ಟಾಲಿವುಡ್ ಸ್ಟಾರ್ ನಟರ ಸಮಾಗಮದಲ್ಲಿ ನಡೆಯಲಿದೆ ಯುವರತ್ನ ಪ್ರೀ ರಿಲೀಸ್ ಇವೆಂಟ್!
ಯುವರತ್ನ ಸಿನಿಮಾ ತೆಲುಗಿನಲ್ಲೂ ರಿಲೀಸ್ ಆಗುತ್ತಿದೆ. ಈ ಸಿನಿಮಾಗೆ ಪ್ರಚಾರ ಕೊಡುವ ಉದ್ದೇಶದಿಂದ ಆಂಧ್ರದಲ್ಲಿ ದೊಡ್ಡ ಮಟ್ಟದಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ ನಡೆಸೋ ಆಲೋಚನೆ ಚಿತ್ರತಂಡದ್ದು.
ಪುನೀತ್ ರಾಜ್ಕುಮಾರ್ ನಟನೆಯ ಯುವರತ್ನ ಚಿತ್ರತಂಡ ಮೈಸೂರಿನಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ ಏರ್ಪಡಿಸಿದೆ. ಮಾರ್ಚ್ 20ರಂದು ಮೈಸೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಯುವರತ್ನ ಪ್ರೀ ರಿಲೀಸ್ ಇವೆಂಟ್ ಮತ್ತು ಆಡಿಯೋ ಲಾಂಚ್ ಒಟ್ಟಿಗೆ ನೆರವೇರಲಿದೆ. ಇದಕ್ಕಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹೀಗಿರುವಾಗಲೇ ಚಿತ್ರತಂಡದಿಂದ ಮತ್ತೊಂದು ಅಪ್ಡೇಟ್ ಸಿಕ್ಕಿದೆ. ಟಾಲಿವುಡ್ ಸ್ಟಾರ್ ನಟರ ಸಮಾಗಮದಲ್ಲಿ ಆಂಧ್ರ ಪ್ರದೇಶದಲ್ಲಿ ಮತ್ತೊಂದು ಪ್ರೀ ರಿಲೀಸ್ ಇವೆಂಟ್ ಮಾಡಲು ತಂಡ ನಿರ್ಧರಿಸಿದೆ. ಹೌದು, ಯುವರತ್ನ ಸಿನಿಮಾ ತೆಲುಗಿನಲ್ಲೂ ರಿಲೀಸ್ ಆಗುತ್ತಿದೆ. ಈ ಸಿನಿಮಾಗೆ ಪ್ರಚಾರ ಕೊಡುವ ಉದ್ದೇಶದಿಂದ ಆಂಧ್ರದಲ್ಲಿ ದೊಡ್ಡ ಮಟ್ಟದಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ ನಡೆಸೋ ಆಲೋಚನೆ ಚಿತ್ರತಂಡದ್ದು. ಈ ಕಾರ್ಯಕ್ರಮಕ್ಕೆ ಸ್ಟಾರ್ ನಟರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಟಾಲಿವುಡ್ನ ಅನೇಕ ಸ್ಟಾರ್ಗಳಿಗೆ ರಾಜ್ಕುಮಾರ್ ಫ್ಯಾಮಿಲಿ ತುಂಬಾನೇ ಆಪ್ತವಾಗಿದೆ. ಬೆಂಗಳೂರಿಗೆ ಬಂದಾಗೆಲ್ಲ ಅವರು ರಾಜ್ಕುಮಾರ್ ಕುಟುಂಬದವರನ್ನು ಭೇಟಿ ಮಾಡಿ ಹೋದ ಉದಾಹರಣೆ ಇದೆ. ಈಗ ತೆಲುಗು ನಾಡಿಗೆ ಪುನೀತ್ ಹೋಗುತ್ತಾರೆ ಎಂದರೆ, ಅಲ್ಲಿ ಟಾಲಿವುಡ್ ನಟರಿಂದ ಭರ್ಜರಿ ಸ್ವಾಗತ ಸಿಗುವ ನಿರೀಕ್ಷೆ ಇದೆ.
ಪುನೀತ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ರಾಮ್ ಕಾಂಬಿನೇಷನ್ನಲ್ಲಿ ಮೂಡಿಬಂದ ರಾಜಕುಮಾರ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದಾದ ನಾಲ್ಕು ವರ್ಷಗಳ ನಂತರದಲ್ಲಿ ಇದೇ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಚಿತ್ರ ಯುವರತ್ನ. ಈ ಮೊದಲು ರಿಲೀಸ್ ಆಗಿರುವ ಸಿನಿಮಾ ಟೀಸರ್ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟು ಹಾಕಿದೆ. ಈ ಸಿನಿಮಾದಲ್ಲಿ ಪುನೀತ್ ಕಾಲೇಜು ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಪುನೀತ್ಗೆ ಜತೆಯಾಗಿ ಸಯ್ಯೇಶಾ ನಟಿಸಿದ್ದಾರೆ. ಧನಂಜಯ್ ಹಾಗೂ ಪ್ರಕಾಶ್ ರಾಜ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಏಪ್ರಿಲ್ 1ರಂದು ಸಿನಿಮಾ ತೆರೆಗೆ ಬರುತ್ತಿದೆ.
ಇದನ್ನೂ ಓದಿ: Yuvarathnaa Pre-Release: ಮೈಸೂರಲ್ಲಿ ಅದ್ದೂರಿಯಾಗಿ ನೆರವೇರಲಿದೆ ಯುವರತ್ನ ಪ್ರೀ ರಿಲೀಸ್ ಇವೆಂಟ್