ಕಡಲ ಕಿನಾರೆಯಲ್ಲಿ ಫಾರ್ REGN ಚಿತ್ರ ತಂಡ.. ದಿಯಾ ಪೃಥ್ವಿ ಜೊತೆ ಮಿಲನಾ ನಾಗರಾಜ್ ಫೋಟೋಶೂಟ್

ಕಡಲ ಕಿನಾರೆಯಲ್ಲಿ ಫಾರ್ REGN ಚಿತ್ರ ತಂಡ.. ದಿಯಾ ಪೃಥ್ವಿ ಜೊತೆ ಮಿಲನಾ ನಾಗರಾಜ್ ಫೋಟೋಶೂಟ್
ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಹಾಗೂ ಲವ್ ಮಾಕ್ಟೇಲ್ ಖ್ಯಾತಿಯ ಮಿಲನಾ ನಾಗರಾಜ್

ನಿಶ್ಚಲ್ ಫಿಲಮ್ಸ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ಟೆಕ್ಕಿಗಳ ಚಿತ್ರ “ಫಾರ್ REGN” (For Registration ) ಈಗಾಗಲೇ ಮೊದಲ ಹಂತದ ಶೂಟಿಂಗ ಅನ್ನು ಕಡಲ ದಡದಲ್ಲಿ ಮುಗಿಸಿಕೊಂಡು ಬಂದಿದೆ. ಚಿತ್ರೀಕರಣದ ಕೆಲವು ತುಣುಕುಗಳನ್ನು ಹಾಗೂ ಕ್ಯಾಮೆರಾ ಹಿಂದಿನ ಝಲಕ್​ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಸದ್ಯ ಗಾಂಧಿನಗರದಲ್ಲಿ ಸಕ್ಕತ್ತಾಗಿ ಸದ್ದು ಮಾಡುತ್ತಿದೆ.

Ayesha Banu

| Edited By: sadhu srinath

Feb 24, 2021 | 1:44 PM


ಬೆಂಗಳೂರು: ಇತ್ತೀಚೆಗಷ್ಟೆ ಸಪ್ತ ಪದಿ ತುಳಿದು ಮಾಲ್ಡೀವ್ಸ್​ನಲ್ಲಿ ಹನಿಮೂನ್ ಪ್ರವಾಸದ ಬಳಿಕ ವಾಪಾಸ್ ಆಗಿರುವ ಸ್ಯಾಂಡಲ್​ವುಡ್ ಕ್ಯೂಟ್ ಜೋಡಿ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ತಮ್ಮ ತಮ್ಮ ಸಿನಿಮಾ ಕೆಲಸಗಳಲ್ಲಿ ನಿರತರಾಗಿದ್ದಾರೆ. ಮದುವೆ ನಂತರ ಮಿಲನಾ ನಾಗರಾಜ್ ತಮ್ಮ ಹೊಸ ಸಿನಿಮಾದ ಶೂಟಿಂಗ್​ನಲ್ಲಿ ಭಾಗಿಯಾಗಿದ್ದಾರೆ. ಸದ್ಯ ಒಟ್ಟೊಟ್ಟಿಗೆ ರಿಲೀಸ್ ಆಗಿ ಜನರ ಮನಸಲ್ಲಿ ಅಚ್ಚಳಿಯದಂತೆ ಧೂಳ್ ಎಬ್ಬಿಸಿದ್ದ ದಿಯಾ ಮತ್ತು ಲವ್ ಮಾಕ್ಟೇಲ್ ಚಿತ್ರದ ಮುಖ್ಯ ಪಾತ್ರಧಾರಿಗಳಿಬ್ಬರೂ ಮತ್ತೊಮ್ಮೆ ಪ್ರೀತಿ ಪಾಠ ಮಾಡಲಿದ್ದಾರೆ.

ನಿಶ್ಚಲ್ ಫಿಲಮ್ಸ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ಟೆಕ್ಕಿಗಳ ಚಿತ್ರ “ಫಾರ್ REGN” (For Registration ) ಈಗಾಗಲೇ ಮೊದಲ ಹಂತದ ಶೂಟಿಂಗ್ ಅನ್ನು ಕಡಲತಡದಲ್ಲಿ ಮುಗಿಸಿಕೊಂಡು ಬಂದಿದೆ. ಚಿತ್ರೀಕರಣದ ಕೆಲವು ತುಣುಕುಗಳನ್ನು ಹಾಗೂ ಕ್ಯಾಮೆರಾ ಹಿಂದಿನ ಝಲಕ್​ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಸದ್ಯ ಗಾಂಧಿನಗರದಲ್ಲಿ ಸಕ್ಕತ್ತಾಗಿ ಸದ್ದು ಮಾಡುತ್ತಿದೆ. ಮಿಲನಾ ಮತ್ತು ಪೃಥ್ವಿ ಕಡಲ ಕಿನಾರೆಯಲ್ಲಿ ಫೋಟೋಶೂಟ್ ಮಾಡಿಸಿರುವ ಫೋಟೋಗಳು ಎಲ್ಲರ ಗಮನ ಸೆಳೆದಿದೆ.

