Bigg Boss: ಈ ವಾರ ಬಿಗ್​ ಬಾಸ್​ನಲ್ಲಿ ದೊಡ್ಡ ಫೈಟ್​! ಯಾರೂ ಊಹಿಸಿರದ ಘಟನೆ ನಡೆದೇ ಬಿಡ್ತು

BBK8: ಈ ವಾರದ ಟಾಸ್ಕ್​ನಲ್ಲಿ ಎಲ್ಲರೂ ಮಾಡು ಇಲ್ಲವೆ ಮಡಿ ಎಂಬಂತೆ ಕಾದಾಡುವ ಸನ್ನಿವೇಶ ನಿರ್ಮಾಣ ಆಗಲಿದೆ. ಮನರಂಜನೆ ನೀಡುವಲ್ಲಿ ಹಿಂದೆ ಬಿದ್ದರೂ ಅಂಥ ಸ್ಪರ್ಧಿಗೆ ತೀವ್ರ ಹಿನ್ನಡೆ ಆಗಲಿದೆ.

Bigg Boss: ಈ ವಾರ ಬಿಗ್​ ಬಾಸ್​ನಲ್ಲಿ ದೊಡ್ಡ ಫೈಟ್​! ಯಾರೂ ಊಹಿಸಿರದ ಘಟನೆ ನಡೆದೇ ಬಿಡ್ತು
ಬಿಗ್​ ಬಾಸ್​ ಕನ್ನಡ ಸೀಸನ್​ 8
Follow us
ಮದನ್​ ಕುಮಾರ್​
|

Updated on: Mar 23, 2021 | 1:26 PM

‘ಬಿಗ್​ ಬಾಸ್​ ಕನ್ನಡ ಸೀಸನ್​ 8’ ದಿನದಿಂದ ದಿನಕ್ಕೆ ಬಣ್ಣ ಬದಲಾಯಿಸುತ್ತಿದೆ. ಸ್ಪರ್ಧಿಗಳು ಮತ್ತು ಪ್ರೇಕ್ಷಕರು ನಿರೀಕ್ಷೆಯನ್ನೇ ಮಾಡಿರದ ಟಾಸ್ಕ್​ಗಳನ್ನು ನೀಡಲಾಗುತ್ತಿದೆ. ದೊಡ್ಮನೆಯಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಕೂಡ ಬಿಗಿಯಾಗುತ್ತಿದೆ. ಅಚ್ಚರಿ ಎಂದರೆ ಈ ವಾರ ಬಿಗ್​ ಬಾಸ್​ನಲ್ಲಿ ಯಾರೂ ಊಹಿಸಿರದ ಘಟನೆ ನಡೆದಿದೆ. ಇದರಿಂದಾಗಿ ದೊಡ್ಡ ಫೈಟ್​ ನಡೆಯುವುದು ಗ್ಯಾರಂಟಿ.

ಇಷ್ಟು ದಿನಗಳ ಕಾಲ ಬಿಗ್​ ಬಾಸ್​ ಮನೆಯಲ್ಲಿ ಯಾರು ಬೆಸ್ಟ್​ ಎಂದರೆ ಮಂಜು, ಪ್ರಶಾಂತ್​ ಸಂಬರಗಿ, ರಾಜೀವ್​, ಅರವಿಂದ್​ ಕೆಪಿ ಮುಂತಾದವರ ಹೆಸರು ಹೇಳಿಬರುತ್ತಿತ್ತು. ನಾಮಿನೇಷನ್​ ವಿಚಾರ ಬಂದಾಗ ಕೆಲವೇ ಸ್ಪರ್ಧಿಗಳು ಗುರಿಯಾಗುತ್ತಿದ್ದರು. ಆದರೆ ನಾಲ್ಕನೇ ವಾರದ ಆರಂಭದಲ್ಲೇ ಬಿಗ್​ ಬಾಸ್ ಒಂದು ಶಾಕ್​ ನೀಡಿದ್ದಾರೆ. ಈವರೆಗೂ ತಾವೇ ಮೇಲು ಎಂದು ಮೆರೆಯುತ್ತಿದ್ದವರಿಗೆ ಸ್ವಲ್ಪ ನಡುಕ ಹುಟ್ಟಿಸುವಂತಹ ರೀತಿಯಲ್ಲಿ ನಾಮಿನೇಷನ್​ ಆಗಿದೆ.

