AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramya: ಇನ್​ಸ್ಟಾಗ್ರಾಮ್​, ಟ್ವಿಟರ್​ನಲ್ಲಿ ಅಭಿಮಾನಿಗಳಿಗೆ ಸಡನ್​ ಶಾಕ್​ ನೀಡಿದ ರಮ್ಯಾ! ಕಾರಣ ಏನು?

Divya Spandana: ಚಿತ್ರರಂಗದಿಂದ ನಟಿ ರಮ್ಯಾ ದೂರ ಆಗಿರಬಹುದು. ಆದರೆ ಅವರ ಚಾರ್ಮ್​ ಇನ್ನೂ ಕಡಿಮೆ ಆಗಿಲ್ಲ. ಲಕ್ಷಾಂತರ ಅಭಿಮಾನಿಗಳ ಪಾಲಿಗೆ ಈಗಲೂ ಅವರೇ ಹಾಟ್​ ಫೇವರಿಟ್​. ಆದರೆ ಅವರು ಏಕಾಏಕಿ ಫ್ಯಾನ್ಸ್​ಗೆಲ್ಲ ಶಾಕ್​ ನೀಡಿದ್ದಾರೆ. ಎಲ್ಲರಿಂದಲೂ ದೂರವಾಗಲು ಪ್ರಯತ್ನಿಸಿದ್ದಾರೆ! ಅಷ್ಟಕ್ಕೂ ರಮ್ಯಾಗೆ ಏನಾಯ್ತು ಎಂದು ಎಲ್ಲರೂ ತಲೆ ಕೆರೆದುಕೊಳ್ಳುತ್ತಿದ್ದಾರೆ.

Ramya: ಇನ್​ಸ್ಟಾಗ್ರಾಮ್​, ಟ್ವಿಟರ್​ನಲ್ಲಿ ಅಭಿಮಾನಿಗಳಿಗೆ ಸಡನ್​ ಶಾಕ್​ ನೀಡಿದ ರಮ್ಯಾ! ಕಾರಣ ಏನು?
ರಮ್ಯಾ ದಿವ್ಯ ಸ್ಪಂದನಾ
ಮದನ್​ ಕುಮಾರ್​
| Edited By: |

Updated on:Apr 03, 2026 | 7:30 AM

Share

ಚಿತ್ರರಂಗದಿಂದ ನಟಿ ರಮ್ಯಾ ದೂರ ಆಗಿರಬಹುದು. ಆದರೆ ಅವರ ಚಾರ್ಮ್​ ಇನ್ನೂ ಕಡಿಮೆ ಆಗಿಲ್ಲ. ಲಕ್ಷಾಂತರ ಅಭಿಮಾನಿಗಳ ಪಾಲಿಗೆ ಈಗಲೂ ಅವರೇ ಹಾಟ್​ ಫೇವರಿಟ್​. ಆದರೆ ಅವರು ಏಕಾಏಕಿ ಫ್ಯಾನ್ಸ್​ಗೆಲ್ಲ ಶಾಕ್​ ನೀಡಿದ್ದಾರೆ. ಎಲ್ಲರಿಂದಲೂ ದೂರವಾಗಲು ಪ್ರಯತ್ನಿಸಿದ್ದಾರೆ! ಅಷ್ಟಕ್ಕೂ ರಮ್ಯಾಗೆ ಏನಾಯ್ತು ಎಂದು ಎಲ್ಲರೂ ತಲೆ ಕೆರೆದುಕೊಳ್ಳುತ್ತಿದ್ದಾರೆ.

2016ರಲ್ಲಿ ಬಂದ ‘ನಾಗರಹಾವು’ ಸಿನಿಮಾ ಬಳಿಕ ರಮ್ಯಾ ಬೇರೆ ಯಾವುದೇ ಚಿತ್ರವನ್ನೂ ಒಪ್ಪಿಕೊಂಡಿಲ್ಲ. ರಾಜಕೀಯದಲ್ಲಿಯೂ ಅವರಿಗೆ ಕೊಂಚ ಹಿನ್ನಡೆ ಆಯಿತು. ಆದರೆ ಸೋಶಿಯಲ್​ ಮೀಡಿಯಾದಲ್ಲಿ ಅವರು ಇತ್ತೀಚೆಗೆ ಸಕ್ರಿಯರಾಗಿದ್ದರು. ಹಲವು ವಿಚಾರಗಳ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಅವರ ಹಂಚಿಕೊಳ್ಳುತ್ತಿದ್ದರು. ಆದರೆ ಅವರು ಈಗ ಏಕಾಏಕಿ ಇನ್​ಸ್ಟಾಗ್ರಾಮ್​ ಮತ್ತು ಟ್ವಿಟರ್​ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ!

ರಾಜಕೀಯ ಮಾತ್ರವಲ್ಲದೆ ಅನೇಕ ವಿಚಾರಗಳನ್ನು ರಮ್ಯಾ ಹಂಚಿಕೊಳ್ಳುತ್ತಿದ್ದರು. ಪ್ರಾಣಿಗಳ ಕುರಿತಂತೆ ಕೆಲವು ವಿಡಿಯೋಗಳನ್ನು ಶೇರ್​ ಮಾಡುತ್ತಿದ್ದರು. ದಿಶಾ ರವಿ ಪ್ರಕರಣದ ಬಗ್ಗೆಯೂ ದೀರ್ಘವಾದ ಪೋಸ್ಟ್​ಗಳನ್ನು ಅವರು ಮಾಡಿದ್ದರು. ಆದರೆ ಈಗ ಇದ್ದಕ್ಕಿದ್ದಂತೆಯೇ ಅವರು ತಮ್ಮ ಇನ್​ಸ್ಟಾಗ್ರಾಮ್​ ಮತ್ತು ಟ್ವಿಟರ್​ ಖಾತೆಗಳನ್ನು ನಿಷ್ಕ್ರಿಯಗೊಳಿಸಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಆದರೆ ಅವರ ಫೇಸ್​ಬುಕ್​ ಖಾತೆ ಇನ್ನೂ ಕಾರ್ಯ ನಿರ್ವಹಿಸುತ್ತಿದೆ.

ತಮ್ಮ ಈ ನಿರ್ಧಾರಕ್ಕೆ ಕಾರಣ ಏನು ಎಂಬುದನ್ನು ಅವರು ತಿಳಿಸಿಲ್ಲ. ತಾಂತ್ರಿಕ ಅಡೆಚಣೆಯಿಂದ ಈ ರೀತಿ ಆಗಿರಬಹುದಾ ಎಂಬ ಅನುಮಾನ ಕೂಡ ಮೂಡಿದೆ. ಅಂದಹಾಗೆ, ರಮ್ಯಾ ಈ ರೀತಿ ಸೋಶಿಯಲ್​ ಮೀಡಿಯಾದಿಂದ ಅಂತರ ಕಾಯ್ದುಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2019ರ ಜೂನ್​ನಿಂದ 2020 ಆಗಸ್ಟ್​ವರೆಗೆ ಸೋಶಿಯಲ್​ ಮೀಡಿಯಾದಲ್ಲಿ ರಮ್ಯಾ ಕಣ್ಮರೆ ಆಗಿದ್ದರು. ಒಂದು ವರ್ಷದ ಆನ್​ಲೈನ್​ ಅಜ್ಞಾತವಾಸ ಮುಗಿಸಿ ಅವರು ಮತ್ತೆ ಆಕ್ಟೀವ್​ ಆಗಿದ್ದರು. ಈಗ ಮತ್ತೆ ಅವರು ಇನ್​ಸ್ಟಾಗ್ರಾಮ್​ ಮತ್ತು ಟ್ವಿಟರ್​ ಖಾತೆಗಳನ್ನು ನಿಷ್ಕ್ರಿಯಗೊಳಿಸಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: ರಾಜಕೀಯ-ನಟನೆಯಿಂದ ದೂರ ಉಳಿದಿರುವ ರಮ್ಯಾ ಈಗೇನು ಮಾಡ್ತಿದಾರೆ? ಇಲ್ಲಿದೆ ನೋಡಿ ವಿಡಿಯೋ

Published On - 12:18 pm, Thu, 18 March 21

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More