AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲ್ಲು ಅರ್ಜುನ್​ ‘ಪುಷ್ಪ’ ಸಿನಿಮಾಗೆ ಮಲಯಾಳಂ ಹೀರೋನೇ ವಿಲನ್​!

'ಪುಷ್ಪ' ಸಿನಿಮಾದಲ್ಲಿ ಮುಖ್ಯ ವಿಲನ್​ ಆಗಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವುದಕ್ಕೆ ಚಿತ್ರತಂಡ ಸಾಕಷ್ಟು ಹುಡುಕಾಟ ನಡೆಸಿತ್ತು. ಹೀಗಾಗಿ, ವಿಲನ್​ ಹೆಸರು ಬಹಿರಂಗಗೊಂಡಿರಲಿಲ್ಲ.

ಅಲ್ಲು ಅರ್ಜುನ್​ 'ಪುಷ್ಪ' ಸಿನಿಮಾಗೆ ಮಲಯಾಳಂ ಹೀರೋನೇ ವಿಲನ್​!
ಫಹಾದ್​ ಫಾಸಿಲ್​-ಅಲ್ಲು ಅರ್ಜುನ್
ರಾಜೇಶ್ ದುಗ್ಗುಮನೆ
|

Updated on: Mar 21, 2021 | 8:25 PM

Share

ಅಲ್ಲು ಅರ್ಜುನ್​ ನಟನೆಯ ‘ಪುಷ್ಪ’ ಸಿನಿಮಾ ಸಾಕಷ್ಟು ವಿಚಾರಗಳಿಗೆ ಸುದ್ದಿಯಲ್ಲಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್​ ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದು ಒಂದು ಕಡೆಯಾದರೆ ನಟಿ ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ ಎನ್ನುವ ವಿಚಾರ ಮತ್ತೊಂದು ಕಡೆ. ಈ ಮಧ್ಯೆ ಮಲಯಾಳಂನ ಖ್ಯಾತ ನಟನೋರ್ವ ಈ ಚಿತ್ರದಲ್ಲಿ ಬಣ್ಣ ಹಚ್ಚೋಕೆ ರೆಡಿ ಆಗಿದ್ದಾರೆ. ಅದೂ, ವಿಲನ್​ ಆಗಿ. ‘ಪುಷ್ಪ’ ಸಿನಿಮಾದಲ್ಲಿ ಮುಖ್ಯ ವಿಲನ್​ ಆಗಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವುದಕ್ಕೆ ಚಿತ್ರತಂಡ ಸಾಕಷ್ಟು ಹುಡುಕಾಟ ನಡೆಸಿತ್ತು. ಹೀಗಾಗಿ, ವಿಲನ್​ ಹೆಸರು ಬಹಿರಂಗಗೊಂಡಿರಲಿಲ್ಲ. ಈಗ ಸಿನಿಮಾಗೆ ಕೊನೆಗೂ ವಿಲನ್​ ಸಿಕ್ಕಂತಾಗಿದೆ. ಮಲಯಾಳಂನ ಖ್ಯಾತ ನಟ ಫಹಾದ್​ ಫಾಸಿಲ್​ ಚಿತ್ರಕ್ಕೆ ವಿಲನ್​ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಬಗ್ಗೆ ಚಿತ್ರತಂಡ ಇಂದು ಅಧಿಕೃತ ಘೋಷಣೆ ಮಾಡಿದೆ.

‘ಅಲಾ ವೈಕುಂಠಪುರಂಲೋ’ ಸಿನಿಮಾ ನಂತರ ಅಲ್ಲು ಅರ್ಜುನ್​ ‘ಪುಷ್ಪ’ ಸಿನಿಮಾ ಮೂಲಕ ಮತ್ತೆ ತೆರೆಮೇಲೆ ಬರೋಕೆ ಸಿದ್ಧರಾಗಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್​ ‘ಪುಷ್ಪ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. 2018ರಲ್ಲಿ ತೆರೆಕಂಡ ರಂಗಸ್ಥಳಂ ಚಿತ್ರದ ನಂತರ ಅವರು ಕೈಗೆತ್ತಿಕೊಂಡಿರುವ ಮುಂದಿನ ಚಿತ್ರ ಇದಾಗಿದೆ. ರಂಗಸ್ಥಳಂ ಸಿನಿಮಾ ಕತೆ ಹಳ್ಳಿ ಹಿನ್ನೆಲೆಯಲ್ಲಿ ಸಾಗಿತ್ತು. ಈ ಸಿನಿಮಾ ಕಾಡಿನ ಹಿನ್ನೆಲೆ ಹೊಂದಿದೆ. ಶೇಷಾಚಲಂನ ಅರಣ್ಯದಲ್ಲಿ ನಡೆಯುತ್ತಿದ್ದ ರಕ್ತ ಚಂದನದ ಕಳ್ಳ ಸಾಗಾಣಿಕೆ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್​ ಟ್ರಕ್​ ಡ್ರೈವರ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಪುಷ್ಪಾ ಸಿನಿಮಾದಲ್ಲಿ ಬಿಗ್​ ಟ್ವಿಸ್ಟ್?​​: ಪೋಸ್ಟರ್​​ನಲ್ಲಿ ಸಿಕ್ತು ಹೊಸ ಸೂಚನೆ

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್