ಭಾರತದ ಟಾಪ್ 10 ಶ್ರೀಮಂತರು ಇವರು; ದಕ್ಷಿಣದವರು ಎಷ್ಟು ಮಂದಿ?
ಭಾರತದ ಅನೇಕ ಕಲಾವಿದರು ನಟನೆ, ನಿರ್ಮಾಣ ಹಾಗೂ ಉದ್ಯಮಗಳಲ್ಲಿ ತೊಡಗಿ ಸಾವಿರಾರು ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಅವರಲ್ಲಿ ಭಾರತದ ಟಾಪ್ 10 ಶ್ರೀಮಂತ ನಟರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಶಾರುಖ್ ಖಾನ್ 12,931 ಕೋಟಿ ರೂ. ಆಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಅಕ್ಕಿನೇನಿ ನಾಗಾರ್ಜುನ, ಸಲ್ಮಾನ್ ಖಾನ್, ಹೃತಿಕ್ ರೋಷನ್ ಸೇರಿದಂತೆ ಇತರ ನಟರ ಸಂಪತ್ತು ಮತ್ತು ಯಶಸ್ಸಿನ ಕುರಿತು ಈ ಲೇಖನದಲ್ಲಿದೆ ವಿವರ.

ಭಾರತದ ಅನೇಕ ಕಲಾವಿದರು ಸಾವಿರಾರು ಕೋಟಿ ರೂಪಾಯಿಯ ಒಡೆಯರು. ಅವರ ಬಳಿ ಕೋಟಿ ಕೋಟಿ ರೂಪಾಯಿ ಹಣ ಇದೆ. ಸಿನಿಮಾದಲ್ಲಿ ನಟಿಸೋದಕ್ಕೆ ದೊಡ್ಡ ಸಂಭಾವನೆ ಪಡೆಯುವ ಕಲಾವಿದರು, ನಟನೆಯ ಜೊತೆಗೆ ನಿರ್ಮಾಣದಲ್ಲಿ ತೊಡಗಿಕೊಳ್ಳುತ್ತಾರೆ. ಇನ್ನು, ಸಾಕಷ್ಟು ಉದ್ಯಮಗಳಲ್ಲಿ ಹೂಡಿಕೆ ಮಾಡುತ್ತಾರೆ. ಭಾರತದ ಟಾಪ್ 10 ಶ್ರೀಮಂತ ನಟರ ಪಟ್ಟಿ ಇಲ್ಲಿದೆ ನೋಡಿದೆ.
ಈ ಪಟ್ಟಿಯಲ್ಲಿ ಶಾರುಖ್ ಖಾನ್ ಅವರು ಮೊದಲ ಸ್ಥಾನದಲ್ಲಿ ಇದ್ದಾರೆ. ಅವರ ಆಸ್ತಿ 12,931 ಕೋಟಿ ರೂಪಾಯಿ ಎಂದು ವರದಿ ಆಗಿದೆ. ಅಂದರೆ ಅವರೆಷ್ಟು ಶ್ರೀಮಂತರು ಎಂಬುದನ್ನು ನೀವೇ ಲೆಕ್ಕ ಹಾಕಿ. ವಿಶ್ವ ಶ್ರೀಮಂತ ಹೀರೋಗಳ ಪಟ್ಟಿಯಲ್ಲೂ ಶಾರುಖ್ ಖಾನ್ ಅವರಿಗೆ ಸ್ಥಾನ ಇದೆ. ಅನೇಕ ಖ್ಯಾತ ನಾಮರನ್ನು ಅವರು ಹಿಂದಿಕ್ಕುತ್ತಾರೆ.
ಎರಡನೇ ಸ್ಥಾನದಲ್ಲಿ ತೆಲುಗಿನ ಅಕ್ಕಿನೇನಿ ನಾಗಾರ್ಜುನ ಇದ್ದಾರೆ. ಇವರು ಮೊದಲಿನಿಂದಲೂ ಶ್ರೀಮಂತ ಕುಟುಂಬದ ಹಿನ್ನೆಲೆ ಹೊಂದಿರುವವರು. ಅವರ ಅಪ್ಪ ಮಾಡಿಟ್ಟು ಹೋದ ಆಸ್ತಿ ಇದೆ. ಅನೇಕ ಪ್ರಾಪರ್ಟಿ ಅವರ ಹೆಸರಲ್ಲಿ ಇದೆ. ಅವರ ಆಸ್ತಿ 5 ಸಾವಿರ ಕೋಟಿ ರೂಪಾಯಿ. ಮೂರನೇ ಸ್ಥಾನದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಇದ್ದಾರೆ. ಇವರ ಆಸ್ತಿ 3225 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ.
ನಾಲ್ಕನೇ ಸ್ಥಾನದಲ್ಲಿ ಬಾಲಿವುಡ್ ನಟ ಹೃತಿಕ್ ರೋಷನ್ ಇದ್ದಾರೆ, ಅವರು ತಮ್ಮ ಸ್ಪೋರ್ಟ್ಸ್ ಬ್ರ್ಯಾಂಡ್ ಎಚ್ಆರ್ಎಕ್ಸ್ ಮೂಲಕ ಸಾಕಷ್ಟು ದುಡಿಯುತ್ತಾರೆ. ಅವರ ಆಸ್ತಿ 3100 ಕೋಟಿ ರೂಪಾಯಿ. ಐದನೇ ಸ್ಥಾನದಲ್ಲಿ ಅಕ್ಷಯ್ ಕುಮಾರ್ ಇದ್ದಾರೆ. ಅವರ ಆಸ್ತಿ 2,250 ಕೋಟಿ ರೂಪಾಯಿ. ಆರನೇ ಸ್ಥಾನದಲ್ಲಿ ಆಮಿರ್ ಖಾನ್ ಇದ್ದಾರೆ. ಅವರು 1860 ಕೋಟಿ ರೂಪಾಯಿ ಒಡೆಯ.
ಇದನ್ನೂ ಓದಿ: ಟಿಕೆಟ್ ದರ ಹೆಚ್ಚಿಸಲು ಪ್ರಭಾಸ್, ಚಿರಂಜೀವಿ ಸಿನಿಮಾಗಳಿಗೆ ಸಿಕ್ತು ಅವಕಾಶ
ಏಳನೇ ಸ್ಥಾನದಲ್ಲಿ ಚಿರಂಜೀವಿ ಇದ್ದಾರೆ. ಅವರ ಆಸ್ತಿ 1750 ಕೋಟಿ ರೂಪಾಯಿ, ಅಮಿತಾಭ್ ಅವರು 1680 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದ್ದು ಎಂಟನೇ ಸ್ಥಾನದಲ್ಲಿ ಇದ್ದಾರೆ. ವೆಂಕಟೇಶ್ (1650) ಹಾಗೂ ರಾಮ್ ಚರಣ್ (1630) ಅನುಕ್ರಮವಾಗಿ ಒಂಭತ್ತು ಹಾಗೂ ಹತ್ತನೇ ಸ್ಥಾನದಲ್ಲಿದ್ದಾರೆ. ಅನೇಕ ಸ್ಟಾರ್ಗಳ ಬಳಿ ಖಾಸಗಿ ವಿಮಾನ ಕೂಡ ಇದೆ ಎಂಬುದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.



