AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿವ್ಯಾ ಉರುಡುಗ ಮತ್ತು ಅರವಿಂದ್ ಪ್ರೀತಿ-ಪ್ರಣಯದ ವಿಚಾರಕ್ಕೆ ಸುದೀಪ್​ ಕೊಟ್ರು ಮಸ್ತ್​ ಪಂಚ್​

ಬಿಗ್​ ಬಾಸ್ ಮನೆಯ ಜೋಡಿ ಆಟದಲ್ಲಿ ದಿವ್ಯಾ-ಅರವಿಂದ್​ ಒಟ್ಟಿಗೇ ಇದ್ದರು. ಆಟ ಮುಗಿದರೂ ಇಬ್ಬರೂ ಒಟ್ಟಿಗೇ ಇರುತ್ತಿದ್ದರು. ಇದನ್ನು ನೋಡಿದ ಮನೆ ಮಂದಿ ಹಿಂದಿನಿಂದ ಮಾತನಾಡಿಕೊಳ್ಳುತ್ತಿದ್ದಾರೆ.

ದಿವ್ಯಾ ಉರುಡುಗ ಮತ್ತು ಅರವಿಂದ್ ಪ್ರೀತಿ-ಪ್ರಣಯದ ವಿಚಾರಕ್ಕೆ ಸುದೀಪ್​ ಕೊಟ್ರು ಮಸ್ತ್​ ಪಂಚ್​
ದಿವ್ಯಾ-ಅರವಿಂದ್​-ಸುದೀಪ್​
ರಾಜೇಶ್ ದುಗ್ಗುಮನೆ
|

Updated on: Mar 21, 2021 | 4:10 PM

Share

ಜೋಡಿ ಟಾಸ್ಕ್​ನಲ್ಲಿ ದಿವ್ಯಾ ಉರುಡುಗ ಹಾಗೂ ಅರವಿಂದ್​ ಕೆಪಿ ಒಂದಾಗಿದ್ದರು. ಈ ಜೋಡಿ ನೋಡಿದ ಅಭಿಮಾನಿಗಳು ಸಖತ್​ ಖುಷಿ ಆಗಿದ್ದರು. ಈ ವಿಚಾರ ವೀಕೆಂಡ್​ನಲ್ಲೂ ಭಾರೀ ಚರ್ಚೆ ಆಗಿದೆ. ಅಷ್ಟೇ ಅಲ್ಲ ಈ ವಿಚಾರಕ್ಕೆ ಸಂಬಂಧಿಸಿದಂತೆ ಕಿಚ್ಚ ಸುದೀಪ್​ ಕೂಡ ಈ ಜೋಡಿಗೆ ಸೂಪರ್​ ಟಾಂಗ್​ ನೀಡಿದ್ದಾರೆ. ಬಿಗ್​ ಬಾಸ್ ಮನೆಯ ಜೋಡಿ ಆಟದಲ್ಲಿ ದಿವ್ಯಾ-ಅರವಿಂದ್​ ಒಟ್ಟಿಗೇ ಇದ್ದರು. ಆಟ ಮುಗಿದರೂ ಇಬ್ಬರೂ ಒಟ್ಟಿಗೇ ಸುತ್ತಾಟ ನಡೆಸುತ್ತಿದ್ದರು. ಇದನ್ನು ನೋಡಿದ ಮನೆ ಮಂದಿ ಹಿಂದಿನಿಂದ ಮಾತನಾಡಿಕೊಳ್ಳುತ್ತಿದ್ದಾರೆ.

ಇನ್ನು, ಈ ಜೋಡಿ ಪ್ರೇಕ್ಷಕರಿಗೂ ಇಷ್ಟವಾಗಿದೆ ಎಂಬುದಕ್ಕೆ ಕಲರ್ಸ್​ ಕನ್ನಡ ವಾಹಿನಿ ಹಾಕಿದ ಪೋಸ್ಟ್​ಗೆ ವೀಕ್ಷಕರು ನೀಡಿದ ಉತ್ತರವೇ ಸಾಕ್ಷಿ. ನಿಮ್ಮ ನೆಚ್ಚಿನ ಜೋಡಿ ಯಾವುದು? ಎಂದು ಕಲರ್ಸ್​ ಕನ್ನಡ ವಾಹಿನಿ ಪೋಸ್ಟ್​ ಒಂದನ್ನು ಹಂಚಿಕೊಂಡಿತ್ತು. ಈ ಪೋಸ್ಟ್​ಗೆ ಬಹುತೇಕರ ಅರವಿಂದ್​-ದಿವ್ಯಾ ಉರುಡುಗ ಎಂದು ಉತ್ತರ ನೀಡಿದ್ದಾರೆ.

ಇನ್ನು ಮತ್ತೊಂದು ಪೋಸ್ಟ್​ನಲ್ಲಿ ಇಂದು ನಡೆಯಲಿರುವ ಸೂಪರ್ ಸಂಡೆ ವಿತ್ ಸುದೀಪ ಬಗ್ಗೆ ಪೋಸ್ಟ್​ ಒಂದನ್ನು ಹಾಕಲಾಗಿದೆ. ಇದರಲ್ಲಿ ಸುದೀಪ್​ ಈ ಜೋಡಿಯ ಕಾಲೆಳೆದಿದ್ದಾರೆ. ಅರವಿಂದ ಹಾಗೂ ದಿವ್ಯಾ ಒಟ್ಟಿಗೆ ಕುಳಿತಿರುವ ಬಗ್ಗೆ ಮಾತನಾಡಿರುವ ಸುದೀಪ್​, ಎಲ್ಲರೂ ಸ್ಥಾನ ಬದಲಾಯಿಸಿಕೊಂಡಿದ್ದಾರೆ. ಆದರೆ, ಅವರಿಬ್ಬರು ಮಾತ್ರ ಸ್ಥಾನ ಬದಲಾಯಿಸಿಲ್ಲ ಎಂದು ಮಾತು ಆರಂಭಿಸಿದ್ದಾರೆ. ಇದಕ್ಕೆ ಮನೆ ಮಂದಿ ಎಲ್ಲ ನಕ್ಕಿದ್ದಾರೆ.

ಇನ್ನು, ಮನೆ ಮಂದಿ ಅವರ ಜತೆ ಮಾತನಾಡಿಲ್ಲ ಎಂದರೆ ದಿವ್ಯಾಗೆ ಬೇಸರವಾಗುತ್ತದೆ ಎಂದು ಅರವಿಂದ್ ಹೇಳಿದ್ದರು. ಇದಕ್ಕೆ ನಗುತ್ತಲೇ ಉತ್ತರಿಸಿರುವ ಸುದೀಪ್​, ಬೇರೆಯವರು ಮಾತಾಡೋಕೂ ನೀವು ಅವಕಾಶ ಮಾಡಿಕೊಡಬೇಕಲ್ಲವೇ ಅರವಿಂದ್​? ಎಂದು ಕಾಲೆಳೆದಿದ್ದಾರೆ.

ಇದನ್ನೂ ಓದಿ: ಕಿಚ್ಚ ಸುದೀಪ್​ ಎದುರು ದಿವ್ಯಾ ಸುರೇಶ್ ಪ್ರೀತಿ ನಾಟಕ ಬಯಲು; ಸ್ವಾರ್ಥಕ್ಕಾಗಿ ಇಷ್ಟೆಲ್ಲಾ ಮಾಡಿದ್ರಾ?

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