ನಲವತ್ತು ದಿನಗಳಲ್ಲಿ ಎರಡು ಸಾವು: ಹಾವೇರಿ ಅಭಿಮಾನಿಗಳ ಕಣ್ಣೀರು

ರಾಣೆಬೆನ್ನೂರಿನ ಕುರುಬಗೇರಿ ನಗರದ ನಿವಾಸಿ ದೆವ್ವ ಮರಿಯಪ್ಪನವರಿಗೆ ಹೋರಿ ಬೆದರಿಸುವ ಸ್ಪರ್ಧೆ ಎಂದರೆ ಎಲ್ಲಿಲ್ಲದ ಪ್ರೀತಿ. ಕಳೆದ ಕೆಲವು ವರ್ಷಗಳ ಹಿಂದೆ ಹೋರಿ ಬೆದರಿಸುವ ಸ್ಪರ್ಧೆಗೆ ಎಂತಲೆ ಹೋರಿಯೊಂದನ್ನು ತಂದಿದ್ದರು. ಮಿಂಚಿನ ಓಟ ಓಡಿ ಎಲ್ಲರ ಮನಸ್ಸು ಗೆದ್ದಿದ್ದ ಹೋರಿಗೆ ಮಾಲೀಕ ರಾಣೆಬೆನ್ನೂರು ಹುಲಿ ಎಂದು ನಾಮಕರಣ ಮಾಡಿದ್ದರು.

ನಲವತ್ತು ದಿನಗಳಲ್ಲಿ ಎರಡು ಸಾವು: ಹಾವೇರಿ ಅಭಿಮಾನಿಗಳ ಕಣ್ಣೀರು
ಮಿಂಚಿನ ಓಟ ಓಡುತ್ತಿದ್ದ ಹೋರಿ
Follow us
sandhya thejappa
|

Updated on:Mar 21, 2021 | 1:14 PM

ಹಾವೇರಿ: ಹಾವೇರಿ ಎಂದರೆ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ, ಖಾಲಿ ಗಾಡಾ ಓಡಿಸುವ ಸ್ಪರ್ಧೆ, ಕಲ್ಲು ಎಳೆಯುವ ಸ್ಪರ್ಧೆಗೆ ತುಂಬಾ ಹೆಸರುವಾಸಿ. ಅದರಲ್ಲೂ ರಾಣೆಬೆನ್ನೂರು ನಗರದ ಹುಲಿ ಮತ್ತು ಡಾನ್ ಎಂದರೆ ಕಲ್ಲು ಎಳೆಯುವ ಸ್ಪರ್ಧೆ ಮತ್ತು ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಎತ್ತಿದ ಕೈ. ಆದರೆ ನಲವತ್ತು ದಿನಗಳಲ್ಲಿ ರಾಣೆಬೆನ್ನೂರು ಹುಲಿ ಮತ್ತು ಡಾನ್ ಇಬ್ಬರೂ ಬಾರದ ಲೋಕಕ್ಕೆ ತೆರಳಿದ್ದಾರೆ.

ಮಿಂಚಿನ ಓಟಕ್ಕೆ ಹೆಸರಾಗಿದ್ದ ರಾಣೆಬೆನ್ನೂರು ಹುಲಿ ಜಿಲ್ಲೆಯ ರಾಣೆಬೆನ್ನೂರಿನ ಕುರುಬಗೇರಿ ನಗರದ ನಿವಾಸಿ ದೆವ್ವ ಮರಿಯಪ್ಪನವರಿಗೆ ಹೋರಿ ಬೆದರಿಸುವ ಸ್ಪರ್ಧೆ ಎಂದರೆ ಎಲ್ಲಿಲ್ಲದ ಪ್ರೀತಿ. ಕಳೆದ ಕೆಲವು ವರ್ಷಗಳ ಹಿಂದೆ ಹೋರಿ ಬೆದರಿಸುವ ಸ್ಪರ್ಧೆಗೆ ಎಂತಲೆ ಹೋರಿಯೊಂದನ್ನು ತಂದಿದ್ದರು. ಮೊದಲ ಬಾರಿಗೆ ಮಿಂಚಿನ ಓಟ ಓಡಿ ಎಲ್ಲರ ಮನಸ್ಸು ಗೆದ್ದಿದ್ದ ಹೋರಿಗೆ ಮಾಲೀಕ ದೆವ್ವ ಮರಿಯಪ್ಪ ರಾಣೆಬೆನ್ನೂರು ಹುಲಿ ಎಂದು ನಾಮಕರಣ ಮಾಡಿದ್ದರು. ಈ ಹೋರಿ ಶಿವಮೊಗ್ಗ, ದಾವಣಗೆರೆ, ಹಾವೇರಿ ಜಿಲ್ಲೆ ಸೇರಿದಂತೆ ಎಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನಡೆದರೂ ಅಲ್ಲಿ ಯಾರ ಕೈಗೂ ಸಿಗದಂತೆ ಶರವೇಗದ ಓಟ ಓಡಿ ಗೆಲುವು ಸಾಧಿಸಿಕೊಂಡು ಬಂದಿತ್ತು. ಸಾಕಷ್ಟು ಬೈಕ್, ಬಂಗಾರ, ನಗದು ಹಣ ಹೀಗೆ ಅನೇಕ ಬಗೆಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು.

ಕಲ್ಲು ಎಳೆಯುವದರಲ್ಲಿ ಹೆಸರು ಮಾಡಿದ್ದ ರಾಣೆಬೆನ್ನೂರು ಡಾನ್ ದೆವ್ವ ಮರಿಯಪ್ಪನವರಿಗೆ ಹೋರಿ ಬೆದರಿಸುವ ಸ್ಪರ್ಧೆಯ ಜೊತೆಗೆ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಸಾಕಷ್ಟು ಆಸಕ್ತಿ ಇತ್ತು. ಹೀಗಾಗಿ ರಾಣೆಬೆನ್ನೂರು ಡಾನ್ ಎಂಬ ಹೆಸರಿನ ಎತ್ತೊಂದನ್ನು ಕಲ್ಲು ಎಳೆಯುವ ಸ್ಪರ್ಧೆಗೆ ಎಂತಲೆ ತಯಾರು ಮಾಡಿದ್ದರು. ಎಲ್ಲಿಯೇ ಕಲ್ಲು ಎಳೆಯುವ ಸ್ಪರ್ಧೆ ನಡೆದರೂ ಅಲ್ಲಿ ಡಾನ್ ಹೆಸರಿನ ಎತ್ತು ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡೆ ಬರುತ್ತಿತ್ತು. ಟನ್ ಗಟ್ಟಲೆ ಭಾರವಾದ ಕಲ್ಲುಗಳನ್ನು ಎಳೆದುಕೊಂಡು ಸೇರಬೇಕಾದ ಗೆಲುವಿನ ದಡವನ್ನು ಸೇರುತ್ತಿತ್ತು. ಕಲ್ಲು ಎಳೆಯುವ ಸ್ಪರ್ಧೆಯಲ್ಲೂ ದೆವ್ವ ಮರಿಯಪ್ಪನವರ ಎತ್ತು ಸಾಕಷ್ಟು ಬಹುಮಾನಗಳನ್ನು ಪಡೆದುಕೊಂಡಿತ್ತು.

ಅಭಿಮಾನ ಬಳಗವನ್ನು ಹೊಂದಿದ್ದ ಹೋರಿ

ಹೋರಿ ಬೆದರಿಸುವ ಸ್ಪರ್ಧೆ ದೃಶ್ಯ

ನಲವತ್ತು ದಿನಗಳಲ್ಲಿ ಬಾರದ ಲೋಕಕ್ಕೆ ತೆರಳಿದ ಹುಲಿ ಮತ್ತು ಡಾನ್ ದೆವ್ವ ಮರಿಯಪ್ಪ ಎಂದರೆ ಹೋರಿ ಬೆದರಿಸುವ ಸ್ಪರ್ಧೆ ಮತ್ತು ಕಲ್ಲು ಎಳೆಯುವ ಸ್ಪರ್ಧೆಗೆ ಎತ್ತುಗಳನ್ನು ತಯಾರು ಮಾಡಿದ್ದ ವ್ಯಕ್ತಿ ಎಂದು ಹೆಸರು ಪಡೆದಿದ್ದರು. ಆದರೆ ಫೆಬ್ರವರಿ 8 ರಂದು ಹುಲಿ ಹೆಸರಿನ ಹೋರಿ ಅನಾರೋಗ್ಯದಿಂದ ಮೃತಪಟ್ಟಿತ್ತು. ಹೋರಿಯ ಸಾವು ದೆವ್ವ ಮರಿಯಪ್ಪನ ಕುಟುಂಬ ಮಾತ್ರವಲ್ಲ ಲಕ್ಷಾಂತರ ಅಭಿಮಾನಿಗಳಿಗೂ ನೋವು ತರಿಸಿತ್ತು. ಅದರ ನೋವು ಇನ್ನೂ ಮಾಸದಿರುವಾಗಲೆ ಕಲ್ಲು ಎಳೆಯುವುದರಲ್ಲಿ ಹೆಸರು ಮಾಡಿದ್ದ ಡಾನ್ ಹೆಸರಿನ ಹೋರಿ ಕೂಡ ಮೃತಪಟ್ಟಿದೆ. ನಲವತ್ತು ದಿನಗಳಲ್ಲಿ ಮನೆ ಮಕ್ಕಳಂತೆ ಸಾಕಿ ಸಲುಹಿದ್ದ ಎರಡು ಹೋರಿಗಳು ಮೃತಪಟ್ಟಿರುವುದು ದೆವ್ವ ಮರಿಯಪ್ಪನ ಕಣ್ಣಲ್ಲಿ ನೀರು ತರಿಸಿದೆ.

ಮನುಷ್ಯರಂತೆಯೇ ಹೋರಿಗಳಿಗೂ ಅಂತ್ಯಕ್ರಿಯೆ ಸಾಕಷ್ಟು ಹೆಸರು ಮಾಡಿದ್ದ ಹುಲಿ ಮತ್ತು ಡಾನ್ ಹೆಸರಿನ ಎರಡೂ ಹೋರಿಗಳು ನಲವತ್ತು ದಿನಗಳಲ್ಲೇ ಮೃತಪಟ್ಟಿವೆ. ಹೋರಿಗಳು ಮೃತಪಡುತ್ತಿದ್ದಂತೆ ಮನುಷ್ಯರಿಗೆ ಮಾಡುವಂತೆಯೆ ಅಂತ್ಯಕ್ರಿಯೆ ಮಾಡಿದ್ದಾರೆ. ನಗರದ ತುಂಬ ತೆರೆದ ವಾಹನದಲ್ಲಿ ಭಾಜಾ ಭಜಂತ್ರಿಗಳೊಂದಿಗೆ ಮೆರವಣಿಗೆ ಮಾಡಿ ಶಾಸ್ತ್ರೋಕ್ತವಾಗಿ ಹೋರಿಗಳ ಅಂತ್ಯಕ್ರಿಯೆ ಮಾಡಿದ್ದಾರೆ.

