Thalaivi Trailer: ಯಾರಿಗೂ ಹೆದರದ ಕಂಗನಾಗೆ ವೇದಿಕೆ ಮೇಲೆ ಕಣ್ಣೀರು ಹಾಕಿಸಿದ ‘ತಲೈವಿ’ ನಿರ್ದೇಶಕ ವಿಜಯ್​! ವಿಡಿಯೋ ವೈರಲ್​

Kangana Ranaut: ಕಂಗನಾ ರಣಾವತ್​ ಹುಟ್ಟುಹಬ್ಬದ ಪ್ರಯುಕ್ತ ಮಂಗಳವಾರ (ಮಾ.23) ‘ತಲೈವಿ’ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದೆ. ಟ್ರೇಲರ್​ ಲಾಂಚ್​ ಕಾರ್ಯಕ್ರಮದ ವೇದಿಕೆಯಲ್ಲಿ ಕಂಗನಾ ಗಳಗಳನೆ ಅತ್ತಿದ್ದಾರೆ. ಆ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

Thalaivi Trailer: ಯಾರಿಗೂ ಹೆದರದ ಕಂಗನಾಗೆ ವೇದಿಕೆ ಮೇಲೆ ಕಣ್ಣೀರು ಹಾಕಿಸಿದ ‘ತಲೈವಿ’ ನಿರ್ದೇಶಕ ವಿಜಯ್​! ವಿಡಿಯೋ ವೈರಲ್​
ಕಂಗನಾ ರಣಾವತ್​ - ಎ.ಎಲ್​. ವಿಜಯ್​
Follow us
ಮದನ್​ ಕುಮಾರ್​
|

Updated on: Mar 23, 2021 | 3:48 PM

ಕಂಗನಾ ರಣಾವತ್​ ಎಂದರೆ ಈಗಾಗಲೇ ಒಂದು ಇಮೇಜ್​ ನಿರ್ಮಾಣ ಆಗಿದೆ. ಅವರು ಯಾರಿಗೂ ಹೆದರುವವರಲ್ಲ. ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವಂತಹ ವ್ಯಕ್ತಿತ್ವ ಅವರದ್ದು. ಈಗಾಗಲೇ ಕಂಗನಾ ಅನೇಕ ಘಟಾನುಘಟಿಗಳನ್ನು ಎದುರು ಹಾಕಿಕೊಂಡಿದ್ದಾರೆ. ಆದರೆ ಅಂತ ಗಟ್ಟಿಗಿತ್ತಿಯನ್ನು ವೇದಿಕೆ ಮೇಲೆ ಅಳುವಂತೆ ಮಾಡಿದ್ದಾರೆ ನಿರ್ದೇಶಕ ಎ.ಎಲ್​. ವಿಜಯ್​! ಈ ಘಟನೆಗೆ ಸಾಕ್ಷಿ ಆಗಿದ್ದು ‘ತಲೈವಿ’ ಸಿನಿಮಾ ಟ್ರೇಲರ್​ ಲಾಂಚ್​ ಕಾರ್ಯಕ್ರಮ. ಮಂಗಳವಾರ (ಮಾ.23) ಕಂಗನಾ ರಣಾವತ್​ ಹುಟ್ಟುಹಬ್ಬ. ಅದರ ಪ್ರಯುಕ್ತ ‘ತಲೈವಿ’ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದೆ. ಇದು ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಯೋಪಿಕ್​. ಜಯಲಲಿತಾ ಪಾತ್ರಕ್ಕೆ ಕಂಗನಾ ಬಣ್ಣ ಹಚ್ಚಿದ್ದು, ಸಿನಿಪ್ರಿಯರಲ್ಲಿ ಸಿಕ್ಕಾಪಟ್ಟೆ ಹೈಪ್​ ಸೃಷ್ಟಿಸಿದ್ದಾರೆ. ಈ ಚಿತ್ರದ ಟ್ರೇಲರ್​ ಲಾಂಚ್​ ಕಾರ್ಯಕ್ರಮದ ವೇದಿಕೆಯಲ್ಲಿ ಕಂಗನಾ ಗಳಗಳನೆ ಅತ್ತಿದ್ದಾರೆ. ಆ ವಿಡಿಯೋ ಕೂಡ ವೈರಲ್​ ಆಗಿದೆ. 

ಚಿತ್ರರಂಗದಲ್ಲಿ ಮಹಿಳೆಯರಿಗೆ ಪುರುಷರ ರೀತಿ ಸ್ಥಾನಮಾನ ಸಿಗುವುದಿಲ್ಲ ಎಂಬುದನ್ನು ಕಂಗನಾ ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದಾರೆ. ಅಲ್ಲದೆ, ಮಹಿಳೆಯರನ್ನು ಎಲ್ಲ ಹಂತದಲ್ಲಿಯೂ ತುಳಿಯಲಾಗುತ್ತಿದೆ ಎಂಬುದು ಕಂಗನಾ ವಾದವಾಗಿತ್ತು. ಆದರೆ ‘ತಲೈವಿ’ ಸಿನಿಮಾದ ನಿರ್ದೇಶಕ ಎ.ಎಲ್​. ವಿಜಯ್​ ಅವರು ಕಂಗನಾಗೆ ಸಿಕ್ಕಾಪಟ್ಟೆ ಬೆಂಬಲ ನೀಡಿದ್ದಾರಂತೆ. ಅವರ ಈ ಸಪೋರ್ಟ್​ ನೆನಪಿಸಿಕೊಂಡಿರುವ ಕಂಗನಾ, ಟ್ರೇಲರ್​ ಲಾಂಚ್​ ವೇದಿಕೆಯಲ್ಲೇ ಎಮೋಷನಲ್​ ಆಗಿ ಕಣ್ಣೀರು ಹಾಕಿದ್ದಾರೆ,

