Bigg Boss Kannada: ಬಿಗ್​ ಬಾಸ್ ಕೇಳಿದ 10 ಜನರಲ್​ ನಾಲೆಡ್ಜ್​ ಪ್ರಶ್ನೆಗೆ ಉತ್ತರಿಸದೇ ಸೋತ ಶಮಂತ್​! ನಿಮಗೆ ಉತ್ತರ ಗೊತ್ತಾ?

BBK8: ಸ್ಪರ್ಧಿಗಳು ಊಹಿಸಲೂ ಸಾಧ್ಯವಾಗದಂತಹ ಟಾಸ್ಕ್​ಗಳನ್ನು ಬಿಗ್​ ಬಾಸ್​ ನೀಡುತ್ತಿದ್ದಾರೆ. ಅದನ್ನು ಎದುರಿಸಲಾಗದೆ ಎಲ್ಲರೂ ಕಷ್ಟಪಡುತ್ತಿದ್ದಾರೆ.

Bigg Boss Kannada: ಬಿಗ್​ ಬಾಸ್ ಕೇಳಿದ 10 ಜನರಲ್​ ನಾಲೆಡ್ಜ್​ ಪ್ರಶ್ನೆಗೆ ಉತ್ತರಿಸದೇ ಸೋತ ಶಮಂತ್​! ನಿಮಗೆ ಉತ್ತರ ಗೊತ್ತಾ?
ಶಮಂತ್​ ಬ್ರೋ ಗೌಡ
Follow us
ಮದನ್​ ಕುಮಾರ್​
|

Updated on: Mar 24, 2021 | 10:47 AM

ಶಮಂತ್​ ಬ್ರೋ ಗೌಡ ಎಲ್ಲರ ದೃಷ್ಟಿಯಲ್ಲೂ ದುರ್ಬಲ ಸ್ಪರ್ಧಿ ಎನಿಸಿಕೊಳ್ಳುತ್ತಿದ್ದಾರೆ. ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಅವರ ಆಟದ ವೈಖರಿ ಮನೆಯ ಯಾವ ಸದಸ್ಯರಿಗೂ ಇಷ್ಟ ಆಗುತ್ತಿಲ್ಲ. ಆದರೆ ವೀಕ್ಷಕರು ನೀಡಿದ ವೋಟ್​ ಬಲದ ಮೇಲೆ ಶಮಂತ್ ಆಟ ಇನ್ನೂ ಮುಂದುವರಿಸಿದೆ. ಇತ್ತೀಚೆಗೆ ಬಿಗ್​ ಬಾಸ್​ ನೀಡಿದ್ದ ಒಂದು ಟಾಸ್ಕ್​ನಲ್ಲಿ ಶಮಂತ್​ ಸೋತಿದ್ದಾರೆ. ಅದು ಅವರ ಸಾಮಾನ್ಯ ಜ್ಞಾನಕ್ಕೆ ಸವಾಲು ಹಾಕುವ ಟಾಸ್ಕ್​.

ಹೌದು, ಚದುರಂಗದ ಆಟದಲ್ಲಿ ಬಿಳಿ ತಂಡದವರಿಂದ ಟಾರ್ಗೆಟ್​ ಆಗಿದ್ದ ಶಮಂತ್​ಗೆ ಬಿಗ್​ ಬಾಸ್​ 10 ಜನರಲ್​ ನಾಲೆಜ್ಡ್​ ಪ್ರಶ್ನೆಗಳನ್ನು ಕೇಳಿದರು. ಅವುಗಳಿಗೆ ಹೌದು ಅಥವಾ ಇಲ್ಲ ಎಂದು ಶಮಂತ್​ ಉತ್ತರ ನೀಡಬೇಕಿತ್ತು. ಶಮಂತ್​ ಕೆಲವು ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ್ದಾರೆ. ಆದರೂ ಕಡಿಮೆ ಪಾಯಿಂಟ್ಸ್​ ಗಳಿಸಿದ್ದರಿಂದ ಅವರು ಸೋಲು ಕಂಡಿದ್ದಾರೆ. ಶಮಂತ್​ಗೆ ಬಿಗ್​ ಬಾಸ್​ ಕೇಳಿದ ಪ್ರಶ್ನೆಗಳು ಹೀಗಿವೆ…

ಪ್ರಶ್ನೆ 1. ಚಿಕ್ಕ ತಿರುಪತಿ ಕರ್ನಾಟಕದಲ್ಲಿ ಇದೆ. ಹೌದು/ಇಲ್ಲ. ಈ ಪ್ರಶ್ನೆಗೆ ಯಾವುದೇ ಗೊಂದಲ ಇಲ್ಲದೆ ಹೌದು ಎಂದು ಶಮಂತ್ ಉತ್ತರಿಸಿದರು. ಅವರ ಉತ್ತರ ಸರಿಯಾಗಿತ್ತು.

