Bigg Boss Kannada 8 Elimination: ಬಿಗ್​ ಬಾಸ್​ ಮನೆಯಿಂದ ಗೀತಾ ಭಾರತಿ ಭಟ್​ ಔಟ್​; ಎಲಿಮಿನೇಷನ್​ಗೆ ಇಲ್ಲಿದೆ ಬಲವಾದ ಕಾರಣ

Bigg Boss Kannada 8 Elimination: ರವಿಂದ್, ದಿವ್ಯಾ ಸುರೇಶ್​, ಪ್ರಶಾಂತ್​ ಸಂಬರಗಿ, ನಿಧಿ ಸುಬ್ಬಯ್ಯ ಸೇಫ್​ ಆಗಿದ್ದಾರೆ ಎಂದು ಕಿಚ್ಚ ಸುದೀಪ್ ಶನಿವಾರವೇ (ಮಾ.20)​ ಘೋಷಣೆ ಮಾಡಿದ್ದರು.

Bigg Boss Kannada 8 Elimination: ಬಿಗ್​ ಬಾಸ್​ ಮನೆಯಿಂದ ಗೀತಾ ಭಾರತಿ ಭಟ್​ ಔಟ್​; ಎಲಿಮಿನೇಷನ್​ಗೆ ಇಲ್ಲಿದೆ ಬಲವಾದ ಕಾರಣ
ಗೀತಾ ಭಾರತಿ ಭಟ್​
Follow us
|

Updated on: Mar 21, 2021 | 10:06 PM

ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಮೂರನೇ ವಾರದ ಎಲಿಮಿನೇಷನ್​ ಪ್ರಕ್ರಿಯೆಯಲ್ಲಿ ಕಿರುತೆರೆ ನಟಿ ಗೀತಾ ಭಾರತಿ ಭಟ್​ ಅವರು ಎಲಿಮಿನೇಟ್​ ಆಗಿದ್ದಾರೆ. ‘ಬ್ರಹ್ಮಗಂಟು’ ಧಾರಾವಾಹಿ ಮೂಲಕ ಫೇಮಸ್​ ಆಗಿದ್ದ ಗೀತಾ ಅವರು ಬಿಗ್​ ಬಾಸ್​ ಇಂದ ಹೊರಬರುತ್ತಿರುವ ಮೂರನೇ ಅಭ್ಯರ್ಥಿ ಆಗಿದ್ದಾರೆ. ಈ ವಾರದ ನಾಮಿನೇಷನ್​ ಪಟ್ಟಿಯಲ್ಲಿ ಶಮಂತ್​ ಬ್ರೋ ಗೌಡ, ನಿಧಿ ಸುಬ್ಬಯ್ಯ, ಗೀತಾ ಭಾರತಿ ಭಟ್​, ರಘು ಗೌಡ, ಅರವಿಂದ್ ಕೆ.ಪಿ., ವಿಶ್ವನಾಥ್​, ದಿವ್ಯಾ ಉರುಡುಗ, ದಿವ್ಯಾ ಸುರೇಶ್, ಪ್ರಶಾಂತ್​ ಸಂಬರಗಿ ಇದ್ದರು. 9 ಸ್ಪರ್ಧಿಗಳ ಪೈಕಿ ಒಬ್ಬರು ಬಿಗ್​ ಬಾಸ್​ ಮನೆಯಿಂದ ಭಾನುವಾರ ಹೊರ ಹೋಗುವುದು ಖಚಿತ ಆಗಿತ್ತು. ಅರವಿಂದ್, ದಿವ್ಯಾ ಸುರೇಶ್​, ಪ್ರಶಾಂತ್​ ಸಂಬರಗಿ, ನಿಧಿ ಸುಬ್ಬಯ್ಯ ಸೇಫ್​ ಆಗಿದ್ದಾರೆ ಎಂದು ಕಿಚ್ಚ ಸುದೀಪ್ ಶನಿವಾರವೇ (ಮಾ.20)​ ಘೋಷಣೆ ಮಾಡಿದ್ದರು.

