AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

185 ರನ್‌ಗಳಿಂದ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡಿದ ಆಸ್ಟ್ರೇಲಿಯಾ; ಹೀಲಿಗೆ ಸ್ಮರಣೀಯ ವಿದಾಯ

India vs Australia ODI series: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತೀಯ ಮಹಿಳಾ ತಂಡ 3-0 ಅಂತರದಿಂದ ಹೀನಾಯವಾಗಿ ಸೋತಿದೆ. ವಿಶ್ವ ಚಾಂಪಿಯನ್ ತಂಡವು ಆಸ್ಟ್ರೇಲಿಯಾದ ಕ್ಲೀನ್ ಸ್ವೀಪ್‌ಗೆ ಬಲಿಯಾಯಿತು. ನಾಯಕಿ ಅಲಿಸಾ ಹೀಲಿ ತಮ್ಮ ವಿದಾಯ ಪಂದ್ಯದಲ್ಲಿ ಅಬ್ಬರದ ಶತಕ ಬಾರಿಸಿ ತಂಡಕ್ಕೆ ಗೆಲುವು ತಂದಿತ್ತರು. ಭಾರತದ ಬ್ಯಾಟಿಂಗ್ ವೈಫಲ್ಯ ಮತ್ತೊಮ್ಮೆ ಎದ್ದು ಕಾಣಿಸಿತು, ಬೃಹತ್ ಗುರಿ ಬೆನ್ನಟ್ಟುವಲ್ಲಿ ವಿಫಲವಾಯಿತು.

185 ರನ್‌ಗಳಿಂದ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡಿದ ಆಸ್ಟ್ರೇಲಿಯಾ; ಹೀಲಿಗೆ ಸ್ಮರಣೀಯ ವಿದಾಯ
Ind W Vs Aus W
ಪೃಥ್ವಿಶಂಕರ
|

Updated on:Mar 01, 2026 | 6:09 PM

Share

ಆಸ್ಟ್ರೇಲಿಯಾದಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ವಿಶ್ವ ಚಾಂಪಿಯನ್ ಭಾರತೀಯ ಮಹಿಳಾ ತಂಡ (India Women vs Australia Women) ಹೀನಾಯವಾಗಿ ಸೋತಿದೆ. ಇಡೀ ಸರಣಿಯಲ್ಲಿ ಪಾರುಪತ್ಯ ಸಾಧಿಸಿದ ಆತಿಥೇಯ ಆಸ್ಟ್ರೇಲಿಯಾ, ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ. ಮಾರ್ಚ್ 1 ರ ಭಾನುವಾರ ಹೋಬಾರ್ಟ್‌ನಲ್ಲಿ ನಡೆದ ಸರಣಿಯ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 409 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಕೇವಲ 224 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಪಂದ್ಯವನ್ನು 185 ರನ್‌ಗಳ ಬೃಹತ್ ಅಂತರದಿಂದ ಸೋತಿತು. ಈ ಗೆಲುವಿನೊಂದಿಗೆ, ಆಸ್ಟ್ರೇಲಿಯಾದ ನಾಯಕಿ ಮತ್ತು ವಿಕೆಟ್‌ಕೀಪರ್-ಬ್ಯಾಟರ್ ಅಲಿಸಾ ಹೀಲಿ (Alyssa Healy) ತಮ್ಮ ಏಕದಿನ ವೃತ್ತಿಜೀವನಕ್ಕೆ ವಿದಾಯ ಹೇಳಿದರು.

ಹೀಲಿ-ಮೂನಿ ಸ್ಫೋಟಕ ಶತಕ

ಸರಣಿ ಆರಂಭವಾಗುವ ಮೊದಲೇ, ಅಲಿಸಾ ಹೀಲಿ ಇದು ತಮ್ಮ ಕೊನೆಯ ಸರಣಿ ಎಂದು ಘೋಷಿಸಿದ್ದರು. ಅದರಂತೆ ತಮ್ಮ ವೃತ್ತಿಜೀವನದ ಕೊನೆಯ ಪಂದ್ಯದಲ್ಲಿ ಸಂಚಲನ ಮೂಡಿಸಿದ ಹೀಲಿ ತಮ್ಮ ತಂಡಕ್ಕೆ ತ್ವರಿತ ಆರಂಭವನ್ನು ನೀಡಿದರು. ಹೀಲಿ ಅಬ್ಬರದ ಪರಿಣಾಮದಿಂದಾಗಿ ಆಸೀಸ್ ತಂಡ 16 ಓವರ್‌ಗಳಲ್ಲಿ 100 ರನ್‌ಗಳ ಗಡಿ ದಾಟಿತು. ಇದೇ ವೇಳೆ 49 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಹೀಲಿ, 79 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು. ಶತಕ ಪೂರೈಸಿದ ಬಳಿಕ ಮತ್ತಷ್ಟು ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ಹೀಲಿ ಕೇವಲ 98 ಎಸೆತಗಳಲ್ಲಿ 158 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಹೀಲಿ ಅವರ ಈ ಇನ್ನಿಂಗ್ಸ್‌ನಲ್ಲಿ 27 ಬೌಂಡರಿಗಳು ಮತ್ತು ಎರಡು ಸಿಕ್ಸರ್‌ಗಳು ಸೇರಿದ್ದವು.

ಹೀಲಿ ಜೊತೆಗೆ ಬೆತ್ ಮೂನಿ ಕೂಡ ಅದ್ಭುತ ಶತಕ ಬಾರಿಸಿ ತಂಡವನ್ನು 400 ರನ್​ಗಳ ಗಡಿ ದಾಟಿಸಿದರು. ಮೂನಿ 106 ರನ್ ಗಳಿಸಿ ಅಜೇಯರಾಗಿ ಉಳಿದರೆ, ಜಾರ್ಜಿಯಾ ವಾಲ್ ಕೂಡ 62 ರನ್​ಗಳ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ, ನಿಕೋಲಾ ಕ್ಯಾರಿ ಕೇವಲ 15 ಎಸೆತಗಳಲ್ಲಿ 34 ರನ್ ಬಾರಿಸಿದರು. ಭಾರತದ ಪರ ಸ್ನೇಹ್ ರಾಣಾ 10 ಓವರ್‌ಗಳಲ್ಲಿ 66 ರನ್‌ ನೀಡಿ 2 ವಿಕೆಟ್‌ಗಳನ್ನು ಕಬಳಿಸಿದರು.

IND vs AUS: ಟಿ20 ಸರಣಿ ಗೆದ್ದು, ಏಕದಿನ ಸರಣಿ ಸೋತ ಟೀಂ ಇಂಡಿಯಾ

ಸತತ 3ನೇ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ

ಈ ಗುರಿ ಭಾರತ ತಂಡಕ್ಕೆ ಎಂದಿಗೂ ಸುಲಭವಾಗಿರಲಿಲ್ಲ, ಆದರೆ ಈ ಗುರಿಯನ್ನು ಬೆನ್ನಟ್ಟುವಲ್ಲಿ ಅವರಿಗಿದ್ದ ಯಾವುದೇ ಭರವಸೆ ಎರಡನೇ ಓವರ್‌ನಲ್ಲಿ ಸ್ಮೃತಿ ಮಂಧಾನ ಖಾತೆ ತೆರೆಯದೆಯೇ ಔಟಾದಾಗ ಮಾಯವಾಯಿತು. ನಂತರ ಪ್ರತೀಕಾ ರಾವಲ್ ಮತ್ತು ಜೆಮಿಮಾ ರೊಡ್ರಿಗಸ್ ಆಕ್ರಮಣಕಾರಿ ಜೊತೆಯಾಟವನ್ನು ರೂಪಿಸಿದರು. ಆದರೆ ಪ್ರತೀಕಾ ಔಟಾದ ನಂತರ ತಂಡದ ವಿಕೆಟ್‌ಗಳು ನಿಯಮಿತ ಅಂತರದಲ್ಲಿ ಪತನಗೊಂಡವು. ಅಂತಿಮವಾಗಿ ಹಾಲಿ ಏಕದಿನ ಚಾಂಪಿಯನ್ ಟೀಂ ಇಂಡಿಯಾ 45.1 ಓವರ್‌ಗಳಲ್ಲಿ ಕೇವಲ 224 ರನ್‌ಗಳಿಗೆ ಆಲೌಟ್ ಆಯಿತು. ಇದರಿಂದಾಗಿ ಆಸ್ಟ್ರೇಲಿಯಾ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ನಾಯಕಿ ಹೀಲಿಗೆ ಸ್ಮರಣೀಯ ವಿದಾಯ ನೀಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:04 pm, Sun, 1 March 26

Follow Us
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು
ಮಾ.03 ಚಂದ್ರಗ್ರಹಣ; 15ನಿಮಿಷಗಳ ಕಾಲ ಗೋಚರಿಸುವ ಗ್ರಹಣದ ಪ್ರಭಾವ ಹೇಗಿರಲಿದೆ?
ಮಾ.03 ಚಂದ್ರಗ್ರಹಣ; 15ನಿಮಿಷಗಳ ಕಾಲ ಗೋಚರಿಸುವ ಗ್ರಹಣದ ಪ್ರಭಾವ ಹೇಗಿರಲಿದೆ?
ಡಿಸಿಎಂ ಡಿಕೆ ಶಿವಕುಮಾರ್ ಮನೆಗೆ ಬಂದವು 3 ಹೊಸ ಎಲೆಕ್ಟ್ರಿಕ್ ಕಾರು!
ಡಿಸಿಎಂ ಡಿಕೆ ಶಿವಕುಮಾರ್ ಮನೆಗೆ ಬಂದವು 3 ಹೊಸ ಎಲೆಕ್ಟ್ರಿಕ್ ಕಾರು!