ಪ್ರಶ್ನೆ 2. ಬೆಳಗಾವಿಯಲ್ಲಿ ವಿಮಾನ ನಿಲ್ದಾಣ ಇದೆ. ಹೌದು/ಇಲ್ಲ. ಇದು ಶಮಂತ್​ಗೆ ಗೊತ್ತಿರಲಿಲ್ಲ. ಯಾವುದೋ ಅಂದಾಜಿನ ಮೇಲೆ ಹೌದು ಎಂದು ಉತ್ತರಿಸಿದರು. ಅನುಮಾನದಲ್ಲಿಯೇ ‘ಹೌದು’ ಎಂದು ಅವರು ಸರಿ ಉತ್ತರ ನೀಡಿದಾಗ ಅವರ ತಂಡದವರು ಕುಣಿದು ಕುಪ್ಪಳಿಸಿದರು.

ಪ್ರಶ್ನೆ: 3 ಭಾರತೀಯ ಚುನಾವಣೆಯಲ್ಲಿ ಬಳಸುವ ಇಂಕ್​ ತಯಾರಿಸುವ ಕಾರ್ಖಾನೆ ಕರ್ನಾಟದಲ್ಲಿ ಇದೆ. ಹೌದು/ಇಲ್ಲ. ಈ ಪ್ರಶ್ನೆಗೆ ಶಮಂತ್​ ‘ಇಲ್ಲ’ ಎಂದು ತಪ್ಪು ಉತ್ತರ ನೀಡಿ ಪಾಯಿಂಟ್​ ಕಳೆದುಕೊಂಡರು. ಚುನಾವಣೆ ಲಿಂಕ್​ ತಯಾರಿಸುವ ‘ಮೈಸೂರ್​ ಪೇಂಟ್ಸ್​ ಆ್ಯಂಡ್​ ವಾರ್ನಿಷ್​ ಲಿಮಿಡೆಟ್​ ಕಂಪನಿ’ ಕರ್ನಾಟಕದಲ್ಲಿ ಇದೆ ಎಂದು ಬಿಗ್​ ಬಾಸ್​ ಸರಿ ಉತ್ತರ ಹೇಳಿದರು.

ಪ್ರಶ್ನೆ 4: ಭಾರತದಲ್ಲಿ ಅತಿ ಹೆಚ್ಚು ಕಾಫಿ ಬೆಳೆಯುವ ಮತ್ತು ರಫ್ತು ಮಾಡುವ ರಾಜ್ಯ ಕರ್ನಾಟಕ. ಹೌದು/ಇಲ್ಲ. ಹೌದು ಎನ್ನುವ ಮೂಲಕ ಶಮಂತ್​ ಸರಿ ಉತ್ತರ ನೀಡಿದರು.

ಪ್ರಶ್ನೆ 5: ಕೃಷ್ಣರಾಜ ಸಾಗರ ಜಲಾಶಯ ಮೈಸೂರು ಜಿಲ್ಲೆಯಲ್ಲಿದೆ. ಹೌದು/ ಇಲ್ಲ. ಈ ಪ್ರಶ್ನೆಗೆ ಬಹಳ ಕಾನ್ಫಿಡೆಂಟ್​ ಆಗಿ ಹೌದು ಎಂದು ಶಮಂತ್​ ಹೇಳಿದರು. ಆದರೆ ಅವರ ಉತ್ತರ ತಪ್ಪಾಗಿತ್ತು. ಕೃಷ್ಣರಾಜ ಸಾಗರ ಜಲಾಶಯ ಮಂಡ್ಯ ಜಿಲ್ಲೆಯಲ್ಲಿದೆ.

