AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಭಾಸ್​​ಗೆ ಆಹಾರದ ಮೇಲೆ ಅದೆಂಥ ಪ್ರೀತಿ, ವಿಮಾನದಲ್ಲಿ ಬರುತ್ತೆ ಅವರ ಮೆಚ್ಚಿನ ಊಟ

Prabhas love for food: ಪ್ರಭಾಸ್ ಜೊತೆ ಕೆಲಸ ಮಾಡಿದವರೆಲ್ಲ ಪ್ರಭಾಸ್ ಹಾಕಿಸುವ ಭರ್ಜರಿ ಊಟದ ಬಗ್ಗೆ ಮಾತನಾಡಿಯೇ ಇದ್ದಾರೆ. ಅಷ್ಟು ಭರ್ಜರಿ ಊಟವನ್ನು ಪ್ರಭಾಸ್ ಹಾಕಿಸುತ್ತಾರೆ. ಪ್ರಭಾಸ್​​ಗೆ ಊಟದ ಮೇಲೆ ಅದೆಷ್ಟು ಪ್ರೀತಿಯೆಂದರೆ ಒಮ್ಮೊಮ್ಮೆ ಅವರು ಹೊರ ರಾಜ್ಯದಿಂದ ವಿಮಾನದಲ್ಲಿ ಊಟ ತರಿಸಿಕೊಳ್ಳುತ್ತಾರಂತೆ. ಈ ಬಗ್ಗೆ ಅವರೇ ಹೇಳಿದ್ದಾರೆ ಕೇಳಿ...

ಪ್ರಭಾಸ್​​ಗೆ ಆಹಾರದ ಮೇಲೆ ಅದೆಂಥ ಪ್ರೀತಿ, ವಿಮಾನದಲ್ಲಿ ಬರುತ್ತೆ ಅವರ ಮೆಚ್ಚಿನ ಊಟ
Prabhas
ಮಂಜುನಾಥ ಸಿ.
|

Updated on: Feb 21, 2026 | 7:26 AM

Share

ಪ್ರಭಾಸ್​ (Prabhas) ಖ್ಯಾತ ನಟನಾಗಿರುವ ಜೊತೆಗೆ ತಮ್ಮ ಅತಿಥಿ ಸತ್ಕಾರದಿಂದಲೂ ಅವರು ಬಲು ಜನಪ್ರಿಯ. ಪ್ರಭಾಸ್ ಜೊತೆಗೆ ನಟಿಸಿದವರೆಲ್ಲ ಪ್ರಭಾಸ್ ಅವರ ಸರಳತೆ, ವಿನಯ ಸ್ವಭಾವದ ಜೊತೆಗೆ ಪ್ರಭಾಸ್ ಅವರ ಅತಿಥಿ ಸತ್ಕಾರವನ್ನು ಮನಸಾರೆ ಹೊಗಳಿದ್ದಾರೆ. ಅದರಲ್ಲೂ ಪ್ರಭಾಸ್ ಜೊತೆಗೆ ಕೆಲಸ ಮಾಡಿದರೆ ಅವರು ಭರಪೂರ ಊಟ ಹಾಕಿಸುತ್ತಾರೆ. ಅದರಲ್ಲೂ ಅವರು ನಾನಾ ಬಗೆಯ ಭಕ್ಷ್ಯ ಭೋಜನಗಳನ್ನು ಉಣಬಡಿಸುತ್ತಾರೆ ಎಂದು ಹಲವಾರು ನಟ-ನಟಿಯರು ಹೇಳಿದ್ದಾರೆ. ಸ್ವತಃ ಪ್ರಭಾಸ್​​ಗೆ ಸಹ ಊಟವೆಂದರೆ ಮಹಾ ಇಷ್ಟ. ಇದೀಗ ಅವರೇ ತಮ್ಮ ಆಹಾರ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ.

ತೆಲುಗು ಹೊಸ ಸಿನಿಮಾ ‘ಕ್ಯೂಟ್ ಕಪಲ್’ ಪ್ರಚಾರದಲ್ಲಿ ಪ್ರಭಾಸ್ ಭಾಗಿ ಆಗಿದ್ದು, ಈ ವೇಳೆ ಆ ಚಿತ್ರದ ನಾಯಕ ಪ್ರಭಾಸ್ ಕುರಿತು, ‘ಸರ್, ನೀವು ಬೇರೆ ರಾಜ್ಯದಿಂದ ಸಹ ಊಟವನ್ನು ಸ್ವಿಗ್ಗಿ ಮಾಡಿಸಿಕೊಳ್ಳುತ್ತೀರಂತೆ ನಿಜವೇ?’ ಎಂದು ಕೇಳಿದ್ದಾರೆ ಅದಕ್ಕೆ ಉತ್ತರಿಸಿರುವ ಪ್ರಭಾಸ್, ‘ರಾಜಮೌಳಿ ಸೇರಿದಂತೆ ಎಲ್ಲರಿಗೂ ನನ್ನ ಊಟದ ಮೇಲೆ ಕಣ್ಣು’ ಎಂದ ಪ್ರಭಾಸ್, ‘ಹೌದು ನಾನು ಕೆಲವು ಬಾರಿ ಬೇರೆ ರಾಜ್ಯದಿಂದ ಊಟ ತರಿಸಿಕೊಂಡಿದ್ದೂ ಸಹ ಇದೆ’ ಎಂದಿದ್ದಾರೆ.

ಬಳಿಕ ಅದರ ಬಗ್ಗೆ ವಿವರವಾಗಿ ಹೇಳಿದ ಪ್ರಭಾಸ್, ‘ಆದಿಪುರುಷ್’ ಸಿನಿಮಾ ಶೂಟಿಂಗ್ ಮುಂಬೈನಲ್ಲಿ ನಡೆಯುತ್ತಿತ್ತು. ಆ ದಿನದ ಚಿತ್ರೀಕರಣವೆಲ್ಲ ಮುಗಿಯಿತು, ಅಂದು ನನಗೂ ಸಹ ಚೀಟ್ ಡೇ ಆಗಿತ್ತು. ನಾನು ನಿರ್ದೇಶಕ ಓಂ ರಾವತ್ ಇನ್ನೂ ಕೆಲವರೆಲ್ಲ ಕೂತಿದ್ದರು. ಆಗ ನಾನು, ‘ಇಂದು ಬಾಂಬೆ ಊಟ ಬೇಡ, ಚೆನ್ನೈ ಊಟ ತಿನ್ನೋಣ, ನಾನೇ ತರಿಸುತ್ತೇನೆ’ ಎಂದೆ ಸರಿ ಎಂದು ಒಪ್ಪಿಕೊಂಡರು. ಆದರೆ ಎರಡು ಗಂಟೆಗಳಾದರೂ ಊಟ ಬಾರದೆ ಇರುವುದು ನೋಡಿ, ಎಲ್ಲಿ ಊಟ ಇನ್ನೂ ಬಂದಿಲ್ಲ ಎಂದು ಓಂ ರಾವತ್ ಕೇಳಿದರು. ಆಗ ನಾನು, ‘ಊಟ ಬರುತ್ತಿರುವುದು ಚೆನ್ನೈನಿಂದ ಅದಕ್ಕಾಗಿ ತಡ ಆಗುತ್ತಿದೆ’ ಎಂದೆ. ನನ್ನ ಮಾತು ಕೇಳಿ ಓಂ ರಾವತ್ ಶಾಕ್​​ ಆಗಿಬಿಟ್ಟರು’ ಎಂದು ಪ್ರಭಾಸ್ ವಿವರಿಸಿದ್ದಾರೆ.

