AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಜಾಸಾಬ್’ ಸೋಲಿನ ಬಳಿಕ ಬಜೆಟ್ ಉಳಿಸಲು ಹೊಸ ಪ್ಲ್ಯಾನ್ ರೂಪಿಸಿದ ಪ್ರಭಾಸ್

ನಟ ಪ್ರಭಾಸ್ ಅವರ 'ರಾಜಾಸಾಬ್' ಸಿನಿಮಾ ದೊಡ್ಡ ನಷ್ಟ ಅನುಭವಿಸಿದ ಬಳಿಕ, ಮುಂದಿನ 'ಸ್ಪಿರಿಟ್' ಚಿತ್ರದ ಬಜೆಟ್ ಉಳಿಸಲು ಹೊಸ ತಂತ್ರ ರೂಪಿಸಲಾಗಿದೆ. ಪ್ರಭಾಸ್ ಮತ್ತು ನಿರ್ದೇಶಕ ಸಂದೀಪ್ ರೆಡ್ಡಿ ವಂಗ 95 ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸುವ ಯೋಜನೆ ಹಾಕಿಕೊಂಡಿದ್ದಾರೆ. ಇದರಿಂದ ನಿರ್ಮಾಪಕರಿಗೆ ದೊಡ್ಡ ನಷ್ಟ ತಪ್ಪಲಿದೆ ಮತ್ತು ನಿಗದಿತ 2027ರ ಮಾರ್ಚ್ 5ರಂದೇ ಸಿನಿಮಾ ಬಿಡುಗಡೆಯಾಗಲಿದೆ.

‘ರಾಜಾಸಾಬ್’ ಸೋಲಿನ ಬಳಿಕ ಬಜೆಟ್ ಉಳಿಸಲು ಹೊಸ ಪ್ಲ್ಯಾನ್ ರೂಪಿಸಿದ ಪ್ರಭಾಸ್
ಪ್ರಭಾಸ್ Image Credit source: Raja Saab Team
ರಾಜೇಶ್ ದುಗ್ಗುಮನೆ
|

Updated on: Jan 28, 2026 | 3:01 PM

Share

ನಟ ಪ್ರಭಾಸ್ (Prabhas) ನಟನೆಯ ‘ರಾಜಾಸಾಬ್’ ಸಿನಿಮಾ ಡಿಸಾಸ್ಟರ್ ಎನಿಸಿಕೊಂಡಿತು. ಚಿತ್ರದ ಬಜೆಟ್ 400 ಕೋಟಿ ರೂಪಾಯಿಗೂ ಅಧಿಕ ಆಗಿತ್ತು. ಸಿನಿಮಾ ಕಲೆಕ್ಷನ್ ಕೂಡ ಕಡಿಮೆ ಇದ್ದಿದ್ದರಿಂದ ನಿರ್ಮಾಪಕರಿಗೆ ದೊಡ್ಡ ನಷ್ಟ ಉಂಟಾಯಿತು. ಈಗ ಮುಂದಿನ ಸಿನಿಮಾದ ಬಜೆಟ್ ಉಳಿಸಲು ಪ್ರಭಾಸ್ ಹಾಗೂ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಹೊಸ ಪ್ಲ್ಯಾನ್ ರೂಪಿಸಿದ್ದಾರೆ. ‘ಸ್ಪಿರಿಟ್’ ಚಿತ್ರದ ಬಜೆಟ್​​ ಅನ್ನು ತಗ್ಗಿಸಲು ಈ ಪ್ಲ್ಯಾನ್ ಸಹಕಾರಿ ಆಗಲಿದೆ.

ಸಾಮಾನ್ಯವಾಗಿ ಸ್ಟಾರ್ ಹೀರೋಗಳ ಸಿನಿಮಾಗಳ ಬಜೆಟ್ ಮಿತಿ ಮೀರುತ್ತದೆ. ವಿಸ್ತ್ರ ಶೂಟಿಂಗ್ ಶೆಡ್ಯೂಲ್ ಕೂಡ ಇದಕ್ಕೆ ಕಾರಣ. ನಿರ್ದೇಶಕರು ಎಷ್ಟೇ ಪ್ಲ್ಯಾನ್ ಮಾಡಿದರೂ ಹೀರೋಗಳ ಕಾಲ್​​ಶೀಟ್​​ನಲ್ಲಿ ವ್ಯತ್ಯಾಸ ಆಗುತ್ತದೆ. ಇದು ಸಿನಿಮಾದ ಬಜೆಟ್ ಹೆಚ್ಚಿಸುತ್ತದೆ. ಅಲ್ಲದೆ, 150-200 ದಿನ ಶೂಟ್ ನಡೆಯೋದು ಬಜೆಟ್ ಏರಲು ಕಾರಣ. ಆದರೆ, ಇದಕ್ಕೆಲ್ಲ ಬ್ರೇಕ್ ಹಾಕಲು ಪ್ಲ್ಯಾನ್ ರೂಪಿಸಿದ್ದಾರೆ ಪ್ರಭಾಸ್.

ಪ್ರಭಾಸ್ ಅವರಿಂದ ‘ರಾಜಾಸಾಬ್’ ನಿರ್ಮಾಪಕರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಹೀಗಾಗಿ, ‘ಸ್ಪಿರಿಟ್’ ಚಿತ್ರವನ್ನು ಕೇವಲ 95 ದಿನಗಳಲ್ಲಿ ಮಾಡಿ ಮುಗಿಸೋ ಪ್ಲ್ಯಾನ್ ಅಲ್ಲಿದ್ದಾರೆ ಪ್ರಭಾಸ್. ಈ ಎಲ್ಲಾ ಕಾರಣದಿಂದ ನಿರ್ಮಾಪಕರು ಸಾಕಷ್ಟು ಖುಷಿಪಟ್ಟಿದ್ದಾರೆ. ಸಂದೀಪ್ ರೆಡ್ಡಿ ವಂಗ ಅವರು ಪಕ್ಕಾ ಪ್ಲ್ಯಾನ್ ಮಾಡಿ ಶೂಟಿಂಗ್ ಸ್ಥಳ ಹಾಗೂ ದಿನಗಳನ್ನು ನಿಗದಿ ಮಾಡಿದ್ದಾರೆ. ಇದರ ಅನುಸಾರ ಶೂಟ್ ನಡೆಯಲಿದೆ.

ಇದನ್ನೂ ಓದಿ: ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ನಿರ್ಮಾಪಕ

ಹಾಗಂತ ಒಂದೇ ಸ್ಟ್ರೇಚ್​​ನಲ್ಲಿ 95 ದಿನಗಳ ಕಾಲ ಶೂಟ್ ಮಾಡೋದಿಲ್ಲ. ಹಂತ ಹಂತವಾಗಿ ಈ ಚಿತ್ರೀಕರಣ ನಡೆಯಲಿದೆ. ಒಂದೊಮ್ಮೆ ಅಂದುಕೊಂಡಂತೆ 95 ದಿನಗಳಲ್ಲಿ ಶೂಟ್ ಪೂರ್ಣಗೊಂಡಿದ್ದೇ ಆದಲ್ಲಿ ಈ ಮೊದಲು ನಿಗದಿಪಡಿಸಿದ 2027ರ ಮಾರ್ಚ್ 5ರಂದು ಸಿನಿಮಾ ತೆರೆಗೆ ಬರಲಿದೆ. ಇದರಿಂದ ನಿರ್ಮಾಪಕರಿಗೆ ಒಂದಷ್ಟು ಬಜೆಟ್ ಕೂಡ ಉಳಿತಾಯ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.