AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಲಾರ್ 2’ ಸಿನಿಮಾ ನಿಂತೇ ಹೋಯ್ತೆ? ಪ್ರಭಾಸ್-ನೀಲ್ ಮಾಡಿರುವ ಚರ್ಚೆ ಏನು?

Salaar 2 movie update: ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ 2023ರಲ್ಲಿ ಬಿಡುಗಡೆ ಆಗಿತ್ತು. ಅದಾಗಿ ಮೂರು ವರ್ಷವಾಗುತ್ತಾ ಬಂದರೂ ‘ಸಲಾರ್ 2’ ಸಿನಿಮಾದ ಚಿತ್ರೀಕರಣ ಆರಂಭವಾಗಿಲ್ಲ. ಅಷ್ಟಕ್ಕೂ ಈ ಸಿನಿಮಾ ನಿಂತೇ ಹೋಯ್ತೆ? ಇದೀಗ ‘ಸಲಾರ್ 2’ ಸಿನಿಮಾ ಬಗ್ಗೆ ಹೊಸದೊಂದು ಅಪ್​​ಡೇಟ್ ಹರಿದಾಡುತ್ತಿದೆ. ಏನದು?

‘ಸಲಾರ್ 2’ ಸಿನಿಮಾ ನಿಂತೇ ಹೋಯ್ತೆ? ಪ್ರಭಾಸ್-ನೀಲ್ ಮಾಡಿರುವ ಚರ್ಚೆ ಏನು?
Salaar 2
ಮಂಜುನಾಥ ಸಿ.
|

Updated on: Jan 30, 2026 | 12:46 PM

Share

ಬಾಹುಬಲಿ 2’ (Bahubali 2) ಸಿನಿಮಾದ ಬಳಿಕ ಸತತ ಸೋಲುಗಳಿಂದ ಕಂಗೆಟ್ಟಿದ್ದ ಪ್ರಭಾಸ್ ಅನ್ನು ಗೆಲುವಿನ ಹಳಿಗೆ ಮರಳಿ ತಂದಿದ್ದು ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾ. ನೀಲ್ ಅವರೇ ನಿರ್ದೇಶಿಸಿದ್ದ ಕನ್ನಡದ ‘ಉಗ್ರಂ’ ಸಿನಿಮಾದ ಕತೆಯನ್ನೇ ಒಳಗೊಂಡ ಆದರೆ ಪ್ರಭಾಸ್​​ ಸ್ಟಾರ್​​ಡಮ್​​ಗೆ ತಕ್ಕಂತೆ ಅದ್ಧೂರಿತನದಿಂದ ನಿರ್ಮಿಸಿದ್ದ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಯಶಸ್ಸು ಕಂಡಿತ್ತು. ‘ಸಲಾರ್ 2’ ಸಹ ಬರಲಿದೆ ಎಂದು ‘ಸಲಾರ್’ ಸಿನಿಮಾದ ಅಂತ್ಯದಲ್ಲಿ ಘೋಷಿಸಲಾಗಿತ್ತು. ಆದರೆ ‘ಸಲಾರ್’ ಬಿಡುಗಡೆ ಆಗಿ ಮೂರು ವರ್ಷಗಳಾಗುತ್ತಾ ಬಂದಿದ್ದರೂ ‘ಸಲಾರ್ 2’ ಸಿನಿಮಾದ ಚಿತ್ರೀಕರಣ ಇನ್ನೂ ಶುರುವಾಗಿಲ್ಲ. ಹಾಗಿದ್ದರೆ ‘ಸಲಾರ್ 2’ ನಿಂತು ಹೋಯ್ತಾ? ಇಲ್ಲಿದೆ ಅಪ್​ಡೇಟ್.

ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಅವರು ‘ಸಲಾರ್ 2’ ಸಿನಿಮಾದ ಬಗ್ಗೆ ಚರ್ಚೆ ಮಾಡಿದ್ದು, ಈಗಾಗಲೇ ನೀಲ್ ರೆಡಿ ಮಾಡಿಕೊಂಡಿರುವ ‘ಸಲಾರ್ 2’ ಸಿನಿಮಾದ ಕತೆಯನ್ನು ಸಂಪೂರ್ಣವಾಗಿ ಬದಲಾವಣೆ ಮಾಡಲು ನಿರ್ಧರಿಸಲಾಗಿದೆಯಂತೆ. ಹೀಗೆಂದು ಸಿನಿಮಾಕ್ಕೆ ಸಂಬಂಧಿಸಿದ ಒಬ್ಬರೇ ಹೇಳಿರುವುದಾಗಿ ಪಿಂಕ್​ವಿಲ್ಲಾ ವರದಿ ಮಾಡಿದೆ. ಪ್ರಭಾಸ್ ಅವರ ಇತ್ತೀಚೆಗಿನ ಸಿನಿಮಾಗಳು ಯಶಸ್ಸು ಗಳಿಸದ ಕಾರಣ, ‘ಸಲಾರ್ 2’ ಸಿನಿಮಾದ ಕತೆ, ಪ್ರೆಸೆಂಟೇಷನ್ ಅನ್ನು ಸಂಪೂರ್ಣವಾಗಿ ಬದಲಾಯಿಸುವ ನಿರ್ಧಾರವನ್ನು ನೀಲ್ ಮಾಡಿದ್ದು, ಇದಕ್ಕೆ ಪ್ರಭಾಸ್ ಅವರ ಸಲಹೆಯೇ ಕಾರಣ ಎನ್ನಲಾಗುತ್ತಿದೆ.