ಇದನ್ನೂ ಓದಿ:ಶೂಟಿಂಗ್ ವೇಳೆ ಪ್ರಭಾಸ್​​ಗೆ ಗಾಯ; ಇದರಿಂದಲೂ ಲಾಭ ಪಡೆದ ಫ್ಯಾನ್ಸ್

ಪ್ರಭಾಸ್ ಅವರು ವ್ಯಕ್ತಿಯೊಬ್ಬನಿಗೆ ಹೇಳಿ, ಚೆನ್ನೈನಿಂದ ತಮಗೆ ಇಷ್ಟವಾದ ಆಹಾರಗಳನ್ನು ವಿಮಾನದಲ್ಲಿ ಮುಂಬೈಗೆ ತರಿಸಿಕೊಂಡಿದ್ದರು. ಪ್ರಭಾಸ್ ಅವರಿಗಾಗಿ ವ್ಯಕ್ತಿಯೊಬ್ಬ ಚೆನ್ನೈನಲ್ಲಿ ಅವರಿಗೆ ಬೇಕಾದ ಆಹಾರಗಳನ್ನೆಲ್ಲ ಆಯಾ ಹೋಟೆಲ್​​ಗಳಿಂದ ತೆಗೆದುಕೊಂಡು ಅವನ್ನು ಬಿಸಿ ಆರದ ದೊಡ್ಡ ಬಾಕ್ಸ್ ಒಂದಕ್ಕೆ ಹಾಕಿಕೊಂಡು ಅದನ್ನು ವಿಮಾನದಲ್ಲಿ ಮುಂಬೈಗೆ ತೆಗೆದುಕೊಂಡು ಬಂದಿದ್ದನಂತೆ.

ಇನ್ನು ಅದೇ ಸಂದರ್ಶನದಲ್ಲಿ ಪ್ರಭಾಸ್ ತಮ್ಮಿಷ್ಟದ ‘ಪುನುಗುಲು’ ಕುರಿತು ಸಹ ಮಾತನಾಡಿದ್ದಾರೆ. ಅದರಲ್ಲೂ ಅವರಿಗೆ ವಿಜಯವಾಡ ನಗರದಲ್ಲಿ ಮಾಡುವ ಪುನುಗುಲು ಎಂದರೆ ಬಹಳ ಪ್ರೀತಿಯಂತೆ. ಅಷ್ಟು ಕ್ರಿಸ್ಪಿ ಮತ್ತು ರುಚಿಯಾದ ಪುನುಗುಲು ನಾನೆಂದೂ ತಿಂದಿಲ್ಲ. ನೆನಪಿಸಿಕೊಂಡರೆ ನನಗೆ ಬಾಯಿಯಲ್ಲಿ ನೀರು ಬರುತ್ತದೆ ಎಂದಿದ್ದಾರೆ ಪ್ರಭಾಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ದೇವರ ಮೂರ್ತಿ ಎದುರಲ್ಲೇ ಕಿರಣ್ ಶಾಸ್ತ್ರಿ ಕಳ್ಳಾಟ; ಬಯಲು ಮಾಡಿದ ಸುದೀಪ್
ದೇವರ ಮೂರ್ತಿ ಎದುರಲ್ಲೇ ಕಿರಣ್ ಶಾಸ್ತ್ರಿ ಕಳ್ಳಾಟ; ಬಯಲು ಮಾಡಿದ ಸುದೀಪ್
ಹೆಚ್ಚುತ್ತಿರುವ ಕಸ್ತೂರಿ ರಂಗನ್ ಕಿಚ್ಚು ನಾಳೆ ಶೃಂಗೇರಿ ಬಂದ್​​ಗೆ ಕರೆ!
ಹೆಚ್ಚುತ್ತಿರುವ ಕಸ್ತೂರಿ ರಂಗನ್ ಕಿಚ್ಚು ನಾಳೆ ಶೃಂಗೇರಿ ಬಂದ್​​ಗೆ ಕರೆ!
ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!
ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!
ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ: ಇಬ್ಬರು ಅಮಾನತು
ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ: ಇಬ್ಬರು ಅಮಾನತು