AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಚ್ಚ ಸುದೀಪ್​ ಎದುರು ದಿವ್ಯಾ ಸುರೇಶ್ ಪ್ರೀತಿ ನಾಟಕ ಬಯಲು; ಸ್ವಾರ್ಥಕ್ಕಾಗಿ ಇಷ್ಟೆಲ್ಲಾ ಮಾಡಿದ್ರಾ?

ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಮನೆಯಲ್ಲಿ ಅತಿ ಹೆಚ್ಚು ಪ್ರೀತಿಗೆ ಒಳಪಡುವ ವ್ಯಕ್ತಿ ಯಾರು ಎಂದು ಸುದೀಪ್​ ಕೇಳಿದ್ದರು. ಇದಕ್ಕೆ ಮನೆಯಲ್ಲಿ ಬಹುತೇಕರು ಮಂಜು ಅವರ ಹೆಸರನ್ನೇ ಹೇಳಿದ್ದರು.

ಕಿಚ್ಚ ಸುದೀಪ್​ ಎದುರು ದಿವ್ಯಾ ಸುರೇಶ್ ಪ್ರೀತಿ ನಾಟಕ ಬಯಲು; ಸ್ವಾರ್ಥಕ್ಕಾಗಿ ಇಷ್ಟೆಲ್ಲಾ ಮಾಡಿದ್ರಾ?
ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​
ರಾಜೇಶ್ ದುಗ್ಗುಮನೆ
| Edited By: |

Updated on: Mar 21, 2021 | 3:26 PM

Share

ದಿವ್ಯಾ ಸುರೇಶ್​ ಹಾಗೂ ಮಂಜು ಪಾವಗಡ ತುಂಬಾನೇ ಆಪ್ತರಾಗಿದ್ದಾರೆ. ಅವರ ನಡುವೆ ಪ್ರೀತಿ ಇದೆ ಎನ್ನುವ ಅನುಮಾನ ಪ್ರೇಕ್ಷಕರಲ್ಲಿತ್ತು. ಆದರೆ, ಈಗ ಕಿಚ್ಚ ಸುದೀಪ್​ ಎದುರು ದಿವ್ಯಾ ಸುರೇಶ್ ಪ್ರೀತಿ ನಾಟಕ ಬಯಲಾಗಿದೆ. ದಿವ್ಯಾ ಸುರೇಶ್ ಸ್ವಾರ್ಥಕ್ಕಾಗಿ ಇಷ್ಟೆಲ್ಲಾ ಮಾಡಿದರೇ ಎನ್ನುವ ಪ್ರಶ್ನೆ ಕೂಡ ಮೂಡಿದೆ. ಮಂಜು ಎಂದರೆ ತುಂಬಾನೇ ಇಷ್ಟ ಎಂದು ಹೇಳಿಕೊಂಡಿದ್ದರು ದಿವ್ಯಾ. ಅಷ್ಟೇ ಅಲ್ಲ ಸಮಯ ಸಿಕ್ಕಾಗೆಲ್ಲ ಮಂಜು ಜೊತೆ ಕಾಲ ಕಳೆಯುತ್ತಾರೆ ದಿವ್ಯಾ. ಇತ್ತೀಚೆಗೆ ಮಂಜು ಕೈ ಮೇಲೆ ದಿವ್ಯಾ ಲವ್ಸ್​ ಮಂಜು ಎಂದು ಕೂಡ ಬರೆದಿದ್ದರು. ಆರಂಭದಲ್ಲಿ ಇದು ನಾಟಕ ಎನಿಸಿದರೂ ಇತ್ತೀಚೆಗೆ ಇದು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ ಎಂದುಕೊಂಡಿದ್ದರು ಪ್ರೇಕ್ಷಕರು. ಆದರೆ, ಇದು ಕೇವಲ ನಾಟಕವೇ ಎನ್ನುವ ಅನುಮಾನ ಮೂಡಿದೆ.

ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಮನೆಯಲ್ಲಿ ಅತಿ ಹೆಚ್ಚು ಪ್ರೀತಿಗೆ ಒಳಪಡುವ ವ್ಯಕ್ತಿ ಯಾರು ಎಂದು ಸುದೀಪ್​ ಕೇಳಿದ್ದರು. ಇದಕ್ಕೆ ಮನೆಯಲ್ಲಿ ಬಹುತೇಕರು ಮಂಜು ಅವರ ಹೆಸರನ್ನೇ ಹೇಳಿದ್ದರು. ಹೀಗಾಗಿ, ತುಲಾಭಾರಕ್ಕೆ ಮಂಜು ಅವರನ್ನು ಸುದೀಪ್​ ಆಯ್ಕೆ ಮಾಡಿದ್ದರು.

ನಿಯಮದಂತೆ ಒಂದು ಕಡೆ ಮಂಜು ಕೂರುತ್ತಾರೆ. ಮತ್ತೊಂದು ಕಡೆ ಮನೆಯ ಪ್ರತಿ ಸ್ಪರ್ಧಿಯೂ ತಮಗೆ ಏನಿಷ್ಟವೂ ಅದನ್ನು ಇಡಬೇಕು. ಅವರು ಹಾಕುವ ವಸ್ತುವನ್ನು ಬಿಗ್​ ಬಾಸ್​ ಪಡೆದುಕೊಳ್ಳುತ್ತಾರೆ ಮತ್ತು ಅದನ್ನು ಹಿಂದಿರುಗಿಸುವುದಿಲ್ಲ ಎನ್ನುವ ಕಂಡೀಷನ್​ ಹಾಕಲಾಯಿತು.

ಮನೆಯಲ್ಲಿ ಕೆಲವರು ಕಾಫಿ ಕಪ್​ ಹಾಕಿ ತಾವು ಕಾಫಿಯನ್ನೇ ಕುಡಿಯುವುದಿಲ್ಲ ಎಂದರು. ಇನ್ನೂ ಕೆಲವರು ಡಂಬೆಲ್​, ಯೋಗಾ ಮ್ಯಾಟ್​ ಹಾಕಿ ದಿನದ ವ್ಯಾಯಾಮ, ಯೋಗವನ್ನೇ ತ್ಯಜಿಸಲು ಸಿದ್ಧರಾದರು. ಆದರೆ, ದಿವ್ಯಾ ಸುರೇಶ್​ ಮಾತ್ರ ಏನನ್ನೂ ಹಾಕಲು ಮುಂದಾಗಿಲ್ಲ. ಆ ಬಗ್ಗೆ ಕೇಳಿದರೆ, ನಾನು ಪ್ರೀತಿಸುವ ವಸ್ತುವನ್ನು ಬಿಟ್ಟುಕೊಡಲ್ಲ. ಬೇಕಿದ್ರೆ, ಶಮಂತ್​ ಅವರನ್ನು ತಕ್ಕಡಿಯಮೇಲೆ ಕೂರಿಸುತ್ತೇನೆ ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟರು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ದಿವ್ಯಾ ಯಾವಾಗಲೂ ಮಂಜು ಹಿಂದೆಯೇ ಸುತ್ತಾಡುತ್ತಿರುತ್ತಾರೆ. ಆದರೆ, ತುಲಾಭಾರದ ವಿಚಾರ ಬಂದಾಗ ಅವರು ಏನನ್ನೂ ಹಾಕಿಲ್ಲ. ಇದನ್ನು ನೋಡಿದ ಅನೇಕರು ದಿವ್ಯಾ ಬಗ್ಗೆ ಕಿಡಿಕಾರಿದ್ದಾರೆ. ಅವರದನ್ನು ಪ್ರೀತಿಯ ನಾಟಕ ಎಂದಿದ್ದಾರೆ.

ಇದನ್ನೂ ಓದಿ: Bigg Boss Elimination: ಬಿಗ್​ ಬಾಸ್​ ಮನೆಯಿಂದ ಹೊರಬಂದ ಗೀತಾ? ‘ಬ್ರಹ್ಮಗಂಟು’ ನಟಿಯ ಆಟ ಅಂತ್ಯ

