AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಜಿತ್ ಕುಮಾರ್ 64ನೇ ಸಿನಿಮಾಗೆ ‘ಡೇರ್‌ಡೆವಿಲ್’ ಶೀರ್ಷಿಕೆ; ರೇಸಿಂಗ್ ಸಾಕ್ಷ್ಯಚಿತ್ರ ‘ಗ್ಲಾಡಿಯೇಟರ್ಸ್’ ಫಸ್ಟ್ ಲುಕ್ ಔಟ್

ತಮಿಳು ನಟ ಅಜಿತ್ ಕುಮಾರ್ ಅವರ 64ನೇ ಸಿನಿಮಾಗೆ 'ಡೇರ್‌ಡೆವಿಲ್' ಎಂದು ಹೆಸರಿಡಲಾಗಿದೆ. ಈ ಸಿನಿಮಾವನ್ನು ಅವರ ಪತ್ನಿ ಶಾಲಿನ್ ನಿರ್ಮಿಸುತ್ತಿದ್ದಾರೆ. ಇದೇ ವೇಳೆ, ಅಜಿತ್ ಅವರ ವೃತ್ತಿಪರ ಮೋಟಾರ್ ಸ್ಪೋರ್ಟ್ಸ್ ರೇಸಿಂಗ್ ಪಯಣವನ್ನು ಆಧರಿಸಿದ 'ಗ್ಲಾಡಿಯೇಟರ್ಸ್' ಎಂಬ ವಿಶೇಷ ಸಾಕ್ಷ್ಯಚಿತ್ರದ ಮೊದಲ ಲುಕ್ ಕೂಡ ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಅಜಿತ್ ಕುಮಾರ್ 64ನೇ ಸಿನಿಮಾಗೆ 'ಡೇರ್‌ಡೆವಿಲ್' ಶೀರ್ಷಿಕೆ; ರೇಸಿಂಗ್ ಸಾಕ್ಷ್ಯಚಿತ್ರ 'ಗ್ಲಾಡಿಯೇಟರ್ಸ್' ಫಸ್ಟ್ ಲುಕ್ ಔಟ್
ಅಜಿತ್
ರಾಜೇಶ್ ದುಗ್ಗುಮನೆ
|

Updated on: Aug 04, 2026 | 9:42 AM

Share

ಮುಖ್ಯಾಂಶಗಳು

  • ಅಜಿತ್ 'ಎಕೆ 64'ಗೆ 'ಡೇರ್‌ಡೆವಿಲ್' ಟೈಟಲ್ ಫಿಕ್ಸ್
  • ನಿರ್ಮಾಪಕಿಯಾಗಿ ಪತ್ನಿ ಶಾಲಿನ್ ರೀ-ಎಂಟ್ರಿ
  • ಅಧಿಕ್ ರವಿಚಂದ್ರನ್ ನಿರ್ದೇಶನ, ಅನಿರುದ್ಧ್ ಮ್ಯೂಸಿಕ್

ತಮಿಳು ಚಿತ್ರರಂಗದ ನಟ ಅಜಿತ್ ಕುಮಾರ್ (Ajit Kumar) ಇತ್ತೀಚೆಗೆ ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿರಲಿಲ್ಲ. ಈಗ ಅವರು ಹೊಸ ಚಿತ್ರದ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಅಭಿಮಾನಿಗಳಿಗೆ ಒಂದೇ ದಿನ ಎರಡೆರಡು ಸಿಹಿ ಸುದ್ದಿ ಸಿಕ್ಕಿದೆ. ಅಜಿತ್ ಅವರ 64ನೇ ಸಿನಿಮಾಗೆ ‘ಡೇರ್‌ಡೆವಿಲ್’ ಎಂದು ಶೀರ್ಷಿಕೆ ಇಡಲಾಗಿದೆ. ಇದರ ಜೊತೆಗೆ ಅಜಿತ್ ಅವರ ಕಾರು ರೇಸಿಂಗ್ ಪಯಣದ ಕುರಿತ ‘ಗ್ಲಾಡಿಯೇಟರ್ಸ್’ ಸಾಕ್ಷ್ಯಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ.

