AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವ ಚಿಕ್ಕವನಲ್ಲ, ತುಂಬಾನೇ ನಾಟಿ!; ರಘು ಗೌಡ ಬಿಚ್ಚಿಟ್ರು ಬಿಗ್​ ಬಾಸ್ ಬಾಲಕನ ಮತ್ತೊಂದು ಮುಖ

ಪ್ರತೀ ಮದುವೆಗೆ ಹೆಣ್ಣುಮಕ್ಕಳನ್ನು ನೋಡೋಕೆ ಅಂತಾನೇ ಹೋಗ್ತಾರಲ್ಲ ಅಂಥವರು ಯಾರಾದರೂ ಬಿಗ್​ ಬಾಸ್ ಮನೆಯಲ್ಲಿ ಇದಾರಾ ಎಂದು ವೀಕೆಂಡ್​ನಲ್ಲಿ ಪ್ರಶ್ನೆ ಮಾಡಿದರು ಸುದೀಪ್​. ಇದಕ್ಕೆ ರಘು ಉತ್ತರ ನೀಡಿದ್ದಾರೆ.

ವಿಶ್ವ ಚಿಕ್ಕವನಲ್ಲ, ತುಂಬಾನೇ ನಾಟಿ!; ರಘು ಗೌಡ ಬಿಚ್ಚಿಟ್ರು ಬಿಗ್​ ಬಾಸ್ ಬಾಲಕನ ಮತ್ತೊಂದು ಮುಖ
ರಘು ಗೌಡ- ವಿಶ್ವನಾಥ್​
ರಾಜೇಶ್ ದುಗ್ಗುಮನೆ
| Edited By: |

Updated on:Mar 22, 2021 | 7:24 AM

Share

ಬಿಗ್​ ಬಾಸ್​ ಮನೆ ಸೇರಿರುವ ವಿಶ್ವನಾಥ್​ ಅವರ ವಯಸ್ಸು ಕೇವಲ 19. ಕನ್ನಡ ಬಿಗ್​ ಬಾಸ್​ ಇತಿಹಾಸದಲ್ಲೇ ಇಷ್ಟು ಸಣ್ಣ ವಯಸ್ಸಿನ ಪುರುಷ ಅಭ್ಯರ್ಥಿ ದೊಡ್ಡ ಮನೆಗೆ ಕಾಲಿಟ್ಟಿರಲಿಲ್ಲ. ಇದೇ ವಿಚಾರ ವೀಕೆಂಡ್​ನಲ್ಲಿ ಚರ್ಚೆಗೆ ಬಂದಿದೆ. ಈ ವೇಳೆ ರಘು ಗೌಡ ಅಸಲಿ ವಿಚಾರ ಬಿಚ್ಚಿಟ್ಟಿದ್ದಾರೆ. ವಿಶ್ವ ಚಿಕ್ಕವನಲ್ಲ. ಆತ ಕಳ್ಳ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಅದಕ್ಕೆ ಸಾಕ್ಷಿ ಕೂಡ ನೀಡಿದ್ದಾರೆ. ಪ್ರತೀ ಮದುವೆಗೆ ಹೆಣ್ಣುಮಕ್ಕಳನ್ನು ನೋಡೋಕೆ ಅಂತಾನೇ ಹೋಗ್ತಾರಲ್ಲ ಅಂಥವರು ಯಾರಾದರೂ ಬಿಗ್​ ಬಾಸ್ ಮನೆಯಲ್ಲಿ ಇದಾರಾ ಎಂದು ವೀಕೆಂಡ್​ನಲ್ಲಿ ಪ್ರಶ್ನೆ ಮಾಡಿದರು ಸುದೀಪ್​. ಇದಕ್ಕೆ ರಘು ಉತ್ತರಿಸಿದ್ದಾರೆ. ಹಾಗೆ ಹೋಗೋದಾದ್ರೆ ನಮ್ಮ ವಿಶ್ವ ಹೋಗ್ತಾನೆ. ಆತ ನೋಡೋಕೆ ಎಳೆ ನಿಂಬೆ. ಆದರೆ, ಆತ ಮೂಸುಂಬಿ. ನಾನು ಆರಂಭದಲ್ಲಿ ಆತನನ್ನು ಮುಗ್ಧ ಎಂದುಕೊಂಡಿದ್ದೆ. ಆದರೆ, ಅವನು ಹಾಗಿಲ್ಲ ಎಂದರು ರಘು.

ಇದಕ್ಕೆ ಒಂದೆರಡು ಉದಾಹರಣೆ ಕೊಡುವಂತೆ ಸುದೀಪ್​ ಕೇಳಿದ್ದಾರೆ. ವಿಶ್ವ ಒಂದೆರಡು ಆಲ್ಟರ್​​​ನೇಟ್​ ಸಿನಿಮಾ ಹೀರೋಯಿನ್​ಗಳ ಹೆಸರು ಹೇಳಿದ್ದ ಎಂದರು ರಘು. ಆಗ ಸುದೀಪ್,​ ಒಂದೆರಡು ಹೀರೋಯಿನ್​ಗಳ ಹೆಸರನ್ನು ಹೇಳಿ ಎಂದು ಮರು ಪ್ರಶ್ನೆ ಹಾಕಿದರು. ಇದಕ್ಕೆ ಉತ್ತರಿಸಿದ್ದ ವಿಶ್ವ, ನನಗೇನು ಗೊತ್ತಿಲ್ಲ ಸಾರ್​.. ನಾನು ತುಂಬಾ ಒಳ್ಳೆಯವನು ಎಂದರು. ಈ ಘಟನೆ ನಂತರ ವಿಶ್ವ ತುಂಬಾನೇ ನಾಟಿ ಎನ್ನುವ ವಿಚಾರ ಮನೆ ಮಂದಿಗೆ ಗೊತ್ತಾಗಿದೆ. ಈ ವಿಚಾರ ಕೇಳಿ ಮನೆಯ ಮಂದಿಯೆಲ್ಲ ಅಚ್ಚರಿ ಹೊರ ಹಾಕಿದ್ದಾರೆ. ಸುದೀಪ್​ ಕೂಡ ಈ ವಿಚಾರ ತಿಳಿದು ಭಾರೀ ಅಚ್ಚರಿಗೊಂಡಿದ್ದಾರೆ.

ಇದನ್ನೂ ಓದಿ: Bigg Boss Kannada 8 Elimination: ಬಿಗ್​ ಬಾಸ್​ ಮನೆಯಿಂದ ಗೀತಾ ಭಾರತಿ ಭಟ್​ ಔಟ್​; ಎಲಿಮಿನೇಷನ್​ಗೆ ಇಲ್ಲಿದೆ ಬಲವಾದ ಕಾರಣ

Published On - 7:14 am, Mon, 22 March 21

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More