ಯಾರು ನಾಮಿನೇಟ್​ ಆಗುತ್ತಾರೆ ಎಂಬುದನ್ನು ಪ್ರತಿ ಸ್ಪರ್ಧಿಗಳ ಹೇಳಿಕೆ ಆಧಾರದ ಮೇಲೆ ಇಷ್ಟು ವಾರ ನಿರ್ಧರಿಸಲಾಗುತ್ತಿತ್ತು. ಆದರೆ ಈ ವಾರ ಬಿಗ್​ ಬಾಸ್​ ಅದಕ್ಕೆಲ್ಲ ಅವಕಾಶ ನೀಡಿಲ್ಲ. ಸದ್ಯ ಕ್ಯಾಪ್ಟನ್​ ಆಗಿರುವ ಅರವಿಂದ್​ ಕೆಪಿ ಅವರನ್ನು ಹೊರತುಪಡಿಸಿ ಮನೆಯಲ್ಲಿ ಇರುವ ಎಲ್ಲ 13 ಸರ್ಧಿಗಳನ್ನು ಬಿಗ್​ ಬಾಸ್​ ನೇರವಾಗಿ ನಾಮಿನೇಟ್​ ಮಾಡಿದ್ದಾರೆ. ಅದರಂತೆ ದಿವ್ಯಾ ಉರುಡುಗ, ಮಂಜು, ದಿವ್ಯಾ ಸುರೇಶ್​, ವಿಶ್ವನಾಥ್​, ಚಂದ್ರಕಲಾ, ರಘು, ಶಮಂತ್​, ಪ್ರಶಾಂತ್​ ಸಂಬರಗಿ, ಶಂಕರ್​ ಅಶ್ವತ್ಥ್​, ರಾಜೀವ್​, ವೈಷ್ಣವಿ, ಶುಭಾ ಪೂಂಜಾ ಹಾಗೂ ನಿಧಿ ಸುಬ್ಬಯ್ಯ ನಾಮಿನೇಟ್​ ಆಗಿದ್ದಾರೆ.

ಎಲ್ಲರೂ ನಾಮಿನೇಟ್​ ಆಗಿರುವುದರಿಂದ ತಮ್ಮ ಅಸ್ಥಿತ್ವಕ್ಕಾಗಿ ಹೋರಾಟ ನಡೆಸಬೇಕಾಗಿದೆ. ಹಾಗಾಗಿ ಈ ವಾರದ ಟಾಸ್ಕ್​ನಲ್ಲಿ ಎಲ್ಲರೂ ಮಾಡು ಇಲ್ಲವೆ ಮಡಿ ಎಂಬಂತೆ ಕಾದಾಡುವ ಸನ್ನಿವೇಶ ನಿರ್ಮಾಣ ಆಗಲಿದೆ. ಮನರಂಜನೆ ನೀಡುವಲ್ಲಿ ಹಿಂದೆ ಬಿದ್ದರೂ ಅಂಥ ಸ್ಪರ್ಧಿಗೆ ತೀವ್ರ ಹಿನ್ನಡೆ ಆಗಲಿದೆ. ಇನ್ನೂ ಆಟವನ್ನೇ ಶುರು ಮಾಡಿರದ ವೈಷ್ಣವಿ, ಶಮಂತ್​ ಮುಂತಾದವರಿಗೆ ಈ ವಾರ ಹೆಚ್ಚು ಚಾಲೆಂಜಿಂಗ್​ ಆಗಿದೆ.

ಹೀಗೆ 13 ಮಂದಿ ಒಟ್ಟಿಗೆ ನಾಮಿನೇಟ್​ ಆಗುತ್ತೇವೆ ಎಂದು ಯಾರೂ ಊಹಿಸಿರಲಿಲ್ಲ. ಅಲ್ಲದೆ, ವೀಕ್ಷಕರಿಗೂ ಕೂಡ ಇದು ಅಚ್ಚರಿ ಎನಿಸಿದೆ. ಮೊದಲ ವಾರ ಧನುಶ್ರೀ, ಎರಡನೇ ವಾರ ನಿರ್ಮಲಾ ಚೆನ್ನಪ್ಪ ಹಾಗೂ ಮೂರನೇ ವಾರ ಗೀತಾ ಭಾರತಿ ಭಟ್​ ಎಲಿಮಿನೇಟ್​ ಆದರು. ನಾಲ್ಕನೇ ವಾರ ಯಾರ ಅದೃಷ್ಟ ಕೈ ಕೊಡಲಿದೆ ಎಂಬ ಕೌತುಕ ಈಗ ನಿರ್ಮಾಣ ಆಗಿದೆ.

ಇದನ್ನೂ ಓದಿ: ಈ ಸಲ ಕಪ್​ ನಮ್ಮದೇ ಎಂದ ಬಿಗ್​ ಬಾಸ್​ ಸ್ಪರ್ಧಿಗೆ ಕಾದಿತ್ತು ಶಿಕ್ಷೆ!

ಮುಂದಿನ ಸೀಸನ್​ಗೆ ಬಿಗ್​ ಬಾಸ್​ ನಿರೂಪಕ ಚೇಂಜ್​; ಹೊಸ ನಟನ ಹುಡುಕಾಟದಲ್ಲಿ ವಾಹಿನಿ