Bigg Boss Elimination: ಬಿಗ್​ ಬಾಸ್​ ಮನೆಯಿಂದ ಹೊರಬಂದ ಗೀತಾ? ‘ಬ್ರಹ್ಮಗಂಟು’ ನಟಿಯ ಆಟ ಅಂತ್ಯ

ಟಾಸ್ಕ್​ ವಿಚಾರದಲ್ಲಿ ಗೀತಾ ಭಾರತಿ ಭಟ್​ ಆಗಾಗ ಹಿನ್ನಡೆ ಅನುಭವಿಸುತ್ತಿದ್ದರು. ಅಲ್ಲದೆ, ಮೊಸಳೆ ಕಣ್ಣೀರು ಹಾಕುತ್ತಾರೆ ಎಂಬ ಆರೋಪ ಕೂಡ ಅವರ ಮೇಲಿತ್ತು.

Bigg Boss Elimination: ಬಿಗ್​ ಬಾಸ್​ ಮನೆಯಿಂದ ಹೊರಬಂದ ಗೀತಾ? ‘ಬ್ರಹ್ಮಗಂಟು’ ನಟಿಯ ಆಟ ಅಂತ್ಯ
ಬಿಗ್​ ಬಾಸ್​ ಕನ್ನಡ ಸೀಸನ್​ 8
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on: Mar 21, 2021 | 2:40 PM

ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಮೂರನೇ ವಾರದ ಎಲಿಮಿನೇಷನ್​ ಪ್ರಕ್ರಿಯೆ ನಡೆದಿದೆ. ಮೂಲಗಳ ಪ್ರಕಾರ ನಟಿ ಗೀತಾ ಭಾರತಿ ಭಟ್​ ಅವರು ಎಲಿಮಿನೇಟ್​ ಆಗಿದ್ದಾರೆ. ‘ಬ್ರಹ್ಮಗಂಟು’ ಧಾರಾವಾಹಿ ಮೂಲಕ ಫೇಮಸ್​ ಆಗಿದ್ದ ಗೀತಾ ಅವರು ಬಿಗ್​ ಬಾಸ್​ ಆಟ ಮುಂದುವರಿಸಲು ಸೋತಿದ್ದಾರೆ. ಡೊಡ್ಮನೆಯಲ್ಲಿ ಮೂರು ವಾರಗಳ ಕಾಲ ಅವರು ಪೈಪೋಟಿ ನೀಡಿದ್ದರು.

ಈ ವಾರದ ನಾಮಿನೇಷನ್​ ಪಟ್ಟಿಯಲ್ಲಿ ಶಮಂತ್​ ಬ್ರೋ ಗೌಡ, ನಿಧಿ ಸುಬ್ಬಯ್ಯ, ಗೀತಾ ಭಾರತಿ ಭಟ್​, ರಘು ಗೌಡ, ಅರವಿಂದ್ ಕೆ.ಪಿ., ವಿಶ್ವನಾಥ್​, ದಿವ್ಯಾ ಉರುಡುಗ, ದಿವ್ಯಾ ಸುರೇಶ್, ಪ್ರಶಾಂತ್​ ಸಂಬರಗಿ ಇದ್ದರು. 9 ಸ್ಪರ್ಧಿಗಳ ಪೈಕಿ ಒಬ್ಬರು ಬಿಗ್​ ಬಾಸ್​ ಮನೆಯಿಂದ ಭಾನುವಾರ ಹೊರ ಹೋಗುವುದು ಖಚಿತ ಆಗಿತ್ತು. ಅರವಿಂದ್, ದಿವ್ಯಾ ಸುರೇಶ್​, ಪ್ರಶಾಂತ್​ ಸಂಬರಗಿ, ನಿಧಿ ಸುಬ್ಬಯ್ಯ ಸೇಫ್​ ಆಗಿದ್ದಾರೆ ಎಂದು ಕಿಚ್ಚ ಸುದೀಪ್ ಶನಿವಾರವೇ (ಮಾ.20)​ ಘೋಷಣೆ ಮಾಡಿದ್ದರು.

ಇನ್ನುಳಿದ ಸ್ಪರ್ಧಿಗಳಾದ ಶಮಂತ್​, ಗೀತಾ, ರಘು ಗೌಡ, ವಿಶ್ವನಾಥ್, ದಿವ್ಯಾ ಉರುಡುಗ ಪೈಕಿ ಯಾರು ಎಲಿಮಿನೇಟ್​ ಆಗುತ್ತಾರೆ ಎಂಬ ಕೌತುಕ ಮನೆ ಮಾಡಿತ್ತು. ಈಗ ಗೀತಾ ಹೊರಹೋಗಿರುವ ಸುದ್ದಿ ಕೇಳಿಬಂದಿದೆ. ಸೀರಿಯಲ್ ವೀಕ್ಷಕರಿಗೆ ಗೀತೆ ಭಾರತಿ ಭಟ್​ ಹೆಸರು ಚಿರಪರಿಚಿತ. ಈಗ ಬಿಗ್​ ಬಾಸ್​ ಮೂಲಕವೂ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಂತಾಗಿದೆ. ಮೂರನೇ ವಾರದ ಎಲಿಮಿನೇಷನ್​ ಎಪಿಸೋಡ್​ ಮಾ.21ರ ರಾತ್ರಿ ಪ್ರಸಾರ ಆಗಲಿದೆ.

ಟಾಸ್ಕ್​ ವಿಚಾರದಲ್ಲಿ ಗೀತಾ ಆಗಾಗ ಹಿನ್ನಡೆ ಅನುಭವಿಸುತ್ತಿದ್ದರು. ಅಲ್ಲದೆ, ಮೊಸಳೆ ಕಣ್ಣೀರು ಹಾಕುತ್ತಾರೆ ಎಂಬ ಆರೋಪ ಕೂಡ ಅವರ ಮೇಲಿತ್ತು. ಅನವಶ್ಯಕವಾಗಿ ಭಾವುಕರಾಗುತ್ತಾರೆ ಹಾಗೂ ಅದನ್ನೇ ಸ್ಟ್ರ್ಯಾಟಜಿಯಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕೆಲವೊಮ್ಮೆ ಮನೆಯ ಸದಸ್ಯರು ಅಭಿಪ್ರಾಯ ಹಂಚಿಕೊಂಡಿದ್ದುಂಟು. ಅದೇ ಕಾರಣಕ್ಕೆ ವೀಕ್ಷಕರ ವೋಟ್​ ಪಡೆಯುವಲ್ಲಿಯೂ ಅವರು ಎಡವಿರುವ ಸಾಧ್ಯತೆ ಇದೆ. ಸದ್ಯ 14 ಸ್ಪರ್ಧಿಗಳ ನಡುವೆ ಬಿಗ್​ ಬಾಸ್​ ಹಣಾಹಣಿ ಮುಂದುವರಿದಿದೆ.

ಇದನ್ನೂ ಓದಿ: BBK8: ತಂದೆ-ಮಗಳ ಪ್ರೀತಿ ಮೇಲೆಯೇ ಶಂಕರ್​ ಅಶ್ವತ್ಥ್​ಗೆ ಅನುಮಾನ! ಮಾನವೀಯತೆಗೆ ಬೆಲೆ ಇಲ್ವಾ?

ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್