ಪುಷ್ಪಾ ಸಿನಿಮಾದಲ್ಲಿ ಬಿಗ್​ ಟ್ವಿಸ್ಟ್?​​: ಪೋಸ್ಟರ್​​ನಲ್ಲಿ ಸಿಕ್ತು ಹೊಸ ಸೂಚನೆ

ಅಲಾ ವೈಕುಂಠಪುರಂಲೋ ಸಿನಿಮಾ ನಂತರ ಅಲ್ಲು ಅರ್ಜುನ್​ ಪುಷ್ಪ ಸಿನಿಮಾ ಮೂಲಕ ಮತ್ತೆ ತೆರೆಮೇಲೆ ಬರೋಕೆ ಸಿದ್ಧರಾಗಿದ್ದಾರೆ. ಈ ಸಿನಿಮಾದಲ್ಲಿ ಸ್ಯಾಂಡಲ್​ವುಡ್​ ಹೀರೋ ಡಾಲಿ ಧನಂಜಯ್​ ಕೂಡ ಮುಖ್ಯ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ

ಪುಷ್ಪಾ ಸಿನಿಮಾದಲ್ಲಿ ಬಿಗ್​ ಟ್ವಿಸ್ಟ್?​​: ಪೋಸ್ಟರ್​​ನಲ್ಲಿ ಸಿಕ್ತು ಹೊಸ ಸೂಚನೆ
ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್
Rajesh Duggumane

| Edited By: Lakshmi Hegde

Jan 31, 2021 | 4:04 PM

ಅಲ್ಲು ಅರ್ಜುನ್​ ನಟನೆಯ ಪುಷ್ಪ ಸಿನಿಮಾ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆಗಸ್ಟ್​​ 13ರಂದು ತೆರೆಗೆ ಬರುತ್ತಿದೆ. ಇತ್ತೀಚೆಗೆ ರಿಲೀಸ್​ ಆದ ಸಿನಿಮಾ ಪೋಸ್ಟರ್​ಗಳಲ್ಲಿ ಅಲ್ಲು ಅರ್ಜುನ್​ ಸಖತ್​ ರಾ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಸಿನಿಮಾ ಬಗ್ಗೆ ಕೇಳಿ ಬರುತ್ತಿರುವ ಹೊಸ ವಿಚಾರ ಎಂದರೆ, ಈ ಸಿನಿಮಾದಲ್ಲಿ ಬಿಗ್​ ಟ್ವಿಸ್ಟ್​ ಇರಲಿದೆಯಂತೆ. ಸಿನಿಮಾ ರಿಲೀಸ್​ಗೂ ಮೊದಲೇ ಈ ವಿಚಾರ ಬಯಲಾಗಿದೆ.

ಅಲಾ ವೈಕುಂಠಪುರಂಲೋ ಸಿನಿಮಾ ನಂತರ ಅಲ್ಲು ಅರ್ಜುನ್​ ಪುಷ್ಪ ಸಿನಿಮಾ ಮೂಲಕ ಮತ್ತೆ ತೆರೆಮೇಲೆ ಬರೋಕೆ ಸಿದ್ಧರಾಗಿದ್ದಾರೆ. ಈ ಸಿನಿಮಾದಲ್ಲಿ ಸ್ಯಾಂಡಲ್​ವುಡ್​ ಹೀರೋ ಡಾಲಿ ಧನಂಜಯ್​ ಕೂಡ ಮುಖ್ಯ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರದಲ್ಲಿ ವಿಶೇಷ ಅಂಶವೊಂದನ್ನು ಗಮನಿಸಿದ್ದಾರೆ ಅಭಿಮಾನಿಗಳು.

ಇತ್ತೀಚೆಗೆ ರಿಲೀಸ್​ ಆದ ಪೋಸ್ಟರ್​ನಲ್ಲಿ ಅಲ್ಲು ಅರ್ಜುನ್ ಕಾಲಿನಲ್ಲಿ​ ಐದು ಬೆರಳುಗಳಿವೆ. ಆದರೆ, ಕಳೆದ ವರ್ಷ ಅವರ ಜನ್ಮದಿನದ ಪ್ರಯುಕ್ತ ರಿಲೀಸ್​ ಆಗಿದ್ದ ಪೋಸ್ಟರ್​ನಲ್ಲಿ ಅಲ್ಲು ಅರ್ಜುನ್​ ಕಾಲಿನಲ್ಲಿ ಆರು ಬೆರಳುಗಳಿದ್ದವು. ಹೀಗಾಗಿ, ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್​ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಯೇ ಎನ್ನುವ ಕುತೂಹಲ ಮೂಡಿದೆ.

ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್​ ಪುಷ್ಪ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. 2018ರಲ್ಲಿ ತೆರೆಕಂಡ ರಂಗಸ್ಥಳಂ ಚಿತ್ರದ ನಂತರ ಅವರು ಕೈಗೆತ್ತಿಕೊಂಡಿರುವ ಮುಂದಿನ ಚಿತ್ರ ಇದಾಗಿದೆ. ರಂಗಸ್ಥಳಂ ಸಿನಿಮಾ ಕತೆ ಹಳ್ಳಿ ಹಿನ್ನಲೆಯಲ್ಲಿ ಸಾಗಿತ್ತು. ಈ ಸಿನಿಮಾ ಕೂಡ ಹಳ್ಳಿ ಹಿನ್ನೆಲೆ ಹೊಂದಿರಲಿದೆ ಎನ್ನಲಾಗುತ್ತಿದೆ.

ಅನಾಥಾಶ್ರಮದ ಪುಟ್ಟ ಅಭಿಮಾನಿಯ ಆಸೆ ನೆರವೇರಿಸಿ, ನಗು ಮೂಡಿಸಿದ ಅಲ್ಲು ಅರ್ಜುನ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada