AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶಿ ತಂಡದ ಪರ ಪಾದಾರ್ಪಣೆ ಮಾಡಲಿರುವ ಕುಲ್ದೀಪ್ ಯಾದವ್

Kuldeep Yadav Joins Yorkshire: ಟೀಂ ಇಂಡಿಯಾದಲ್ಲಿ ಅವಕಾಶ ವಂಚಿತರಾಗಿದ್ದ ಅನುಭವಿ ಸ್ಪಿನ್ನರ್ ಕುಲ್ದೀಪ್ ಯಾದವ್ ಇದೀಗ ಇಂಗ್ಲೆಂಡ್‌ನ ಯಾರ್ಕ್‌ಷೈರ್ ಕೌಂಟಿ ತಂಡ ಸೇರಿಕೊಂಡಿದ್ದಾರೆ. 5 ಏಕದಿನ ಹಾಗೂ 3 ಕೌಂಟಿ ಪಂದ್ಯಗಳಿಗಾಗಿ ಒಪ್ಪಂದ ಮಾಡಿಕೊಂಡಿದ್ದು, ಜುಲೈ 24ರಂದು ಗ್ಲಾಮೋರ್ಗನ್ ವಿರುದ್ಧ ಏಕದಿನ ಕಪ್ ಪಂದ್ಯದ ಮೂಲಕ ಪದಾರ್ಪಣೆ ಮಾಡಲಿದ್ದಾರೆ. ಈ ಮೂಲಕ ಕುಲ್ದೀಪ್ ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿದ್ದಾರೆ.

TV9 Web
| Edited By: |

Updated on: Jul 22, 2026 | 6:58 PM

Share
 ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ಕುಲ್ದೀಪ್ ಯಾದವ್ ತಂಡದಲ್ಲಿ ಸತತವಾಗಿ ಆಯ್ಕೆಯಾಗುತ್ತಿದ್ದರೂ ಆಡುವ ಹನ್ನೊಂದರ ಬಳಗದಲ್ಲಿ ಮಾತ್ರ ಅವಕಾಶ ಸಿಗುತ್ತಿಲ್ಲ. ಐರ್ಲೆಂಡ್ ಪ್ರವಾಸದ ಬಳಿಕ ನಡೆದ ಇಂಗ್ಲೆಂಡ್ ಪ್ರವಾಸದಲ್ಲೂ ಕುಲ್ದೀಪ್​ ಅವರನ್ನು ಒಂದೇ ಒಂದು ಪಂದ್ಯದಲ್ಲಿ ಆಡಿಸಲಿಲ್ಲ. ಮ್ಯಾನೇಜ್​ಮೆಂಟ್​ನ ಈ ನಿರ್ಧಾರವೂ ಕೂಡ ಮಾಜಿ ಆಟಗಾರರ ಅಸಮಾಧಾನಕ್ಕೆ ಕಾರಣವಾಗಿತ್ತು(PC-PTI).

1 / 5
ಏಕೆಂದರೆ ಈ ಸರಣಿಗಳಲ್ಲಿ ತಂಡದ ಪರ ಸ್ಪಿನ್ನರ್​ಗಳಾಗಿ ಕಣಕ್ಕಿಳಿದವರಲ್ಲಿ ಯಾರೂ ಕೂಡ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಸ್ಟಾರ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ತಂಡದಲ್ಲಿ ಆಡಿಸಬೇಕು ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು. ಆದರೆ ಕುಲ್ದೀಪ್​ಗೆ ಒಂದೇ ಒಂದು ಅವಕಾಶವೂ ಸಿಗಲಿಲ್ಲ. ಇದೀಗ ಹೊಸ ತಂಡವನ್ನು ಕಂಡುಕೊಂಡಿರುವ ಕುಲ್ದೀಪ್ ಇಂಗ್ಲೆಂಡ್‌ನಲ್ಲಿ ಉಳಿದುಕೊಂಡು ಯಾರ್ಕ್‌ಷೈರ್ ಕೌಂಟಿ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ(PC-PTI).

2 / 5
ಕುಲ್ದೀಪ್‌ ಯಾದವ್, ಜೋ ರೂಟ್ ಮತ್ತು ಜಾನಿ ಬೈರ್‌ಸ್ಟೋವ್‌ರಂತಹ ಸ್ಟಾರ್ ಇಂಗ್ಲಿಷ್ ಕ್ರಿಕೆಟಿಗರಿಗೆ ನೆಲೆಯಾಗಿರುವ ಯಾರ್ಕ್‌ಷೈರ್ ಕೌಂಟಿ ಕ್ರಿಕೆಟ್ ಕ್ಲಬ್ ಪರ ಆಡಲು ಸಜ್ಜಾಗಿದ್ದಾರೆ, ಮುಂದಿನ ಕೆಲವು ಪಂದ್ಯಗಳಲ್ಲಿ ಕುಲದೀಪ್ ಅವರನ್ನು ಆಡಿಸಲು ಯಾರ್ಕ್‌ಷೈರ್ ಕೌಂಟಿ ಒಪ್ಪಂದ ಮಾಡಿಕೊಂಡಿದೆ(PC-PTI).

3 / 5
ಈ ಬಗ್ಗೆ ಯಾರ್ಕ್‌ಷೈರ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು ಕುಲ್ದೀಪ್ ಐದು ಏಕದಿನ ಪಂದ್ಯಗಳು ಮತ್ತು ಮೂರು ಕೌಂಟಿ ಪಂದ್ಯಗಳನ್ನು ಆಡಲು ಕ್ಲಬ್‌ನ ಭಾಗವಾಗಿರುತ್ತಾರೆ. ಯಾರ್ಕ್‌ಷೈರ್ ಸಿಸಿಸಿ ಕುಲ್ದೀಪ್‌ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿರುವುದನ್ನು ಘೋಷಿಸಲು ಸಂತೋಷಪಡುತ್ತದೆ. ಕುಲ್ದೀಪ್ ತಂಡದ ಪರ ಐದು ಮೆಟ್ರೋ ಬ್ಯಾಂಕ್ ಏಕದಿನ ಕಪ್ ಪಂದ್ಯಗಳು ಮತ್ತು ಮೂರು ರೋಥೆಸೆ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯಗಳನ್ನು ಆಡಲಿದ್ದಾರೆ ಎಂದಿದೆ(PC-PTI).

4 / 5
ಇದೀಗ ಯಾರ್ಕ್‌ಷೈರ್ ತಂಡವನ್ನು ಸೇರಿಕೊಂಡಿರುವ ಕುಲ್ದೀಪ್, ಜುಲೈ 24 ರ ಶುಕ್ರವಾರ ನಡೆಯಲಿರುವ ಏಕದಿನ ಕಪ್ ಪಂದ್ಯದಲ್ಲಿ ತಂಡದ ಪರ ಆಡಲಿದ್ದಾರೆ. ಗ್ಲಾಮೋರ್ಗನ್ ವಿರುದ್ಧದ ಈ ಪಂದ್ಯವು ಇಂಗ್ಲಿಷ್ ದೇಶೀಯ ಕ್ರಿಕೆಟ್‌ನಲ್ಲಿ ಅವರ ಚೊಚ್ಚಲ ಪ್ರವೇಶವಾಗಿದೆ. ಕೌಂಟಿ ಕ್ಲಬ್‌ನಲ್ಲಿ ಕುಲ್ದೀಪ್ ಆಡುತ್ತಿರುವುದು ಇದೇ ಮೊದಲು(PC-PTI).

5 / 5
Follow Us