ಇನ್ನುಳಿದ ಸ್ಪರ್ಧಿಗಳಾದ ಶಮಂತ್​, ಗೀತಾ, ರಘು ಗೌಡ, ವಿಶ್ವನಾಥ್, ದಿವ್ಯಾ ಉರುಡುಗ ಪೈಕಿ ಯಾರು ಎಲಿಮಿನೇಟ್​ ಆಗುತ್ತಾರೆ ಎಂಬ ಕೌತುಕ ಮನೆ ಮಾಡಿತ್ತು. ಈಗ ಉಳಿದವರು ಸೇಫ್​ ಆಗಿ ಗೀತಾ ಹೊರಹೋಗಿದ್ದಾರೆ. ಸೀರಿಯಲ್ ವೀಕ್ಷಕರಿಗೆ ಗೀತೆ ಭಾರತಿ ಭಟ್​ ಹೆಸರು ಚಿರಪರಿಚಿತ. ಈಗ ಬಿಗ್​ ಬಾಸ್​ ಮೂಲಕವೂ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಂತಾಗಿದೆ.

ಟಾಸ್ಕ್​ ವಿಚಾರದಲ್ಲಿ ಗೀತಾ ಆಗಾಗ ಹಿನ್ನಡೆ ಅನುಭವಿಸುತ್ತಿದ್ದರು. ಅಲ್ಲದೆ, ಮೊಸಳೆ ಕಣ್ಣೀರು ಹಾಕುತ್ತಾರೆ ಎಂಬ ಆರೋಪ ಕೂಡ ಅವರ ಮೇಲಿತ್ತು. ಚಿಕ್ಕ ಚಿಕ್ಕ ವಿಚಾರಗಳಿಗೂ ಗೀತಾ ಎಮೋಷನಲ್ ಆಗುತ್ತಾರೆ. ಕ್ಷಣಾರ್ಧದಲ್ಲೇ ಕಣ್ಣೀರು ಸುರಿಸುತ್ತಾರೆ. ಒಂದು ರೀತಿಯಲ್ಲಿ ಭಾವನಾತ್ಮಕವಾಗಿ ಎಲ್ಲರನ್ನೂ ಮೋಸಗೊಳಿಸಲು ಅವರು ಪ್ರಯತ್ನಿಸುತ್ತಾರೆ ಎನ್ನಲಾಗುತ್ತಿತ್ತು. ಮನೆಯೊಳಗಿನ ಯಾರಿಗೂ ಅವರ ಈ ಬುದ್ಧಿ ಹಿಡಿಸಲಿಲ್ಲ. ಅಲ್ಲದೆ, ಟಾಸ್ಕ್​ ವಿಚಾರದಲ್ಲಿಯೂ ಅವರು ಹಿಂದೆ ಬೀಳುತ್ತಿದ್ದರು. ಜನರನ್ನು ಎಂಟರ್​ಟೇನ್​ ಮಾಡುವುದರಲ್ಲಿ ಗೀತಾ ಹಿನ್ನಡೆ ಸಾಧಿಸಿದರು. ಹೀಗಾಗಿ, ಅವರು ಮನೆಯಿಂದ ಹೊರ ಬಿದ್ದಿದ್ದಾರೆ. ಸದ್ಯ 14 ಸ್ಪರ್ಧಿಗಳ ನಡುವೆ ಬಿಗ್​ ಬಾಸ್​ ಹಣಾಹಣಿ ಮುಂದುವರಿದಿದೆ.

ಇದನ್ನೂ ಓದಿ: ದಿವ್ಯಾ ಉರುಡುಗ ಮತ್ತು ಅರವಿಂದ್ ಪ್ರೀತಿ-ಪ್ರಣಯದ ವಿಚಾರಕ್ಕೆ ಸುದೀಪ್​ ಕೊಟ್ರು ಮಸ್ತ್​ ಪಂಚ್​

ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು