ಬಿಗ್​ ಬಾಸ್​ನಲ್ಲಿ ಗೀತಾಗೆ ಲವ್​ ಆಗಿದ್ದು ಯಾರ ಮೇಲೆ? ಮನೆ ಬಿಟ್ಟು ಹೋಗುವಾಗ ಕಿಚ್ಚನ ಎದುರು ರಟ್ಟಾಯ್ತು ಗುಟ್ಟು

ಮೂರನೇ ವಾರದ ನಾಮಿನೇಷನ್​ ಪಟ್ಟಿಯಲ್ಲಿ ಶಮಂತ್​ ಬ್ರೋ ಗೌಡ, ನಿಧಿ ಸುಬ್ಬಯ್ಯ, ಗೀತಾ ಭಾರತಿ ಭಟ್​, ರಘು ಗೌಡ, ಅರವಿಂದ್ ಕೆ.ಪಿ., ವಿಶ್ವನಾಥ್​, ದಿವ್ಯಾ ಉರುಡುಗ, ದಿವ್ಯಾ ಸುರೇಶ್, ಪ್ರಶಾಂತ್​ ಸಂಬರಗಿ ಇದ್ದರು. 9 ಸ್ಪರ್ಧಿಗಳ ಪೈಕಿ ಗೀತಾ ಕಡಿಮೆ ಮತ ಪಡೆದಿದ್ದರಿಂದ ಮನೆಯಿಂದ ಹೊರ ಬಂದರು.

ಬಿಗ್​ ಬಾಸ್​ನಲ್ಲಿ ಗೀತಾಗೆ ಲವ್​ ಆಗಿದ್ದು ಯಾರ ಮೇಲೆ? ಮನೆ ಬಿಟ್ಟು ಹೋಗುವಾಗ ಕಿಚ್ಚನ ಎದುರು ರಟ್ಟಾಯ್ತು ಗುಟ್ಟು
ಗೀತಾ
Follow us
|

Updated on: Mar 22, 2021 | 4:14 PM

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಭಾನುವಾರ (ಮಾರ್ಚ್​​21)‘ಬ್ರಹ್ಮಗಂಟು’ ಧಾರಾವಾಹಿ ನಟಿ ಗೀತಾ ಭಾರತಿ ಭಟ್ ಅವರು ಮನೆಯಿಂದ ಹೊರ ಬಿದ್ದಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಅವರು ಪ್ರೀತಿ-ಪ್ರೇಮದ ವಿಚಾರದಲ್ಲಿ ದೂರವೇ ಉಳಿದಿದ್ದರು. ಎಂದಿಗೂ ಯಾರ ಮೇಲೂ ಪ್ರೀತಿ ಆಗಿದೆ ಎಂದು ಬಿಗ್​ ಬಾಸ್​ ಮನೆಯಲ್ಲಿ ಹೇಳಿಕೊಂಡಿಲ್ಲ. ಆದರೆ, ಈಗ ಅಚ್ಚರಿ ಎಂಬಂತೆ ಕಿಚ್ಚನ ಎದುರು ಪ್ರೀತಿ ವಿಚಾರ ಬಿಚ್ಚಿಟ್ಟಿದ್ದಾರೆ. ಮೂರನೇ ವಾರದ ನಾಮಿನೇಷನ್​ ಪಟ್ಟಿಯಲ್ಲಿ ಶಮಂತ್​ ಬ್ರೋ ಗೌಡ, ನಿಧಿ ಸುಬ್ಬಯ್ಯ, ಗೀತಾ ಭಾರತಿ ಭಟ್​, ರಘು ಗೌಡ, ಅರವಿಂದ್ ಕೆ.ಪಿ., ವಿಶ್ವನಾಥ್​, ದಿವ್ಯಾ ಉರುಡುಗ, ದಿವ್ಯಾ ಸುರೇಶ್, ಪ್ರಶಾಂತ್​ ಸಂಬರಗಿ ಇದ್ದರು. 9 ಸ್ಪರ್ಧಿಗಳ ಪೈಕಿ ಗೀತಾ ಕಡಿಮೆ ಮತ ಪಡೆದಿದ್ದರಿಂದ ಮನೆಯಿಂದ ಹೊರ ಬಂದರು.

