ಮುಂದಿನ ಸೀಸನ್​ಗೆ ಬಿಗ್​ ಬಾಸ್​ ನಿರೂಪಕ ಚೇಂಜ್​; ಹೊಸ ನಟನ ಹುಡುಕಾಟದಲ್ಲಿ ವಾಹಿನಿ

ಬಿಗ್​ ಬಾಸ್​ ಮುಂದಿನ ಸೀಸನ್​ಗೆ ನಿರೂಪಕನನ್ನು ಬದಲಾಯಿಸುವ ಬಗ್ಗೆ ಚಿಂತನೆ ನಡೆದಿದೆ. ಶೀಘ್ರವೇ ಈ ಬಗ್ಗೆ ವಾಹಿನಿ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.

ಮುಂದಿನ ಸೀಸನ್​ಗೆ ಬಿಗ್​ ಬಾಸ್​ ನಿರೂಪಕ ಚೇಂಜ್​; ಹೊಸ ನಟನ ಹುಡುಕಾಟದಲ್ಲಿ ವಾಹಿನಿ
ಸಾಂದರ್ಭಿಕ ಚಿತ್ರ
Follow us
ರಾಜೇಶ್ ದುಗ್ಗುಮನೆ
| Updated By: Praveen Sahu

Updated on:Mar 23, 2021 | 12:32 PM

ತಮಿಳು ಬಿಗ್​ ಬಾಸ್​ ಯಶಸ್ವಿಯಾಗಿ ನಾಲ್ಕು ಸೀಸನ್​ಗಳನ್ನು ಪೂರ್ಣಗೊಳಿಸಿದೆ. ಈ ನಾಲ್ಕೂ ಸೀಸನ್​ಗಳನ್ನು ನಡೆಸಿಕೊಟ್ಟಿದ್ದು ಖ್ಯಾತ ನಟ ಕಮಲ್​ ಹಾಸನ್​. ಆದರೆ, ಅವರು ಈಗ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಹೊಸ ಪಕ್ಷ ಕಟ್ಟಿರುವ ಅವರು 2021ರ ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧೆ ಮಾಡುತ್ತಿದ್ದಾರೆ. ಹೀಗಾಗಿ, ಐದನೇ ಸೀಸನ್​ಗೆ ಹೊಸ ನಿರೂಪಕನ ಹುಡುಕಾಟದಲ್ಲಿ ವಾಹಿನಿ ತೊಡಗಿದೆ ಎನ್ನಲಾಗುತ್ತಿದೆ. ತಮಿಳು ಬಿಗ್​ ಬಾಸ್​ನ ನಾಲ್ಕನೇ ಸೀಸನ್​ ಜನವರಿಯಲ್ಲಿ ಪೂರ್ಣಗೊಂಡಿತ್ತು. ಐದನೇ ಸೀಸನ್ ಇದೇವರ್ಷ ನಡೆಯಲಿದೆ. ಕಮಲ್​ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಂಡರೆ ಅವರು ಮತ್ತೆ ಇತ್ತ ಮುಖ ಮಾಡುವುದಿಲ್ಲ. ಹೀಗಾಗಿ, ಹೊಸ ನಿರೂಪಕನನ್ನು ಹುಡುಕುವುದು ಅನಿವಾರ್ಯವಾಗಿದೆ.

ರಾಜಕೀಯ ಕೆಲಸಗಳ ಮಧ್ಯೆಯೂ ಕಮಲ್​ ಹಾಸನ್​ ನಾಲ್ಕನೇ ಸೀಸನ್​ ಹೋಸ್ಟ್​ ಮಾಡಲು ಒಪ್ಪಿಕೊಂಡಿದ್ದರು. ಅಂತೆಯೇ ಯಶಸ್ವಿಯಾಗಿ ಅದನ್ನು ನಿರ್ವಹಿಸಿದ್ದರು ಕೂಡ. ಈಗ ಅವರು ಪಕ್ಷದ ಕೆಲಸದಲ್ಲಿ ಬ್ಯುಸಿಯಿದ್ದು, ಮತ್ತೆ ಬಿಗ್​ ಬಾಸ್​ನತ್ತ ಮುಖ ಮಾಡುವುದಿಲ್ಲ ಎನ್ನಲಾಗಿದೆ.

ಸದ್ಯ ಕಾಲಿವುಡ್​ನಲ್ಲಿ ಕೇಳಿ ಬರುತ್ತಿರುವ ಮತ್ತೊಂದು ವಿಚಾರ ಎಂದರೆ, ನಟ ಸಿಂಬು ಅವರನ್ನು ಬಿಗ್​ ಬಾಸ್​ ಹೋಸ್ಟ್​ ಆಗಿ ಮಾಡಲು ತಯಾರಿ ನಡೆದಿದೆಯಂತೆ. ಆದರೆ, ಈ ಬಗ್ಗೆ ಎಲ್ಲಿಯೂ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ…..

ಸುದೀಪ್​ ಬದಲಾವಣೆ ಡೌಟ್​.. ಕನ್ನಡದಲ್ಲಿ ಸುದೀಪ್​ ಅತ್ಯುತ್ತಮವಾಗಿ ಬಿಗ್​ ಬಾಸ್​ ನಡೆಸಿಕೊಡುತ್ತಿದ್ದಾರೆ. ಅವರು ಹಾಕುವ ಡ್ರೆಸ್​, ಅವರ ನಿರೂಪಣೆ ಮಾಡುವ ಶೈಲಿಯನ್ನು ಕಣ್ತುಂಬಿಕೊಳ್ಳಲು ಅನೇಕರು ಬಿಗ್​ ಬಾಸ್​ ನೋಡುತ್ತಾರೆ. ಹೀಗಾಗಿ, ಸದ್ಯದ ಮಟ್ಟಿಗಂತೂ ಕನ್ನಡದಲ್ಲಿ ನಿರೂಪಕನ ಬದಲಾವಣೆ ಮಾಡುವುದು ಅನುಮಾನ ಎನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿದೆ….

ಇದನ್ನೂ ಓದಿ: ಬಿಗ್​ ಬಾಸ್​ನಲ್ಲಿ ಗೀತಾಗೆ ಲವ್​ ಆಗಿದ್ದು ಯಾರ ಮೇಲೆ? ಮನೆ ಬಿಟ್ಟು ಹೋಗುವಾಗ ಕಿಚ್ಚನ ಎದುರು ರಟ್ಟಾಯ್ತು ಗುಟ್ಟು

Published On - 6:12 pm, Mon, 22 March 21