ಹೋಳಿ ಹಬ್ಬದ ನಿಮಿತ್ತ ವಿಶೇಷ ರೈಲು ಸಂಚಾರ; ದಕ್ಷಿಣ ಮಧ್ಯ ರೈಲ್ವೆಯಿಂದ 4 ಟ್ರೇನ್ಗಳ ವ್ಯವಸ್ಥೆ, ಇಲ್ಲಿದೆ ವೇಳಾಪಟ್ಟಿ
ದೇಶಾದ್ಯಂತ ಮಾರ್ಚ್ 28-29ರಂದು ಹೋಳಿ ಹಬ್ಬ ಆಚರಣೆ ನಡೆಯಲಿದ್ದು, ದೇಶದೆಲ್ಲೆಡೆ ಜನರು ಇದನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಹಾಗೇ, ಹಬ್ಬ ಸಮೀಪಿಸುತ್ತಿದ್ದಂತೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಜನರ ಸಂಚಾರವೂ ಹೆಚ್ಚಾಗಿರುತ್ತದೆ.
ಸಿಕಂದರಾಬಾದ್: ಹೋಳಿ ಹಬ್ಬದ ನಿಮಿತ್ತ ದಕ್ಷಿಣ ಮಧ್ಯ ರೈಲ್ವೆ ವಲಯ ನಾಲ್ಕು ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ. ಇದರ ಅನ್ವಯ, ಸಿಕಂದರಾಬಾದ್ ಮತ್ತು ಉತ್ತರಪ್ರದೇಶದ ಗೋರಖ್ಪುರ ನಡುವೆ 2 ರೈಲುಗಳು ಹಾಗೂ ಹೈದರಾಬಾದ್ ಮತ್ತು ಬಿಹಾರದ ರಕ್ಸೌಲ್ ನಡುವೆ 2 ವಿಶೇಷ ಟ್ರೇನ್ಗಳು ಸಂಚಾರ ಮಾಡಲಿವೆ.
ದೇಶಾದ್ಯಂತ ಮಾರ್ಚ್ 28-29ರಂದು ಹೋಳಿ ಹಬ್ಬ ಆಚರಣೆ ನಡೆಯಲಿದ್ದು, ದೇಶದೆಲ್ಲೆಡೆ ಜನರು ಇದನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಹಾಗೇ, ಹಬ್ಬ ಸಮೀಪಿಸುತ್ತಿದ್ದಂತೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಜನರ ಸಂಚಾರವೂ ಹೆಚ್ಚಾಗಿರುತ್ತದೆ. ಈ ಕಾರಣಕ್ಕಾಗಿ ದಕ್ಷಿಣ ಮಧ್ಯ ರೈಲ್ವೆ ವಲಯ ಹೆಚ್ಚುವರಿ ರೈಲುಗಳನ್ನು ಬಿಡಲು ನಿರ್ಧರಿಸಿದೆ.
ಹೀಗಿದೆ ಟ್ರೇನ್ ನಂಬರ್ ಮತ್ತು ವೇಳಾಪಟ್ಟಿ 07003 ನಂಬರ್ನ ಟ್ರೇನ್ ರಾತ್ರಿ 9.25ಕ್ಕೆ ಸಿಕಂದರಾಬಾದ್ನಿಂದ ಹೊರಟು ಮುಂಜಾನೆ 06.25ಕ್ಕೆ ಗೋರಖ್ಪುರ ತಲುಪುತ್ತದೆ. ಹಾಗೇ 07004 ನಂಬರ್ನ ರೈಲು ಪ್ರತಿದಿನ ಸಂಜೆ 5.25ಕ್ಕೆ ಗೋರಖ್ಪುರದಿಂದ ಹೊರಟು ಮರುದಿನ ಮುಂಜಾನೆ 4.10ಕ್ಕೆ ಸಿಕಂದರಾಬಾದ್ಗೆ ಬರುತ್ತದೆ.
ಹಾಗೇ, ಟ್ರೇನ್ ನಂಬರ್ 07040 ಪ್ರತಿದಿನ ಸಂಜೆ 9.40ಕ್ಕೆ ಹೈದರಾಬಾದ್ನಿಂದ ಹೊರಟು ಮರುದಿನ ಮುಂಜಾನೆ 4.50ಕ್ಕೆ ರಕ್ಸೌಲ್ ತಲುಪುತ್ತದೆ. ಹಾಗೇ ಇನ್ನೊಂದು ರೈಲು ಅಂದರೆ ಟ್ರೇನ್ ನಂಬರ್ 07039, ಪ್ರತಿದಿನ ಮುಂಜಾನೆ 3.25ಕ್ಕೆ ರಕ್ಸೌಲ್ನಿಂದ ಹೊರಟು, ರಾತ್ರಿ 10.15ರ ಹೊತ್ತಿಗೆ ಹೈದರಾಬಾದ್ ತಲುಪಲಿದೆ. ಈ ವಿಶೇಷ ರೈಲುಗಳಲ್ಲಿ ಪ್ರಯಾಣ ಮಾಡಲಿಚ್ಛಿಸುವ ಪ್ರಯಾಣಿಕರು ಮೊದಲೇ ಟಿಕೆಟ್ ಕಾಯ್ದಿರಿಸಬೇಕಾಗಿದೆ. ಇನ್ನು ಉತ್ತರ ರೈಲ್ವೆ ವಲಯ ಕೂಡ ವಿವಿಧ ಪ್ರದೇಶಗಳ ನಡುವೆ ವಿಶೇಷ ರೈಲು ಸಂಚಾರ ಪ್ರಾರಂಭಿಸಲು ನಿರ್ಧರಿಸಿದೆ.
ಇದನ್ನೂ ಓದಿ: ಯುವರತ್ನ ಸಿನಿಮಾದಲ್ಲಿ ನನ್ನ ಪಾತ್ರ ರಿವೀಲ್ ಮಾಡಬಾರ್ದು ಅಂತ ಪ್ರಾಮಿಸ್ ಮಾಡಿಸ್ಕೋಂಡಿದ್ದಾರೆ – ನಟಿ ಸೋನುಗೌಡ
Roberrt: ರಾಜ್ಯಾದ್ಯಂತ ಇನ್ಮೇಲೆ ಡಿ ಬಾಸ್ ಜಾತ್ರೆ! ಫ್ಯಾನ್ಸ್ಗೆ ಧನ್ಯವಾದ ಹೇಳಲು ದರ್ಶನ್ ದೊಡ್ಡ ನಿರ್ಧಾರ!