AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಭಾಸ್ ‘ಭಾರ’ಕ್ಕೆ ಬೆಂಡಾದ ಜಿಯೋ ಹಾಟ್​​ಸ್ಟಾರ್: ಒಟಿಟಿ ಹೇಳಿದ್ದೇನು?

The Raja Saab OTT release: ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಇತ್ತೀಚೆಗಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ನಿರೀಕ್ಷಿಸಿದ ಮಟ್ಟದಲ್ಲಿರಲಿಲ್ಲ. ಆದರೂ ಬಾಕ್ಸ್ ಆಫೀಸ್​​ನಲ್ಲಿ ಸುಮಾರು 300 ಕೋಟಿಗೂ ಹೆಚ್ಚು ಮೊತ್ತ ಗಳಿಸಿದೆ. ಇದೀಗ ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದ್ದು, ಇಲ್ಲಿಯೂ ಸಹ ಬಿಡುಗಡೆಗೆ ಮುಂಚೆಯೇ ಅಬ್ಬರ ಸೃಷ್ಟಿಸಿದೆ. ಯಾವ ಮಟ್ಟಿಗೆಂದರೆ ಸ್ವತಃ ಒಟಿಟಿಯ ಆಡಳಿತವೇ ಶಾಕ್ ಆಗಿದೆ.

ಪ್ರಭಾಸ್ ‘ಭಾರ’ಕ್ಕೆ ಬೆಂಡಾದ ಜಿಯೋ ಹಾಟ್​​ಸ್ಟಾರ್: ಒಟಿಟಿ ಹೇಳಿದ್ದೇನು?
The Raja Saab
ಮಂಜುನಾಥ ಸಿ.
|

Updated on:Feb 06, 2026 | 4:16 PM

Share

ಪ್ರಭಾಸ್ (Prabhas), ಭಾರತದ ನಂಬರ್ 1 ಪ್ಯಾನ್ ಇಂಡಿಯಾ ಸ್ಟಾರ್. ದೇಶದಾದ್ಯಂತ ದೊಡ್ಡ ಸಂಖ್ಯೆಯ ಅಭಿಮಾನಿಗಳು ಪ್ರಭಾಸ್ ಅವರಿಗಿದ್ದಾರೆ. ಅದ್ಯಾವ ಮಟ್ಟಿಗೆ ಪ್ರಭಾಸ್ ಕ್ರೇಜ್ ಇದೆಯೆಂದರೆ ಅವರ ಕೆಟ್ಟ ಸಿನಿಮಾಗಳು ಸಹ ಸುಲಭವಾಗಿ 200-300 ಕೋಟಿ ಹಣ ಗಳಿಕೆ ಮಾಡಿಬಿಡುತ್ತವೆ ಅದೂ ಮೊದಲ ಒಂದು ವಾರದ ಒಳಗೆ. ಇತ್ತೀಚೆಗೆ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾ ನಿರೀಕ್ಷಿಸಿದ ಮಟ್ಟದಲ್ಲಿರಲಿಲ್ಲ. ಆದರೂ ಬಾಕ್ಸ್ ಆಫೀಸ್​​ನಲ್ಲಿ ಸುಮಾರು 300 ಕೋಟಿಗೂ ಹೆಚ್ಚು ಮೊತ್ತ ಗಳಿಸಿದೆ. ಇದೀಗ ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದ್ದು, ಇಲ್ಲಿಯೂ ಸಹ ಬಿಡುಗಡೆಗೆ ಮುಂಚೆಯೇ ಅಬ್ಬರ ಸೃಷ್ಟಿಸಿದೆ.

ಪ್ರಭಾಸ್ ನಟನೆಯ ಹಾರರ್ ಕಾಮಿಡಿ ಚಿತ್ರ ‘ದಿ ರಾಜಾ ಸಾಬ್’ ಈಗ ಡಿಜಿಟಲ್ ಪರದೆಯ ಮೇಲೆ ಅಬ್ಬರಿಸಲು ಸಿದ್ಧವಾಗಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 9ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ, ಈಗ ಕೇವಲ ಒಂದು ತಿಂಗಳ ಅಂತರದಲ್ಲಿ ಒಟಿಟಿ ಪ್ರಿಯರ ಮುಂದೆ ಬರುತ್ತಿದೆ. ಈ ಸಿನಿಮಾ ಕೆಲವೇ ದಿನಗಳಲ್ಲಿ ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ಆದರೆ ಪ್ರಭಾಸ್ ಅಭಿಮಾನಿಗಳು ಅದ್ಯಾವ ಮಟ್ಟಿಗೆ ನಿರೀಕ್ಷೆ ವ್ಯಕ್ತಪಡಿಸಿದ್ದಾರೆಂದರೆ, ಸ್ವತಃ ಒಟಿಟಿಯ ಆಡಳಿತ ಮಂಡಳಿಯೇ ಶಾಕ್ ಆಗಿದೆ.

ಇದನ್ನೂ ಓದಿ:‘ಸಲಾರ್ 2’ ಸಿನಿಮಾ ನಿಂತೇ ಹೋಯ್ತೆ? ಪ್ರಭಾಸ್-ನೀಲ್ ಮಾಡಿರುವ ಚರ್ಚೆ ಏನು?

ಜಿಯೋ ಹಾಟ್‌ಸ್ಟಾರ್ ತನ್ನ ಅಧಿಕೃತ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಒಂದು ವಿಶೇಷ ಸಂದೇಶವನ್ನು ಹಂಚಿಕೊಂಡಿದೆ. ಪ್ರಭಾಸ್ ಅವರ ‘ದಿ ರಾಜಾ ಸಾಬ್’ ಸಿನಿಮಾಕ್ಕಾಗಿ ಒಟಿಟಿ ಇತಿಹಾಸದಲ್ಲೇ ಕಾಣದಂತಹ ಕ್ರೇಜ್ ಸೃಷ್ಟಿಯಾಗಿದ್ದು, ಲಕ್ಷಾಂತರ ಮಂದಿ ‘Remind Me’ (ರಿಮೈಂಡ್ ಮೀ) ಬಟನ್ ಕ್ಲಿಕ್ ಮಾಡಿದ್ದಾರೆ. ಈ ಭಾರಿ ಪ್ರಮಾಣದ ಟ್ರಾಫಿಕ್ ಅನ್ನು ನಿಭಾಯಿಸಲು ಮತ್ತು ಪ್ರೇಕ್ಷಕರಿಗೆ ಯಾವುದೇ ಅಡಚಣೆಯಿಲ್ಲದೆ ಸಿನಿಮಾ ತೋರಿಸಲು ಜಿಯೋ ಹಾಟ್‌ಸ್ಟಾರ್ ತನ್ನ ಸರ್ವರ್‌ಗಳನ್ನು ಅಪ್‌ಗ್ರೇಡ್ ಮಾಡಿದೆ. ಇದು ಭಾರತೀಯ ಒಟಿಟಿ ಇತಿಹಾಸದಲ್ಲೇ ಅತ್ಯಂತ ಅಪರೂಪದ ವಿದ್ಯಮಾನವಾಗಿದೆ ಎಂದು ಸ್ವತಃ ಜಿಯೋ ಹಾಟ್​​ಸ್ಟಾರ್ ಹೇಳಿದೆ.

ಇದು ಪ್ರಭಾಸ್ ಅವರಿಗೆ ಇರುವ ಕ್ರೇಜ್​​ಗೆ ಉದಾಹರಣೆಯಾಗಿದೆ. ‘ದಿ ರಾಜಾ ಸಾಬ್’ ಸಿನಿಮಾ ಚಿತ್ರಮಂದಿರಗಳಲ್ಲಿ ಫ್ಲಾಪ್ ಎಂಬ ಹಣೆಪಟ್ಟಿ ಹಚ್ಚಿಸಿಕೊಂಡ ಸಿನಿಮಾ. ಹಲವಾರು ಮಂದಿ ವಿಮರ್ಶಕರು ಸಿನಿಮಾದ ಕತೆ, ಚಿತ್ರಕತೆ, ವಿಎಫ್​​ಎಕ್ಸ್ ಚೆನ್ನಾಗಿಲ್ಲವೆಂದು ಸಿನಿಮಾದ ಬಗ್ಗೆ ಟೀಕೆ ಮಾಡಿದ್ದಾರೆ. ಇಷ್ಟೆಲ್ಲದರ ಮಧ್ಯೆಯೂ ಸಹ ಜನ ಒಟಿಟಿಯಲ್ಲಿ ಸಿನಿಮಾ ನೋಡಲು ಕಾತರರಾಗಿ ಕಾಯುತ್ತಿದ್ದಾರೆ.

ಅಂದಹಾಗೆ ಒಟಿಟಿಯಲ್ಲಿ ‘ದಿ ರಾಜಾ ಸಾಬ್’ ಸಿನಿಮಾ ನೋಡುವವರಿಗೆ ಒಂದು ವಿಶೇಷ ಉಡುಗೊರೆ ಕಾದಿದೆ. ತಾಂತ್ರಿಕ ಕಾರಣಗಳಿಂದಾಗಿ ಚಿತ್ರಮಂದಿರಗಳಲ್ಲಿ ಕೈಬಿಡಲಾಗಿದ್ದ ಸುಮಾರು 4 ರಿಂದ 8 ನಿಮಿಷಗಳ ದೃಶ್ಯಗಳನ್ನು ಒಟಿಟಿ ಆವೃತ್ತಿಯಲ್ಲಿ ಸೇರಿಸಲಾಗಿದೆ. ಇದರಲ್ಲಿ ಪ್ರಭಾಸ್ ಅವರ ‘ಓಲ್ಡ್ ಗೆಟಪ್’ ದೃಶ್ಯಗಳು ಮತ್ತು ಒಂದು ಸಾಹಸ ಸನ್ನಿವೇಶ ಪ್ರಮುಖ ಆಕರ್ಷಣೆಯಾಗಲಿದೆ. ಈ ದೃಶ್ಯಗಳನ್ನು ಸಿನಿಮಾದ ಅವಧಿ ಹೆಚ್ಚಳ ಹಾಗೂ ಇನ್ನಿತರೆ ಕಾರಣಗಳಿಂದಾಗಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿದಾಗ ಕೈಬಿಡಲಾಗಿತ್ತು. ಇದೀಗ ಅದನ್ನು ಸೇರಿಸಲಾಗಿದೆ.

‘ದಿ ರಾಜಾ ಸಾಬ್’ ಸಿನಿಮಾವು ಜಿಯೋ ಹಾಟ್​​ಸ್ಟಾರ್​​​ನಲ್ಲಿ ಇಂದಿನಿಂದ (ಫೆಬ್ರವರಿ 06) ಪ್ರಸಾರ ಆಗಲಿದೆ. ಸಿನಿಮಾವನ್ನು ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ವೀಕ್ಷಿಸಬಹುದಾಗಿದೆ. ಮಾರುತಿ ನಿರ್ದೇಶನದ ಈ ಚಿತ್ರದಲ್ಲಿ ನಿಧಿ ಅಗರ್ವಾಲ್, ಮಾಳವಿಕಾ ಮೋಹನನ್ ಮತ್ತು ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯು ನಿರ್ಮಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:08 pm, Fri, 6 February 26