ಅನುರಾಗ್ ಕಶ್ಯಪ್, ತಾಪ್ಸಿ ಪನ್ನು ಮನೆಗಳ ಐಟಿ ದಾಳಿ ವೇಳೆ ₹ 350 ಕೋಟಿ ತೆರಿಗೆ ವಂಚನೆ ಪತ್ತೆ
ಅನುರಾಗ್ ಕಶ್ಯಪ್ ಮತ್ತು ತಾಪ್ಸಿ ಪನ್ನು ಮನೆಗಳ ಮೇಲೆ ನಡೆದ ದಾಳಿಗಳ ಬಗ್ಗೆ ಬಾಲಿವುಡ್ನ ಗಣ್ಯರು ಮೌನ ಮುರಿಯದಿರುವುದು ಟ್ವಿಟರ್ನಲ್ಲಿ ಚರ್ಚೆಗೆ ಗ್ರಾಸವಾಗಿದೆ. #TaxChor #IncomeTaxRaid ಹ್ಯಾಷ್ಟ್ಯಾಗ್ಗಳು ಟ್ವಿಟರ್ ಇಂಡಿಯಾದಲ್ಲಿ ಟಾಪ್ ಟ್ರೆಂಡ್ ಆಗಿವೆ.
ದೆಹಲಿ: ಬಾಲಿವುಡ್ನ ನಟ, ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ನಟಿ ತಾಪ್ಸಿ ಪನ್ನು ಅವರ ಮನೆಗಳ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಸುಮಾರು ₹ 350 ಕೋಟಿ ಮೊತ್ತದ ಅವ್ಯವಹಾರ ಪತ್ತೆ ಮಾಡಿದ್ದಾರೆ. ಅನುರಾಗ್ ಕಶ್ಯಪ್ ಮತ್ತು ತಾಪ್ಸಿ ಪನ್ನು ಮನೆಗಳ ಮೇಲೆ ನಡೆದ ದಾಳಿಗಳ ಬಗ್ಗೆ ಬಾಲಿವುಡ್ನ ಗಣ್ಯರು ಮೌನ ಮುರಿಯದಿರುವುದು ಟ್ವಿಟರ್ನಲ್ಲಿ ಚರ್ಚೆಗೆ ಗ್ರಾಸವಾಗಿದೆ. #TaxChor #IncomeTaxRaid ಹ್ಯಾಷ್ಟ್ಯಾಗ್ಗಳು ಟ್ವಿಟರ್ ಇಂಡಿಯಾದಲ್ಲಿ ಟಾಪ್ ಟ್ರೆಂಡ್ ಆಗಿವೆ. ಸಾಕಷ್ಟು ಜನರು ತೆರಿಗೆ ವಂಚನೆಯನ್ನು ಟೀಕಿಸಿದ್ದಾರೆ.
ಸಿನಿಮಾಗಳ ಬಾಕ್ಸ್ ಆಫೀಸ್ ಸಂಗ್ರಹದ ಕೇವಲ ಶೇ 2ರಷ್ಟು ಮೊತ್ತವನ್ನು ಮಾತ್ರವೇ ಆದಾಯವಾಗಿ ಘೋಷಿಸಿದ್ದಾರೆ. ₹ 20 ಕೋಟಿ ಮೊತ್ತದಷ್ಟು ಬೋಗಸ್ ಖರ್ಚಿನ ದಾಖಲೆಗಳು ಪತ್ತೆಯಾಗಿವೆ. ಇಬ್ಬರನ್ನೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸುಮಾರು 5 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿತು.
ಫಾಂಟಾಮ್ ಫಿಲ್ಸ್ಮ್ ಕಂಪನಿಯ ಷೇರು ವಹಿವಾಟಿನ ಮಾಹಿತಿಯನ್ನು ತಿದ್ದಿರುವ, ಮೌಲ್ಯವನ್ನು ತಪ್ಪಾಗಿ ದಾಖಲಿಸಿರುವ ದಾಖಲೆಗಳು ಪತ್ತೆಯಾಗಿವೆ. ₹ 350 ಕೋಟಿ ಮೊತ್ತದಷ್ಟು ತೆರಿಗೆ ಬಾಧ್ಯತೆ ಇವರ ಮೇಲಿದೆ. ತಪ್ಸಿ ಪನ್ನು ಅವರು ₹ 5 ಕೋಟಿಯಷ್ಟು ತೆರಿಗೆ ಬಾಧ್ಯತೆ ಹೊಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನಷ್ಟು ದಾಳಿಗಳು ನಡೆಯುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಫಾಂಟಾಮ್ ಫಿಲ್ಮ್ಸ್ನ ತೆರಿಗೆ ವಂಚನೆ ಬಗ್ಗೆ ತನಿಖೆ ನಡೆಸಲು ಮುಂಬೈ ಮತ್ತು ಪುಣೆಯ 28 ಸ್ಥಳಗಳಲ್ಲಿ ದಾಳಿ ನಡೆಸಲಾಗಿತ್ತು. ರಿಲಯನ್ಸ್ ಎಂಟರ್ಟೈನ್ಮೆಂಟ್ ಸಮೂಹದ ಸಿಇಒ ಶಿಬಶೀಷ್ ಸರ್ಕಾರ್ ಮತ್ತು KWAN, ಎಕ್ಸೀಡ್ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳ ಮೇಲೆಯೂ ದಾಳಿ ನಡೆದಿತ್ತು. ದಾಳಿಯ ವೇಳೆ ಪತ್ತೆಯಾದ 7 ಬ್ಯಾಂಕ್ ಲಾಕರ್ಗಳ ಬಳಕೆ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
IT Dept detects discrepancy & manipulation of Rs 650 crores after raids on Anurag Kashyap & Taapsee Pannu & others. 7 laptops & lockers seized.#TaxChor Taapsee ko zordaar thappad. She was sent notice 20 days ago. #IncomeTaxRaid after no reply.
Well Done Income Tax Dept. pic.twitter.com/wNvjUg6Hmw
— Peter Prabhakar (@HouseOfFakts) March 4, 2021