ಪದವೀಧರರ ಹೈಟೆಕ್ ಕೃಷಿ; ಲಕ್ಷ ಲಕ್ಷ ರೂ. ನಿರೀಕ್ಷೆಯಲ್ಲಿರುವ ಯಾದಗಿರಿ ಯುವ ರೈತರು
ಥಾಮ್ಸನ್ ಸೀಡ್ ಲೆಸ್ ಒಣ ದ್ರಾಕ್ಷಿ ತಳಿಯನ್ನ 13 ಎಕ್ಕರೆಯಲ್ಲಿ ಬೆಳೆಯುತ್ತಿದ್ದಾರೆ. ಇದಕ್ಕಾಗಿ ಇವರು 40 ಲಕ್ಷ ಖರ್ಚು ಮಾಡಿದ್ದಾರೆ. ಬ್ಯಾಂಕ್ನಲ್ಲಿ ಸಾಲ ಪಡೆದು ಧೈರ್ಯದಿಂದ ಕೃಷಿ ಮಾಡುತ್ತಿದ್ದಾರೆ. ಕೆಲವೆ ದಿನಗಳಲ್ಲಿ ಬೆಳೆ ಕೈಗೆ ಬರಲಿದ್ದು, ಲಕ್ಷಾಂತರ ರೂ. ಲಾಭದ ನಿರೀಕ್ಷೆಯಲ್ಲಿದ್ದಾರೆ
ಯಾದಗಿರಿ: ಕೃಷಿ ಎಂದರೆ ಸಾಕು ಈಗಿನ ಜನ ಮಾರುದ್ದ ಓಡಿ ಹೋಗುತ್ತಾರೆ. ಯಾಕಪ್ಪ ಬೇಕು ಬಿಸಿಲಿನಲ್ಲಿ, ಜಮೀನಿನಲ್ಲಿ ದುಡಿಯುವ ಕೆಲಸ ಅಂತಾರೆ. ಯಾವುದಾದರು ಎಂಎನ್ಸಿ ಕಂಪನಿಯಲ್ಲಿ ಕೆಲಸ ಪಡೆದು ಆರಾಮಾಗಿ ಎಸಿ ರೂಂನಲ್ಲಿ ಕುಳಿತು ಕೆಲಸ ಮಾಡಲು ಬಯಸುತ್ತಾರೆ. ಆದರೆ ಜಿಲ್ಲೆಯ ಸಹೋದರಿಬ್ಬರು ಈಗಿನ ಹೈಟೆಕ್ ದುನಿಯಾದಲ್ಲೂ ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ. ಜಿಲ್ಲೆಯ ಸುರಪುರ ತಾಲೂಕಿನ ನಗನೂರ ಗ್ರಾಮದ ಪ್ರಶಾಂತ ಹಾಗೂ ಪ್ರವೀಣ್ ಸಹೋದರರು ಕೃಷಿಯಲ್ಲಿ ಸಾಧನೆ ಮಾಡಿ ಈಗಿನ ಯುವಕರಿಗೆ ಮಾದರಿಯಾಗಿದ್ದಾರೆ. ಇವರ ಕೃಷಿ ಪದ್ಧತಿಯನ್ನ ನೋಡಲು ಕೃಷಿ ಆಸಕ್ತರು ಬಂದು ಹೋಗುತ್ತಿದ್ದಾರೆ.
ಪ್ರಶಾಂತ್ ಮತ್ತು ಪ್ರವೀಣ್ ಪದವೀಧರರು ಆಗಿದ್ದಾರೆ. ಪ್ರಶಾಂತ್ ಎಂಬಿಎ ಪದವೀಧರರಾಗಿದ್ದರೆ, ಪ್ರವೀಣ್ ಬಿಎಸ್ಸಿ ಮುಗಿಸಿದ್ದಾರೆ. ಇಬ್ಬರು ಉನ್ನತ ಶಿಕ್ಷಣ ಮುಗಿಸಿದ್ದರೂ ಕೃಷಿಯಲ್ಲಿ ಬದುಕು ಕಟ್ಟಿಕೊಳ್ಳಲು ಮುಂದಾಗಿ ಈಗ ಯಶಸ್ಸು ಕಂಡಿದ್ದಾರೆ. ತಂದೆಯಿಂದ ಬಳುವಳಿಯಾಗಿ ಬಂದ ಕೃಷಿಗೆ ಇವರು ಒಂದಿಷ್ಟು ಹೈಟೆಕ್ ಟಚ್ ಕೊಡುವ ಮೂಲಕ ಒಣ ದ್ರಾಕ್ಷಿ ಬೆಳೆಯುತ್ತಿದ್ದಾರೆ.
ಲಕ್ಷ ಲಕ್ಷ ರೂ. ಲಾಭದ ನಿರೀಕ್ಷೆ ಥಾಮ್ಸನ್ ಸೀಡ್ ಲೆಸ್ ಒಣ ದ್ರಾಕ್ಷಿ ತಳಿಯನ್ನ 13 ಎಕ್ಕರೆಯಲ್ಲಿ ಬೆಳೆಯುತ್ತಿದ್ದಾರೆ. ಇದಕ್ಕಾಗಿ ಇವರು 40 ಲಕ್ಷ ಖರ್ಚು ಮಾಡಿದ್ದಾರೆ. ಬ್ಯಾಂಕ್ನಲ್ಲಿ ಸಾಲ ಪಡೆದು ಧೈರ್ಯದಿಂದ ಕೃಷಿ ಮಾಡುತ್ತಿದ್ದಾರೆ. ಕೆಲವೆ ದಿನಗಳಲ್ಲಿ ಬೆಳೆ ಕೈಗೆ ಬರಲಿದ್ದು, ಲಕ್ಷಾಂತರ ರೂ. ಲಾಭದ ನಿರೀಕ್ಷೆಯಲ್ಲಿದ್ದಾರೆ.
ಕೆಜಿಗೆ 270 ರಿಂದ 300 ದರ ಮಹಾರಾಷ್ಟ್ರದ ಸಾಂಗ್ಲಿಗೆ ತೆರಳಿ ಅಲ್ಲಿಗೆ ಹೋಗಿ ಮಾರಾಟ ಮಾಡಲಾಗುತ್ತಿದೆ. ಮಾರುಕಟ್ಟೆಗೆ ಅಲ್ಲಿಯೇ ವ್ಯವಸ್ಥೆ ಇದೆ. ಒಣ ದ್ರಾಕ್ಷಿ 15 ಕೆಜಿಯ ಬಾಕ್ಸ್ ಮಾಡಿ ಮಾರಾಟ ಮಾಡಲಾಗುತ್ತಿದೆ. ಒಣ ದ್ರಾಕ್ಷಿಗೆ ಒಂದು ಕೆಜಿ 270 ರಿಂದ 300 ರೂ. ದರವಿದೆ. ಇದರಿಂದ ಸಾಕಷ್ಟು ಆರ್ಥಿಕ ಲಾಭ ಕೂಡ ಬರುತ್ತದೆ. ಹೀಗಾಗಿ ಇದು ಕೃಷಿಗೆ ಮತ್ತಷ್ಟು ಉತ್ತೇಜನ ನೀಡಿದಂತಾಗುತ್ತದೆ.
13 ಎಕ್ಕರೆಯಲ್ಲಿ ಒಣ ದ್ರಾಕ್ಷಿ ಬೆಳೆ 13 ಎಕ್ಕರೆಯಲ್ಲಿ ಒಣ ದ್ರಾಕ್ಷಿ ಮಾಡಿರುವ ಪರಿಣಾಮ ಪ್ರತಿ ಎಕ್ಕರೆ 3 ರಿಂದ 4 ಲಕ್ಷ ರೂ. ವರೆಗೂ ಲಾಭ ಸಿಗುವ ವಿಶ್ವಾಸ ಯುವ ರೈತರಿಗೆ ಇದೆ. ಅಂದುಕೊಂಡಂತೆ ಅವರಿಗೆ ಲಾಭ ಬಂದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕೃಷಿಯಲ್ಲಿ ಸಾಧನೆ ಮಾಡಬೇಕೆಂಬ ಹಂಬಲ ಹೊತ್ತುಕೊಂಡಿದ್ದಾರೆ.
ಕೃಷಿಯಲ್ಲಿ ಏನಾದರು ಸಾಧನೆ ಮಾಡಬೇಕೆಂಬ ಹಂಬಲದಿಂದ ಒಣ ದ್ರಾಕ್ಷಿ ಬೆಳೆಯುತ್ತಿದ್ದೇವೆ. ಕೆಲವೆ ದಿನಗಳಲ್ಲಿ ಬೆಳೆ ಕೈಗೆ ಬರಲಿದೆ. ನಮ್ಮೂರಲ್ಲೇ ಇದ್ದುಕೊಂಡು ನಾವು ಮನಸ್ಸು ಮಾಡಿದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂದು ಯುವ ರೈತ ಪ್ರಶಾಂತ್ ಅಭಿಪ್ರಾಯಪಟ್ಟರೆ, ಬ್ಯಾಂಕ್ನಲ್ಲಿ ಸಾಲ ಮಾಡಿ ದೊಡ್ಡ ತೊಂದರೆ ತೆಗೆದುಕೊಂಡು ದ್ರಾಕ್ಷಿ ಬೆಳೆಯುತ್ತಿದ್ದು, ಕೈ ಹಿಡಿಯುವ ವಿಶ್ವಾಸವಿದೆ. ಕೃಷಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಇದು ಇದ್ದರೆ ದೇಶ ಉಳಿಯುತ್ತದೆ ಎಂದು ಇನ್ನೊಬ್ಬ ಯುವ ರೈತರಾದ ಪ್ರವೀಣ್ ಹೇಳಿದರು.
ಇದನ್ನೂ ಓದಿ
ನಲವತ್ತು ದಿನಗಳಲ್ಲಿ ಎರಡು ಸಾವು: ಹಾವೇರಿ ಅಭಿಮಾನಿಗಳ ಕಣ್ಣೀರು
BBK8: ತಂದೆ-ಮಗಳ ಪ್ರೀತಿ ಮೇಲೆಯೇ ಶಂಕರ್ ಅಶ್ವತ್ಥ್ಗೆ ಅನುಮಾನ! ಮಾನವೀಯತೆಗೆ ಬೆಲೆ ಇಲ್ವಾ?