ಸಿಕ್ಸ್​​ ಪ್ಯಾಕ್​​ನಲ್ಲಿ ಮಿಂಚಿದ ರಾಹುಲ್​ ಗಾಂಧಿ; ಫಿಟ್​ನೆಸ್​ ಟಿಪ್ಸ್​ ಕೇಳಿದ ಸೆಲೆಬ್ರಿಟಿಗಳು

ಸಿಕ್ಸ್​​ ಪ್ಯಾಕ್​​ನಲ್ಲಿ ಮಿಂಚಿದ ರಾಹುಲ್​ ಗಾಂಧಿ; ಫಿಟ್​ನೆಸ್​ ಟಿಪ್ಸ್​ ಕೇಳಿದ ಸೆಲೆಬ್ರಿಟಿಗಳು

ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಘೋಷಿಸಿದ ಲಾಕ್​ಡೌನ್​ನಿಂದ ಇಡೀ ದೇಶ ಸ್ತಬ್ಧವಾಗಿತ್ತು. ಹೀಗಾಗಿ, ಜಿಮ್​ಗಳು ಬಂದ್​ ಆಗಿದ್ದವು. ಆದರೆ, ಈ ಸಂದರ್ಭದಲ್ಲೂ ರಾಹುಲ್​ ಗಾಂಧಿ ಜಿಮ್​ ಬಿಟ್ಟಿಲ್ಲ.

Rajesh Duggumane

|

Feb 27, 2021 | 8:20 PM

ಭಾರತದ ಬಹುತೇಕ ರಾಜಕಾರಣಿಗಳಿಗೆ ಫಿಟ್​ನೆಸ್​ ಕೊರತೆ ಇದೆ ಎಂಬುದು ಜನಸಾಮಾನ್ಯರ ಅಭಿಪ್ರಾಯ. ಇದೇ ಕಾರಣಕ್ಕೆ, ರಾಜಕಾರಣಿಗಳು ಎಂದಾಕ್ಷಣ ಜನರಿಗೆ ನೆನಪಿಗೆ ಬರೋದು ದೊಡ್ಡದಾದ ಹೊಟ್ಟೆ, ದಢೂತಿ ದೇಹ. ಆದರೆ, ದೇಶದ ಕೆಲವೇ ಕೆಲವು ರಾಜಕಾರಣಿಗಳು ಫಿಟ್​ ಆಗಿದ್ದಾರೆ. ನಿತ್ಯ ಜಿಮ್​ನಲ್ಲಿ ಬೆವರು ಹರಿಸುತ್ತಾರೆ. ಈ ಸಾಲಿನಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕೂಡ ಇದ್ದಾರೆ. ಅವರ ಸಿಕ್ಸ್​ಪ್ಯಾಕ್​ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಘೋಷಿಸಿದ ಲಾಕ್​ಡೌನ್​ನಿಂದ ಇಡೀ ದೇಶ ಸ್ತಬ್ಧವಾಗಿತ್ತು. ಹೀಗಾಗಿ, ಜಿಮ್​ಗಳು ಬಂದ್​ ಆಗಿದ್ದವು. ಇದೇ ಕಾರಣಕ್ಕೆ ಅನೇಕರು ಫಿಟ್​ನೆಸ್​ ಕಳೆದುಕೊಂಡಿದ್ದರು. ಆದರೆ, ಈ ಸಂದರ್ಭದಲ್ಲೂ ರಾಹುಲ್​ ಗಾಂಧಿ ಜಿಮ್​ ಬಿಟ್ಟಿಲ್ಲ. ಮನೆಯಲ್ಲೇ ಅವರು ಜಿಮ್​ ಮಾಡಿದ್ದಾರೆ. ಇತ್ತೀಚೆಗೆ ವೈರಲ್​ ಆದ ಫೋಟೋ ಇದಕ್ಕೆ ಸಾಕ್ಷಿ.

ಇತ್ತೀಚೆಗೆ ರಾಹುಲ್​ ಗಾಂಧಿ ಕೇರಳಕ್ಕೆ ತೆರಳಿದ್ದರು. ಈ ವೇಳೆ ಅವರು ಸಮುದ್ರಕ್ಕೆ ತೆರಳಿ ಮೀನುಗಾರರೊಂದಿಗೆ ಈಜಿದ್ದಾರೆ. ಈ ವೇಳೆ ಅವರ ಆ್ಯಬ್ಸ್​ ಫೋಟೋ ವೈರಲ್​ ಆಗಿದೆ. ಈ ಫೋಟೋಗೆ ಅನೇಕರು ಕಮೆಂಟ್​ ಮಾಡಿದ್ದು, ಫಿಟ್​ನೆಸ್​ ಟಿಪ್ಸ್​ ಕೇಳಿದ್ದಾರೆ.

ಇದನ್ನೂ ಓದಿ: ರಾಹುಲ್​ ಗಾಂಧಿ ಮತ್ತೆ ಕಾಂಗ್ರೆಸ್​ ಅಧ್ಯಕ್ಷ ಸ್ಥಾನ ಅಲಂಕರಿಸಲಿ: ಠರಾವು ಅಂಗೀಕರಿಸಿದ ದೆಹಲಿ ಕಾಂಗ್ರೆಸ್​ ಘಟಕ

Follow us on

Related Stories

Most Read Stories

Click on your DTH Provider to Add TV9 Kannada