‘ಅಸಭ್ಯವಾಗಿ ಮುಟ್ಟಿದರೆ ಬಿಗ್​ ಬಾಸ್​ ಸಹಿಸಲ್ಲ’: ಸುದೀಪ್​ ಹೀಗೆ ಎಚ್ಚರಿಕೆ ನೀಡಿದ್ದು ಯಾರಿಗೆ?

ಬಿಗ್​ ಬಾಸ್​ ಮನೆಯಲ್ಲಿ ಕೆಲವು ಗಂಭೀರ ಆರೋಪಗಳು ಕೇಳಿಬಂದಿವೆ. ಆ ವಿಚಾರದ ಬಗ್ಗೆ ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್​ ಚರ್ಚೆ ಮಾಡಿದ್ದಾರೆ.

‘ಅಸಭ್ಯವಾಗಿ ಮುಟ್ಟಿದರೆ ಬಿಗ್​ ಬಾಸ್​ ಸಹಿಸಲ್ಲ’: ಸುದೀಪ್​ ಹೀಗೆ ಎಚ್ಚರಿಕೆ ನೀಡಿದ್ದು ಯಾರಿಗೆ?
ಬಿಗ್​ ಬಾಸ್​ ಕನ್ನಡ ಸೀಸನ್​ 8
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on: Mar 14, 2021 | 4:49 PM

ಬಿಗ್​ ಬಾಸ್​ನಲ್ಲಿ ಏನೇ ಜಗಳ, ಕಿರಿಕ್​, ವಿವಾದಗಳು ಇರಬಹುದು. ಆದರೆ ಸ್ಪರ್ಧಿಗಳ ರಕ್ಷಣೆ ಕೂಡ ತುಂಬ ಮುಖ್ಯ. ಅದರಲ್ಲೂ ಮಹಿಳಾ ಸ್ಪರ್ಧಿಗಳ ಸೇಫ್ಟಿ ಬಗ್ಗೆ ಬಿಗ್​ ಬಾಸ್​ ಹೆಚ್ಚಿನ ಕಾಳಜಿ ವಹಿಸುತ್ತಾರೆ ಎಂಬುದನ್ನು ನಿರೂಪಕ ಕಿಚ್ಚ ಸುದೀಪ್​ ಹೇಳಿದ್ದಾರೆ. ಎರಡನೇ ವಾರದ ವೀಕೆಂಡ್​ ಎಪಿಸೋಡ್​ನಲ್ಲಿ ಈ ವಿಚಾರ ಚರ್ಚೆ ಆಗಿದೆ. ಇದಕ್ಕೆಲ್ಲ ಕಾರಣ ಆಗಿರುವುದು ನಿಧಿ ಸುಬ್ಬಯ್ಯ ಮಾಡಿದ ಒಂದೇ ಒಂದು ಆರೋಪ.

ಎರಡನೇ ವಾರದಲ್ಲಿ ಮನೆಯೊಳಗಿನ ಸ್ಪರ್ಧಿಗಳಿಗೆ ವೈರಸ್​ ವರ್ಸಸ್​ ಮನುಷ್ಯರು ಎಂಬ ಟಾಸ್ಕ್​ ನೀಡಲಾಗಿತ್ತು. ಅದರಲ್ಲಿ ಎಲ್ಲರೂ ತುಂಬ ಆಕ್ರಮಣಕಾರಿಯಾಗಿ ಆಟ ಆಡಿದರು. ಈ ವೇಳೆ ತಮ್ಮನ್ನು ಮಂಜು ಮತ್ತು ಶಮಂತ್​ ಮನಬಂದಂತೆ ಮುಟ್ಟಿದರು ಎಂದು ನಿಧಿ ಸುಬ್ಬಯ್ಯ ಆರೋಪ ಮಾಡಿದ್ದರು. ಈ ವಿಷಯಕ್ಕೆ ಸಂಬಂಧಪಟ್ಟಂತೆ ಮನೆಯೊಳಗೆ ಅನೇಕ ಮಾತುಕತೆ ಆಯಿತು. ಅದನ್ನು ಗಂಭೀರವಾಗಿ ಪರಿಗಣಿಸಿರುವ ಸುದೀಪ್​ ಅವರು ನಿಧಿಗೆ ಒಂದು ಭರವಸೆ ನೀಡಿದ್ದಾರೆ.

‘ನಿಧಿಯವರೇ ನೀವು ತುಂಬ ಬೇಜಾರು ಮಾಡಿಕೊಂಡಿದ್ರಿ. ಬಿಗ್ ಬಾಸ್ ಮನೆಯಲ್ಲಿ ಈ ರೀತಿಯ ಆರೋಪ ಮೊದಲನೇ ಸಲ ಕೂಡ ಅಲ್ಲ. ನಿಮಗೆ ಅನ್​ಕಂಫರ್ಟೆಬಲ್ ಆಗಿಲ್ಲ ಎಂದು ನಾನು ಹೇಳ್ತಾ ಇಲ್ಲ. ಆದರೆ ಯಾರಾದರೂ ಕೆಟ್ಟ ಉದ್ದೇಶದಿಂದ, ಅಕಸ್ಮಾತ್ ಆಗಿ ಅಂಥದ್ದೇನಾದರೂ ನಡೆಸ್ತಾ ಇದಾರೆ ಅಂತ ಗೊತ್ತಾದರೆ ಬಿಗ್​ ಬಾಸ್​ ಖಡಾಖಂಡಿತವಾಗಿ ತಕ್ಷಣ ಮಧ್ಯಪ್ರವೇಶಿಸ್ತಾರೆ. ನೀವು ನಂಬಲೇ ಬೇಕು. ಬಿಗ್​ ಬಾಸ್​ ನಿಮ್ಮ ಜೊತೆ ಇದ್ದೇ ಇರ್ತಾರೆ’ ಎಂದಿದ್ದಾರೆ ಸುದೀಪ್​.

ಈ ವಿಚಾರದ ಬಗ್ಗೆ ನಿಮಗೆ ಏನಾದರೂ ಹೇಳೋಕೆ ಇದೆಯಾ ಅಂತ ನಿಧಿಗೆ ಸುದೀಪ್​ ಪ್ರಶ್ನಿಸಿದರು. ‘ಪ್ರಾರಂಭದಿಂದಲೂ ರೂಲ್ಸ್​ ಚೇಂಜ್​ ಮಾಡಿ ಆಡುತ್ತಿದ್ದರು. ಎರಡನೇ ದಿನ ಅದನ್ನು ಇನ್ನೊಂದು ಲೆವೆಲ್​ಗೆ ತೆಗೆದುಕೊಂಡು ಹೋದವರು ಶಮಂತ್​, ಮಂಜು ಮತ್ತು ದಿವ್ಯಾ ಉರುಡುಗ. ಅವರು ಆ ರೀತಿ ನಡೆದುಕೊಳ್ಳಬಾರದಿತ್ತು. ಆ ಕಾರಣಕ್ಕಾಗಿ ಅವರ ಟೀಮ್​ ಮೇಲೆ ನನಗೆ ಗೌರವ ಹೊರಟುಹೋಯ್ತು’ ಎಂದಿದ್ದಾರೆ ನಿಧಿ. ಒಟ್ಟಿನಲ್ಲಿ ಸುದೀಪ್​ ಈ ಎಚ್ಚರಿಕೆ ಸಂದೇಶ ನೀಡಿದ ಬಳಿಕ ಮನೆಯ ವಾತಾವರಣ ಬದಲಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಬಿಗ್​ ಬಾಸ್​ ಅಭ್ಯರ್ಥಿಗಳ ಕುತಂತ್ರ ಬುದ್ಧಿ ಬಗ್ಗೆ ಸುದೀಪ್​ ಬಳಿ ಅಳಲು ತೋಡಿಕೊಂಡ ಶಂಕರ್​ ಅಶ್ವತ್ಥ್​ ​

ಬಿಗ್​ ಬಾಸ್​ ಮನೆಯಲ್ಲಿ ಹೆಣ್ಮಕ್ಳನ್ನು ಟೈಟ್​ ಆಗಿ ತಬ್ಬಿಕೊಳ್ಳುವ ಪ್ರಶಾಂತ್​ ಸಂಬರಗಿಗೆ ಸುದೀಪ್​ ಖಡಕ್​ ವಾರ್ನಿಂಗ್​

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್