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ಬರದಿಂದ ನಲುಗಿದ ರೈತರಿಗೆ ಗುಡ್ ನ್ಯೂಸ್:ಬರ ಪರಿಹಾರ ಘೋಷಿಸಿದ ಸರ್ಕಾರ
ಬರದಿಂದ ನಲುಗಿದ ರೈತರಿಗೆ ಗುಡ್ ನ್ಯೂಸ್:ಬರ ಪರಿಹಾರ ಘೋಷಿಸಿದ ಸರ್ಕಾರ
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಟ್ರಂಪ್ ದಂಪತಿಯಿಂದ ಅದ್ದೂರಿ ಸ್ವಾಗತ
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಟ್ರಂಪ್ ದಂಪತಿಯಿಂದ ಅದ್ದೂರಿ ಸ್ವಾಗತ
ಕಲಬುರ್ಗಿಯಲ್ಲಿ ಕನೇರಿ ಶ್ರೀಗಳ ಸಮಾವೇಶಕ್ಕೆ ತೀವ್ರ ವಿರೋಧ
ಕಲಬುರ್ಗಿಯಲ್ಲಿ ಕನೇರಿ ಶ್ರೀಗಳ ಸಮಾವೇಶಕ್ಕೆ ತೀವ್ರ ವಿರೋಧ
ಮತದಾರರ ಹೆಸರು ಡಿಲೀಟ್: ಬಿಜೆಪಿ ಎಂಎಲ್​​ಎ ವಿರುದ್ಧ ದಾಖಲೆ ಬಿಡುಗಡೆ
ಮತದಾರರ ಹೆಸರು ಡಿಲೀಟ್: ಬಿಜೆಪಿ ಎಂಎಲ್​​ಎ ವಿರುದ್ಧ ದಾಖಲೆ ಬಿಡುಗಡೆ
ಕನ್ನಡ ಸಿನಿಮಾಗಳ ಉಳಿವಿಗಾಗಿ ಪ್ರೇಕ್ಷಕರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಮನವಿ
ಕನ್ನಡ ಸಿನಿಮಾಗಳ ಉಳಿವಿಗಾಗಿ ಪ್ರೇಕ್ಷಕರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಮನವಿ
ಬೆಂಗಳೂರಿನಲ್ಲಿ ಧರ್ಮಸ್ಥಳ ದೇವಸ್ಥಾನದ ಮಾದರಿಯಲ್ಲಿ ಗಣಪನ ಪ್ರತಿಷ್ಠಾಪನೆ
ಬೆಂಗಳೂರಿನಲ್ಲಿ ಧರ್ಮಸ್ಥಳ ದೇವಸ್ಥಾನದ ಮಾದರಿಯಲ್ಲಿ ಗಣಪನ ಪ್ರತಿಷ್ಠಾಪನೆ
ಚೀನಾ ಅಧ್ಯಕ್ಷರಿಗೆ ಸ್ವಾಗತ ಕೋರುವಾಗ ಮುಖ ಸಿಂಡರಿಸಿದ ಡೊನಾಲ್ಡ್ ಟ್ರಂಪ್
ಚೀನಾ ಅಧ್ಯಕ್ಷರಿಗೆ ಸ್ವಾಗತ ಕೋರುವಾಗ ಮುಖ ಸಿಂಡರಿಸಿದ ಡೊನಾಲ್ಡ್ ಟ್ರಂಪ್
3 ದಿನ ಕರ್ನಾಟಕದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ
3 ದಿನ ಕರ್ನಾಟಕದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ
ಎಲ್ ನಿನೋ ಕಂಟಕ: ಮುಂದಿನ 6 ತಿಂಗಳಲ್ಲಿ 4.5 ಲಕ್ಷ ಮಂದಿ ಸಾವು ಭೀತಿ
ಎಲ್ ನಿನೋ ಕಂಟಕ: ಮುಂದಿನ 6 ತಿಂಗಳಲ್ಲಿ 4.5 ಲಕ್ಷ ಮಂದಿ ಸಾವು ಭೀತಿ
ನ್ಯಾಯ ಕೇಳಲು ಬಂದ ಜನರಿಗೆ ದೊಡ್ಡಬಳ್ಳಾಪುರ ಇನ್ಸ್‌ಪೆಕ್ಟರ್ ಆವಾಜ್
ನ್ಯಾಯ ಕೇಳಲು ಬಂದ ಜನರಿಗೆ ದೊಡ್ಡಬಳ್ಳಾಪುರ ಇನ್ಸ್‌ಪೆಕ್ಟರ್ ಆವಾಜ್