ಕೆಟ್ಟ ವಿಮರ್ಶೆ ಪಡೆದರೂ ‘ರಾಜಾ ಸಾಬ್’ ಚಿತ್ರದಿಂದ ಭರ್ಜರಿ ಕಲೆಕ್ಷನ್
ಪ್ರಭಾಸ್ ಅವರು ಕಥೆಯನ್ನು ಒಪ್ಪಿಕೊಳ್ಳುವಾಗ ಸಾಕಷ್ಟು ಗಮನ ಹರಿಸುತ್ತಾರೆ. ಅವರು ‘ರಾಜಾ ಸಾಬ್’ ಚಿತ್ರವನ್ನು ಒಪ್ಪಿಕೊಂಡಾಗ ಎಲ್ಲರಿಗೂ ಅಚ್ಚರಿ ಆಗಿದ್ದಂತೂ ಸುಳ್ಳಲ್ಲ. ಈ ಸಿನಿಮಾ ಹಾರರ್ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದೆ. ಈ ಚಿತ್ರ ನೋಡಿದ ಅನೇಕರು ನೆಗೆಟಿವ್ ಆಗಿ ವಿಮರ್ಶೆ ನೀಡಿದ್ದಾರೆ. ಅಭಿಮಾನಿಗಳಿಗೂ ಸಿನಿಮಾ ಇಷ್ಟ ಆಗಿಲ್ಲ ಎಂದೇ ಹೇಳಬಹುದು.

ಪ್ರಭಾಸ್ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ. ಇದಾದ ಬಳಿಕ ಹೀರೋ ಆಗಿ ಅವರು ಯಾವ ಸಿನಿಮಾದಲ್ಲೂ ನಟಿಸಿಲ್ಲ. ಅವರು ಕೆಲವು ಚಿತ್ರಗಳಲ್ಲಿ ಅತಿಥಿ ಪಾತ್ರಗಳನ್ನು ಮಾಡಿದರು. ಈಗ ಪ್ರಭಾಸ್ ಅವರು ‘ರಾಜಾ ಸಾಬ್’ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬಂದಿದ್ದಾರೆ. ಈ ಸಿನಿಮಾದ ಮೊದಲ ದಿನದ ಕಲೆಕ್ಷನ್ ಹೇಗಿದೆ ಎಂಬುದರ ಲೆಕ್ಕ ಸಿಕ್ಕಿದೆ. ಈ ಚಿತ್ರ ಉತ್ತಮ ವಿಮರ್ಶೆ ಪಡೆದ ಹೊರತಾಗಿಯೂ ಮೊದಲ ದಿನ ಒಳ್ಳೆಯ ಗಳಿಕೆ ಮಾಡಿದೆ ಎಂಬುದು ವಿಶೇಷ.
ಪ್ರಭಾಸ್ ಅವರು ಕಥೆಯನ್ನು ಒಪ್ಪಿಕೊಳ್ಳುವಾಗ ಸಾಕಷ್ಟು ಗಮನ ಹರಿಸುತ್ತಾರೆ. ಅವರು ‘ರಾಜಾ ಸಾಬ್’ ಚಿತ್ರವನ್ನು ಒಪ್ಪಿಕೊಂಡಾಗ ಎಲ್ಲರಿಗೂ ಅಚ್ಚರಿ ಆಗಿದ್ದಂತೂ ಸುಳ್ಳಲ್ಲ. ಈ ಸಿನಿಮಾ ಹಾರರ್ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದೆ. ಈ ಚಿತ್ರ ನೋಡಿದ ಅನೇಕರು ನೆಗೆಟಿವ್ ಆಗಿ ವಿಮರ್ಶೆ ನೀಡಿದ್ದಾರೆ. ಅಭಿಮಾನಿಗಳಿಗೂ ಸಿನಿಮಾ ಇಷ್ಟ ಆಗಿಲ್ಲ ಎಂದೇ ಹೇಳಬಹುದು. ಈ ಸಿನಿಮಾ ಮೊದಲ ದಿನ ಕೇವಲ 45 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಪ್ರೀಮಿಯರ್ ಶೋಗಳಿಂದ ಚಿತ್ರಕ್ಕೆ 9.15 ಕೋಟಿ ರೂಪಾಯಿ ಹರಿದು ಬಂದಿದೆ. ಎಲ್ಲವೂ ಸೇರಿದರೆ ಸಿನಿಮಾ ಕಲೆಕ್ಷನ್ 54 ಕೋಟಿ ರೂಪಾಯಿ ಅಷ್ಟು ಆಗಿದೆ.
‘ರಾಜಾ ಸಾಬ್’ ಚಿತ್ರವನ್ನು ಏಕೆ ಮಾಡಿದಿರಿ ಎಂದು ಕೇಳಿದಾಗ ಪ್ರಭಾಸ್ ಇದಕ್ಕೆ ಸ್ಪಷ್ಟನೆ ನೀಡಿದ್ದರು. ಕಾಮಿಡಿ ಸಿನಿಮಾಗಳನ್ನು ತಾವು ಮಾಡಬಲ್ಲರು ಎಂಬುದನ್ನು ತೋರಿಸಲು ಅವರು ಈ ಚಿತ್ರವನ್ನು ಒಪ್ಪಿಕೊಂಡಿದ್ದರಂತೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿತ್ತು. ಈಗ ಅವರು ಈ ವಿಷಯದಲ್ಲಿ ಸೋತಿದ್ದಾರೆ. ಮುಂದಿನ ದಿನಗಳಲ್ಲಿ ಸಿನಿಮಾ ಅಂದುಕೊಂಡ ಮಟ್ಟದಲ್ಲಿ ಪ್ರದರ್ಶನ ಕಾಣದೆ ಇರಬಹುದು ಎಂದು ಹೇಳಲಾಗುತ್ತಾ ಇದೆ.
ಇದನ್ನೂ ಓದಿ: ಮತ್ತೊಂದು ‘ರಾಧೆ ಶ್ಯಾಮ್’; ‘ರಾಜಾ ಸಾಬ್’ ನೋಡಿ ತಲೆಕೆಡಿಸಿಕೊಂಡ ಪ್ರೇಕ್ಷಕ
‘ರಾಜಾ ಸಾಬ್’ ನೋಡಿದ ಮೊದಲ ದಿನವೇ ಜನರು ಹೀನಾಯ ವಿಮರ್ಶೆ ನೀಡಿದರು. ಅನೇಕರು ಈ ಚಿತ್ರವನ್ನು ‘ರಾಧೆ ಶ್ಯಾಮ್’ ಚಿತ್ರದ ದುರಂತಕ್ಕೆ ಹೋಲಿಸಿದರು. ರಾಜಾ ಸಾಬ್ ಚಿತ್ರವನ್ನು ಮಾರುತಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಇಷ್ಟ ಆಗಿಲ್ಲ ಎಂದರೆ ಮನೆಗೆ ಬನ್ನಿ ಎಂದು ಅಡ್ರೆಸ್ ಕೊಟ್ಟಿದ್ದರು. ಫ್ಯಾನ್ಸ್ ಅಲ್ಲಿ ಹೋಗಿ ಗಲಾಟೆ ಮಾಡದಿದ್ದರೆ ಅದುವೇ ಅವರ ಅದೃಷ್ಟ ಎಂದು ಹೇಳಬಹುದು. ಪ್ರಭಾಸ್ ಅವರು ‘ಸ್ಪಿರಿಟ್’ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕಿದೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