ಅಲಂಕಾರಗೊಂಡ ಹೋರಿ

ನಲವತ್ತು ದಿನಗಳಲ್ಲಿ ಪತ್ನಿಯೂ ನಿಧನ ದೆವ್ವ ಮರಿಯಪ್ಪ ಅತ್ಯಂತ ಪ್ರೀತಿಯಿಂದ ಸಾಕಿ ಎಲ್ಲ ಕಡೆಗೂ ಸೈ ಎನಿಸಿಕೊಂಡು ಬಂದಿದ್ದರು. ಎರಡು ಹೋರಿಗಳ ಸಾವು ಅರಗಿಸಿಕೊಳ್ಳಲಾಗದ ಸಮಯದಲ್ಲೇ ದೆವ್ವ ಮರಿಯಪ್ಪನ ಪತ್ನಿಯೂ ಅನಾರೋಗ್ಯದಿಂದ ಬಾರದ ಲೋಕಕ್ಕೆ ತೆರಳಿದ್ದಾರೆ. ಹುಲಿ ಹೆಸರಿನ ಹೋರಿ ಮೃತಪಟ್ಟ ಕೆಲವು ದಿನಗಳಲ್ಲಿ ದೆವ್ವ ಮರಿಯಪ್ಪನ ಪತ್ನಿ ಮೃತಪಟ್ಟಿದ್ದಾರೆ. ಪತ್ನಿ ತೀರಿಕೊಂಡ ಕೆಲವೆ ಕೆಲವು ದಿನಗಳಲ್ಲಿ ಡಾನ್ ಹೆಸರಿನ ಹೋರಿಯೂ ಮೃತಪಟ್ಟಿದೆ. ಈ ಸರಣಿ ಸಾವು ದೆವ್ವ ಮರಿಯಪ್ಪನನ್ನು ಅಕ್ಷರಶಃ ಕಂಗಾಲಾಗಿಸಿದೆ.

ಹೋರಿ ಓಡಿಸುವುದು, ಕಲ್ಲು ಎಳೆಸುವುದು ಎಂದರೆ ನನಗೆ ದೊಡ್ಡ ಹಬ್ಬ. ದೆವ್ವ ಮರಿಯಪ್ಪ ಎಂದರೆ ಯಾರು ಎಂಬುದನ್ನು ಹುಲಿ ಮತ್ತು ಡಾನ್ ಹೆಸರಿನ ಹೋರಿಗಳು ಪರಿಚಯಿಸಿದ್ದವು. ಆದರೆ ಎರಡೂ ಹೋರಿಗಳು ಮರಳಿ ಬಾರದ ಲೋಕಕ್ಕೆ ತೆರಳಿದ್ದು, ಮರೆಯಲಾಗದ ನೋವು ತಂದಿದೆ. ಇದರ ಜೊತೆಗೆ ಅನಾರೋಗ್ಯದಿಂದ ಮೃತಪಟ್ಟ ಪತ್ನಿಯ ಸಾವು ಕೂಡ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ದೆವ್ವ ಮರಿಯಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ದೆವ್ವ ಮರಿಯಪ್ಪನ ಹುಲಿ ಮತ್ತು ಡಾನ್ ಹೆಸರಿನ ಹೋರಿಗಳು ಎಂದರೆ ಹೋರಿ ಅಭಿಮಾನಿಗಳಿಗೆ ದೊಡ್ಡ ಹಬ್ಬ. ಎರಡೂ ಹೋರಿಗಳಿಗೆ ಲಕ್ಷಾಂತರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಆದರೆ ಕೆಲವೆ ಕೆಲವು ದಿನಗಳ ಅಂತರದಲ್ಲಿ ಎರಡೂ ಹೋರಿಗಳು ಮೃತಪಟ್ಟಿರುವುದು ನನ್ನನ್ನೂ ಸೇರಿ ಲಕ್ಷಾಂತರ ಸಂಖ್ಯೆಯ ಹೋರಿ ಅಭಿಮಾನಿಗಳಲ್ಲಿ ದುಃಖ ತರಿಸಿದೆ ಎಂದು ಹೋರಿಗಳ ಅಭಿಮಾನಿ ಹೇಳಿದರು.

ಇದನ್ನೂ ಓದಿ

ಬೆಣ್ಣೆನಗರಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಅವಘಡ: ಹೋರಿ ತಿವಿದು ಯುವಕ ಸಾವು

ಹೊನ್ನಾಳಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ; ರಸ್ತೆ ಅಪಘಾತದಲ್ಲಿ ಮೃತಪಟ್ಟ ಹೋರಿಯ ಮಾಲೀಕನಿಗೆ ಆರ್ಥಿಕ ನೆರವು ನೀಡಿದ ಶಾಸಕ ರೇಣುಕಾಚಾರ್ಯ

Published On - 1:06 pm, Sun, 21 March 21

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್