ರಾಧೆ ಶ್ಯಾಮ್​ ನಿರ್ದೇಶಕನ ವಿರುದ್ಧ ಪೊಲೀಸರಿಗೆ ಕಂಪ್ಲೆಂಟ್​ ನೀಡಿದ ಪ್ರಭಾಸ್​ ಫ್ಯಾನ್ಸ್ !

ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲ ಒಂದು ವಿಚಾರಗಳು ವೈರಲ್​ ಆಗುತ್ತಿರುತ್ತವೆ. ಈಗಲೂ ಆಗಿದ್ದೂ ಅದೇ.

ರಾಧೆ ಶ್ಯಾಮ್​ ನಿರ್ದೇಶಕನ ವಿರುದ್ಧ ಪೊಲೀಸರಿಗೆ ಕಂಪ್ಲೆಂಟ್​ ನೀಡಿದ ಪ್ರಭಾಸ್​ ಫ್ಯಾನ್ಸ್ !
ಪ್ರಭಾಸ್​-ರಾಧೆಶ್ಯಾಮ್​ ನಿರ್ದೇಶಕ
Rajesh Duggumane

|

Mar 21, 2021 | 7:40 PM

ಪ್ರಭಾಸ್​ ನಟನೆಯ ರಾಧೆ ಶ್ಯಾಮ್​ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಚಿತ್ರದ ಕೆಲಸ ಪೂರ್ಣಗೊಂಡಿದ್ದು, ಜುಲೈನಲ್ಲಿ ಸಿನಿಮಾ ತೆರೆಮೇಲೆ ಬರುತ್ತಿದೆ. ಈ ಮಧ್ಯೆ ಸಿನಿಮಾದ ನಿರ್ದೇಶಕ ರಾಧಾ ಕೃಷ್ಣ ಕುಮಾರ್​ ವಿರುದ್ಧ ಪ್ರಭಾಸ್​ ಫ್ಯಾನ್ಸ್ ಗರಂ ಆಗಿದ್ದಾರೆ. ಅಷ್ಟೇ ಅಲ್ಲ, ಹೈದರಾಬಾದ್​ ಪೊಲೀಸರ ಬಳಿ ದೂರನ್ನು ಕೂಡ ನೀಡಿದ್ದಾರೆ. ಅಷ್ಟಕ್ಕೂ ದೂರು ದಾಖಲಿಸೋಕೆ ಕಾರಣ ಏನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ. ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲ ಒಂದು ವಿಚಾರಗಳು ವೈರಲ್​ ಆಗುತ್ತಿರುತ್ತವೆ. ಈಗಲೂ ಆಗಿದ್ದೂ ಅದೇ. ನಟ ನಿತಿನ್​ ನಟನೆಯ ರಂಗ್​ ದೆ ಸಿನಿಮಾ ಇದೇ 26ರಂದು ತೆರೆಕಾಣುತ್ತಿದೆ. ಸಿನಿಮಾದ ಪ್ರಮೋಷನ್​ನಲ್ಲಿ ಚಿತ್ರಂಡ ಬ್ಯುಸಿಯಾಗಿದೆ. ಈ ಮಧ್ಯೆ ಚಿತ್ರದ ನಟಿ ಕೀರ್ತಿ ಸುರೇಶ್​ ಅವರು ಸಿನಿಮಾದ ಪ್ರಮೋಷನ್​ನಲ್ಲಿ ಅಷ್ಟಾಗಿ ಪಾಲ್ಗೊಳ್ಳುತ್ತಿಲ್ಲವಂತೆ. ಇದು ಚಿತ್ರತಂಡದ ಬೇಸರಕ್ಕೆ ಕಾರಣವಾಗಿದೆ.

ಇದಕ್ಕಾಗಿ, ಕೀರ್ತಿ ಸುರೇಶ್​ ಅವರ ಫೋಟೋ ಒಂದನ್ನು ಟ್ವೀಟ್​ ಮಾಡಿದ್ದ ನಿತಿನ್​, ಫೋಟೊದಲ್ಲಿ ಇರುವವರು ಕಾಣೆಯಾಗಿದ್ದಾರೆ ಮತ್ತು ಇವರಿಗೆ ಸಿನಿಮಾ ಪ್ರಚಾರ ಕಾರ್ಯಕ್ರಮಗಳಿಗೆ ಹಾಜರಾಗಿ ಎಂದು ಯಾರಾದರೂ ಹೇಳಿ ಎಂದು ಕೋರಿದ್ದರು.ಅಚ್ಚರಿ ಎಂಬಂತೆ ಈ ಟ್ವೀಟ್​ಗೆ ಹೈದರಾಬಾದ್ ಪೊಲೀಸ್ ಇಲಾಖೆ​ ಉತ್ತರಿಸಿ, ನಿತಿನ್​ ಅವರು ಈ ವಿಚಾರ ನೋಡಿಕೊಳ್ಳುತ್ತಾರೆ ಎಂದಿತ್ತು.

ಈ ಟ್ವೀಟ್​ಗೆ ಉತ್ತರಿಸಿದ್ದ ಪ್ರಭಾಸ್​ ಅಭಿಮಾನಿಯೋರ್ವ ರಾಧೆ ಶ್ಯಾಮ್​ ನಿರ್ದೇಶಕ ರಾಧಾ ಕೃಷ್ಣ ಕುಮಾರ್​ ಅವರನ್ನು ಹಿಡಿದುಕೊಡಿ ಎಂದು ಹೈದರಾಬಾದ್ ಪೊಲೀಸರ ಬಳಿ ಆಗ್ರಹಿಸಿದ್ದಾರೆ. ರಾಧಾ ಕೃಷ್ಣ ಕುಮಾರ್​ ರಾಧೆ ಶ್ಯಾಮ್​ ಸಿನಿಮಾವನ್ನು ಸರಿಯಾಗಿ ಪ್ರಮೋಷನ್​ ಮಾಡುತ್ತಿಲ್ಲ ಎನ್ನುವ ಮಾತಿದೆ. ಇದು ಪ್ರಭಾಸ್​ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಅಭಿಮಾನಿಗಳು ಹೈದರಾಬಾದ್​ ಪೊಲೀಸರ ಬಳಿ ಈ ದೂರು ನೀಡಿದ್ದಾರೆ. ಸದ್ಯ, ಈ ಟ್ವೀಟ್​ ಸಾಕಷ್ಟು ವೈರಲ್​ ಆಗಿದೆ.

ಇದನ್ನೂ ಓದಿ: ಪ್ರಭಾಸ್​ ಜತೆ 75 ದಿನ ಕಳೆಯಲಿದ್ದಾರೆ ದೀಪಿಕಾ ಪಡುಕೋಣೆ; ಕಾರಣವೇನು ಗೊತ್ತಾ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada