ಪ್ರೀತಿಯ ಮಡದಿ ಜತೆ, ನೆಚ್ಚಿನ ಬೈಕ್​ ಆರ್​ಎಕ್ಸ್​ 100ನಲ್ಲಿ ನಿಖಿಲ್ ಕುಮಾರಸ್ವಾಮಿ ಫುಲ್​ ಜಾಲಿ ರೈಡ್​

ಸದ್ಯ ನಿಖಿಲ್ ಕುಮಾರಸ್ವಾಮಿ ರೈಡರ್​ ಸಿನಿಮಾ ಶೂಟಿಂಗ್​ನಲ್ಲಿ ತೊಡಗಿಕೊಂಡಿದ್ದಾರೆ. ಇದರಲ್ಲಿ ನಿಖಿಲ್​ದು ಬಾಸ್ಕೆಟ್​ ಬಾಲ್ ಆಟಗಾರನ ಪಾತ್ರ. ಈ ಚಿತ್ರದ ಮೋಶನ್​ ಪೋಸ್ಟರ್, ಟೀಸರ್​ ​ ಕೂಡ ಬಿಡುಗಡೆಯಾಗಿದೆ.

ಪ್ರೀತಿಯ ಮಡದಿ ಜತೆ, ನೆಚ್ಚಿನ ಬೈಕ್​ ಆರ್​ಎಕ್ಸ್​ 100ನಲ್ಲಿ ನಿಖಿಲ್ ಕುಮಾರಸ್ವಾಮಿ ಫುಲ್​ ಜಾಲಿ ರೈಡ್​
ಪತ್ನಿ ಜತೆ ನಿಖಿಲ್ ಕುಮಾರಸ್ವಾಮಿ ಜಾಲಿ ರೈಡ್​
Follow us
Lakshmi Hegde
|

Updated on:Feb 23, 2021 | 5:24 PM

ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಪುತ್ರ, ನಟ ನಿಖಿಲ್​ ಕುಮಾರಸ್ವಾಮಿ ( Nikhil Kumarswamy)  ಪತ್ನಿ ಜತೆ ಆರ್​ಎಕ್ಸ್​ 100 ಬೈಕ್​ನಲ್ಲ ಜಾಲಿ ರೈಡ್​ ಮಾಡಿದ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋವನ್ನು ನಿಖಿಲ್​ ಕುಮಾರಸ್ವಾಮಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ತೆಂಗಿನ ತೋಟದ ಮಧ್ಯೆ ದಂಪತಿ ಬೈಕ್​ನಲ್ಲಿ ರೈಡ್​ ಹೋಗುವ ವಿಡಿಯೋಕ್ಕೆ 2 ಲಕ್ಷಕ್ಕೂ ಅಧಿಕ ವೀವ್ಸ್ ಬಂದಿದೆ. ನೀವಿಬ್ರೂ ಸೂಪರ್​.. ಬಾಸ್​ ಈಸ್ ಆಲ್ವೇಸ್ ಕಿಂಗ್​..ಎಂಬಿತ್ಯಾದಿ ಕಾಮೆಂಟ್​ಗಳನ್ನು ಅಭಿಮಾನಿಗಳು ಪ್ರೀತಿಯಿಂದ ಬರೆದಿದ್ದಾರೆ. ವಿಡಿಯೋ ಶೇರ್​ ಮಾಡಿಕೊಂಡಿರುವ ನಿಖಿಲ್ ಕುಮಾರಸ್ವಾಮಿ, ಆರ್​ಎಕ್ಸ್​ 100 (RX 100) ನನ್ನ ಸದಾ ಕಾಲದ ನೆಚ್ಚಿನ ಬೈಕ್​ ಎಂದೂ ಹೇಳಿದ್ದಾರೆ.

ಸದ್ಯ ನಿಖಿಲ್ ಕುಮಾರಸ್ವಾಮಿ ರೈಡರ್​ ಸಿನಿಮಾ ಶೂಟಿಂಗ್​ನಲ್ಲಿ ತೊಡಗಿಕೊಂಡಿದ್ದಾರೆ. ಇದರಲ್ಲಿ ನಿಖಿಲ್​ದು ಬಾಸ್ಕೆಟ್​ ಬಾಲ್ ಆಟಗಾರನ ಪಾತ್ರ. ಈ ಚಿತ್ರದ ಮೋಶನ್​ ಪೋಸ್ಟರ್, ಟೀಸರ್​ ​ ಕೂಡ ಬಿಡುಗಡೆಯಾಗಿದೆ. ಈ ಮಧ್ಯೆ ಬಿಡುವು ಮಾಡಿಕೊಂಡು ಪತ್ನಿ ಜತೆ ಫುಲ್​ ಖುಷಿಯಾಗಿ ಕಾಲಕಳೆಯುತ್ತಿದ್ದಾರೆ. ಕಳೆದ ವರ್ಷ ಏಪ್ರಿಲ್​ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ನಿಖಿಲ್​ ಮತ್ತು ರೇವತಿ ಆಗಾಗ ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ. ನಿಖಿಲ್​ ಆಗಾಗ ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ನಿಖಿಲ್​ ಕುಮಾರಸ್ವಾಮಿ ಬರ್ತ್​ ಡೇ ಸಿಲೆಬ್ರೇಶನ್​ ವಿಡಿಯೋ ಕೂಡ ಸಖತ್ ವೈರಲ್​ ಆಗಿತ್ತು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಸೋತ ನಂತರ ನಿಖಿಲ್ ಕುಮಾರಸ್ವಾಮಿ ರಾಜಕೀಯದಿಂದ ದೂರವೇ ಉಳಿದಿದ್ದಾರೆ. ಸಮಾಜ ಸೇವೆ, ನಟನೆಯ ಬಗ್ಗೆಯೇ ಹೆಚ್ಚು ಗಮನಹರಿಸುತ್ತಿದ್ದಾರೆ. 2019ರಲ್ಲಿ ತೆರೆಕಂಡ ಕುರುಕ್ಷೇತ್ರ ಸಿನಿಮಾ ಬಳಿಕ ನಿಖಿಲ್​ ಕುಮಾರಸ್ವಾಮಿಯ ಯಾವುದೇ ಸಿನಿಮಾವೂ ಬಂದಿಲ್ಲ. ಇದೀಗ ರೈಡರ್​​ ಬಗ್ಗೆ ಸಹಜವಾಗಿಯೇ ಅಭಿಮಾನಿಗಳಲ್ಲಿ ನಿರೀಕ್ಷೆ ಹುಟ್ಟಿದೆ.

Published On - 5:21 pm, Tue, 23 February 21