AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾರ್ಮುಜ್ ಜಲಸಂಧಿಯಲ್ಲಿ ಆಯಿಲ್ ಟ್ಯಾಂಕರ್ ಮೇಲೆ ಇರಾನ್ ದಾಳಿ; ತೈಲ ಹಡಗಿನಲ್ಲಿದ್ದರು 15 ಮಂದಿ ಭಾರತೀಯರು

Oil tanker with 15 Indian crew members attacked at Strait of Hormuz: ಇರಾನ್ ದಾಳಿಯ ಅಪಾಯ ಇದ್ದಾಗ್ಯೂ ಹಾರ್ಮುಜ್ ಜಲಸಂಧಿಯಲ್ಲಿ ಸಾಗಿ ಹೋಗುತ್ತಿದ್ದ ತೈಲ ಟ್ಯಾಂಕರ್ ಮೇಲೆ ದಾಳಿಯಾಗಿದೆ. ಪಲಾವ್ ದೇಶಕ್ಕೆ ಸೇರಿದ ಈ ಆಯಿಲ್ ಟ್ಯಾಂಕರ್​ನಲ್ಲಿ 20 ಮಂದಿ ಸಿಬ್ಬಂದಿ ಇದ್ದು, ಅವರಲ್ಲಿ 15 ಭಾರತೀಯರು ಹಾಗೂ 5 ಇರಾನೀಯರಿದ್ದಾರೆ. ಓಮನ್ ಪಡೆಗಳು ಈ ಸಿಬ್ಬಂದಿಯನ್ನು ರಕ್ಷಿಸಿದ್ದಾರೆ.

ಹಾರ್ಮುಜ್ ಜಲಸಂಧಿಯಲ್ಲಿ ಆಯಿಲ್ ಟ್ಯಾಂಕರ್ ಮೇಲೆ ಇರಾನ್ ದಾಳಿ; ತೈಲ ಹಡಗಿನಲ್ಲಿದ್ದರು 15 ಮಂದಿ ಭಾರತೀಯರು
ಹಾರ್ಮುಜ್ ಜಲಸಂಧಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 01, 2026 | 5:41 PM

Share

ಮಸ್ಕಟ್, ಮಾರ್ಚ್ 1: ಓಮನ್​ನ ಡುಕಮ್ ಬಂದರಿನ (Duqm Port) ಮೇಲೆ ಇರಾನ್​ನ ಡ್ರೋನ್ ದಾಳಿ ನಡೆದ ಬೆನ್ನಲ್ಲೇ ಹಾರ್ಮುಜ್ ಜಲಸಂಧಿಯಲ್ಲಿ (Hormuz Strait) ಸಾಗಿ ಹೋಗುತ್ತಿದ್ದ ತೈಲ ಹಡಗೊಂದರ ಮೇಲೆ ದಾಳಿಯಾದ ಘಟನೆ ವರದಿಯಾಗಿದೆ. ಆಗ್ನೇಯ ಏಷ್ಯನ್ ದೇಶವಾದ ಪಲಾವ್​ಗೆ ಸೇರಿದ ಆಯಿಲ್ ಟ್ಯಾಂಕರ್ ಓಮನ್​ ಮುಸಂದಮ್ ಬಳಿ ಕಿರಿದಾದ ಸಮುದ್ರ ಮಾರ್ಗದಲ್ಲಿ ಸಾಗುತ್ತಿದ್ದಾಗ ಈ ದಾಳಿಯಾಗಿದೆ. ಆದರೆ, ಅದರ ಮೇಲೆ ಇರಾನ್ ದಾಳಿ ಮಾಡಿದ್ದಾ ಎಂಬುದು ಖಚಿತವಿಲ್ಲ.

ಪಲಾವ್ ಬಾವುಟವಿದ್ದ ಮತ್ತು ಸ್ಕೈಲೈಟ್ ಹೆಸರಿನ ಈ ಆಯಿಲ್ ಟ್ಯಾಂಕರ್​ನಲ್ಲಿ 20 ಮಂದಿ ಸಿಬ್ಬಂದಿ ಇದ್ದು, ಅವರಲ್ಲಿ 15 ಮಂದಿ ಭಾರತೀಯರೇ ಇದ್ದಾರೆ. ಇನ್ನೈದು ಮಂದಿ ಇರಾನೀಯರೇ ಆಗಿದ್ದಾರೆ. ಮುಸನ್​ಡಮ್​ನ ಖಸಬ್ ಪೋರ್ಟ್​ನಿಂದ ಐದು ನಾಟಿಕಲ್ ಮೈಲಿಯ ದೂರದಲ್ಲಿ ಈ ದಾಳಿಯಾಗಿದ್ದು, ಓಮನ್ ಪಡೆಗಳು ಕೂಡಲೇ ಆ ಹಡಗು ಹಾಗೂ ಸಿಬ್ಬಂದಿಯನ್ನು ರಕ್ಷಣೆ ಮಾಡಿದ್ದಾರೆ. ಸಿಬ್ಬಂದಿ ಪೈಕಿ ನಾಲ್ವರಿಗೆ ವಿವಿಧ ತೀವ್ರತೆಯ ಗಾಯಗಳಾಗಿರುವುದು ಗೊತ್ತಾಗಿದೆ. ಅವರಿಗೆ ಚಿಕಿತ್ಸೆ ಕೊಡಲಾಗುತ್ತಿದೆ.

ಇದನ್ನೂ ಓದಿ: ಆಯತುಲ್ಲಾ ಖಮೇನಿ ಮೇಲೆ ದಾಳಿಗೆ ಶನಿವಾರ ಬೆಳಗಿನ ಸಮಯ ಆರಿಸಿದ್ದು ಯಾಕೆ? ಬೇರೆ ಇದ್ದ ಪ್ಲಾನ್ ಬದಲಾಗಿದ್ದು ಯಾಕೆ?

ಕುತೂಹಲ ಎಂದರೆ, ಇರಾನ್ ಮತ್ತು ಅಮೆರಿಕದ ನಡುವೆ ಚಕಮಕಿ ಶುರುವಾದ ಬಳಿಕ ಓಮನ್ ಬಳಿ ದಾಳಿಯಾಗಿದ್ದು ಇದೇ ಮೊದಲು. ಇತರ ಗಲ್ಫ್ ರಾಷ್ಟ್ರಗಳಾದ ಯುಎಇ, ಸೌದಿ ಅರೇಬಿಯಾ, ಕತಾರ್, ಕುವೇತ್ ಮೇಲೆ ಇರಾನ್ ಪ್ರತಿದಾಳಿ ನಡೆಸುತ್ತಾ ಬಂದಿದೆಯಾದರೂ ಓಮನ್ ಅನ್ನು ಗುರಿ ಮಾಡಿದ್ದು ಇದೇ ಮೊದಲು. ಆದರೆ, ಓಮನ್​ನ ಮುಖ್ಯ ಭಾಗದ ಮೇಲೆ ಯಾವುದೇ ದಾಳಿಯಾಗಿಲ್ಲ.

ಹಾರ್ಮುಜ್ ಜಲಸಂಧಿ ಅಥವಾ ಸಮುದ್ರ ಮಾರ್ಗ ಬಹಳ ಕಿರಿದಾಗಿರುವ ಹಾದಿ. ಪರ್ಷಿಯಲ್ ಕೊಲ್ಲಿಯಿಂದ ಆರಂಭವಾಗಿ ಓಮನ್ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರವನ್ನು ಇದು ಹಾದು ಹೋಗುತ್ತದೆ. ಇದು ಪ್ರಮುಖ ತೈಲ ಹಡಗುಗಳ ಸಾಗಣೆ ಮಾರ್ಗವಾಗಿದೆ. ಬಹಳ ಕಿರಿದಾದ್ದರಿಂದ ಸೂಕ್ಷ್ಮವೆಂದೂ ಪರಿಗಣಿಸಲಾಗಿದೆ.

ಇದನ್ನೂ ಓದಿ: ಇರಾನ್-ಅಮೆರಿಕ ಯುದ್ಧ; ಚಿನ್ನದ ಬೆಲೆ ಎಷ್ಟು ಏರಬಹುದು? ನಿಫ್ಟಿ, ಸೆನ್ಸೆಕ್ಸ್ ಕುಸಿತ ಕಾಣುತ್ವಾ?

ಜಗತ್ತಿನ ಐದನೇ ಒಂದು ಭಾಗದ ತೈಲ ಪೂರೈಕೆಗೆ ಬೇಕಾಗುವ ಸರಕು ಹಾರ್ಮುಜ್ ಸ್ಟ್ರೇಟ್ ಮೂಲಕವೇ ಸಾಗುತ್ತದೆ. ಹೀಗಾಗಿ, ಬಹಳ ಮಹತ್ವದ ಜಲಸಂಧಿ ಇದು. ಈ ಜಲಸಂಧಿಯ ಹೆಚ್ಚಿನ ನಿಯಂತ್ರಣವು ಇರಾನ್ ಮತ್ತು ಓಮನ್​ಗೆ ಇದೆ. ಯುಎಇ ಕೂಡ ಇದೇ ಜಲಸಂಧಿಯ ಒಂದು ಬದಿಯಲ್ಲಿ ಇದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು
ಮಾ.03 ಚಂದ್ರಗ್ರಹಣ; 15ನಿಮಿಷಗಳ ಕಾಲ ಗೋಚರಿಸುವ ಗ್ರಹಣದ ಪ್ರಭಾವ ಹೇಗಿರಲಿದೆ?
ಮಾ.03 ಚಂದ್ರಗ್ರಹಣ; 15ನಿಮಿಷಗಳ ಕಾಲ ಗೋಚರಿಸುವ ಗ್ರಹಣದ ಪ್ರಭಾವ ಹೇಗಿರಲಿದೆ?
ಡಿಸಿಎಂ ಡಿಕೆ ಶಿವಕುಮಾರ್ ಮನೆಗೆ ಬಂದವು 3 ಹೊಸ ಎಲೆಕ್ಟ್ರಿಕ್ ಕಾರು!
ಡಿಸಿಎಂ ಡಿಕೆ ಶಿವಕುಮಾರ್ ಮನೆಗೆ ಬಂದವು 3 ಹೊಸ ಎಲೆಕ್ಟ್ರಿಕ್ ಕಾರು!
ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ದಾಮೋದರ್ ದಾಸ್ ಮೋದಿ ಪುತ್ತೂರಿಗೆ ಭೇಟಿ
ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ದಾಮೋದರ್ ದಾಸ್ ಮೋದಿ ಪುತ್ತೂರಿಗೆ ಭೇಟಿ
ಗ್ರಹಣ ಕಾಲದ ಬಗ್ಗೆ ಅರ್ಚಕ ಸೋಮಸುಂದರ್ ದೀಕ್ಷಿತ್ ಹೇಳಿದ್ದೇನು?
ಗ್ರಹಣ ಕಾಲದ ಬಗ್ಗೆ ಅರ್ಚಕ ಸೋಮಸುಂದರ್ ದೀಕ್ಷಿತ್ ಹೇಳಿದ್ದೇನು?
ಮಹಾರಾಷ್ಟ್ರದ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ, 15 ಮಂದಿ ಸಾವು
ಮಹಾರಾಷ್ಟ್ರದ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ, 15 ಮಂದಿ ಸಾವು