Milana nagaraj and pruthvi ambar

ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಹಾಗೂ ಲವ್ ಮಾಕ್ಟೇಲ್ ಖ್ಯಾತಿಯ ಮಿಲನಾ ನಾಗರಾಜ್

ಸ್ಯಾಂಡಲ್​ವುಡ್ ನಿಧಿಮಾ ಅಲಿಯಾಸ್ ಮಿಲನಾ ನಾಗರಾಜ್ ಹಾಗೂ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದು ಸುಧಾರಾಣಿ, ಸುಧಾ ಬೆಳವಾಡಿ, ಬಾಬು ಹಿರಣ್ಣಯ್ಯ, ತಬಲಾ ನಾಣಿ, ಖ್ಯಾತ ತುಳು ನಟ ಅರವಿಂದ್ ಬೋಳಾರ್ ಹೀಗೆ ಸ್ಯಾಂಡಲ್​ವುಡ್ ಹಿರಿಯ ಕಲಾವಿದರ ಬಳಗವೇ ಈ ಚಿತ್ರದಲ್ಲಿದೆ.

ಚಿತ್ರವನ್ನು “ಎಲ್ಲೊಬೋರ್ಡ್”ನಿರ್ದೇಶಕ ನವೀನ್ ದ್ವಾರಕನಾಥ್​ ನಿರ್ದೇಶಿಸುತ್ತಿದ್ದು, ಚಿತ್ರಕ್ಕೆ ನವೀನ್ ರಾವ್ ಬಂಡವಾಳ ಹೂಡಿದ್ದಾರೆ. ಇನ್ನು ಚಿತ್ರಕ್ಕೆ ವಿವೇಕ್ ಎಸ್.ಕೆ. ಅವರ ಛಾಯಾಗ್ರಹಣವಿದೆ. ಇದು ಈ ತಂಡದ ಮೊದಲ ಪ್ರಯತ್ನವಾಗಿದ್ದರೂ, ಪಕ್ಕಾ ಪ್ರಾಮಿಸಿಂಗ್ ಚಿತ್ರ ಎನ್ನುವುದು ತೆರೆ ಹಿಂದಿನ ಕಸರತ್ತಿನಲ್ಲಿ ಕಂಡುಬರುತ್ತದೆ. ಏನೇ ಇರಲಿ ಸ್ಯಾಂಡಲ್​ವುಡ್ ಹೊಸ ಪ್ರತಿಭೆಗಳು ಬಂದು ಸುದ್ದಿ ಮಾಡುತ್ತಿರುವುದು ಚಂದನವನಕ್ಕೆ ಮತ್ತೊಂದು ಗರಿ ಹೆಚ್ಚಿದಂತಾಗುತ್ತಿದೆ. ಈ ಚಿತ್ರವು ಸ್ಯಾಂಡಲ್​ವುಡ್​ನಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿ ಎಂಬುವುದೇ ನಮ್ಮ ಆಶಯ.

ಇನ್ನು ಲವ್ ಮಾಕ್ಟೇಲ್ ಖ್ಯಾತಿಯ ಮಿಲನಾ ನಾಗರಾಜ್ ಲವ್ ಮಾಕ್ಟೇಲ್-2 ಚಿತ್ರದಲ್ಲಿ ಬ್ಯೂಸಿಯಾಗಿದ್ದಾರೆ. ಹಾಗೂ ಪೃಥ್ವಿ ಅಂಬರ್ ಅವರು ದಿಯಾ ಸಿನಿಮಾದ ನಂತರ ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಸದ್ಯ ಲೈಫ್ ಈಸ್ ಬ್ಯೂಟಿಫುಲ್, ಶುಗರ್ ಲೆಸ್, ಶಿವಪ್ಪ ಮತ್ತು ದಿಯಾದ ಹಿಂದಿ ರಿಮೇಕ್​ನಲ್ಲಿ ನಟಿಸಲಿದ್ದಾರೆ.

Milana nagaraj and pruthvi ambar

ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಹಾಗೂ ಲವ್ ಮಾಕ್ಟೇಲ್ ಖ್ಯಾತಿಯ ಮಿಲನಾ ನಾಗರಾಜ್

ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕೃಷ್ಣ-ಮಿಲನಾ


Follow us on

Related Stories

Most Read Stories

Click on your DTH Provider to Add TV9 Kannada