‘ಸಲಾರ್’ ಸಿನಿಮಾ ಬಿಡುಗಡೆ ಆದಾಗ ಇದ್ದ ಪ್ರೇಕ್ಷಕರ ಮನಸ್ಥಿತಿಗೂ ಈಗಿನ ಮನಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದೆ. ಹಾಗಾಗಿ ಈಗಿನ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡುವ ಬಗ್ಗೆ ನೀಲ್ ಹಾಗೂ ಪ್ರಭಾಸ್ ಚರ್ಚಿಸಿದ್ದಾರೆ. ಇದೇ ಕಾರಣಕ್ಕೆ ಸಿನಿಮಾದ ಕತೆ, ಟೋನ್, ನಿರೂಪಣೆ ಇನ್ನೂ ಹಲವು ವಿಷಯಗಳನ್ನು ಬದಲಾವಣೆ ಮಾಡಿ, ಚಿತ್ರೀಕರಣಕ್ಕೆ ಹೋಗುವ ನಿರ್ಧಾರ ಮಾಡಲಾಗಿದೆಯಂತೆ.

ಇದನ್ನೂ ಓದಿ:‘ರಾಜಾಸಾಬ್’ ಸೋಲಿನ ಬಳಿಕ ಬಜೆಟ್ ಉಳಿಸಲು ಹೊಸ ಪ್ಲ್ಯಾನ್ ರೂಪಿಸಿದ ಪ್ರಭಾಸ್

‘ಸಲಾರ್’ ಸಿನಿಮಾಕ್ಕೆ ಹೊಂಬಾಳೆ ಫಿಲಮ್ಸ್ ಬಂಡವಾಳ ಹೂಡಿತ್ತು. ಪ್ರಭಾಸ್ ಜೊತೆಗೆ ಹೊಂಬಾಳೆ ಫಿಲಮ್ಸ್ ಮೂರು ಸಿನಿಮಾಗಳ ಒಪ್ಪಂದ ಮಾಡಿಕೊಂಡಿದ್ದು, ‘ಸಲಾರ್ 2’ ಸಹ ಅದರಲ್ಲಿ ಒಂದಾಗಿದೆ. ಆದರೆ ಪ್ರಭಾಸ್ ಮತ್ತು ನೀಲ್ ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಆಗಿ ಇರುವುದರಿಂದ ‘ಸಲಾರ್ 2’ ಸಿನಿಮಾ ತಡವಾಗುತ್ತಲೇ ಬರುತ್ತಿದೆ. ಈ ಹಿಂದೆ ಪ್ರಭಾಸ್ ಮತ್ತು ನೀಲ್ ನಡುವೆ ಮನಸ್ತಾಪ ಉಂಟಾಗಿದೆ ಎಂಬ ಸುದ್ದಿಯೂ ಹರಿದಾಡಿತ್ತು. ಆದರೆ ಪ್ರಭಾಸ್​​ರ ಹೊಸ ಸಿನಿಮಾ ಮುಹೂರ್ತಕ್ಕೆ ನೀಲ್ ಅತಿಥಿಯಾಗಿ ಹಾಜರಾಗಿ ಆ ಸುದ್ದಿಗಳಿಗೆಲ್ಲ ತೆರೆ ಎಳೆದರು.

ಇದೀಗ ಪ್ರಭಾಸ್ ರಘು ಹನುಪುಡಿ ನಿರ್ದೇಶನದ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಫೆಬ್ರವರಿ ತಿಂಗಳಲ್ಲಿ ‘ಸ್ಪಿರಿಟ್’ ಸಿನಿಮಾದ ಚಿತ್ರೀಕರಣ ಶುರು ಮಾಡಲಿದ್ದಾರೆ. ಅದಾದ ಬಳಿಕ ‘ಕಲ್ಕಿ 2898 ಎಡಿ’ ಸಿನಿಮಾದ ಸೀಕ್ವೆಲ್​​ನಲ್ಲಿ ನಟಿಸಲಿದ್ದಾರೆ. ಅದಾದ ಬಳಿಕವಷ್ಟೆ ‘ಸಲಾರ್ 2’ ಪ್ರಾರಂಭ ಆಗಲಿದೆ. ಇನ್ನು ನೀಲ್ ಪ್ರಸ್ತುತ ಜೂ ಎನ್​​ಟಿಆರ್ ನಟಿಸುತ್ತಿರುವ ‘ಡ್ರ್ಯಾಗನ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಅದರ ಬಳಿಕ ಅವರು ಅಲ್ಲು ಅರ್ಜುನ್ ಅಥವಾ ರಾಮ್ ಚರಣ್ ಅವರಿಗಾಗಿ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