AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 25ನೇ ವಯಸ್ಸಿಗೆ ಕ್ರಿಕೆಟ್​ಗೆ ವಿದಾಯ ಹೇಳಿದ ಇಂಗ್ಲೆಂಡ್‌ ಕ್ರಿಕೆಟಿಗ

John Turner Retires at 25: ಇಂಗ್ಲೆಂಡ್‌ನ ವೇಗದ ಬೌಲರ್ ಜಾನ್ ಟರ್ನರ್ 25ನೇ ವಯಸ್ಸಿಗೆ ವೃತ್ತಿಪರ ಕ್ರಿಕೆಟ್‌ನಿಂದ ಹಠಾತ್ ನಿವೃತ್ತಿ ಘೋಷಿಸಿದ್ದಾರೆ. ಸತತ ಗಾಯಗಳಿಂದಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಆಟದಿಂದ ಹೊರಗುಳಿದಿದ್ದ ಟರ್ನರ್, ತನ್ನ ಬಾಲ್ಯದ ಕನಸಾದ ಇಂಗ್ಲೆಂಡ್ ಪರ ಆಡುವ ಅವಕಾಶ ಪಡೆದಿದ್ದರು. ಆದರೆ, ಗಾಯಗಳ ಕಾರಣದಿಂದಾಗಿ ತಮ್ಮ ಭವಿಷ್ಯದ ಬಗ್ಗೆ ಮರುಚಿಂತನೆ ನಡೆಸಿ, ಕ್ರಿಕೆಟ್‌ಗೆ ವಿದಾಯ ಹೇಳುವ ಕಠಿಣ ನಿರ್ಧಾರ ಕೈಗೊಂಡಿದ್ದಾರೆ.

ಪೃಥ್ವಿಶಂಕರ
|

Updated on: Aug 07, 2026 | 5:44 PM

Share
ಯಾವುದೇ ಕ್ರಿಕೆಟಿನ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ ಆರಂಭವಾಗುವ ವಯಸ್ಸು ಹತ್ತಿರ ಹತ್ತಿರ 20 ರಿಂದ 25 ವರ್ಷ. ಆದರೆ ಅದೇ 25 ವರ್ಷ ಮುಗಿಯುವುದಕ್ಕೂ ಮುನ್ನವೇ ಯುವ ಕ್ರಿಕೆಟಿಗನ ವೃತ್ತಿಬದುಕು ಅಂತ್ಯವಾಗಿದೆ. ಇಂಗ್ಲೆಂಡ್‌ ತಂಡದ ವೇಗದ ಬೌಲರ್ ಜಾನ್ ಟರ್ನರ್ ತಮ್ಮ 25ನೇ ವಯಸ್ಸಿನಲ್ಲಿ ವೃತ್ತಿಪರ ಕ್ರಿಕೆಟ್‌ನಿಂದ ಹಠಾತ್ ನಿವೃತ್ತಿ ಘೋಷಿಸಿದ್ದಾರೆ(PC-PTI).

1 / 5
ಗಾಯದಿಂದಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಕ್ರಿಕೆಟ್‌ನಿಂದ ಹೊರಗುಳಿದಿದ್ದ ಜಾನ್ ಟರ್ನರ್ 2024 ರ ಕೊನೆಯಲ್ಲಿ ಇಂಗ್ಲೆಂಡ್‌ನ ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ ಎರಡು ಏಕದಿನ ಮತ್ತು ಎರಡು ಟಿ20 ಪಂದ್ಯಗಳನ್ನು ಆಡಿದ್ದರು. ಈ ಪಂದ್ಯಗಳಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಬಳಿಕ ಗಾಯದಿಂದಾಗಿ ತಂಡದಿಂದ ಹೊರಬಿದಿದ್ದರು(PC-ECB).

2 / 5
ತಮ್ಮ ನಿವೃತ್ತಿಯ ಬಗ್ಗೆ ಹೇಳಿಕೆ ನೀಡಿರುವ ಟರ್ನರ್, ‘ವೃತ್ತಿಪರ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಆಡುವುದು ಯಾವಾಗಲೂ ನನ್ನ ಕನಸಾಗಿತ್ತು. ಹ್ಯಾಂಪ್‌ಶೈರ್ ಮತ್ತು ಇಂಗ್ಲೆಂಡ್‌ ಪರ ಆಡುವುದು ಕೂಡ ನನ್ನ ಬಾಲ್ಯದ ಕನಸಾಗಿತ್ತು. ಆ ಕನಸು ನನಸು ಕೂಡ ಆಯಿತು. ಆದರೆ ನಾನೀಗ ಆಟದಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಇದು ನಾನು ತೆಗೆದುಕೊಳ್ಳಬೇಕಾದ ಅತ್ಯಂತ ಕಠಿಣ ನಿರ್ಧಾರಗಳಲ್ಲಿ ಒಂದಾಗಿದೆ. ಗಾಯದಿಂದಾಗಿ ನಾನು ಒಂದು ವರ್ಷಕ್ಕೂ ಹೆಚ್ಚು ಕಾಲ ಆಟದಿಂದ ಹೊರಗುಳಿದಿದ್ದೆ(PC-ECB).

3 / 5
ನಿರಂತರ ಗಾಯಗಳು ಕ್ರಿಕೆಟಿಗನಾಗಿ ನನ್ನ ಭವಿಷ್ಯದ ಬಗ್ಗೆ ಯೋಚಿಸುವಂತೆ ಮತ್ತು ಆಟದಿಂದ ದೂರವಾಗುವಂತೆ ಒತ್ತಾಯಿಸಿದವು. ನನ್ನ ಮುಂದಿನ ಸವಾಲನ್ನು ಎದುರಿಸಲು ಈಗ ಸರಿಯಾದ ಸಮಯ ಎಂದು ನಾನು ನಿರ್ಧರಿಸಿದೆ. ಹ್ಯಾಂಪ್‌ಶೈರ್‌ಗಾಗಿ ನಾನು ಆಡಿದ ಐದು ವರ್ಷಗಳು ವೃತ್ತಿಪರ ಕ್ರಿಕೆಟಿಗನಾಗಿ ನಾನು ಅನುಭವಿಸಿದ ಐದು ವರ್ಷಗಳಲ್ಲಿ ಅತ್ಯುತ್ತಮವಾಗಿವೆ ಎಂದಿದ್ದಾರೆ(PC-ECB).

4 / 5
2023 ರಲ್ಲಿ ದಿ ಹಂಡ್ರೆಡ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಟರ್ನರ್​ಗೆ ಇಂಗ್ಲೆಂಡ್ ತಂಡದಲ್ಲಿ ಅವಕಾಶ ನೀಡಿಲಾಯಿತು. ಆ ಬಳಿಕ ಹ್ಯಾಂಪ್‌ಶೈರ್‌ನ ಕೌಂಟಿ ಚಾಂಪಿಯನ್‌ಶಿಪ್ ತಂಡದ ಪರ ಆಡಿದ ಟರ್ನರ್, ಈ ತಂಡದ ಪರ ಕೇವಲ ಏಳು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು. ಆದರೆ ಆ ಬಳಿಕ ಸತತ ಗಾಯಗಳಿಂದ ನಲುಗಿದ ಟರ್ನರ್ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ(PC-ECB).

5 / 5
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ

ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!

ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು

ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?

‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ

ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ

ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ

ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ

ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ

ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