AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್ ನಟ ರಣಬೀರ್ ಕಪೂರ್​ಗೆ ಕೊರೊನಾ ಪಾಸಿಟಿವ್; ಹೋಮ್ ಕ್ವಾರಂಟೈನ್​ನಲ್ಲಿ ಇದ್ದಾರೆ ಎಂದ ನೀತು ಕಪೂರ್

Ranbir Kapoor: ರಣಬೀರ್​ಗೆ ಕೊರೊನಾ ಪಾಸಿಟಿವ್ ಬಂದಿರುವುದನ್ನು ತಾಯಿ ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ಇಂದು (ಮಾರ್ಚ್ 9) ಖಚಿತಪಡಿಸಿದ್ದಾರೆ.

ಬಾಲಿವುಡ್ ನಟ ರಣಬೀರ್ ಕಪೂರ್​ಗೆ ಕೊರೊನಾ ಪಾಸಿಟಿವ್; ಹೋಮ್ ಕ್ವಾರಂಟೈನ್​ನಲ್ಲಿ ಇದ್ದಾರೆ ಎಂದ ನೀತು ಕಪೂರ್
ರಣಬೀರ್ ಕಪೂರ್
TV9 Web
| Edited By: |

Updated on:Apr 06, 2022 | 7:19 PM

Share

ದೆಹಲಿ: ಬಾಲಿವುಡ್ ಖ್ಯಾತ ನಟ ರಣಬೀರ್ ಕಪೂರ್​ಗೆ ಕೊವಿಡ್-19 ಪಾಸಿಟಿವ್ ವರದಿ ಬಂದಿದೆ ಎಂದು ರಣಬೀರ್ ತಾಯಿ ನೀತು ಕಪೂರ್ ತಿಳಿಸಿದ್ದಾರೆ. ರಣಬೀರ್​ಗೆ ಕೊರೊನಾ ಪಾಸಿಟಿವ್ ಬಂದಿರುವುದನ್ನು ಅವರ ತಾಯಿ ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ಇಂದು (ಮಾರ್ಚ್ 9) ಖಚಿತಪಡಿಸಿದ್ದಾರೆ. 38 ವರ್ಷದ ನಟ, ರಣಬೀರ್ ಕಪೂರ್ ಸದ್ಯ ಮನೆಯಲ್ಲೇ ಕ್ವಾರಂಟೈನ್​ನಲ್ಲಿ ಇದ್ದಾರೆ. ವೈದ್ಯಕೀಯ ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ. ಶೀಘ್ರವಾಗಿ ಗುಣಮುಖರಾಗುತ್ತಾರೆ ಎಂದು ರಣಬೀರ್ ಕಪೂರ್ ತಾಯಿ  ನೀತು ಕಪೂರ್ ಹೇಳಿದ್ದಾರೆ.

ರಣಬೀರ್ ಕಪೂರ್ ಗುಣಮುಖರಾಗಲಿ ಎಂಬ ಅಭಿಮಾನಿಗಳ ಶುಭಹಾರೈಕೆಗೆ ಧನ್ಯವಾದಗಳನ್ನು ತಿಳಿಸಿರುವ ತಾಯಿ ನೀತು ಕಪೂರ್, ರಣಬೀರ್ ಸೆಲ್ಫ್ ಕ್ವಾರಂಟೈನ್​ನಲ್ಲಿ ಇದ್ದಾರೆ. ಕೊವಿಡ್-19 ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ನೀತು ಕಪೂರ್ ಕೂಡ ಈ ಹಿಂದೆ ಕೊವಿಡ್-19 ಪಾಸಿಟಿವ್ ಆಗಿದ್ದರು. ಡಿಸೆಂಬರ್​ನಲ್ಲಿ ಕೊರೊನಾ ಸೋಂಕಿನಿಂದ ಅವರು ಗುಣಮುಖರಾಗಿದ್ದರು.

ಕೆಲವು ವೆಬ್​ಸೈಟ್​ಗಳು ರಣಬೀರ್​ಗೆ ಕೊರೊನಾ ಪಾಸಿಟಿವ್ ಆಗಿರುವುದನ್ನು ಖಚಿತಪಡಿಸಲು ಮಾಹಿತಿ ಕೇಳಿದ್ದವು. ಈ ಕುರಿತು ರಣಬೀರ್ ಮಾವ ರಣಧೀರ್ ಕಪೂರ್ ಹೇಳಿಕೆಯನ್ನೂ ಪಡೆದುಕೊಂಡಿದ್ದವು. ರಣಧೀರ್ ಕಪೂರ್, ರಣಬೀರ್​ಗೆ ಕೊವಿಡ್ ಪಾಸಿಟಿವ್ ಆಗಿದೆ ಎಂದಿದ್ದರು. ಆದರೆ ಬಳಿಕ, ರಣಬೀರ್​ಗೆ ಹುಷಾರಿಲ್ಲ ಎಂಬುದು ನಿಜ. ಆದರೆ ಕೊವಿಡ್-19 ಪಾಸಿಟಿವ್ ಆಗಿರುವ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದು ಹೇಳಿದ್ದರು.

ರಣಬೀರ್ ಕಪೂರ್ ಕೊರೊನಾ ಪಾಸಿಟಿವ್ ಆಗುತ್ತಿರುವ ಮೊದಲ ಬಾಲಿವುಡ್ ನಟನೇನಲ್ಲ. ಈ ಹಿಂದೆ, ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ, ನೀತು ಕಪೂರ್, ರಿಧಿಮಾ ಕಪೂರ್, ಮತ್ತೆ ಕೆಲವರು ಕೂಡ ಕೊರೊನಾ ಪಾಸಿಟಿವ್ ಆಗಿದ್ದರು.

