‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದ ಆರ್ ಅಶೋಕ್
ಬಿಜೆಪಿ ನಾಯಕರ ಮೇಲೆ ಮೊಟ್ಟೆ ಎಸೆದ ಘಟನೆಯನ್ನು ಖಂಡಿಸಿದ ಆರ್. ಅಶೋಕ ಅವರು, ಇದು ಪಾಕಿಸ್ತಾನ ಪರ ಇರುವವರಿಂದ ಹಿಂದೂಗಳ ಮೇಲೆ ನಡೆದ ಹಲ್ಲೆ ಎಂದರು. ಘಟನೆ ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಆರೋಪಿಗಳನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಕಾಂಗ್ರೆಸ್ ಕಚೇರಿಗಳಲ್ಲಿ ಬಾಂಬ್‌ಗಳಿವೆಯೇ ಎಂದು ಪೊಲೀಸರು ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಬೆಂಗಳೂರು, ಜುಲೈ 22: ‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಆರೋಪ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಪಾಕ್ ಏಜೆಂಟರು ಹಿಂದೂಗಳ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಖಂಡಿಸಿ ಪಾದಯಾತ್ರೆ ಮೂಲಕ ಕಮಿಷನರ್ ಕಚೇರಿಗೆ ಹೋಗುತ್ತೇವೆ. 15ಕ್ಕೂ ಹೆಚ್ಚು ಶಾಸಕರು ಮತ್ತು ಎಂಎಲ್ಸಿಗಳಿದ್ದರೂ ರಕ್ಷಣೆ ಇಲ್ಲವಾದರೆ ಸಾಮಾನ್ಯ ಜನರ ಗತಿಯೇನು? ಗೂಂಡಾ ಕಾಯ್ದೆಯಡಿ ಈ ಗೂಂಡಾಗಳ ಬಂಧನ ಆಗಬೇಕು. ಗೂಂಡಾ ಸಿಎಂ, ಗೂಂಡಾ ಸರ್ಕಾರ ಲಾಂಗ್, ಚಾಕು, ಮೊಟ್ಟೆ ತಂದಿದ್ದಾರೆ. ಬಾಂಬುಗಳೂ ತಂದಿರಬೇಕು. ಕಾಂಗ್ರೆಸ್ ಕಚೇರಿಯಲ್ಲಿ ಬಾಂಬುಗಳಿರಬಹುದು. ಕೆಪಿಸಿಸಿ ಕಚೇರಿ ಮೇಲೆ ರೈಡ್ ಮಾಡಿ ಪೊಲೀಸರು ತನಿಖೆ ಮಾಡಲಿ’ ಎಂದು ಆರ್. ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್ ಆಪರೇಷನ್ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ

