AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದಿ ಭಾಷಿಕರಿಂದ ಅವಮಾನಕ್ಕೆ ಒಳಗಾಗಿ ಕಣ್ಣೀರು ಹಾಕಿದ್ದ ಈ ನಟಿ ಇಂದು ಬಾಲಿವುಡ್​ನ ಸ್ಟಾರ್​ ಕಲಾವಿದೆ!

ಐಟಂ ಡಾನ್ಸರ್​ ನೋರಾ ಫತೇಹಿ ಈಗ ಬಾಲಿವುಡ್​ನ ಬಹುಬೇಡಿಕೆಯ ಕಲಾವಿದೆ ಆಗಿದ್ದಾರೆ. ಆದರೆ ಆರಂಭದ ದಿನಗಳಲ್ಲಿ ಅವರು ಅನುಭವಿಸಿದ ಕಷ್ಟಗಳು ಒಂದೆರಡಲ್ಲ. ಅದು ನಿಜಕ್ಕೂ ಕಣ್ಣೀರಿನ ಕಥೆ.

ಹಿಂದಿ ಭಾಷಿಕರಿಂದ ಅವಮಾನಕ್ಕೆ ಒಳಗಾಗಿ ಕಣ್ಣೀರು ಹಾಕಿದ್ದ ಈ ನಟಿ ಇಂದು ಬಾಲಿವುಡ್​ನ ಸ್ಟಾರ್​ ಕಲಾವಿದೆ!
ನೋರಾ ಫತೇಹಿ
ರಾಜೇಶ್ ದುಗ್ಗುಮನೆ
|

Updated on: Mar 04, 2021 | 5:58 PM

Share

ಓ ಸಾಕಿ ಸಾಕಿ.., ದಿಲ್​ ಬರ್​ ದಿಲ್​ ಬರ್..​ ಮುಂತಾದ ಸೂಪರ್​ ಹಿಟ್​ ಗೀತೆಗಳಲ್ಲಿ ಐಟಂ ಡಾನ್ಸ್​ ಮಾಡಿ ಫೇಮಸ್​ ಆಗಿರುವ ನಟಿ ನೋರಾ ಫತೇಹಿ ಅವರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​ ಇದೆ. ಅವರು ಕುಣಿದರೆ ಹಾಡು ಸೂಪರ್ ಹಿಟ್​ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ಎಲ್ಲ ನಿರ್ಮಾಪಕ/ನಿರ್ದೇಶಕರಿಗೆ ಗೊತ್ತಾಗಿದೆ. ಆದರೆ ಆರಂಭದಲ್ಲಿ ಕನಸು ಕಟ್ಟಿಕೊಂಡು ಬಾಲಿವುಡ್​ಗೆ ಕಾಲಿಟ್ಟಾಗ ನೋರಾ ಫತೇಹಿ ಅನುಭವಿಸಿದ್ದು ಬರೀ ಅವಮಾನ! ಹಿಂದಿ ಬರುವುದಿಲ್ಲ ಎಂಬ ಕಾರಣಕ್ಕೆ ತಮ್ಮನ್ನು ತುಂಬ ಕೀಳಾಗಿ ನೋಡಲಾಗುತ್ತಿತ್ತು ಎಂಬ ಸತ್ಯವನ್ನು ಇತ್ತೀಚೆಗಿನ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದಾರೆ.

ನೋರಾ ಮೂಲತಃ ಕೆನಡಾದವರು. ಆದರೆ ಬಾಲಿವುಡ್​ ಸಿನಿಮಾಗಳನ್ನು ನೋಡಿ ಬೆಳೆದವರು. ಹಾಗಾಗಿ ಹಿಂದಿ ಚಿತ್ರರಂಗದ ಬಗ್ಗೆ ಅವರಿಗೆ ಸಿಕ್ಕಾಪಟ್ಟೆ ಆಸಕ್ತಿ ಇತ್ತು. ತಾವೂ ಬಾಲಿವುಡ್​ನಲ್ಲಿ ನಟಿಸಬೇಕು, ಶಾರುಖ್​ ಖಾನ್​ರನ್ನು ಭೇಟಿ ಮಾಡಬೇಕು ಎಂಬ ಆಸೆ ಇಟ್ಟುಕೊಂಡು ನೋರಾ ಭಾರತಕ್ಕೆ ಕಾಲಿಟ್ಟರು. ಆದರೆ ಮುಂಬೈಗೆ ಬಂದಾಗ ಅವರಿಗೆ ತೀವ್ರ ಅವಮಾನ ಆಗಿತ್ತು ಎಂಬುದು ಶಾಕಿಂಗ್​ ಸಂಗತಿ. ಹಿಂದಿ ಕಲಿಯಬೇಕು ಎಂಬ ಉದ್ದೇಶದಿಂದ ನೋರಾ ಹಲವು-ರಾತ್ರಿ ಕಷ್ಟಪಡುತ್ತಿದ್ದರು. ಹಾಗಿದ್ದರೂ ಶೂಟಿಂಗ್​ ಸೆಟ್​ನಲ್ಲಿ ಅವರನ್ನು ಎಲ್ಲರೂ ಕೀಳಾಗಿ ಕಾಣುತ್ತಿದ್ದರು.

‘ನಾನು ಹಿಂದಿಯಲ್ಲಿ ಡೈಲಾಗ್​ ಹೇಳಲು ಆರಂಭಿಸುತ್ತಿದ್ದಂತೆಯೇ ಅಲ್ಲಿದ್ದ ಎಲ್ಲರೂ ನಗುತ್ತಿದ್ದರು. ನನ್ನ ಕಣ್ಣೆದುರಿಗೇ ನನ್ನನ್ನು ಗೇಲಿ ಮಾಡುತ್ತಿದ್ದರು. ಅದರಿಂದ ನನಗೆ ತುಂಬ ಅವಮಾನ ಆಗುತ್ತಿತ್ತು. ನನಗೆ ಅಳು ತಡೆಯಲು ಸಾಧ್ಯವಾಗಲಿಲ್ಲ. ಆಗ ನನ್ನ ಬಳಿ ಕಾರು ಕೂಡ ಇರಲಿಲ್ಲ. ಶೂಟಿಂಗ್​ ಸೆಟ್​ನಿಂದ ಹೊರಬಂದು ಆಟೋದಲ್ಲಿ ಕುಳಿತು ಜೋರಾಗಿ ಅಳಲು ಆರಂಭಿಸಿದ್ದೆ. ನನ್ನ ಹಿಂದಿ ಟೀಚರ್​ಗೆ ಫೋನ್​ ಮಾಡಿ ನೋವು ತೋಡಿಕೊಂಡೆ’ ಎಂದು ಆ ದಿನಗಳನ್ನು ನೋರಾ ಫತೇಹಿ ಮೆಲುಕು ಹಾಕಿದ್ದಾರೆ.

8-9 ಹುಡುಗಿಯರ ಜೊತೆಗೆ ಒಂದೇ ರೂಮ್​ನಲ್ಲಿ ನೋರಾ ಫತೇಹಿ ಉಳಿದುಕೊಳ್ಳಬೇಕಿತ್ತು. ಆ ಹುಡುಗಿಯರೆಲ್ಲ ತುಂಬ ನಿರ್ದಯವಾಗಿ ನಡೆದುಕೊಳ್ಳುತ್ತಿದ್ದರು. ನೋರಾ ಅವರ ಪಾಸ್​ಪೋರ್ಟ್​ ಅನ್ನೂ ಹುಡುಗಿಯರು ಕದ್ದು ಬಿಟ್ಟಿದ್ದರು! ಅಂಥ ಸಂಕಷ್ಟಗಳನ್ನೆಲ್ಲ ಎದುರಿಸಿದ ನೋರಾ ಈಗ ಆ ದಿನಗಳನ್ನು ನೆನಪಿಸಿಕೊಂಡು ಮತ್ತೆ ಕಣ್ಣೀರು ಹಾಕಿದ್ದಾರೆ. ಆ ಸಂದರ್ಶನದ ವಿಡಿಯೋವನ್ನು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಅವರು ಶೇರ್​ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಬಾಲಿವುಡ್‌ ನಟಿ ಕಿಯಾರಾ ಗೆ ಯಾರನ್ನು ಕಂಡರೆ ಅಸೂಯೆ?

ಹೊಸ ವರ್ಷಾಚರಣೆ ವೇಳೆ ಎಣ್ಣೆ ಮತ್ತಲ್ಲಿರೋರನ್ನು ಪೊಲೀಸರೇ ಮನೆಗೆ ಬಿಡ್ತಾರಾ?
ಹೊಸ ವರ್ಷಾಚರಣೆ ವೇಳೆ ಎಣ್ಣೆ ಮತ್ತಲ್ಲಿರೋರನ್ನು ಪೊಲೀಸರೇ ಮನೆಗೆ ಬಿಡ್ತಾರಾ?
ಮಹಿಳಾ ಸುರಕ್ಷತೆಗಾಗಿ ಬೆಂಗಳೂರು ಪೊಲೀಸರಿಂದ 50 ಕಡೆ ಮಹಿಳಾ ಸಹಾಯ ಕೇಂದ್ರ
ಮಹಿಳಾ ಸುರಕ್ಷತೆಗಾಗಿ ಬೆಂಗಳೂರು ಪೊಲೀಸರಿಂದ 50 ಕಡೆ ಮಹಿಳಾ ಸಹಾಯ ಕೇಂದ್ರ
ಸುದೀಪ್ ಬಳಿಕ ಪೈರಸಿ ವಿರುದ್ಧ ಧ್ವನಿ ಎತ್ತಿದ ಜಗ್ಗೇಶ್; ಕಾರಣ ಏನು?
ಸುದೀಪ್ ಬಳಿಕ ಪೈರಸಿ ವಿರುದ್ಧ ಧ್ವನಿ ಎತ್ತಿದ ಜಗ್ಗೇಶ್; ಕಾರಣ ಏನು?
ಇಂಟರ್​ನ್ಯಾಷನಲ್​ ಟಿ20 ಲೀಗ್​ನಲ್ಲಿ ಹೊಸ ಇತಿಹಾಸ ಬರೆದ ಆಂಡ್ರೀಸ್ ಗೌಸ್
ಇಂಟರ್​ನ್ಯಾಷನಲ್​ ಟಿ20 ಲೀಗ್​ನಲ್ಲಿ ಹೊಸ ಇತಿಹಾಸ ಬರೆದ ಆಂಡ್ರೀಸ್ ಗೌಸ್
ಆನೇಕಲ್: ಸ್ಲೀಪರ್ ಕೋಚ್ ಬಸ್​ಗಳ ನಡುವೆ ಭೀಕರ ಅಪಘಾತ
ಆನೇಕಲ್: ಸ್ಲೀಪರ್ ಕೋಚ್ ಬಸ್​ಗಳ ನಡುವೆ ಭೀಕರ ಅಪಘಾತ
‘ಕ್ಷಣ ಕ್ಷಣಕ್ಕೂ ಕೊಡ್ತೀವಿ, ತಗೋತಾ ಇರ್ಬೇಕು’; ಗಿಲ್ಲಿಗೆ ಅಶ್ವಿನಿ ಚಾಲೆಂಜ್
‘ಕ್ಷಣ ಕ್ಷಣಕ್ಕೂ ಕೊಡ್ತೀವಿ, ತಗೋತಾ ಇರ್ಬೇಕು’; ಗಿಲ್ಲಿಗೆ ಅಶ್ವಿನಿ ಚಾಲೆಂಜ್
ಕಾರ್ಮಿಕರ ಹೊತ್ತೊಯ್ಯುತ್ತಿದ್ದ 2 ಲೋಕೊ ರೈಲುಗಳು ಡಿಕ್ಕಿ, 60 ಜನರಿಗೆ ಗಾಯ
ಕಾರ್ಮಿಕರ ಹೊತ್ತೊಯ್ಯುತ್ತಿದ್ದ 2 ಲೋಕೊ ರೈಲುಗಳು ಡಿಕ್ಕಿ, 60 ಜನರಿಗೆ ಗಾಯ
ಮೊಬೈಲ್ ಅಂಗಡಿ ಮಾಲೀಕನ ಗಮನ ಬೇರೆಡೆ ಸೆಳೆದು ಹಣ ಕದ್ದ ಮಹಿಳೆ
ಮೊಬೈಲ್ ಅಂಗಡಿ ಮಾಲೀಕನ ಗಮನ ಬೇರೆಡೆ ಸೆಳೆದು ಹಣ ಕದ್ದ ಮಹಿಳೆ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಭಾರಿ ಬಂದೋಬಸ್ತ್, ಎಲ್ಲೆಡೆ ಖಾಕಿ ಕಣ್ಣು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಭಾರಿ ಬಂದೋಬಸ್ತ್, ಎಲ್ಲೆಡೆ ಖಾಕಿ ಕಣ್ಣು
ಇಂದು ಮುಕ್ಕೋಟಿ ದ್ವಾದಶಿ, ಒಂದು ಪುಣ್ಯಕ್ಕೆ 3 ಕೋಟಿ ಫಲ!
ಇಂದು ಮುಕ್ಕೋಟಿ ದ್ವಾದಶಿ, ಒಂದು ಪುಣ್ಯಕ್ಕೆ 3 ಕೋಟಿ ಫಲ!