ಶಾಲಿನ್ ನಿರ್ಮಾಣದ ‘ಡೇರ್‌ಡೆವಿಲ್’

ಅಜಿತ್ ಅಭಿನಯದ ‘ಎಕೆ 64’ ಸಿನಿಮಾವನ್ನು ಅಧಿಕೃತವಾಗಿ ‘ಡೇರ್‌ಡೆವಿಲ್’ ಎಂದು ಕರೆಯಲಾಗಿದೆ. ಈ ಸಿನಿಮಾವನ್ನು ನಿರ್ದೇಶಕ ಅಧಿಕ್ ರವಿಚಂದ್ರನ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಅಜಿತ್ ಅವರ ಪತ್ನಿ ಶಾಲಿನ್ ಚಿತ್ರರಂಗಕ್ಕೆ ಮರಳಿದ್ದಾರೆ. ಅವರು ‘ಬ್ರೇವ್ ಹಾರ್ಟ್ಸ್ ಪ್ರೊಡಕ್ಷನ್’ ಎಂಬ ಹೊಸ ಬ್ಯಾನರ್ ಆರಂಭಿಸಿದ್ದಾರೆ. ಈ ಬ್ಯಾನರ್ ಅಡಿಯಲ್ಲೇ ಸಿನಿಮಾ ನಿರ್ಮಾಣವಾಗಲಿದೆ. ಈ ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರನ್ನು ರಂಜಿಸಲಿದೆ ಎಂಬ ಇಂಗಿತವನ್ನು ತಂಡ ವ್ಯಕ್ತಪಡಿಸಿದೆ.

ಸಿನಿಮಾದ ಚಿತ್ರಕಥೆ ಈಗಾಗಲೇ ಪೂರ್ಣಗೊಂಡಿದೆ. ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಲಿದ್ದಾರೆ. ಇದು ಅಜಿತ್ ಮತ್ತು ಅನಿರುದ್ಧ್ ಕಾಂಬಿನೇಷನ್‌ನ ನಾಲ್ಕನೇ ಸಿನಿಮಾವಾಗಿದೆ.

ರೇಸಿಂಗ್ ಸಾಕ್ಷ್ಯಚಿತ್ರ ‘ಗ್ಲಾಡಿಯೇಟರ್ಸ್’ ಫಸ್ಟ್ ಲುಕ್

ಅಜಿತ್ ಅವರ ಮೋಟಾರ್ ಸ್ಪೋರ್ಟ್ಸ್ ರೇಸಿಂಗ್ ಜೀವನದ ಕುರಿತು ಸಾಕ್ಷ್ಯಚಿತ್ರ ತಯಾರಾಗಿದೆ. ಈ ಸಾಕ್ಷ್ಯಚಿತ್ರಕ್ಕೆ ‘ಗ್ಲಾಡಿಯೇಟರ್ಸ್: ಇನ್ ಪರ್ಸ್ಯೂಟ್ ಆಫ್ ಚಾಲೆಂಜಸ್’ ಎಂದು ಹೆಸರಿಡಲಾಗಿದೆ. ಸೋಮವಾರ ಇದರ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.