ಈ ಸಂದರ್ಭದ ವಿಡಿಯೋವನ್ನು ಟ್ವಿಟರ್​ನಲ್ಲಿ ಕಂಗನಾ ಸ್ವತಃ ಶೇರ್​ ಮಾಡಿಕೊಂಡಿದ್ದಾರೆ. ‘ನನ್ನನ್ನು ನಾನು ಹುಲಿ ಎಂದು ಕರೆದುಕೊಳ್ಳುತ್ತೇನೆ. ಯಾಕೆಂದರೆ ನಾನು ಯಾವುಗಲೂ ಅಳುವುದಿಲ್ಲ. ನನ್ನನ್ನು ಅಳಿಸುವ ಅಧಿಕಾರವನ್ನು ನಾನು ಯಾರಿಗೂ ನೀಡುವುದಿಲ್ಲ. ನಾನು ಕೊನೇ ಬಾರಿ ಅತ್ತಿದ್ದು ಯಾವಾಗ ಎಂಬುದೇ ನನಗೆ ನೆನಪಿಲ್ಲ. ಆದರೆ ಇಂದು ಸಿಕ್ಕಾಪಟ್ಟೆ ಅತ್ತಿದ್ದೇನೆ’ ಎಂದು ಕಂಗನಾ ಬರೆದುಕೊಂಡಿದ್ದಾರೆ.

ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ‘ತಲೈವಿ’ ಹಿಂದಿ ಟ್ರೇಲರ್​ 20 ಲಕ್ಷಕ್ಕೂ ಅಧಿಕ ವ್ಯೂಸ್​ ಕಂಡಿದೆ. ತೆಲುಗು ಮತ್ತು ತಮಿಳಿನಲ್ಲಿಯೂ ಈ ಚಿತ್ರ ಮೂಡಿಬರುತ್ತಿದ್ದು, ಆ ಭಾಷೆಯ ಟ್ರೇಲರ್​ ಕೂಡ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಜಯಲಲಿತಾ ಅವರು ಸಿನಿಮಾ ನಟಿ ಆಗಿದ್ದಾಗಿನಿಂದ ರಾಜಕಾರಣಿಯಾಗಿ ಮೆರೆಯುವವರೆಗಿನ ಪ್ರಮುಖ ಘಟನೆಗಳ ಝಲಕ್​ ಅನ್ನು ಈ ಟ್ರೇಲರ್​ನಲ್ಲಿ ತೋರಿಸಲಾಗಿದೆ.

ಎಂ.ಜಿ.ಆರ್​. ಪಾತ್ರದಲ್ಲಿ ಅರವಿಂದ್​ ಸ್ವಾಮಿ ನಟಿಸಿದ್ದಾರೆ. ಕರುಣಾನಿಧಿ ಪಾತ್ರದಲ್ಲಿ ಪ್ರಕಾಶ್ ರಾಜ್​ ಬಣ್ಣ ಹಚ್ಚಿದ್ದಾರೆ. ಟ್ರೇಲರ್ ನೋಡಿದ ಎಲ್ಲರೂ ಕಂಗನಾ ನಟನೆಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಜಯಲಲಿತಾ ಪಾತ್ರಕ್ಕಾಗಿ ಅವರು 20 ಕೆಜಿ ದೇಹದ ತೂಕ ಹೆಚ್ಚಿಸಿಕೊಂಡು ಮತ್ತೆ ಸ್ಲಿಮ್​ ಆಗಿದ್ದರು. ಆ ಟ್ರಾನ್ಸ್​ಫಾರ್ಮೇಷನ್​ ಕೂಡ ಟ್ರೇಲರ್​ನಲ್ಲಿ ಕಾಣಿಸುತ್ತಿದೆ.

ಸೋಮವಾರವಷ್ಟೇ (ಮಾ.22) ರಾಷ್ಟ್ರ ಪ್ರಶಸ್ತಿ ಘೋಷಣೆ ಆಗಿದ್ದು, ಮಣಿಕರ್ಣಿಕಾ ಮತ್ತು ಪಂಗಾ ಸಿನಿಮಾಗಳಲ್ಲಿನ ನಟನೆಗಾಗಿ ಕಂಗನಾ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡರು. ಅದರ ಬೆನ್ನಲ್ಲೇ ತಲೈವಿ ಟ್ರೇಲರ್​ ಧೂಳೆಬ್ಬಿಸುತ್ತಿದೆ.

ಇದನ್ನೂ ಓದಿ: Kangana Ranaut: ಜಯಲಲಿತಾ ಪಾತ್ರಕ್ಕಾಗಿ 20 ಕೆಜಿ ತೂಕ ಹೆಚ್ಚಿಸಿಕೊಂಡ ಕಂಗನಾ! ಬದಲಾವಣೆ ಕಂಡು ಫ್ಯಾನ್ಸ್​​ ಫಿದಾ

ತಲೈವಿ ಟೀಸರ್‌ ನೋಡಿದ ಜನ ಕಂಗನಾಳ ಲುಕ್​ಗೆ ಟ್ರೋಲ್ ಮಾಡ್ತಿರೋದೇಕೆ?

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್