AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಟ್ಟದಷ್ಟು ಆಸೆ ಇಟ್ಟುಕೊಂಡಿದ್ದ ಪುನೀತ್​ ಫ್ಯಾನ್ಸ್​ಗೆ ಭಾರೀ ನಿರಾಸೆ! ಆದರೂ ಒಂದು ಗುಡ್​ ನ್ಯೂಸ್​

‘ಪವರ್​ ಸ್ಟಾರ್​’ ಪುನೀತ್ ರಾಜ್​ಕುಮಾರ್​ ಅಭಿಮಾನಿಗಳು ಎರಡು ಮಹತ್ವದ ಸಂಭ್ರಮಾಚರಣೆಗಾಗಿ ಕಾದಿದ್ದರು. ಆದರೆ ಅದಕ್ಕೆ ಸ್ವತಃ ಅಪ್ಪು ಬ್ರೇಕ್​ ಹಾಕಿದ್ದಾರೆ.

ಬೆಟ್ಟದಷ್ಟು ಆಸೆ ಇಟ್ಟುಕೊಂಡಿದ್ದ ಪುನೀತ್​ ಫ್ಯಾನ್ಸ್​ಗೆ ಭಾರೀ ನಿರಾಸೆ! ಆದರೂ ಒಂದು ಗುಡ್​ ನ್ಯೂಸ್​
ಪುನೀತ್​ ರಾಜ್​ಕುಮಾರ್​
ಮದನ್​ ಕುಮಾರ್​
|

Updated on: Mar 16, 2021 | 11:07 AM

Share

ಬಹುನಿರೀಕ್ಷಿತ ‘ಯುವರತ್ನ’ ಸಿನಿಮಾದ ಬಿಡುಗಡೆಗಾಗಿ ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳು ಕಾದಿದ್ದಾರೆ. ಅದರ ನಡುವೆ ಎರಡು ದೊಡ್ಡ ಸಂಭ್ರಮಕ್ಕಾಗಿ ಫ್ಯಾನ್ಸ್​ ಕಾಯುತ್ತಿದ್ದರು. ಒಂದು ಪುನೀತ್​ ರಾಜ್​ಕುಮಾರ್​ ಅವರ ಜನ್ಮದಿನದ ಸಂಭ್ರಮ. ಮತ್ತೊಂದು, ಯುವರತ್ನ ಸಿನಿಮಾದ ಪ್ರೀ-ರಿಲೀಸ್​ ಇವೆಂಟ್​ ಸಂಭ್ರಮ. ಆದರೆ ಈ ಎರಡೂ ಕಾರ್ಯಕ್ರಮಗಳು ಈಗ ರದ್ದಾಗಿವೆ.

ಮಾರ್ಚ್​ 17ರಂದು ಪುನೀತ್​ ರಾಜ್​ಕುಮಾರ್​ ಜನ್ಮದಿನ. ಅಂದು ಅದ್ದೂರಿಯಾಗಿ ಸಂಭ್ರಮಾಚಣೆ ಮಾಡಬೇಕು ಎಂಬುದು ಅಭಿಮಾನಿಗಳ ಸಹಜ ಬಯಕೆ. ಆದರೆ ಅದಕ್ಕೆ ಅಪ್ಪು ಬ್ರೇಕ್​ ಹಾಕಿದ್ದಾರೆ. ಇತ್ತೀಚೆಗೆ ಫೇಸ್​ಬುಕ್​ನಲ್ಲಿ ಲೈವ್​ ಬಂದಿದ್ದ ಅವರು ಈ ನಿರ್ಧಾರವನ್ನು ತಿಳಿಸಿದ್ದಾರೆ. ಕಳೆದ ವರ್ಷ ಕೂಡ ಅವರು ಕೊರೊನಾ ವೈರಸ್​ ಕಾರಣದಿಂದ ಹುಟ್ಟುಹಬ್ಬದ ಆಚರಿಸಿಕೊಂಡಿರಲಿಲ್ಲ.

‘ಈ ವರ್ಷ ಕೂಡ ನಾನು ಹುಟ್ಟುಹಬ್ಬದ ದಿನ ಮನೆಯಲ್ಲಿ ಇರುವುದಿಲ್ಲ. ಕುಟುಂಬದವರ ಜೊತೆ ಸೇರಿ ನಾನು ಕೆಲವು ದೇವಸ್ಥಾನಗಳಿಗೆ ತೆರಳುತ್ತೇನೆ. ದಯವಿಟ್ಟು ಕ್ಷಮಿಸಿ. ಮನೆಯ ಹತ್ತಿರ ಯಾರೂ ಬರಬೇಡಿ’ ಎಂದು ತಮ್ಮ ಅಭಿಮಾನಿಗಳಲ್ಲಿ ಪುನೀತ್ ರಾಜ್​ಕುಮಾರ್​​ ಮನವಿ ಮಾಡಿಕೊಂಡಿದ್ದಾರೆ.

‘ಇದೇ ತಿಂಗಳು 20ರಂದು ಮೈಸೂರಿನಲ್ಲಿ ಯುವಸಂಭ್ರಮ ಕಾರ್ಯಕ್ರಮ ನಡೆಯಬೇಕಿತ್ತು. ಅದಕ್ಕೆ ತಯಾರಿ ಕೂಡ ನಡೆಯುತ್ತಿತ್ತು. ಆದರೆ ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ನಮಗೆ ಮೆಸೇಜ್​ ಬರಲು ಶುರುವಾಯಿತು. ನಮ್ಮ ಊರಲ್ಲಿ ಯಾಕೆ ಮಾಡಲ್ಲ ಎಂದು ಅನೇಕರು ಪ್ರಶ್ನಿಸಲು ಆರಂಭಿಸಿದರು. ಹಾಗಾಗಿ ನಾವೇ ಎಲ್ಲ ಜಿಲ್ಲೆಗಳಿಗೆ ಹೋಗಿ ಅಭಿಮಾನಿಗಳನ್ನು ಭೇಟಿ ಮಾಡಬೇಕು ಎಂದುಕೊಂಡಿದ್ದೇವೆ. ಮಾ. 21ರಿಂದ 23ರವರೆಗೆ ಯಾವ ಯಾವ ಊರುಗಳಿಗೆ ಬರುತ್ತೇವೆ ಎಂಬ ಬಗ್ಗೆ ನಮ್ಮ ತಂಡ ಮಾಹಿತಿ ನೀಡಲಿದೆ’ ಎಂದಿದ್ದಾರೆ ಪುನೀತ್​.

ಎರಡು ಕಾರ್ಯಕ್ರಮಗಳು ರದ್ದಾಗಿರುವುದು ಫ್ಯಾನ್ಸ್​ ಪಾಲಿಗೆ ಬ್ಯಾಡ್​ ನ್ಯೂಸ್​. ಅದರ ನಡುವೆ, ‘ಇಷ್ಟು ದಿನ ನನ್ನ ಹುಟ್ಟುಹಬ್ಬಕ್ಕೆ ನನ್ನನ್ನು ನೋಡಲು ನೀವು ನಮ್ಮ ಮನೆಗೆ ಬರುತ್ತಿದ್ರಿ. ಈಗ ನಾನೇ ನಿಮ್ಮ ಬಳಿಗೆ ಬರುತ್ತೇನೆ’ ಎಂದು ಅಪ್ಪು ಗುಡ್​ ನ್ಯೂಸ್​ ನೀಡಿದ್ದಾರೆ. ಏಪ್ರಿಲ್​ 1ರಂದು ಯುವರತ್ನ ಬಿಡುಗಡೆ ಆಗಲಿದೆ. ಸಿನಿಮಾ ನೋಡಲು ಬರುವಾಗ ಎಲ್ಲರೂ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಪುನೀತ್​ ಹೇಳಿದ್ದಾರೆ. ‘ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ. ಸ್ಯಾನಿಟೈಸರ್​ ಮತ್ತು ಮಾಸ್ಕ್​ ಬಳಸಿ. ನಮ್ಮ ನಮ್ಮ ಸುರಕ್ಷತೆಯಲ್ಲಿ ನಾವು ಇರೋಣ. ಏನೂ ಭಯ ಬೇಡ’ ಎಂದು ಅವರು ಹೇಳಿದ್ದಾರೆ.

ಪುನೀತ್​ ರಾಜ್​ಕುಮಾರ್​ ಫೇಸ್​ಬುಕ್​ ಲೈವ್​

ಇದನ್ನೂ ಓದಿ: Paatashaala Song: ಪಾಠಶಾಲಾ ಹಾಡಿಗೆ ತಲೆದೂಗಿದ ಪುನೀತ್​ ರಾಜ್​ಕುಮಾರ್​ ಫ್ಯಾನ್ಸ್​! ನಿಮಗೂ ಇಷ್ಟವಾಯ್ತಾ ಯುವರತ್ನ ಹೊಸ ಗೀತೆ?

Puneeth Rajkumar: ಯುವರತ್ನ ರಿಲೀಸ್​ಗೂ ಮುನ್ನವೇ ಧಾರಾವಾಹಿ ಕಡೆಗೆ ಗಮನ ಹರಿಸಿದ ಪುನೀತ್​ ರಾಜ್​ಕುಮಾರ್​! ಅಭಿಮಾನಿಗಳಿಗೆ ಸರ್ಪ್ರೈಸ್​

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