AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Prabhas

Prabhas

ಪ್ರಭಾಸ್ ಅವರು ಟಾಲಿವುಡ್​ನ ಬೇಡಿಕೆಯ ಹೀರೋ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಪ್ರಭಾಸ್ ನೀಡಿದ್ದಾರೆ. ಪ್ರಭಾಸ್ ಜನಿಸಿದ್ದು 1979ರ ಅಕ್ಟೋಬರ್ 23ರಂದು. ಪ್ರಭಾಸ್ ತಂದೆ ಉಪ್ಪಲಪತಿ ಸೂರ್ಯ ನಾರಾಯಣ ರಾಜ ನಿರ್ಮಾಪಕರಾಗಿದ್ದರು. ಹೀಗಾಗಿ, ಪ್ರಭಾಸ್​ಗೆ ಚಿತ್ರರಂಗಕ್ಕೆ ಸುಲಭದಲ್ಲಿ ಅವಕಾಶ ಸಿಕ್ಕಿತು. 2002ರಲ್ಲಿ ‘ಈಶ್ವರ್’ ಹೆಸರಿನ ಸಿನಿಮಾ ಮೂಲಕ ಪ್ರಭಾಸ್ ಬಣ್ಣದ ಬದುಕು ಆರಂಭಿಸಿದರು. ನಂತರ ಹಲವು ಹಿಟ್ ಚಿತ್ರ ನೀಡಿದರು. ಅನುಷ್ಕಾ ಶೆಟ್ಟಿ ಜೊತೆಗಿನ ರಿಲೇಶನ್​ಶಿಪ್ ವಿಚಾರಕ್ಕೆ ಪ್ರಭಾಸ್ ಸಾಕಷ್ಟು ಸುದ್ದಿ ಆಗಿದ್ದರು. ಟಾಲಿವುಡ್​ನ ಮೋಸ್ಟ್ ಎಲಿಜಬೆಲ್ ಬ್ಯಾಚುಲರ್ ಎನ್ನುವ ಪಟ್ಟ ಅವರಿಗೆ ಸಿಕ್ಕಿದೆ. ನಂದಿ ಅವಾರ್ಡ್​ ಸೇರಿ ಹಲವು ಪ್ರಶಸ್ತಿಗಳನ್ನು ಅವರು ಗೆದ್ದಿದ್ದಾರೆ. ‘ಬಾಹುಬಲಿ’ ಹಾಗೂ ‘ಬಾಹುಬಲಿ 2’ ಮೂಲಕ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆದರು.

ಇನ್ನೂ ಹೆಚ್ಚು ಓದಿ

ಇನ್ನು 6 ತಿಂಗಳು ಯಾರ ಕಣ್ಣಿಗೂ ಕಾಣಿಸಲ್ಲ ಪ್ರಭಾಸ್: ಕಾರಣ ಏನು?

ಮುಂದಿನ ಕೆಲವು ತಿಂಗಳ ಕಾಲ ಪ್ರಭಾಸ್ ಯಾರ ಕಣ್ಣಿಗೂ ಕಾಣಿಸಿಕೊಳ್ಳಲ್ಲ ಎಂಬುದು ಫ್ಯಾನ್ಸ್ ಪಾಲಿಗೆ ಬೇಸರದ ವಿಷಯ. ಆದರೆ ಪ್ರಭಾಸ್ ಅವರು ಈ ರೀತಿ ಮಾಡುತ್ತಿರುವುದು ಬಹುನಿರೀಕ್ಷಿತ ‘ಸ್ಪಿರಿಟ್’ ಸಿನಿಮಾದ ಕಾರಣಕ್ಕಾಗಿ ಮಾತ್ರ. ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರ ಸೂಚನೆ ಮೇರೆಗೆ ಪ್ರಭಾಸ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾದಲ್ಲಿ ರಣಬೀರ್ ಕಪೂರ್ ಅತಿಥಿ ಪಾತ್ರ?

ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ‘ಸ್ಪಿರಿಟ್’ ಸಿನಿಮಾದ ಕೆಲಸಗಳಿಗೆ ಚುರುಕು ಮುಟ್ಟಿಸಲಾಗಿದೆ. ಯಶಸ್ವಿ ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಅತಿಥಿ ಪಾತ್ರ ಮಾಡುತ್ತಾರೆ ಎಂಬ ಸುದ್ದಿ ಹಬ್ಬಿದೆ.

ಪ್ರಭಾಸ್ ಜನ್ಮದಿನ: ಟಾಲಿವುಡ್ ಹೀರೋ ಬಳಿ ಇದೆ ಅರ್ಧ ಡಜನ್ ಸಿನಿಮಾ

ಇಂದು ನಟ ಪ್ರಭಾಸ್ ಜನ್ಮದಿನ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಬಳಿ ಅರ್ಧ ಡಜನ್ ಬೃಹತ್ ಬಜೆಟ್ ಸಿನಿಮಾಗಳಿವೆ. 'ದಿ ರಾಜಾ ಸಾಬ್', 'ಸಲಾರ್: ಪಾರ್ಟ್ 2', 'ಕಲ್ಕಿ 2898 AD: ಪಾರ್ಟ್ 2' ಪ್ರಮುಖವಾದವು. 'ಬಾಹುಬಲಿ'ಯಂತಹ ಸಾವಿರ ಕೋಟಿ ಕ್ಲಬ್ ಸೇರಿದ ಸಿನಿಮಾಗಳ ಮೂಲಕ ಅವರು ಜಾಗತಿಕ ಸ್ಟಾರ್ ಆಗಿ ಬೆಳೆದಿದ್ದಾರೆ.

ಪ್ರಭಾಸ್ ನಟನೆಯ ‘ಸ್ಪಿರಿಟ್’ ಚಿತ್ರಕ್ಕೆ ಬಾಲಿವುಡ್ ಸ್ಟಾರ್ ಹೀರೋ ವಿಲನ್

Spirit Movie: ಪ್ರಭಾಸ್ ನಟನೆಯ 'ಸ್ಪಿರಿಟ್' ಚಿತ್ರದ ಬಗ್ಗೆ ಹೊಸ ಅಪ್‌ಡೇಟ್‌ಗಳು ಹೊರಬಿದ್ದಿವೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ವಿವೇಕ್ ಒಬೆರಾಯ್ ಖಳನಾಯಕನಾಗಿ ನಟಿಸಲಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಪ್ರಭಾಸ್ ತಂದೆಯಾಗಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಸಖತ್ ಅದ್ದೂರಿಯಾಗಿದೆ ‘ದಿ ರಾಜಾ ಸಾಬ್’ ಟ್ರೇಲರ್: ಹೈಪ್ ಸೃಷ್ಟಿಸಿದ ಹಾರರ್ ಕಹಾನಿ

ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿ ಸಖತ್ ಸದ್ದು ಮಾಡುತ್ತಿದೆ. ನೂರಾರು ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಟ್ರೇಲರ್ ಅನಾವರಣ ಮಾಡಲಾಯಿತು. ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಡಿಜಿಟಲ್ ವೇದಿಕೆಗಳಲ್ಲಿ ಕೂಡ ಈ ಟ್ರೇಲರ್ ಭರ್ಜರಿ ವೀವ್ಸ್ ಪಡೆಯುತ್ತಿದೆ.

‘ಕಲ್ಕಿ 2898 ಎಡಿ’ ಸಿನಿಮಾ ಸೀಕ್ವೆಲ್​ನಲ್ಲಿ ದೀಪಿಕಾ ಸ್ಥಾನ ತುಂಬಲಿದ್ದಾರೆ ಅನುಷ್ಕಾ ಶೆಟ್ಟಿ?

Anushka Shetty: ‘ಕಲ್ಕಿ 2898 ಎಡಿ’ ಚಿತ್ರದಿಂದ ದೀಪಿಕಾ ಪಡುಕೋಣೆ ಹೊರ ನಡೆದಿರುವುದು ಸಿನಿಮಾ ರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸೀಕ್ವೆಲ್‌ನಲ್ಲಿ ಅನುಷ್ಕಾ ಶೆಟ್ಟಿ ನಟಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಪ್ರಭಾಸ್ ಮತ್ತು ಅನುಷ್ಕಾ ಅವರ ಹಿಟ್ ಜೋಡಿ ಮತ್ತೊಮ್ಮೆ ಸೇರುವ ನಿರೀಕ್ಷೆಯಿದೆ.

ಮತ್ತೆ ಮುಂದಕ್ಕೆ ಹೋಯ್ತು ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ರಿಲೀಸ್ ಡೇಟ್

ಒಂದಲ್ಲಾ ಒಂದು ಕಾರಣದಿಂದ ‘ದಿ ರಾಜಾ ಸಾಬ್’ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆ ಆಗುತ್ತಲೇ ಇದೆ. ಇದು ಪ್ರಭಾಸ್ ಅಭಿನಯಿಸಿದ ಮೊದಲ ಹಾರರ್ ಸಿನಿಮಾ ಆದ್ದರಿಂದ ಅಭಿಮಾನಿಗಳು ಬಹಳ ನಿರೀಕ್ಷೆ ಹೊಂದಿದ್ದಾರೆ. ಈ ವರ್ಷದ ಕೊನೆಯಲ್ಲಿ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದೂಡಲಾಗಿದೆ.

ಬಿಡುಗಡೆ ಆಯ್ತು ‘ಬಾಹುಬಲಿ: ದಿ ಎಪಿಕ್’ ಟೀಸರ್, ವಿಶೇಷತೆಯೇನು?

Bahubali The Epic: ‘ಬಾಹುಬಲಿ 1 ಮತ್ತು 2’ ಸಿನಿಮಾಗಳು ಕ್ರಮವಾಗಿ 2015 ಮತ್ತು 2017ಕ್ಕೆ ಬಿಡುಗಡೆ ಆಗಿದ್ದವು. ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳನ್ನು ಬರೆದಿದ್ದವು. ಇದೀಗ ಈ ಎರಡೂ ಸಿನಿಮಾಗಳನ್ನು ಒಂದೇ ಮಾಡಿ ಮತ್ತೆ ಮರು ಬಿಡುಗಡೆ ಮಾಡಲಾಗುತ್ತಿದೆ. ಹಲವಾರು ದೃಶ್ಯಗಳನ್ನು ಕತ್ತರಿಸಿ 3:30 ಗಂಟೆಯ ಸಿನಿಮಾ ಮಾಡಲಾಗಿದ್ದು, ಮರು ಬಿಡುಗಡೆ ದಿನಾಂಕ ಇಲ್ಲಿದೆ...

ಬರಲ್ಲ ‘ಕಲ್ಕಿ 2898 ಎಡಿ’ ಸೀಕ್ವೆಲ್? ರಜನಿಕಾಂತ್ ಹಿಂದೆ ಹೊರಟ ನಿರ್ದೇಶಕ ನಾಗ್ ಅಶ್ವಿನ್

ನಾಗ್ ಅಶ್ವಿನ್ ಅವರು ‘ಕಲ್ಕಿ 2898 ಎಡಿ’ ಚಿತ್ರದ ಯಶಸ್ಸಿನ ನಂತರ ರಜನಿಕಾಂತ್ ಅವರೊಂದಿಗೆ ಹೊಸ ಚಿತ್ರ ನಿರ್ದೇಶನ ಮಾಡಲಿದ್ದಾರೆ. ‘ಕಲ್ಕಿ 2898 ಎಡಿ’ ಯ ಸೀಕ್ವೆಲ್‌ಗೆ ಸ್ಕ್ರಿಪ್ಟ್ ಕೆಲಸ ಆರಂಭವಾಗಿದ್ದರೂ, ರಜನಿಕಾಂತ್ ಚಿತ್ರದ ಘೋಷಣೆಯಿಂದ ಸೀಕ್ವೆಲ್‌ನ ಭವಿಷ್ಯ ಅನಿಶ್ಚಿತವಾಗಿದೆ. ದೀಪಿಕಾ ಪಡುಕೋಣೆ ಅವರ ಕೆಲಸದ ವೇಳಾಪಟ್ಟಿಯಿಂದಾಗಿ ಸೀಕ್ವೆಲ್‌ನಲ್ಲಿ ವಿಳಂಬ ಉಂಟಾಗುವ ಸಾಧ್ಯತೆಯಿದೆ.

ಆಗಸ್ಟ್ 14ರಂದು ಚಿತ್ರಮಂದಿರಗಳಲ್ಲಿ ರಾರಾಜಿಸಲಿದೆ ‘ಬಾಹುಬಲಿ: ದಿ ಎಪಿಕ್’ ಟೀಸರ್

ಚಿತ್ರಮಂದಿರಗಳಲ್ಲಿ ಮತ್ತೊಮ್ಮೆ ‘ಬಾಹುಬಲಿ’ ಸಿನಿಮಾವನ್ನು ನೋಡುವ ಅವಕಾಶ ಸಿಗುತ್ತಿದೆ. ಈ ಬಾರಿ ಹೊಸ ಟ್ವಿಸ್ಟ್ ಏನೆಂದರೆ, 2 ಪಾರ್ಟ್​​ಗಳನ್ನು ಸೇರಿಸಿ ಒಟ್ಟಿಗೆ ಬಿಡುಗಡೆ ಮಾಡಲಾಗುತ್ತಿದೆ. ಈ ವರ್ಷನ್​​ಗೆ ‘ಬಾಹುಬಲಿ: ದಿ ಎಪಿಕ್’ ಎಂದು ಶೀರ್ಷಿಕೆ ಇಡಲಾಗಿದ್ದು, ಇದರ ಅವಧಿ 3 ಗಂಟೆ 45 ನಿಮಿಷ!