ಪ್ರಶ್ನೆ 6: ದೇಶದ ಅತಿ ದೊಡ್ಡ ಸಾರ್ವಜನಿಕ ಸಂಚಾರ ವಾಹನಗಳ ನಿರ್ವಹಣಾ ಸಂಸ್ಥೆ ಕರ್ನಾಟಕದಲ್ಲಿ ಇದೆ. ಹೌದು/ಇಲ್ಲ. ಇಲ್ಲ ಎಂದು ಶಮಂತ್​ ಹೇಳಿದ ಉತ್ತರ ತಪ್ಪಾಗಿತ್ತು. ಕೆಎಸ್​ಆರ್​ಟಿಸಿ ಸಂಸ್ಥೆಯು ದೇಶದ ಅತಿ ದೊಡ್ಡ ಸಾರ್ವಜನಿಕ ಸಂಚಾರ ವಾಹನಗಳ ನಿರ್ವಹಣಾ ಸಂಸ್ಥೆಯಾಗಿದೆ ಎಂದು ಬಿಗ್​ ಬಾಸ್​ ಹೇಳಿದರು.

ಪ್ರಶ್ನೆ 7: ನೀನಾಸಂ ಹೆಗ್ಗೋಡಿನಲ್ಲಿದೆ. ಹೌದು/ಇಲ್ಲ. ಹೌದು ಎನ್ನುವ ಮೂಲಕ ಸರಿ ಉತ್ತರ ಹೇಳಿದ ಶಮಂತ್​ಗೆ ಕಪ್ಪು ತಂಡದವರಿಂದ ಚಪ್ಪಾಳೆ, ಮೆಚ್ಚುಗೆ ಸಿಕ್ಕಿತು.

ಪ್ರಶ್ನೆ 8: ವಿದ್ಯುತ್​ ಚಾಲಿತ ಬೀದಿ ದೀಪಗಳನ್ನು ಸ್ಥಾಪಿಸಿದ ಮೊದಲ ನಗರ ಎಂಬ ಹೆಗ್ಗಳಿಕೆ ಬೆಂಗಳೂರಿಗೆ ಇದೆ. ಹೌದು/ಇಲ್ಲ. ಇಲ್ಲ ಎಂದು ಹೇಳಿದ ಶಮಂತ್​ ಮತ್ತೆ ಸೋಲು ಅನುಭವಿಸಿದರು. ಶಿವನ ಸಮುದ್ರದಲ್ಲಿ ಉತ್ಪಾದಿಸಿದ ಹೆಚ್ಚುವರಿ ವಿದ್ಯುತ್​ ಬಳಸಲು ಈಗಿನ ಕೆಆರ್​ ಮಾರುಕಟ್ಟೆಯಲ್ಲಿ ವಿದ್ಯುತ್​ ದೀಪಗಳನ್ನು 1905ರಲ್ಲಿ ಸ್ಥಾಪಿಸಲಾಯಿತು ಎಂದು ಬಿಗ್​ ಬಾಸ್​ ಉತ್ತರ ಹೇಳಿದರು.

ಪ್ರಶ್ನೆ: 9: ಭಾರತದ ಮೊದಲ ರಣಹದ್ದು ಅಭಯಾರಣ್ಯ ರಾಮನಗರದಲ್ಲಿ ಇದೆ. ಹೌದು/ಇಲ್ಲ. ಇದೆ ಎನ್ನುವ ಮೂಲಕ ಶಮಂತ್​ ಸರಿ ಉತ್ತರ ನೀಡಿದರು.

ಪ್ರಶ್ನೆ 10: ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾಲಯ ಮೈಸೂರಿನಲ್ಲಿ ಇದೆ. ಹೌದು/ಇಲ್ಲ. ಇದೆ ಎಂದು ಶಮಂತ್​ ಹೇಳಿದ ಉತ್ತರ ತಪ್ಪಾಗಿತ್ತು. ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿದೆ.

ಇವುಗಳಲ್ಲಿ ಕೆಲವೇ ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ ಶಮಂತ್ ಸೋಲು ಅನುಭವಿಸಬೇಕಾಯಿತು. ಅವರನ್ನು ಟಾರ್ಗೆಟ್​ ಮಾಡಿದ ಬಿಳಿ ತಂಡದವರಿಗೆ ಗೆಲುವು ಸಿಕ್ಕಿತು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಶಮಂತ್​ ಕೂದಲಿಗೆ ಕತ್ತರಿ! ಇದು ಹೊಸಾ ಪನಿಶ್​ಮೆಂಟ್​?

Bigg Boss: ತನ್ನನ್ನೇ ತಾನು ನಂಬದ ಶಮಂತ್​ ಮೇಲೆ ಜನರಿಗೆ ಯಾಕಿಷ್ಟು ನಂಬಿಕೆ? ಇದು ಬಿಗ್​ ಬಾಸ್ ರಹಸ್ಯ!