AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashmika Mandanna: ಕೆಸರು ಗದ್ದೆಯಲ್ಲಿ ಕೃಷಿ ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ! ವಿಡಿಯೋ ವೈರಲ್​

ನಟಿ ರಶ್ಮಿಕಾ ಮಂದಣ್ಣ ಅವರನ್ನು ಈ ಅವತಾರದಲ್ಲಿ ಯಾರೂ ಕಲ್ಪಿಸಿಕೊಂಡಿರಲಿಲ್ಲ. ಅಷ್ಟರಮಟ್ಟಿಗೆ ಅವರು ಬದಲಾಗಿದ್ದಾರೆ. ಅದಕ್ಕೆ ಈ ವಿಡಿಯೋ ಸಾಕ್ಷಿ.

Rashmika Mandanna: ಕೆಸರು ಗದ್ದೆಯಲ್ಲಿ ಕೃಷಿ ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ! ವಿಡಿಯೋ ವೈರಲ್​
ರಶ್ಮಿಕಾ ಮಂದಣ್ಣ
Follow us
ಮದನ್​ ಕುಮಾರ್​
|

Updated on:Mar 18, 2021 | 7:51 AM

ಕನ್ನಡದಿಂದ ಬಣ್ಣದ ಬದುಕು ಆರಂಭಿಸಿ ಈಗ ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಈಗ ಅಪ್ಪಟ ಹಳ್ಳಿ ಹುಡುಗಿ ಆಗಿದ್ದಾರೆ. ಗ್ಲಾಮರ್​ ಅವತಾರ ಬಿಟ್ಟು, ಪಕ್ಕಾ ಹಳ್ಳಿ ವೇಷ ತೊಟ್ಟಿದ್ದಾರೆ. ಅಷ್ಟೇ ಅಲ್ಲ, ಕೆಸರು ಗದ್ದೆಗೆ ಇಳಿದು ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಅವರನ್ನು ನೋಡಿದರೆ, ಅರೆ… ಇದು ನಿಜವಾಗಿಯೂ ರಶ್ಮಿಕಾನಾ ಅಂತ ಯಾರಾದರೂ ಅಚ್ಚರಿ ಪಡುತ್ತಾರೆ.

ಹೌದು, ರಶ್ಮಿಕಾ ಮಂದಣ್ಣ ಕೆಸರು ಗದ್ದೆಗೆ ಇಳಿದು ಕೃಷಿ ಕೆಲಸದಲ್ಲಿ ತೊಡಗಿಕೊಂಡಿರುವ ವಿಡಿಯೋ ವೈರಲ್​ ಆಗಿದೆ. ಅದನ್ನು ಸ್ವತಃ ರಶ್ಮಿಕಾ ಶೇರ್​ ಮಾಡಿಕೊಂಡಿದ್ದಾರೆ. ಹಾಗಂತ ಅವರು ರಿಯಲ್​ ಲೈಫ್​ನಲ್ಲಿ ಕೃಷಿ ಮಾಡುತ್ತಿಲ್ಲ. ಈ ವೇಷ ಧರಿಸಿರುವುದು ಸಿನಿಮಾ ಸಲುವಾಗಿ! ಕಾಲಿವುಡ್​ನಲ್ಲಿ ಮಿಂಚುತ್ತಿರುವ ರಶ್ಮಿಕಾ ಅವರು ಕಾರ್ತಿ ಜೊತೆ ಸುಲ್ತಾನ್​ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಚಿತ್ರದಲ್ಲಿ ಅವರಿಗೆ ಈ ರೀತಿ ಪಾತ್ರ ನೀಡಲಾಗಿದೆ.

ಕನ್ನಡ ಮತ್ತು ತೆಲುಗಿನಲ್ಲಿ ಭಾರಿ ಜನಪ್ರಿಯತೆ ಪಡೆದ ರಶ್ಮಿಕಾ ಮಂದಣ್ಣ ಅವರಿಗೆ ನಂತರ ತಮಿಳಿನಿಂದಲೂ ಆಫರ್​ ಬಂತು. ಅವರು ಒಪ್ಪಿಕೊಂಡ ಮೊದಲ ಕಾಲಿವುಡ್​ ಚಿತ್ರವೇ ಸುಲ್ತಾನ್​. ಈ ಸಿನಿಮಾದಲ್ಲಿ ಅವರಿಗೆ ಸ್ಟಾರ್​ ನಟ ಕಾರ್ತಿ ಜೋಡಿ ಆಗಿದ್ದಾರೆ. ಈಗಾಗಲೇ ಸುಲ್ತಾನ್​ಗೆ ಶೂಟಿಂಗ್​ ಮುಗಿದಿದೆ. ಚಿತ್ರದ ಮೇಲೆ ಸ್ವತಃ ರಶ್ಮಿಕಾ ಅವರಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ಅವರ ಪಾತ್ರ ಹೇಗಿರಲಿದೆ ಎಂಬ ಬಗ್ಗೆ ಅಭಿಮಾನಿಗಳಿಗೆ ಕೌತುಕವಿತ್ತು. ಈಗ ಈ ಹಳ್ಳಿ ಹುಡುಗಿ ಗೆಟಪ್​ನ ವಿಡಿಯೋ ಹಂಚಿಕೊಳ್ಳುವ ಮೂಲಕ ನಿರೀಕ್ಷೆ ಹೆಚ್ಚಿಸುವ ಕೆಲಸ ಮಾಡಿದ್ದಾರೆ ರಶ್ಮಿಕಾ.

ಸದ್ಯಕ್ಕಂತೂ ರಶ್ಮಿಕಾ ಕನ್ನಡಕ್ಕಿಂತ ಹೆಚ್ಚಾಗಿ ಪರಭಾಷೆಯಲ್ಲೇ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ತೆರೆಕಂಡ ‘ಪೊಗರು’ ಸಿನಿಮಾ ಸೂಪರ್​ ಹಿಟ್​ ಆಗಿದೆ. ಅದು ಬಿಟ್ಟರೆ ಬೇರೆ ಯಾವುದೇ ಕನ್ನಡ ಸಿನಿಮಾವನ್ನೂ ಈಗ ಅವರು ಒಪ್ಪಿಕೊಂಡಿಲ್ಲ. ತೆಲುಗಿನಲ್ಲಿ ಅಲ್ಲು ಅರ್ಜುನ್​ ಜೊತೆ ‘ಪುಷ್ಪ’ ಸಿನಿಮಾ ಮಾಡುತ್ತಿದ್ದಾರೆ. ಬಾಲಿವುಡ್​ನಲ್ಲಿ ಸಿದ್ದಾರ್ಥ್​ ಮಲ್ಹೋತ್ರಾಗೆ ಜೋಡಿಯಾಗಿ ‘ಮಿಷನ್​ ಮಜ್ನು’ ಚಿತ್ರದಲ್ಲಿ ಈ ಕೊಡಗಿನ ಕುವರಿ ನಟಿಸುತ್ತಿದ್ದಾರೆ. ಒಟ್ಟಿನಲ್ಲಿ ಅವರ ಸಿನಿಮಾ ಜರ್ನಿ ಸಖತ್​ ಸೂಪರ್​ ಆಗಿ ಸಾಗುತ್ತಿದೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ-ಪೂಜಾ ಹೆಗ್ಡೆಗೆ ಟಫ್​ ಕಾಂಪಿಟೀಷನ್​ ಕೊಡೋಕೆ ಬಂದ್ರು ಮತ್ತೋರ್ವ ನಟಿ!

ಮುಂಬೈನಲ್ಲಿ ಐಷಾರಾಮಿ ಫ್ಲಾಟ್ ಖರೀದಿಸಿದ ನಟಿ ರಶ್ಮಿಕಾ

Published On - 7:46 am, Thu, 18 March 21