AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಗೆ ನೋಡಿದ್ರೆ ನನಗೆ ಡಬಲ್​ ಸಂಭಾವನೆ ಕೊಡಬೇಕು: ರಾಬರ್ಟ್​ ಸಕ್ಸಸ್​ ಮೀಟ್​ನಲ್ಲಿ ದರ್ಶನ್​ ಹೀಗೆ ಅಂದಿದ್ಯಾಕೆ?

ನನ್ನ ಮುಂದಿನ ಚಿತ್ರಗಳು ಕನ್ನಡದ ಜತೆ ಬೇರೆ ಭಾಷೆಗಳಿಗೂ ರಿಲೀಸ್​ ಆಗಲಿವೆ. ಬೇರೆ ಭಾಷೆಗಳಲ್ಲಿ ನಾನೇ ಡಬ್​ ಮಾಡಬೇಕು ಎಂದುಕೊಂಡಿದ್ದೇನೆ ಎಂದರು ದರ್ಶನ್.

ಹಾಗೆ ನೋಡಿದ್ರೆ ನನಗೆ ಡಬಲ್​ ಸಂಭಾವನೆ ಕೊಡಬೇಕು: ರಾಬರ್ಟ್​ ಸಕ್ಸಸ್​ ಮೀಟ್​ನಲ್ಲಿ ದರ್ಶನ್​ ಹೀಗೆ ಅಂದಿದ್ಯಾಕೆ?
ದರ್ಶನ್​
ರಾಜೇಶ್ ದುಗ್ಗುಮನೆ
| Edited By: |

Updated on: Mar 17, 2021 | 5:03 PM

Share

ದರ್ಶನ್​ ನಟನೆಯ ರಾಬರ್ಟ್​ ಸಿನಿಮಾ ಯಶಸ್ಸು ಕಂಡಿದೆ. ಸ್ಯಾಂಡಲ್​ವುಡ್​ ಇತಿಹಾಸದಲ್ಲೇ ಯಾವ ಚಿತ್ರವೂ ಮಾಡದಷ್ಟು ಗಳಿಕೆಯನ್ನು ರಾಬರ್ಟ್​ ಮಾಡಿದೆ. ಸದ್ಯದಲ್ಲೇ ಈ ಸಿನಿಮಾ 100 ಕೋಟಿ ರೂಪಾಯಿ ಗಳಿಕೆ ಮಾಡುವ ಎಲ್ಲಾ ಲಕ್ಷಣ ಕಾಣುತ್ತಿದೆ. ಈ ಮಧ್ಯೆ ದರ್ಶನ್​ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅದೂ ಸಂಭಾವನೆ ಬಗ್ಗೆ ಅನ್ನೋದು ವಿಶೇಷ. ದರ್ಶನ್​ ನಟನೆಯ ರಾಬರ್ಟ್​ ಸಿನಿಮಾ ಕಂಡ ಯಶಸ್ಸನ್ನು ಸಂಭ್ರಮಿಸಲು ಚಿತ್ರತಂಡ ಖಾಸಗಿ ಹೋಟೆಲ್​ನಲ್ಲಿ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತ್ತು. ಈ ವೇಳೆ ದರ್ಶನ್​ ಮಾಧ್ಯಮದ ಜತೆ ಮಾತನಾಡಿದರು. ಸಾಮಾನ್ಯವಾಗಿ ನಟರ ಸಂಭಾವನೆ ವಿಚಾರದಲ್ಲಿ ಸಾಕಷ್ಟು ಜನರಿಗೆ ಕುತೂಹಲ ಇರುತ್ತದೆ. ಅದೇ ರೀತಿ ರಾಬರ್ಟ್​ ಯಶಸ್ಸಿನ ನಂತರ ದರ್ಶನ್​​ ಮುಂದಿನ ಚಿತ್ರಕ್ಕೆ ಸಂಭಾವನೆ ಹೈಕ್​ ಮಾಡಿಕೊಳ್ಳುತ್ತಾರಾ ಎನ್ನುವ ಪ್ರಶ್ನೆ ಮೂಡಿತ್ತು. ಈ ಪ್ರಶ್ನೆಗೆ ದರ್ಶನ್​ ಉತ್ತರ ನೀಡಿಲ್ಲ. ಆದರೆ, ಒಂದು ಅಚ್ಚರಿಯ ವಿಚಾರದ ಬಗ್ಗೆ ಹೇಳಿಕೊಂಡಿದ್ದಾರೆ.

ನನ್ನ ಮುಂದಿನ ಚಿತ್ರಗಳು ಕನ್ನಡದ ಜತೆ ಬೇರೆ ಭಾಷೆಗಳಿಗೂ ರಿಲೀಸ್​ ಆಗಲಿವೆ. ಬೇರೆ ಭಾಷೆಗಳಲ್ಲಿ ನಾನೇ ಡಬ್​ ಮಾಡಬೇಕು ಎಂದುಕೊಂಡಿದ್ದೇನೆ. ರಾಬರ್ಟ್​ಗೆ ತೆಲುಗಿನಲ್ಲಿ ನಾನೇ ಡಬ್​ ಮಾಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಆಗಿಲ್ಲ. ಮುಂದಿನ ಸಿನಿಮಾಗಳಲ್ಲಿ ಬೇರೆ ಭಾಷೆಗೆ ನಾನೇ ಡಬ್​ ಮಾಡುತ್ತೇನೆ ಎಂದರು ದರ್ಶನ್​. ಡಬ್​ ಮಾಡೋ ಬದಲಿ ಸ್ಪಾಟ್​ನಲ್ಲೇ ಎರಡೂ ಭಾಷೆಗಳಿಗೆ ಆ್ಯಕ್ಟ್​ ಮಾಡೋ ಆಲೋಚನೆ ಏನಾದರೂ ಇದೆಯಾ ಎನ್ನುವ ಪ್ರಶ್ನೆಗೆ ದರ್ಶನ್​ ಉತ್ತರಿಸಿದ್ದು ಹೀಗೆ. ಎರಡು ಬಾರಿ ನಟಿಸೋದಾದರೆ ನಾನು ಎರಡೆರಡು ಬಾರಿ ನಟಿಸಬೇಕಾಗುತ್ತದೆ. ಹಾಗೆ ನೋಡಿದ್ರೆ ನನಗೆ ಡಬಲ್​ ಸಂಭಾವನೆ ಕೊಡಬೇಕು ಎಂದು ನಕ್ಕರು ದರ್ಶನ್​.

ಪೈರಸಿ ತಡೆಯೋಕೆ ದರ್ಶನ್​ ಹೊಸ ತಂತ್ರ

ಪೈರಸಿಯನ್ನು ಎಲ್ಲಿ ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗುವುದಿಲ್ಲ. ಇದನ್ನು ತಡೆಯೋಕೆ ಸಿನಿಮಾ ಪ್ರದರ್ಶಕರಾದ ಯುಎಫ್​ಒ ಹಾಗೂ ಕ್ಯೂಬ್​ನವರು ಒಂದು ತಂತ್ರ ಬಳಕೆ ಮಾಡಬಹುದು. ಮನೆಯಲ್ಲಿ ಕೇಬಲ್​ ಹಾಕಿಕೊಂಡರೆ ಟಿವಿಯಲ್ಲಿ ಒಂದು ಸಂಖ್ಯೆ ಓಡುತ್ತಿರುತ್ತದೆ. ಅದೇ ರೀತಿ ಪ್ರತಿ ಚಿತ್ರಮಂದಿರಕ್ಕೆ ಒಂದು ನಂಬರ್​ ನೀಡಬೇಕು. ಆಗ ಯಾವ ಚಿತ್ರಮಂದಿರದಲ್ಲಿ ರೆಕಾರ್ಡ್​ ಮಾಡಲಾಗಿದೆ ಎಂಬುದು ಗೊತ್ತಾಗುತ್ತದೆ. ಇದು ನನ್ನ ಆಲೋಚನೆ ಅಷ್ಟೆ. ಇದನ್ನು ಬೇಕಿದ್ದರೆ ಇಂಪ್ಲಿಮೆಂಟ್​ ಮಾಡಬಹುದು ಎಂದರು ದರ್ಶನ್​.

ಇದನ್ನೂ ಓದಿ: Darshan: ದರ್ಶನ್​ಗೆ ಆಸ್ಕರ್​ ಕೊಡಿ; ವೇದಿಕೆಯ ಮೇಲೆ ಬೇಡಿಕೆ ಇಟ್ಟ ರವಿಶಂಕರ್​!

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More