್ತಡವನ್ನು ಕಡಿಮೆ ಮಾಡುತ್ತದೆ.
ಕ್ಯಾರೆಟ್: ಸಿಗರೇಟ್ ಸೇದುವುದರಿಂದ ದೇಹದಲ್ಲಿ ಎ,ಸಿ ಮತ್ತು ಕೆ ಪೋಷಕಾಂಶದ ಕೊರತೆ ಉಂಟಾಗುತ್ತದೆ. ಇದರಿಂದ ನರ ದೌರ್ಬಲ್ಯ, ಮಿದುಳಿನ ಕಾರ್ಯಕ್ಕೆ ತೊಂದರೆ ಉಂಟಾಗುತ್ತದೆ. ನಿತ್ಯ ಕ್ಯಾರೆಟ್ ತಿನ್ನುವುದರಿಂದ ವಿಟಾಮಿನ್ ಎ,ಸಿ ಹಾಗೂ ಕೆ ಪೋಷಕಾಂಶ ಹೆಚ್ಚುತ್ತದೆ. ಈ ಮೂಲಕ ನಿಮ್ಮ ದೇಹವನ್ನು ಬಲಗೊಳಿಸುತ್ತದೆ.
ಕ್ರ್ಯಾನ್‌ಬೆರಿ: ಈ ಹಣ್ಣಿನಲ್ಲಿ ವಿಶೇಷ ಶಕ್ತಿಯೊಂದಿದೆ. ಅದೇನೆಂದರೆ, ನೀವು ಸಿಗರೇಟ್ ಬಿಡುತ್ತೀರಿ ಎನ್ನುವ ಗಟ್ಟಿ ನಿರ್ಧಾರ ಮಾಡಿದಾಗ, ಸಿಗರೇಟ್ ಬದಲಿಗೆ ಈ ಹಣ್ಣನ್ನು ಸೇವನೆ ಮಾಡಿ. ಇದು, ನಿಮಗೆ ಸಿಗರೇಟ್ ಸೇದಬೇಕು ಎನ್ನುವ ಹಂಬಲವನ್ನು ಕಡಿಮೆ ಮಾಡುತ್ತದೆ.
ಕಿತ್ತಳೆ: ಕಿತ್ತಳೆಯಲ್ಲಿ ವಿಟಾಮಿನ್ ಸಿ ಅಂಶ ಹೆಚ್ಚಿರುತ್ತದೆ ಎನ್ನುವ ವಿಚಾರ ಬಹುತೇಕರಿಗೆ ಗೊತ್ತಿರುತ್ತದೆ. ಹೀಗಾಗಿ, ಸಿಗರೇಟ್ ಸೇದಿದಾಗ ಕಡಿಮೆ ಆಗುವ ಸಿ ವಿಟಾಮಿನ್ ಕಿತ್ತಳೆಯಿಂದ ಸಿಗಲಿದೆ.
ಶುಂಠಿ: ಹಸಿ ಶುಂಠಿ ಸೇವನೆ ಮಾಡುವುದರಿಂದ ನಿಕೋಟಿನ್ ತೆಗೆದುಕೊಳ್ಳಬೇಕು ಎನ್ನುವ ಹಂಬಲ ಕಡಿಮೆ ಆಗುತ್ತದೆ. ಇದರ ಜೊತೆಗೆ, ಶುಂಠಿ ಸೇವನೆಯು ನಿಮ್ಮ ದೇಹದಲ್ಲಿರುವ ನಿಕೋಟಿನ್ ಅಂಶವನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.
You must know the side effects of kiwi fruits
ದಾಳಿಂಬೆ: ದಾಳಿಂಬೆ ಸೇವನೆಯಿಂದ ರಕ್ತ ಸಂಚಲನ ಉತ್ತಮವಾಗುತ್ತದೆ. ಜತೆಗೆ ಇದು ನಿಮ್ಮ ದೇಹದಲ್ಲಿನ ನಿಕೋಟಿನ್ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ಜ್ಯೂಸ್ ಮಾಡಿ ಕುಡಿಯಹುದು ಅಥವಾ ನೇರವಾಗಿ ಸೇವನೆ ಮಾಡಿ, ಆಯ್ಕೆ ನಿಮ್ಮದು.
ಪಾಲಕ್ ಸೊಪ್ಪು: ಪಾಲಕ್ ಸೊಪ್ಪಿನಲ್ಲಿರುವ ಫೋಲಿಕ್ ಆ್ಯಸಿಡ್ ಮತ್ತು ವಿಟಾಮಿನ್ ಬಿ9 ನಿಮಗೆ ನಿಕೋಟಿನ್ ಮೇಲೆ ಜಿಗುಪ್ಸೆ ಬರುವಂತೆ ಮಾಡುತ್ತದೆ. ಇದನ್ನು ನಿರಂತರವಾಗಿ ತಿಂದರೆ, ಧೂಮಪಾನ ಪ್ರಚೋದನೆ ನಿಗ್ರಹವಾಗಲಿದೆ.
ನೀರು: ಸಿಗರೇಟ್ ಸೇದುವುದರಿಂದ ದೇಹದಲ್ಲಿ ನೀರಿನ ಅಂಶ ಕಡಿಮೆ ಆಗುತ್ತದೆ. ನಿರಂತರವಾಗಿ ನೀರು ಕುಡಿದರೆ ನಿಮ್ಮ ದೇಹದಲ್ಲಿ ನೀರಿನ ಅಂಶ ಉತ್ತಮಗೊಂಡು ಹಲವು ಲಾಭವಾಗುತ್ತದೆ. ಮಾತ್ರವಲ್ಲ, ನಿಕೋಟಿನ್ ಅಂಶವನ್ನು ತೆಗೆದು ಹಾಕಲು ಇದು ಸಹಕಾರಿ.
ಹಾಲು: ಡ್ಯೂಕ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯ ಪ್ರಕಾರ, ಧೂಮಪಾನ ಮಾಡುವ ಮೊದಲು ಒಂದು ಲೋಟ ಹಾಲು ಕುಡಿಯಬೇಕು. ಹಾಲು ಕುಡಿದ ನಂತರ ನಿಮಗೆ ಸಿಗರೇಟ್ ರುಚಿಯ ಬಗ್ಗೆ ಹೇಸಿಗೆ ಹುಟ್ಟಲಿದೆಯಂತೆ.
Published On - 3:00 pm, Mon, 22 February 21