Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಲೈವಿ ಟೀಸರ್‌ ನೋಡಿದ ಜನ ಕಂಗನಾಳ ಲುಕ್​ಗೆ ಟ್ರೋಲ್ ಮಾಡ್ತಿರೋದೇಕೆ?

ಕಂಗನಾ ರಣವತ್ ಬಿಟೌನ್‌ನ ಸ್ಟಾರ್‌ ನಟಿ. ಬಾಲಿವುಡ್ ಕ್ವೀನ್‌. ತನ್ನ ಅಭಿನಯದ ಮೂಲಕ ಅಭಿಮಾನಿಗಳಿಗೆ ಹುಚ್ಚು ಹಿಡಿಸಿದ ಪ್ರತಿಭಾನ್ವಿತ ನಟಿ. ಅಭಿನಯದಲ್ಲಿ ಒಂದು ಕೈ ಮೇಲಿರುವ ಕಂಗನಾ ಈಗ ಸಖತ್‌ ಸುದ್ದಿಯಲ್ಲಿದ್ದಾರೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಜೀವನಾಧಾರಿತ ಸಿನಿಮಾದ ತಲೈವಿಯಲ್ಲಿ ಕಂಗನಾ ರಣವತ್ ಜಯಲಲಿತಾ ಅವರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್ ರಿಲೀಸ್ ಆಗಿದೆ. ಟೀಸರ್‌ನಲ್ಲಿ ಕಂಗನಾಳ ಫಸ್ಟ್‌ ಲುಕ್ ರಿವೀಲ್ ಆಗಿದ್ದು, ಜಯಲಲಿತಾ ಅವರ ರೂಪದಲ್ಲಿ ಕಂಗನಾ ಕಂಗೊಳಿಸಿದ್ದಾರೆ. […]

ತಲೈವಿ ಟೀಸರ್‌ ನೋಡಿದ ಜನ ಕಂಗನಾಳ ಲುಕ್​ಗೆ ಟ್ರೋಲ್ ಮಾಡ್ತಿರೋದೇಕೆ?
Follow us
ಸಾಧು ಶ್ರೀನಾಥ್​
| Updated By: Skanda

Updated on:Nov 24, 2020 | 7:52 AM

ಕಂಗನಾ ರಣವತ್ ಬಿಟೌನ್‌ನ ಸ್ಟಾರ್‌ ನಟಿ. ಬಾಲಿವುಡ್ ಕ್ವೀನ್‌. ತನ್ನ ಅಭಿನಯದ ಮೂಲಕ ಅಭಿಮಾನಿಗಳಿಗೆ ಹುಚ್ಚು ಹಿಡಿಸಿದ ಪ್ರತಿಭಾನ್ವಿತ ನಟಿ. ಅಭಿನಯದಲ್ಲಿ ಒಂದು ಕೈ ಮೇಲಿರುವ ಕಂಗನಾ ಈಗ ಸಖತ್‌ ಸುದ್ದಿಯಲ್ಲಿದ್ದಾರೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಜೀವನಾಧಾರಿತ ಸಿನಿಮಾದ ತಲೈವಿಯಲ್ಲಿ ಕಂಗನಾ ರಣವತ್ ಜಯಲಲಿತಾ ಅವರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್ ರಿಲೀಸ್ ಆಗಿದೆ. ಟೀಸರ್‌ನಲ್ಲಿ ಕಂಗನಾಳ ಫಸ್ಟ್‌ ಲುಕ್ ರಿವೀಲ್ ಆಗಿದ್ದು, ಜಯಲಲಿತಾ ಅವರ ರೂಪದಲ್ಲಿ ಕಂಗನಾ ಕಂಗೊಳಿಸಿದ್ದಾರೆ. ಆದ್ರೆ ಕಂಗನಾಳ ಅವತಾರವನ್ನು ಕಂಡು ಅಭಿಮಾನಿಗಳು ಬೇಸರಗೊಂಡಿದ್ದಾರೆ. ಕಂಗನಾ ಲುಕ್‌ಗೆ ಛೀಮಾರಿ ಹಾಕ್ತಿದ್ದಾರೆ.

ಟ್ರೋಲ್‌ ಕೆಂಗಣ್ಣಿಗೆ ಬಿದ್ದ ಕಂಗನಾ: ಒಂದು ನಿಮಿಷ 32 ಸೆಕೆಂಡುಗಳಿರುವ ಟೀಸರ್ ನಲ್ಲಿ ಕಂಗನಾ 2 ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. 1ನೇ ಲುಕ್‌ ಜಯಲಲಿತಾ ಸಿನಿಮಾ ಜೀವನವನ್ನ ಪ್ರತಿನಿಧಿಸುತ್ತದೆ. ಎರಡನೇ ಲುಕ್‌ ಅವರ ರಾಜಕೀಯದ ಪಯಣವನ್ನು ಸೂಚಿಸುತ್ತದೆ. ಇಲ್ಲಿ ಕಂಗನಾಳ ಎರಡನೆೇ ಲುಕ್ ಯಶಸ್ವಿಯಾಗಿಲ್ಲ. ಅತಿಯಾದ ಮೇಕಪ್ ಬಳಸಲಾಗಿದೆ ಅಂತ ಆರೋಪಿಸಲಾಗುತ್ತಿದೆ. ಅಷ್ಟೇ ಅಲ್ಲ ಈ ಲುಕ್‌ ಟ್ರೋಲ್‌ ಗ್ರೂಪ್‌ಗಳು ಹಾಸ್ಯವಾಗಿ ಬಳಸಿಕೊಂಡು ಫುಲ್ ಟ್ರೋಲ್ ಮಾಡುತ್ತಿವೆ.

ಪಾತ್ರಕ್ಕಾಗಿ 6 ಕೆಜಿ ತೂಕ ಹೆಚ್ಚಿಸಿದ ಕಂಗನಾ: ಇನ್ನು ತಮ್ಮ ಲುಕ್ ಬಗ್ಗೆ ಮಾತನಾಡಿರುವ ಕಂಗನಾ, ಈ ಲುಕ್‌ಗಾಗಿ ತುಂಬಾನೇ ಕಷ್ಟ ಪಟ್ಟಿದ್ದೇನೆ, ಚೆನ್ನಾಗಿ ಊಟ ಮಾಡಿ 6 ಕೆಜಿ ದಪ್ಪ ಆಗಿದ್ದೇನೆ ಅಂತ ಹೇಳಿಕೊಂಡಿದ್ದಾರೆ. ಆದ್ರೆ ಸ್ಕ್ರೀನ್‌ನಲ್ಲಿ ಕಂಗನಾಳ ಶ್ರಮ ಕಾಣ್ತಾ ಇಲ್ಲ ಕಾಣ್ತಿರೋದು ಬರೀ ಮೇಕಪ್ ಅಷ್ಟೇ ಅಂತಿದ್ದಾರೆ ನೆಟ್ಟಿಗರು. ಅಷ್ಟೇ ಅಲ್ಲ ಮೇಕಪ್ ಮೋರೆ ಹೋಗಿರುವ ಕಂಗನಾ ದಪ್ಪ ಆಗಿರುವುದೇ ದೊಡ್ಡ ಸಾಧನೆನಾ..? ಅಂತ ಪ್ರಶ್ನಿಸುತ್ತಿದ್ದಾರೆ. ಅಲ್ಲದೇ ಈಕೆ ಈ ಲುಕ್‌ ಅನ್ನ ಬೇರೆ ವಸ್ತುಗಳಿಗೆ ಹೋಲಿಕೆ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

Published On - 5:25 pm, Tue, 26 November 19