AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೂಟಿಂಗ್ ವೇಳೆ ಪ್ರಭಾಸ್​​ಗೆ ಗಾಯ; ಇದರಿಂದಲೂ ಲಾಭ ಪಡೆದ ಫ್ಯಾನ್ಸ್

ಸಿನಿಮಾ ಶೂಟಿಂಗ್ ವೇಳೆ ಪ್ರಭಾಸ್ ಗಾಯಗೊಂಡಿದ್ದು, ಇದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಆದರೆ, ಕೆಲವು ಅಭಿಮಾನಿಗಳು ಇದನ್ನೇ ಸಕಾರಾತ್ಮಕವಾಗಿ ಬಳಸಿಕೊಂಡು, ಪ್ರಭಾಸ್ ಶ್ರಮ ಹಾಕ್ತಾ ಇಲ್ಲ ಎಂದು ಟ್ರೋಲ್ ಮಾಡುತ್ತಿದ್ದವರಿಗೆ ತಕ್ಕ ಉತ್ತರ ನೀಡಿದ್ದಾರೆ. ಈ ಘಟನೆಯನ್ನು ಪ್ರಭಾಸ್ ಅವರ ಸಮರ್ಪಣೆಗೆ ಸಾಕ್ಷಿಯನ್ನಾಗಿ ಪರಿವರ್ತಿಸಿ, ಟ್ರೋಲಿಗರ ಬಾಯಿ ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶೂಟಿಂಗ್ ವೇಳೆ ಪ್ರಭಾಸ್​​ಗೆ ಗಾಯ; ಇದರಿಂದಲೂ ಲಾಭ ಪಡೆದ ಫ್ಯಾನ್ಸ್
ಪ್ರಭಾಸ್ Image Credit source: Raja Saab Team
ರಾಜೇಶ್ ದುಗ್ಗುಮನೆ
|

Updated on: Feb 16, 2026 | 7:36 AM

Share

ಸಿನಿಮಾ ಶೂಟಿಂಗ್ ವೇಳೆ ಎಷ್ಟೇ ಎಚ್ಚರಿಕೆ ಪಡೆದುಕೊಂಡರೂ ಗಾಯುಗಳು ಸಾಮಾನ್ಯ. ಈಗ ಪ್ರಭಾಸ್ (Prabhas) ವಿಷಯದಲ್ಲೂ ಹಾಗೆಯೇ ಆಗಿದೆ. ಅವರು ಮುಂದಿನ ಸಿನಿಮಾ ಶೂಟಿಂಗ್ ವೇಳೆ ಅವರಿಗೆ ಗಾಯ ಉಂಟಾಗಿದೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಇನ್ನೂ ಕೆಲವರು ಈ ಘಟನೆಯನ್ನು ಇಟ್ಟುಕೊಂಡು ಟ್ರೋಲಿಗರಿಗೆ ಉತ್ತರ ನೀಡುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಈ ಘಟನೆಯಿಂದ ಪ್ರಭಾಸ್​​ಗೆ ಲಾಭ ಸಿಗೋ ತರ ಮಾಡಿದ್ದಾರೆ.

‘ರಾಜಾ ಸಾಬ್’ ಸಿನಿಮಾ ಸಾಕಷ್ಟು ನೆಗೆಟಿವಿಟಿ ಪಡೆಯಿತು. ಸಿನಿಮಾ ಉದ್ದಕ್ಕೂ ಡ್ಯೂಪ್ ಬಳಸಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂತು. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಸಾಬೀತು ಕೂಡ ಮಾಡಿದರು. ‘ಪ್ರಭಾಸ್ ಶ್ರಮ ಹಾಕಲ್ಲ, ಅವರಿಗೆ ಆಲಸ್ಯ ಮೈಗೂಡಿದೆ’ ಎಂದೆಲ್ಲ ಟ್ರೋಲ್ ಮಾಡಲಾಗಿತ್ತು. ಈಗ ಆದ ಘಟನೆಯನ್ನು ಇಟ್ಟುಕೊಂಡು ಪ್ರಭಾಸ್ ಫ್ಯಾನ್ಸ್ ಟ್ರೋಲಿಗರಿಗೆ ಉತ್ತರ ನೀಡಿದ್ದಾರೆ.

‘ಪ್ರಭಾಸ್ ಸಿನಿಮಾ ಮಾಡುವಾಗ ಶ್ರಮ ಹಾಕಲ್ಲ ಎಂಬುವವರಿಗೆ ಇದು ಒಳ್ಳೆಯ ಉತ್ತರ. ಪ್ರಭಾಸ್ ಅವರು ಕುದುರೆ ರೈಡ್ ಮಾಡುವಾಗ ಗಾಯಗೊಂಡಿದ್ದಾರೆ. ಶ್ರಮ ಹಾಕೋದಿಲ್ಲ ಎಂದು ಹೇಳುವವರಿಗೆ ಇದಕ್ಕಿಂತ ಹೆಚ್ಚಿನ ಪ್ರೂಫ್ ಬೇಡ ಎಂದು ನಾವು ಭಾವಿಸುತ್ತೇವೆ’ ಎಂದು ಪ್ರಭಾಸ್ ಅಭಿಮಾನಿಗಳು ಬರೆದುಕೊಂಡಿದ್ದಾರೆ.

ಇನ್ನು, ಪ್ರಭಾಸ್ ಅವರಿಗೆ ಹೆಚ್ಚಿನ ತೊಂದರೆ ಏನು ಆಗಿಲ್ಲ. ಅವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.ಕೆಲ ದಿನ ವಿಶ್ರಾಂತಿಗೆ ವೈದ್ಯರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಆ ಬಳಿಕ ಅವರು ಶೂಟಿಂಗ್​​ಗೆ ಮರಳೋ ಸಾಧ್ಯತೆ ಇದೆ.

ಇದನ್ನೂ ಓದಿ: ದಿ ರಾಜಾ ಸಾಬ್: ಚಿತ್ರಮಂದಿರದಲ್ಲಿ ಪ್ರಭಾಸ್ ಸಿನಿಮಾ ಫ್ಲಾಪ್, ಒಟಿಟಿಯಲ್ಲಿ ಸೂಪರ್ ಹಿಟ್

ಪ್ರಭಾಸ್ ಶೂಟ್ ಮಾಡುತ್ತಿದ್ದ ಸಿನಿಮಾ ‘ಫೌಜಿ’. ಹನು ರಾಘವಪುಡಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ‘ರಾಜಾ ಸಾಬ್’ ಸಿನಿಮಾ ಸಾಕಷ್ಟು ಟ್ರೋಲ್ ಎದುರಿಸಬೇಕಾಯಿತು. ಹೀಗಾಗಿ, ಅವರಿಗೆ ಒಂದು ದೊಡ್ಡ ಕಂಬ್ಯಾಕ್ ಅವಶ್ಯಕತೆ ಇದೆ. ಅವರು ಸಂದೀಪ್ ರೆಡ್ಡಿ ವಂಗ ಅವರ ‘ಸ್ಪಿರಿಟ್’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮೈಸೂರು ದಸರಾದಲ್ಲಿ ಕಂಬಳಕ್ಕೆ ವಿರೋಧಿಸ್ತಿರೋ ಪ್ರತಿಭಟನಾಕಾರರು ಹೇಳಿದ್ದೇನು?
ಮೈಸೂರು ದಸರಾದಲ್ಲಿ ಕಂಬಳಕ್ಕೆ ವಿರೋಧಿಸ್ತಿರೋ ಪ್ರತಿಭಟನಾಕಾರರು ಹೇಳಿದ್ದೇನು?
ಸಂಡೂರಿನ ಅಂತಾಪುರದಲ್ಲಿ ವಿಜಯನಗರ ಕಾಲದ ಅಪರೂಪದ ಜೈನ ದಾನಶಾಸನ ಪತ್ತೆ!
ಸಂಡೂರಿನ ಅಂತಾಪುರದಲ್ಲಿ ವಿಜಯನಗರ ಕಾಲದ ಅಪರೂಪದ ಜೈನ ದಾನಶಾಸನ ಪತ್ತೆ!
ಟೋಯಿಂಗ್ ಬಳಿಕವೂ ಮಾಲೀಕರು ಬರದಿದ್ರೆ ಹರಾಜು ಹಾಕ್ತೇವೆ: ಸಚಿವ ಕೃಷ್ಣಭೈರೇಗೌಡ
ಟೋಯಿಂಗ್ ಬಳಿಕವೂ ಮಾಲೀಕರು ಬರದಿದ್ರೆ ಹರಾಜು ಹಾಕ್ತೇವೆ: ಸಚಿವ ಕೃಷ್ಣಭೈರೇಗೌಡ
ರಾಯಚೂರಿನಲ್ಲಿ 760 ಕೆಜಿಗೂ ಅಧಿಕ ನಂದಿನಿ ಕೆನೆಭರಿತ ಹಾಲಿನ ಪುಡಿ ಪತ್ತೆ
ರಾಯಚೂರಿನಲ್ಲಿ 760 ಕೆಜಿಗೂ ಅಧಿಕ ನಂದಿನಿ ಕೆನೆಭರಿತ ಹಾಲಿನ ಪುಡಿ ಪತ್ತೆ
ಚೆನ್ನಮ್ಮ ಆರೋಗ್ಯ ಈಗ ಹೇಗಿದೆ? ವೈದ್ಯರು ಕೊಟ್ಟ ಮಾಹಿತಿ ಇಲ್ಲಿದೆ
ಚೆನ್ನಮ್ಮ ಆರೋಗ್ಯ ಈಗ ಹೇಗಿದೆ? ವೈದ್ಯರು ಕೊಟ್ಟ ಮಾಹಿತಿ ಇಲ್ಲಿದೆ
ಹಾರ್ಮೋಜ್ಗನ್ ಪ್ರಾಂತ್ಯದಲ್ಲಿ ಒಟ್ಟು 5-6 ಸೇತುವೆಗಳು ಧ್ವಂಸ
ಹಾರ್ಮೋಜ್ಗನ್ ಪ್ರಾಂತ್ಯದಲ್ಲಿ ಒಟ್ಟು 5-6 ಸೇತುವೆಗಳು ಧ್ವಂಸ
ಸೌದಿ ಅರೇಬಿಯಾದಲ್ಲಿ ಮಂಗಳೂರಿನ ವಿಟ್ಲದ ಯುವಕನ ಸಾಧನೆ!
ಸೌದಿ ಅರೇಬಿಯಾದಲ್ಲಿ ಮಂಗಳೂರಿನ ವಿಟ್ಲದ ಯುವಕನ ಸಾಧನೆ!
ಚೆನ್ನಮ್ಮ ಆರೋಗ್ಯ ಸ್ಥಿತಿ ಗಂಭೀರ: ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಕೆ
ಚೆನ್ನಮ್ಮ ಆರೋಗ್ಯ ಸ್ಥಿತಿ ಗಂಭೀರ: ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಕೆ
ಬಂಟ್ವಾಳ ಕೊಲೆ ಆರೋಪಿ ಬಗ್ಗೆ ತಪ್ಪು ಮಾಹಿತಿ ಹರಡಿದವರ ವಿರುದ್ಧ ಕೇಸ್
ಬಂಟ್ವಾಳ ಕೊಲೆ ಆರೋಪಿ ಬಗ್ಗೆ ತಪ್ಪು ಮಾಹಿತಿ ಹರಡಿದವರ ವಿರುದ್ಧ ಕೇಸ್
ಮೆಕ್ಸಿಕೋದಲ್ಲಿ 7.4 ತೀವ್ರತೆಯ ಭೂಕಂಪ; ಸುನಾಮಿಯ ಮುನ್ನೆಚ್ಚರಿಕೆ
ಮೆಕ್ಸಿಕೋದಲ್ಲಿ 7.4 ತೀವ್ರತೆಯ ಭೂಕಂಪ; ಸುನಾಮಿಯ ಮುನ್ನೆಚ್ಚರಿಕೆ