ಇದನ್ನೂ ಓದಿ: ಅಜಿತ್​ಗೆ ದೊಡ್ಡ ಮೊತ್ತದ ಸಂಭಾವನೆ ಕೊಡಲು ನಿರ್ಮಾಪಕರ ಹಿಂದೇಟು? ಶುರುವಾಗಿದೆ ಭಯ

ಈ ಸಾಕ್ಷ್ಯಚಿತ್ರವನ್ನು ಎ.ಎಲ್. ವಿಜಯ್ ನಿರ್ದೇಶಿಸಿದ್ದಾರೆ. ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. ಇದು ಸುಮಾರು 90 ನಿಮಿಷಗಳ ಸಾಕ್ಷ್ಯಚಿತ್ರವಾಗಿದೆ. ದುಬೈ ಮತ್ತು ಯುರೋಪ್‌ ಸೇರಿದಂತೆ ಹಲವು ಅಂತಾರಾಷ್ಟ್ರೀಯ ರೇಸಿಂಗ್ ಟ್ರ್ಯಾಕ್‌ಗಳ ದೃಶ್ಯಗಳು ಇದರಲ್ಲಿವೆ. ಅಜಿತ್ ಕುಮಾರ್ ಸ್ವತಃ ‘ಅಜಿತ್ ಕುಮಾರ್ ರೇಸಿಂಗ್’ ತಂಡದ ಮಾಲೀಕರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸುದ್ದಿಗೋಷ್ಠಿ
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸುದ್ದಿಗೋಷ್ಠಿ
ನೀರು ಸಂಸ್ಕರಣಾ ಘಟಕದಲ್ಲಿ ವಿಷಾನಿಲ ಸೋರಿಕೆ
ನೀರು ಸಂಸ್ಕರಣಾ ಘಟಕದಲ್ಲಿ ವಿಷಾನಿಲ ಸೋರಿಕೆ
ತುಂಗಭದ್ರೆಗೆ ಕಂಟಕ ತಂದ ‘ಅಂತರಗಂಗೆ’! ಕಲುಷಿತಗೊಂಡ ಗದಗ ಜಿಲ್ಲೆಯ ಜೀವನಾಡಿ
ತುಂಗಭದ್ರೆಗೆ ಕಂಟಕ ತಂದ ‘ಅಂತರಗಂಗೆ’! ಕಲುಷಿತಗೊಂಡ ಗದಗ ಜಿಲ್ಲೆಯ ಜೀವನಾಡಿ
ಸರ್ಕಾರಿ ಆಸ್ಪತ್ರೆಗಳಲ್ಲಿ ನಕಲಿ ಔಷಧಿ ಇಲ್ಲ: ಸಚಿವ ಯು.ಟಿ. ಖಾದರ್ ಸ್ಪಷ್ಟನೆ
ಸರ್ಕಾರಿ ಆಸ್ಪತ್ರೆಗಳಲ್ಲಿ ನಕಲಿ ಔಷಧಿ ಇಲ್ಲ: ಸಚಿವ ಯು.ಟಿ. ಖಾದರ್ ಸ್ಪಷ್ಟನೆ
ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ ತೀವ್ರ
ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ ತೀವ್ರ
ಆಯುರ್ವೇದಿಕ್ ಕಾಲೇಜಿಗೆ ಬೀಗ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ
ಆಯುರ್ವೇದಿಕ್ ಕಾಲೇಜಿಗೆ ಬೀಗ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ
'ಪನ್ನೀರ್ ಮಾತ್ರವಲ್ಲ, ಎಲ್ಲಾ ಕೃತಕ ಉತ್ಪನ್ನಗಳೂ ಬ್ಯಾನ್'
'ಪನ್ನೀರ್ ಮಾತ್ರವಲ್ಲ, ಎಲ್ಲಾ ಕೃತಕ ಉತ್ಪನ್ನಗಳೂ ಬ್ಯಾನ್'
ಹಾಸನ ಜಿಲ್ಲಾಧಿಕಾರಿ ವಿರುದ್ಧ ಎಚ್.ಡಿ. ರೇವಣ್ಣ ವಾಗ್ದಾಳಿ
ಹಾಸನ ಜಿಲ್ಲಾಧಿಕಾರಿ ವಿರುದ್ಧ ಎಚ್.ಡಿ. ರೇವಣ್ಣ ವಾಗ್ದಾಳಿ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಯತ್ನ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಯತ್ನ
ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ವೇಳೆ ದೇಶ ವಿರೋಧಿ ಹಾಡು ವೈರಲ್!
ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ವೇಳೆ ದೇಶ ವಿರೋಧಿ ಹಾಡು ವೈರಲ್!