AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kerala Assembly Elections 2021: ಕೇರಳದ ಮಹಿಳಾ ಕಾಲೇಜು ವಿದ್ಯಾರ್ಥಿಗಳಿಗೆ ಜಪಾನ್​ನ ಸಮರ ಕಲೆ ಕಲಿಸಿದ ರಾಹುಲ್ ಗಾಂಧಿ

Rahul Gandhi teaches Aikido: ನೀವು ಕಡಿಮೆ ಶಕ್ತಿಶಾಲಿಗಳು ಎಂದು ಸಮಾಜ ನಿಮ್ಮಲ್ಲಿ ಹೇಳುತ್ತದೆ. ಅದನ್ನು ಕೇಳಬೇಡಿ ಎಂದು ಹೇಳಿದ ರಾಹುಲ್ ಗಾಂಧಿ, ನಿಮ್ಮ ಶಕ್ತಿಯನ್ನು ದುರುಪಯೋಗಪಡಿಸಿಕೊಳ್ಳಬೇಡಿ ಎಂದು ವಿದ್ಯರ್ಥಿಗಳಿಗೆ ಸಲಹೆ ನೀಡಿದ್ದಾರೆ

Kerala Assembly Elections 2021: ಕೇರಳದ ಮಹಿಳಾ ಕಾಲೇಜು ವಿದ್ಯಾರ್ಥಿಗಳಿಗೆ ಜಪಾನ್​ನ ಸಮರ ಕಲೆ ಕಲಿಸಿದ ರಾಹುಲ್ ಗಾಂಧಿ
ವಿದ್ಯಾರ್ಥಿಗಳಿಗೆ ಐಕಿಡೊ ಹೇಳಿಕೊಡುತ್ತಿರುವ ರಾಹುಲ್ ಗಾಂಧಿ
ರಶ್ಮಿ ಕಲ್ಲಕಟ್ಟ
|

Updated on:Mar 23, 2021 | 1:43 PM

Share

ಕೊಚ್ಚಿ: ಕೇರಳ ವಿಧಾನಸಭೆ ಚುನಾವಣೆಗೆ ಯುಡಿಎಫ್ ಪರ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಕೊಚ್ಚಿಯ ಸಂತ ತೆರೆಸಾ ಮಹಿಳಾ ಕಾಲೇಜಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳಿಗೆ ಜಪಾನ್ ನ ಸಮರ ಕಲೆ ಕಲಿಸಿದ್ದಾರೆ. ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ನಮಗೆ ಸ್ವಯಂ ರಕ್ಷಣೆ ವಿಧಾನಗಳನ್ನು ಹೇಳಿಕೊಡುತ್ತೀರಾ ಎಂದು ಕೇಳಿದಾಗ ರಾಹುಲ್ ಜಪಾನ್ ಸಮರ ಕಲೆ ‘ಐಕಿಡೊ’ ಹೇಳಿಕೊಟ್ಟಿದ್ದಾರೆ. ಸ್ವಯಂ ರಕ್ಷಣೆಗೆ ಐಕಿಡೊ ಯಾವ ರೀತಿ ಸಹಾಯ ಮಾಡುತ್ತದೆ ಎಂಬುದನ್ನು ತೋರಿಸಿಕೊಟ್ಟ ರಾಹುಲ್, ಇದು ಜೀವನದ ಸೂತ್ರ. ನಿಮ್ಮೊಳಗೆ ಅಪಾರ ಶಕ್ತಿ ಇದೆ, ಅದನ್ನು ನೀವು ಸರಿಯಾದ ರೀತಿಯಲ್ಲಿ ಬಳಸಬೇಕು. ನೀವು ಅದನ್ನು ಸರಿಯಾದ ರೀತಿಯಲ್ಲಿ ಬಳಸದೇ ಇದ್ದರೆ ನೀವು ದುರ್ಬಲರಾಗುತ್ತೀರಿ, ನೀವು ಗೊಂದಲಗೊಳಗಾಗುತ್ತೀರಿ, ನಿಮ್ಮ ಶಕ್ತಿ ವ್ಯರ್ಥವಾಗುತ್ತದೆ. ನೀವು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ನೀವು ಸರಿಯಾದ ಸ್ಥಾನದಲ್ಲಿದ್ದರೆ ನಿಮ್ಮನ್ನು ಯಾರಿಗೂ ಅಲುಗಾಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಮಹಿಳೆಯರು ಪುರುಷರಿಗಿಂತ ಹೆಚ್ಚು ಶಕ್ತಿಶಾಲಿಗಳಾಗಿರುತ್ತಾರೆ, ಆದರೆ ಅವರ ಶಕ್ತಿ ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳದ ಕಾರಣ ಅವರು ಮೋಸ ಹೋಗುತ್ತಿರುತ್ತಾರೆ ಎಂದಿದ್ದಾರೆ ರಾಹುಲ್.