ಕಳೆದ ವಾರವಷ್ಟೇ ಅಲಿಯಾ ಭಟ್, ರಣಬೀರ್ ಕಪೂರ್​ನೊಂದಿಗೆ ನಟಿಸಿರುವ ‘ಬ್ರಹ್ಮಾಸ್ತ್ರ’ ಸಿನಿಮಾದ ಪೋಸ್ಟರ್ ಹಂಚಿಕೊಂಡಿದ್ದರು. ಬ್ರಹ್ಮಾಸ್ತ್ರ ಸಿನಿಮಾವನ್ನು ಅಯಾನ್ ಮುಖರ್ಜಿ ನಿರ್ದೇಶಿಸಿದ್ದಾರೆ.

ರಣಬೀರ್ ಕಪೂರ್, ಬಾಲಿವುಡ್​ನ ಹಿರಿಯ ಮತ್ತು ಖ್ಯಾತ ನಟ ರಿಷಿ ಕಪೂರ್-ನೀತು ಕಪೂರ್ ದಂಪತಿ ಮಗನಾಗಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಸಾವರಿಯಾ’ ಸಿನಿಮಾ ಮೂಲಕ, 2007ರಲ್ಲಿ ರಣಬೀರ್ ಸಿನಿರಂಗ ಪ್ರವೇಶಿಸಿದ್ದಾರೆ. ಪ್ರಸ್ತುತ, ರಣಬೀರ್ ನಟನೆಯ ‘ಬ್ರಹ್ಮಾಸ್ತ್ರ’ ಹಾಗೂ ‘ಶಂಶೆರಾ’ ಸಿನಿಮಾ ಪೂರ್ಣಗೊಂಡಿದೆ. ‘ಅನಿಮಲ್’ ಮತ್ತು ಹೆಸರಿಡದ ಸಿನಿಮಾವೊಂದಕ್ಕೆ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: Bigg Boss Kannada | ದಿವ್ಯಾ ಸುರೇಶ್​ ಬಗ್ಗೆ ಇದ್ದ ಭಾವನೆಗಳನ್ನು ಸುಟ್ಟು ಹಾಕಿದ್ರಂತೆ ಬ್ರೋ ಗೌಡ!

Darshan: ‘ರಾಬರ್ಟ್​’ ರಿಲೀಸ್​ಗೂ ಮುನ್ನ ದರ್ಶನ್​ ಅಭಿಮಾನಿಗಳಿಗೆ 3 ದಿನ ಬ್ಯಾಕ್​ ಟು ಬ್ಯಾಕ್​ ಹಬ್ಬವೋ ಹಬ್ಬ!

Published On - 1:09 pm, Tue, 9 March 21

ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಅಬ್ಬರಿಸಿದ ಸಾಲ್ಟ್ ಅ್ಯಂಡ್ ಪೆಪ್ಪರ್: ಪ್ಲೇಆಫ್​ಗೆ ನೈಟ್ ರೈಡರ್ಸ್​
ಅಬ್ಬರಿಸಿದ ಸಾಲ್ಟ್ ಅ್ಯಂಡ್ ಪೆಪ್ಪರ್: ಪ್ಲೇಆಫ್​ಗೆ ನೈಟ್ ರೈಡರ್ಸ್​
ಡಿಕೆಶಿ​ಗೆ 16 ಲಕ್ಷ ರೂ ಮೌಲ್ಯದ ಗಿಫ್ಟ್: ಅಂಥದ್ದೇನಿದೆ? ಇಲ್ಲಿದೆ ನೋಡಿ
ಡಿಕೆಶಿ​ಗೆ 16 ಲಕ್ಷ ರೂ ಮೌಲ್ಯದ ಗಿಫ್ಟ್: ಅಂಥದ್ದೇನಿದೆ? ಇಲ್ಲಿದೆ ನೋಡಿ
ಈ ಡ್ಯಾನ್ಸ್ ನೋಡಲು ಎರಡು ಕಣ್ಣು ಸಾಲದು; ನಮ್ರತಾ-ಸಂಗೀತಾ ಪ್ರೀತಿಯ ಅಪ್ಪುಗೆ
ಈ ಡ್ಯಾನ್ಸ್ ನೋಡಲು ಎರಡು ಕಣ್ಣು ಸಾಲದು; ನಮ್ರತಾ-ಸಂಗೀತಾ ಪ್ರೀತಿಯ ಅಪ್ಪುಗೆ
ಅಮೆರಿಕದಲ್ಲಿ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ, ಪೈಲಟ್ ಸಾವು
ಅಮೆರಿಕದಲ್ಲಿ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ, ಪೈಲಟ್ ಸಾವು
ಮತ್ತೆ ಅಶ್ವಿನಿ-ಗಿಲ್ಲಿ ಮಧ್ಯೆ ದೊಡ್ಡ ಫೈಟ್; ಕೊಟ್ಟ ಶಿಕ್ಷೆ ಘನಘೋರ
ಮತ್ತೆ ಅಶ್ವಿನಿ-ಗಿಲ್ಲಿ ಮಧ್ಯೆ ದೊಡ್ಡ ಫೈಟ್; ಕೊಟ್ಟ ಶಿಕ್ಷೆ ಘನಘೋರ