ಮುಂದಿನ ವಾರ ಶಮಂತ್​ ಬ್ರೋ ಗೌಡ ಔಟ್​ ಆಗುತ್ತಾರೆ ಮತ್ತು ಫಿನಾಲೆಯಲ್ಲಿ ಮಂಜು ಪಾವಗಡ ವಿನ್​ ಆಗುತ್ತಾರೆ ಎಂದು ಗೀತಾ ಕಿಚ್ಚ ಸುದೀಪ್​ ಎದುರು ಭವಿಷ್ಯ ನುಡಿದರು. ಇದೇ ವೇಳೆ ಅವರು ತಮ್ಮ ಪ್ರೀತಿ ವಿಚಾರದ ಬಗ್ಗೆ ಹೇಳಿಕೊಂಡಿದ್ದಾರೆ. ನನಗೆ ಬಿಗ್​ ಬಾಸ್​ ಮನೆಯಲ್ಲಿ ಪ್ರೀತಿ ಅಂತ ಆಗಿದ್ದು ಅದು ಬಿಗ್​ ಬಾಸ್​ ಧ್ವನಿ ಮೇಲೆ. ಅದನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಅವರ ಈ ಹೇಳಿಕೆ ಅಚ್ಚರಿ ಮೂಡಿಸಿದೆ.

ಟಾಸ್ಕ್​ ವಿಚಾರದಲ್ಲಿ ಗೀತಾ ಆಗಾಗ ಹಿನ್ನಡೆ ಅನುಭವಿಸುತ್ತಿದ್ದರು. ಅಲ್ಲದೆ, ಮೊಸಳೆ ಕಣ್ಣೀರು ಹಾಕುತ್ತಾರೆ ಎಂಬ ಆರೋಪ ಕೂಡ ಅವರ ಮೇಲಿತ್ತು. ಚಿಕ್ಕ ಚಿಕ್ಕ ವಿಚಾರಗಳಿಗೂ ಗೀತಾ ಎಮೋಷನಲ್ ಆಗುತ್ತಾರೆ. ಕ್ಷಣಾರ್ಧದಲ್ಲೇ ಕಣ್ಣೀರು ಸುರಿಸುತ್ತಾರೆ. ಒಂದು ರೀತಿಯಲ್ಲಿ ಭಾವನಾತ್ಮಕವಾಗಿ ಎಲ್ಲರನ್ನೂ ಮೋಸಗೊಳಿಸಲು ಅವರು ಪ್ರಯತ್ನಿಸುತ್ತಾರೆ ಎನ್ನಲಾಗುತ್ತಿತ್ತು. ಮನೆಯೊಳಗಿನ ಯಾರಿಗೂ ಅವರ ಈ ಬುದ್ಧಿ ಹಿಡಿಸಲಿಲ್ಲ. ಅಲ್ಲದೆ, ಟಾಸ್ಕ್​ ವಿಚಾರದಲ್ಲಿಯೂ ಅವರು ಹಿಂದೆ ಬೀಳುತ್ತಿದ್ದರು. ಜನರನ್ನು ಎಂಟರ್​ಟೇನ್​ ಮಾಡುವುದರಲ್ಲಿ ಗೀತಾ ಹಿನ್ನಡೆ ಸಾಧಿಸಿದರು. ಹೀಗಾಗಿ, ಅವರು ಮನೆಯಿಂದ ಹೊರ ಬಿದ್ದಿದ್ದಾರೆ. ಸದ್ಯ 14 ಸ್ಪರ್ಧಿಗಳ ನಡುವೆ ಬಿಗ್​ ಬಾಸ್​ ಹಣಾಹಣಿ ಮುಂದುವರಿದಿದೆ.

ಇದನ್ನೂ ಓದಿ: Bigg Boss Kannada 8 Elimination: ಬಿಗ್​ ಬಾಸ್​ ಮನೆಯಿಂದ ಗೀತಾ ಭಾರತಿ ಭಟ್​ ಔಟ್​; ಎಲಿಮಿನೇಷನ್​ಗೆ ಇಲ್ಲಿದೆ ಬಲವಾದ ಕಾರಣ

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