ಸಮಾಜ ನಿಮ್ಮನ್ನು ತಳ್ಳುತ್ತದೆ. ಭಾರತದಲ್ಲಿನ ಸಮಾಜ ನಿಮ್ಮ ಜತೆ ಕೆಟ್ಟದಾಗಿ ವರ್ತಿಸುತ್ತದೆ. ಪ್ರತಿ ದಿನ ನಿಮ್ಮನ್ನು ಸಮಾಜ ಅವಮಾನಿಸುತ್ತದೆ. ನೀವು ಏನು ಮಾಡಬೇಕು ಎಂದು ಬಯಸುತ್ತಿರೋ ಅದನ್ನು ಮಾಡಲು ಸಮಾಜ ಬಿಡುವುದಿಲ್ಲ. ಹಾಗಾಗಿ ನೀವು ನಿಮ್ಮೊಳಗೆ ಗಟ್ಟಿಯಾಗಬೇಕಿದೆ. ನಿಮ್ಮನ್ನು ಸಮಾಜ ಯಾವ ರೀತಿ ತಳ್ಳುತ್ತಿದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕಿದೆ. ನಿಮಗೆ ನೋವುಂಟು ಮಾಡುವ ಶಕ್ತಿಯ ಬಗ್ಗೆ ಅರಿಯಿರಿ, ಆಮೇಲೆ ನಿಮ್ಮ ನಿಲುವನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಹೇಳಿದ್ದಾರೆ. ಪುರುಷ ಮತ್ತು ಮಹಿಳೆಯರು ಸರಿಸಮಾನರು ಎಂದು ವಿದ್ಯಾರ್ಥಿನಿಯೊಬ್ಬರು ಹೇಳಿದಾಗ ಇದನ್ನು ನಾನು ಒಪ್ಪಲಾರೆ ಎಂದಿದ್ದಾರೆ ರಾಹುಲ್.

ನೀವು ಕಡಿಮೆ ಶಕ್ತಿಶಾಲಿಗಳು ಎಂದು ಸಮಾಜ ನಿಮ್ಮಲ್ಲಿ ಹೇಳುತ್ತದೆ. ಅದನ್ನು ಕೇಳಬೇಡಿ ಎಂದು ಹೇಳಿದ ರಾಹುಲ್, ನಿಮ್ಮ ಶಕ್ತಿಯನ್ನು ದುರುಪಯೋಗಪಡಿಸಿಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ. ನೀವು ಹೆಚ್ಚು ಶಕ್ತಿಶಾಲಿಗಳು ಎಂದು ನಿಮಗೆ ಅರಿವಾದ ಕೂಡಲೇ ಅದನ್ನು ದುರ್ಬಳಕೆ ಮಾಡುವ ಪ್ರವೃತ್ತಿಯೂ ಬರುತ್ತದೆ. ಆದರೆ ಯಾವತ್ತೂ ನಿಮ್ಮ ಶಕ್ತಿಯನ್ನು ದುರ್ಬಳಕೆ ಮಾಡಿಕೊಳ್ಳಬೇಡಿ ಎಂದು ರಾಹುಲ್ ಹೇಳಿದ್ದಾರೆ.

ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್, ‘ದೇಶದ ಆರ್ಥಿಕತೆ ಕುಸಿಯಲು ಕೇಂದ್ರ ಸರ್ಕಾರದ ದುರಾಡಳಿತವೇ ಕಾರಣ’ ಎಂದು ದೂರಿದರು. ಆಡಳಿತ ನಿರ್ವಹಣೆಯಲ್ಲಿ ದೊಡ್ಡಮಟ್ಟದ ತಪ್ಪುಗಳು ಆಗಿರುವುದರಿಂದ ಆರ್ಥಿಕ ಸಮಸ್ಯೆಗಳು ಇನ್ನಷ್ಟು ದಿನ ಮುಂದುವರಿಯಲಿದೆ. ಜನರ ಕೈಗೆ ಹಣ ಸಿಗುವಂತೆ ಮಾಡಿದರೆ ಮಾತ್ರ ಈ ಸಂಕಷ್ಟದಿಂದ ನಾವು ಹೊರಬರಲು ಸಾಧ್ಯ. ಆದರೆ ಸರ್ಕಾರ ಈ ಬಗ್ಗೆ ಯಾರ ಸಲಹೆಗಳನ್ನೂ ಕಿವಿಮೇಲೆ ಹಾಕಿಕೊಳ್ಳುತ್ತಿಲ್ಲ. ಉತ್ಪಾದನೆ ಹೆಚ್ಚಿಸಿ ಎಂದೇ ಹೇಳುತ್ತಿದೆ’ ಎಂದು ವಿಶ್ಲೇಷಿಸಿದರು.

‘ಆರ್ಥಿಕತೆಗೆ ಪುನಶ್ಚೇತನ ನೀಡಲು ಬಳಕೆ ಹೆಚ್ಚಿಸುವುದು ಉತ್ತಮ ದಾರಿ. ಆದರೆ ಅದು ಸಾಧ್ಯವಾಗಲು ಜನರ ಕೈಗೆ ಹಣ ಸಿಗಬೇಕು. ಕೈಲಿ ಹಣ ಇದ್ದರೆ ಜನರು ವಸ್ತುಗಳನ್ನು ಖರೀದಿಸಲು, ಬಳಸಲು ಆರಂಭಿಸುತ್ತಾರೆ. ಆರ್ಥಿಕತೆಯ ಚಕ್ರ ತಿರುಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ತಿಳಿಸಿದರು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಧಾರಣೆ ಕುಸಿದರೂ ಭಾರತದಲ್ಲಿ ತೈಲೋತ್ಪನ್ನಗಳ ಬೆಲೆ ಹೆಚ್ಚಾಗುತ್ತಿದೆ. ನೋಟು ಅಮಾನ್ಯೀಕರಣ, ಜಿಎಸ್​ಟಿ ಕಾರಣದಿಂದ ಆರ್ಥಿಕತೆಗೆ ಸಾಕಷ್ಟು ಹಾನಿಯಾಗಿದೆ. ಕೋವಿಡ್ ಪಿಡುಗು ಶುರುವಾಗುವ ಮೊದಲೇ ಭಾರತದ ಆರ್ಥಿಕತೆ ಸಂಕಷ್ಟದಲ್ಲಿತ್ತು, ಕೋವಿಡ್-19 ಬಂದ ನಂತರ ಆರ್ಥಿಕತೆ ಸಂಪೂರ್ಣ ಕುಸಿಯಿತು ಎಂದು ಹೇಳಿದರು.

 ಇದನ್ನೂ ಓದಿ: ಆಡಳಿತ ನಡೆಸಲು ದುಡ್ಡಿಲ್ಲದ ಸರ್ಕಾರ ಜನರ ಕಿಸೆಯಿಂದ ಹಣ ಕಿತ್ತುಕೊಳ್ಳುತ್ತಿದೆ: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಟೀಕೆ 

ಸಿಕ್ಸ್​​ ಪ್ಯಾಕ್​​ನಲ್ಲಿ ಮಿಂಚಿದ ರಾಹುಲ್​ ಗಾಂಧಿ; ಫಿಟ್​ನೆಸ್​ ಟಿಪ್ಸ್​ ಕೇಳಿದ ಸೆಲೆಬ್ರಿಟಿಗಳು

Published On - 1:39 pm, Tue, 23 March 21

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?