ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಕಾರ್ತಿಕ್ ಮಹೇಶ್ ಅವರು ‘ಆಲ್ಫಾ’ ಚಿತ್ರದಲ್ಲಿ ನೆಗೆಟಿವ್ ಪಾತ್ರ ಮಾಡಿದ್ದಾರೆ. ಬಿಗ್ ಬಾಸ್ ಶೋ ಗೆದ್ದ ಬಳಿಕ ಅವರು ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿ ಆಗಿದ್ದಾರೆ. ಕಾರ್ತಿಕ್ ಮಹೇಶ್ ಅವರ ಹೊಸ ಸಿನಿಮಾ ನೋಡಲು ಸ್ನೇಹಿತರು ಬಂದಿದ್ದಾರೆ. ತನಿಷಾ ಕುಪ್ಪಂಡ, ನಮ್ರತಾ ಗೌಡ ಬಂದು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.
‘ಆಲ್ಫಾ’ ಸಿನಿಮಾದಲ್ಲಿ ಕಾರ್ತಿಕ್ ಮಹೇಶ್ (Karthik Mahesh) ಅವರು ನೆಗೆಟಿವ್ ಪಾತ್ರ ಮಾಡಿದ್ದಾರೆ. ಬಿಗ್ ಬಾಸ್ ಶೋ ಗೆದ್ದ ಅವರು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರ ಹೊಸ ಸಿನಿಮಾ ನೋಡಲು ಸ್ನೇಹಿತರು ಬಂದಿದ್ದಾರೆ. ತನಿಷಾ ಕುಪ್ಪಂಡ, ನಮ್ರತಾ ಗೌಡ ಮುಂತಾದವರು ಬಂದು ‘ಆಲ್ಫಾ’ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಕಾರ್ತಿಕ್ ಮಹೇಶ್ ಮಾಡಿರುವ ವಿಲನ್ ಪಾತ್ರ ತನಿಷಾ ಅವರಿಗೆ ಸಖತ್ ಇಷ್ಟ ಆಗಿದೆ. ‘ನಾನು ಈ ಸಿನಿಮಾ ನೋಡೋಕೆ ಬಂದಿದ್ದೇ ಕಾರ್ತಿಕ್ ಮಹೇಶ್ ಅವರಿಗಾಗಿ. ಈವರೆಗೂ ನಾವು ಅವರನ್ನು ಕ್ಯೂಟ್ ಆಗಿ ನೋಡಿದ್ದೆವು. ಆದರೆ ಈಗ ಅವರು ವಿಲನ್ ಆಗಿರುವುದು ನನಗೆ ಖುಷಿ ಆಗಿದೆ. ಅವರನ್ನು ಈ ರೀತಿ ನೋಡಿದ ಬಳಿಕ ನಮ್ಮ ಕನ್ನಡ ಚಿತ್ರರಂಗಕ್ಕೆ ಒಬ್ಬ ಹೊಸ ವಿಲನ್ ಹುಟ್ಟಿಕೊಂಡರು ಎನಿಸುತ್ತದೆ’ ಎಂದು ತನಿಷಾ ಕುಪ್ಪಂಡಾ (Tanisha Kuppanda) ಅವರು ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ

