ರಹಸ್ಯವಾಗಿ ಮೊಬೈಲ್​ ಬಳಸ್ತಿದ್ದಾರಾ ಬಿಗ್​ ಬಾಸ್​ ಸ್ಪರ್ಧಿಗಳು? ಜನರ ಅನುಮಾನಕ್ಕೆ ಇಲ್ಲಿದೆ ಉತ್ತರ!

ಬಿಗ್​ ಬಾಸ್​ ಮನೆಗೆ ಎಂಟ್ರಿ ನೀಡುವ ಸ್ಪರ್ಧಿಗಳು ಕೆಲವೊಂದು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹೊರಜಗತ್ತಿನ ಜೊತೆ ಯಾವುದೇ ಸಂಪರ್ಕ ಇಟ್ಟುಕೊಳ್ಳುವಂತಿಲ್ಲ. ಆದರೆ ಸ್ಪರ್ಧಿಗಳ ಮೊಬೈಲ್​ ಬಳಕೆ ಬಗ್ಗೆ ಜನರಿಗೆ ಅನುಮಾನ ಇದೆ!

ರಹಸ್ಯವಾಗಿ ಮೊಬೈಲ್​ ಬಳಸ್ತಿದ್ದಾರಾ ಬಿಗ್​ ಬಾಸ್​ ಸ್ಪರ್ಧಿಗಳು? ಜನರ ಅನುಮಾನಕ್ಕೆ ಇಲ್ಲಿದೆ ಉತ್ತರ!
ಕನ್ನಡ ಬಿಗ್​ ಬಾಸ್​ ಸೀಸನ್​ 8
Madan Kumar

| Edited By: Ayesha Banu

Mar 16, 2021 | 6:53 AM

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಆರಂಭವಾಗಿ ಎರಡು ವಾರ ಕಳೆದಿದೆ. ಅಷ್ಟರಲ್ಲಾಗಲೇ ಜನರಿಗೆ ಒಂದು ಅನುಮಾನ ಮೂಡಿದೆ. ಈ ಬಾರಿಯ ಸ್ಪರ್ಧಿಗಳು ಸರಿಯಾಗಿ ಬಿಗ್​ ಬಾಸ್​ ನಿಯಮ ಪಾಲಿಸುತ್ತಾ ಇದಾರಾ? ಈ ಪ್ರಶ್ನೆ ಉದ್ಭವ ಆಗಲು ಕಾರಣ ಆಗಿರುವುದು ಸ್ಪರ್ಧಿಗಳ ಸೋಶಿಯಲ್​ ಮೀಡಿಯಾ ಪೋಸ್ಟ್​ಗಳು! ಮನೆಯೊಳಗೆ ಇರುವ ಸ್ಪರ್ಧಿಗಳ ಫೇಸ್​ಬುಕ್​, ಇನ್​ಸ್ಟಾಗ್ರಾಮ್​ ಮುಂತಾದ ಖಾತೆಗಳಲ್ಲಿ ಪ್ರತಿದಿನ ಹೊಸ ಹೊಸ ಪೋಸ್ಟ್​ಗಳು ಕಾಣಿಸುತ್ತಿವೆ. ಇದು ಹೇಗೆ ಸಾಧ್ಯ?

ಎರಡನೇ ವಾರದ ಎಲಿಮಿನೇಷನ್​ನಲ್ಲಿ ನಟಿ ಗೀತಾ ಭಾರತಿ ಭಟ್​ ಅವರು ಸೇಫ್​ ಆದರು. ಹಾಗಾಗಿ ಅವರ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಒಂದು ವಿಡಿಯೋ ಪೋಸ್ಟ್​ ಮಾಡಲಾಗಿದೆ. ‘ಇವತ್ತು ನಿಮ್ಮೆಲ್ಲರ ಪ್ರೀತಿ, ಆಶೀರ್ವಾದದಿಂದ ನಾನು ಸೇವ್​ ಆಗಿದ್ದೇನೆ. ನನಗೆ ವೋಟ್​ ಮಾಡಿದ ಎಲ್ಲ ಕನ್ನಡಿಗರಿಗೆ ಥ್ಯಾಂಕ್ಸ್​. ಹೀಗೆ ನನ್ನ ಮೇಲೆ ಪ್ರೀತಿ ತೋರಿಸುತ್ತಿರಿ. ವೋಟ್​ ಮಾಡಿ ಗೆಲ್ಲಿಸುತ್ತಿರಿ’ ಎಂದು ಆ ವಿಡಿಯೋ ಮೂಲಕ ಗೀತಾ ಧನ್ಯವಾದ ತಿಳಿಸಿದ್ದಾರೆ. ಹಾಗಾದರೆ ಅವರು ಬಿಗ್​ ಬಾಸ್​ ಮನೆಯೊಳಗೆ ಮೊಬೈಲ್​ ಬಳಸ್ತಾ ಇದ್ದಾರಾ ಎಂದು ಜನರು ಕಾಮೆಂಟ್​ ಮೂಲಕ ಪ್ರಶ್ನಿಸಿದ್ದಾರೆ.

ಗೀತಾ ಮಾತ್ರವಲ್ಲದೆ, ಬಹುತೇಕ ಎಲ್ಲ ಸ್ಪರ್ಧಿಗಳ ಸೋಶಿಯಲ್​ ಮೀಡಿಯಾ ಖಾತೆಗಳು ಈಗಲೂ ಸಕ್ರಿಯವಾಗಿವೆ. ಆ ಕಾರಣದಿಂದಲೇ ಜನರಿಗೆ ಇಂಥ ಅನುಮಾನ ಮೂಡಿದೆ. ಇದರ ಹಿಂದಿನ ಸತ್ಯ ಏನು ಎಂದು ಎಲ್ಲರೂ ಪ್ರಶ್ನಿಸುತ್ತಿದ್ದಾರೆ. ಅಸಲಿ ವಿಷಯ ಏನೆಂದರೆ, ಬಿಗ್​ ಬಾಸ್​ ಸ್ಪರ್ಧಿಗಳು ಯಾರೂ ಮೊಬೈಲ್​ ಬಳಸುತ್ತಿಲ್ಲ. ಬದಲಿಗೆ ಅವರ ಮನೆಯವರು, ಆಪ್ತ ಸ್ನೇಹಿತರು ಅಥವಾ ಮ್ಯಾನೇಜರ್​ಗಳಿಗೆ ಈ ಕೆಲಸವನ್ನು ವಹಿಸಲಾಗಿದೆ. ಸಂದರ್ಭಕ್ಕೆ ಅನುಗುಣವಾಗಿ ಅವರು ಪೋಸ್ಟ್​ಗಳನ್ನು ಹಾಕುತ್ತಿದ್ದಾರೆ.

ತಮಗೆ ವೋಟ್​ ಮಾಡುವವರಿಗೆ ಧನ್ಯವಾದ ತಿಳಿಸುವಂತಹ ವಿಡಿಯೋಗಳನ್ನು ಬಿಗ್​ ಬಾಸ್​ ಮನೆ ಪ್ರವೇಶಿಸುವುದಕ್ಕೂ ಮುನ್ನವೇ ರೆಕಾರ್ಡ್​ ಮಾಡಿಡಲಾಗಿದೆ. ಆಯಾ ವಾರದ ಬೆಳವಣಿಗೆಗಳಿಗೆ ತಕ್ಕಂತೆ ಅಂಥ ವಿಡಿಯೋಗಳನ್ನು ಸ್ಪರ್ಧಿಗಳ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿಸಲಾಗುತ್ತಿದೆ. ಅದನ್ನು ಕಂಡ ಜನರು ಅಚ್ಚರಿ ಪಟ್ಟಿದ್ದಾರೆ. ಸ್ವತಃ ಸ್ಪರ್ಧಿಗಳೇ ದೊಡ್ಮನೆಯೊಳಗೆ ರಹಸ್ಯವಾಗಿ ಮೊಬೈಲ್​ ಬಳಸುತ್ತಿದ್ದಾರಾ ಎಂಬ ಅನುಮಾನ ಕೆಲವರಲ್ಲಿ ಮೂಡಿತು. ಆದರೆ ಅಂಥದ್ದಕ್ಕೆಲ್ಲ ಬಿಗ್​ ಬಾಸ್​ನಲ್ಲಿ ಅವಕಾಶ ಇಲ್ಲ ಎಂಬುದು ಸ್ಪಷ್ಟ.

ಇದನ್ನೂ ಓದಿ: ಕೊರೊನಾ ಪಾಸಿಟಿವ್​ ಆಗಿದ್ದರೂ ಊರೆಲ್ಲ ಸುತ್ತಾಡಿದ ಬಿಗ್​ ಬಾಸ್​ ಸ್ಪರ್ಧಿ! ಕೇಸ್​ ಜಡಿದು ಬುದ್ಧಿ ಕಲಿಸಿದ ಅಧಿಕಾರಿಗಳು

‘ಅಸಭ್ಯವಾಗಿ ಮುಟ್ಟಿದರೆ ಬಿಗ್​ ಬಾಸ್​ ಸಹಿಸಲ್ಲ’: ಸುದೀಪ್​ ಹೀಗೆ ಎಚ್ಚರಿಕೆ ನೀಡಿದ್ದು ಯಾರಿಗೆ?

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada